ಪೀಕೆ - ಸಿನಿಮಾ

ಪೀಕೆ - ಸಿನಿಮಾ

ಪೀಕೆ - ಸಿನಿಮಾ
ಟಾಕೀಸಿನಲ್ಲಿ ಸಿನಿಮಾ ನೋಡೋದೆ ಅಪರೂಪ ವರ್ಷದಲ್ಲಿ ಒಮ್ಮೆ ಅಥವ ಎರಡು ಇರಬಹುದೇನೊ. ಅದರಲ್ಲೂ ಹಿಂದಿ ಸಿನಿಮಾ ಟಾಕೀಸಿನಲ್ಲಿ ನೋಡಿ ಮುವತ್ತು ವರ್ಷವೇ ಕಳೆದಿದೆಯೇನೊ ಮರೆತು ಹೋಗಿದೆ. ಈಗಲೂ ನೆನಪಿದೆ, ಕನ್ನಡ ಸಿನಿಮಾ ಬಿಟ್ಟು ಪರಬಾಷೆಯ ಸಿನಿಮಾವನ್ನು ನಾನು ಹಣ ಕೊಟ್ಟು ನೋಡೋಲ್ಲ, ಯಾರಾದರು ಕರೆದುಕೊಂಡು ಹೋದರೆ ಮಾತ್ರ ನೋಡುವೆ ಎನ್ನುವ ನಿಯಮ ಬಹಳ ವರ್ಷ ಪಾಲಿಸಿದ್ದೆ. :-)
ಈಗ ಮಗಳ ಬಲವಂತಕ್ಕೆ ಹಿಂದಿ ಸಿನಿಮಾ ನೋಡುವ ಅವಶ್ಯಕತೆ ಬಂದಿತು. ನಿಮ್ಮ ಊಹೆ ಸರಿ ’ಪೀಕೆ’ ಎನ್ನುವ ಸಿನಿಮಾ ನೋಡಲು ಬನಶಂಕರಿಯ ಈಶ್ವರೀ ಟಾಕೀಸಿಗೆ ಹೋಗಿದ್ದೆ, ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ ಈ-ಟಿಕೆಟ್ ಬುಕ್ಕ್ ಮಾಡಿದ್ದಳು. ಟಾಕೀಸಿ ಒಳಗೆ ಹೋಗುವಾಗಲೇ ಕೆಟ್ಟ ವಾಸನೆ ನಮ್ಮ ಘ್ರಾಣೇಂದ್ರಿಯವನ್ನು ಆಕ್ರಮಿಸಿತು, ಯಾವುದೋ ಪ್ರಾಣಿ ಸತ್ತ ವಾಸನೆಯೆ ? ಅರ್ಥವಾಗಲಿಲ್ಲ. ಏಸಿ ಕೆಲಸ ಮಾಡೋಲ್ಲ, ಫ್ಯಾನ್ ಹಾಕಿದ್ದ, ಫ್ಯಾನ್ ಶಬ್ದ ಸಿನಿಮಾದಲ್ಲಿನ ಹೀರೋನ ಮಾತಿಗಿಂತ ಜೋರು ಬಿಡಿ. ಇನ್ನು ಟಾಯ್ಲೆಟ್ ಒಳಗೆ ಹೋದರೆ.... ಬೇಡಬಿಡಿ. ಜನ ಸಿನಿಮಾ ನೋಡಲು ಟಾಕೀಸಿಗೆ ಬರಲ್ಲ ಎಂದು ಗೋಳಾಡಿ ನಮಗೆಲ್ಲ ಉಪದೇಶ ನೀಡುವ ಮಂದಿ ಇಂತದ್ದನ್ನೆಲ್ಲ ಗಮನಿಸಲ್ಲ.
*****
ಮೊದಲೇ ಓದಿದ ಎಲ್ಲ ಅಭಿಪ್ರಾಯ ಪೂರ್ವಾಗ್ರಹಗಳನ್ನು ಬದಿಗಿತ್ತು ಸಿನಿಮಾ ನೋಡಿದರೆ , ವಿಷಯ ವಸ್ತವೊಂದನ್ನು , ’ಮೆಸೇಜ್’ ಒಂದನ್ನು ನಮಗೆ ತಲುಪಿಸಲು ಪ್ರಯತ್ನಿಸುವ ಸಾದರಣ ನಿರೂಪಣೆಯ ಚಿತ್ರ ಅನ್ನಬಹುದೇನೊ. ಆಯ್ತು ಕೊಂಡಿರುವ ವಿಷಯ ಸಿನಿಮಾವನ್ನು ವಿವಾದಗ್ರಸ್ಥವನ್ನಾಗಿ ಮಾಡಿದೆ. ಅನ್ಯಗ್ರಹದಿಂದ ಬಂದ ’ವ್ಯಕ್ತಿ’ಯೊಬ್ಬ ಕಳೆದುಕೊಂಡ ತನ್ನ ರಿಮೋಟನ್ನು ಹುಡುಕುತ್ತ ಹೊರಡುವುದು ಸಿನಿಮಾ ವಿಷಯ. ಅದಕ್ಕಾಗಿ ಆತ ದೈವದ ಮೊರೆ ಹೋಗುವುದು, ಎಲ್ಲ ದೈವಗಳ ಸೇವೆ ಮಾಡುವುದು, ಯಾರು ಏನು ಹೇಳಿದರು ನಂಬುವುದು ಎಲ್ಲ ವಿಚಿತ್ರವೆ. ಆ ಪ್ರಯತ್ನ ಪಕ್ಕಕ್ಕೆ ತಳುತ್ತ ಆತ ಇಲ್ಲಿನ ಧಾರ್ಮಿಕ ವ್ಯವಸ್ಥೆಯನ್ನು ವಿಷ್ಲೇಷಿಸುವುದು ಸಿನಿಮಾದ ವಸ್ತು.
ಅವನಿಗಿಂತ ಸಿನಿಮಾದಲ್ಲಿನ ನಾಯಕಿಯೆ ’ಅನ್ಯಗ್ರಹಜೀವಿಯಂತೆ’ ಕಾಣಿಸಿದಳು ನನಗೆ! ಮೂಡನಂಭಿಕೆಗಳನ್ನು ’ರಾಂಗ್ ’ ಕಾಲ್ ಎಂದು ಕರೆಯುತ್ತ, ಧರ್ಮಗಳ ಹುಳುಕನ್ನು ಎತ್ತಿ ತೋರಿಸುವ ಸಿನಿಮಾದಲ್ಲಿ, ನಾಯಕ ಯಾರದಾದರು ’ಕೈ’ ಗಳನ್ನು ಸ್ವಲ್ಪ ಕಾಲ ಹಿಡಿದಲ್ಲಿ ಅವರ ಮೂಲಕ ಭೂಮಿಯ ಎಲ್ಲ ವಿಷಯಗಳನ್ನು, ಭಾಷೆಗಳನ್ನು ಕಲಿತುಬಿಡುತ್ತಾನೆ ಅನ್ನುವುದು ವಿಜ್ಞಾನವೋ , ಮೂಡನಂಭಿಕೆಯೋ ಸಿನಿಮಾ ತೆಗೆದವರೇ ಹೇಳಬೇಕು. ಆತ ಕೈ ಹಿಡಿದರೆ , ಅವರ ಭೂತ ಕಾಲವನ್ನೆಲ್ಲ ಅರಿಯಬಲ್ಲ!!! ಅದು ’ವಿಜ್ಞಾನದ ಯಾವ ವಿಭಾಗಕ್ಕೆ ಬರುತ್ತದೆ’ ತಿಳಿಯಲಿಲ್ಲ.
ಇನ್ನು ಸಣ್ಣದೊಂದು ’ಬಣ್ಣದ ಗಾಜನ್ನು’ ತೋರಿಸಿ ಅದು ರಿಮೋಟು, ಅನ್ಯಗ್ರಹ ವಾಹನವನ್ನೆ ನಿಯಂತ್ರಿಸುತ್ತದೆ ಅನ್ನುವದನ್ನು ’ಮಾಯಾಭಜಾರ್’ ಕಾಲದ ಸಿನಿಮಾದಲ್ಲಿಯಾದರೆ ನಂಬಬಹುದು.

ಇನ್ನು ಸಿನಿಮಾದಲ್ಲಿ ದೇವರಿಗೆ ಧರ್ಮಕ್ಕೆ ಅಪಚಾರವಾಗಿದೆ ಎಂದು ಯಾರಾದರು ಹೇಳಿದಲ್ಲಿ, ’ಪೀಕೆ’ ಸಿನಿಮಾಗಿಂತ, ನಮ್ಮ ಕನ್ನಡ ಸಿನಿಮಾಗಳಲ್ಲಿ ಹಿಂದೂ ದೈವಗಳನ್ನು ಅದಕ್ಕಿಂತ ಕೀಳಾಗಿ , ಅಪಹಾಸ್ಯವಾಗಿ ಚಿತ್ರಿಸಲಾಗಿದೆ ಎನ್ನುವುದು ಸತ್ಯ. ಕನ್ನಡ ಸಿನಿಮಾಗಳಲ್ಲಿ ನಮ್ಮ ಹಿಂದೂ ದೈವಗಳನ್ನು ಕುರಿತು ಮಾಡಿರುವ ಅಪಹಾಸ್ಯ, ಕೀಳು ಭಾವನೆ, ಖಂಡಿತ ಈ ’ಪೀಕೆ’ ಸಿನಿಮಾಗಿಂತ ಅಧಿಕ ಅನ್ನುವದನ್ನು ಯಾರು ಗಮನಿಸುದೇ ಇಲ್ಲ ಅನ್ನುವುದು ಆಶ್ಚರ್ಯ.

ಮರೆತ ಮಾತು : ಅನ್ಯಗ್ರಹದಿಂದ ಬಂದ ನಾಯಕ, ಭೂಮಿಯಿಂದ ಹಿಂದೆ ಹೋಗುವಾಗ, ಕಲಿತಿದ್ದು ಒಂದೇ ಪಾಠ ’ಸುಳ್ಳು ಹೇಳುವುದು’ ! :-)

Rating
No votes yet

Comments

Submitted by venkatb83 Sat, 01/03/2015 - 13:20

ಗುರುಗಳೇ -
ಸಿನೆಮಾಗಳ ಬಗ್ಗೆ ಮತ್ತು ಪ್ರದರ್ಶಿಸುವ ಚಿತ್ರ ಮಂದಿರಗಳ ಅವ್ಯವಸ್ಥೆ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ಹಂಚಿಕೊಂಡಿರುವಿರಿ....!!
ಮಾಮೂಲಿ ಚಿತ್ರ ಮಂದಿರಗಳಿಗೆ (ಅದೇ ಸಂತೋಷ್-ನರ್ತಕಿ -ಸಾಗರ್-ಪ್ರಮೋದ್ ಇತ್ಯಾದಿ )ನಾ ಕೊನೆಯದಾಗಿ ಹೋಗಿದ್ದು ನೋಡಿದ್ದು ಕನ್ನಡ ಸಿನೆಮಾ -ಸಂತ (ಶಿವರಾಜ್ ಕುಮಾರ್ ಅವ್ರ ಚಿತ್ರ ಹೊಡಿ ಬಡಿ ಕೊಲ್ಲು . ರಕ್ತ ರಕ್ತ ರಾಮ ರಾಮ .....!!).ಅಲ್ಲಿ ತೆರೆ ಮೇಲೆ ರಕ್ತ -ನನ್ನ ಕಾಲ ಕೆಳಗೆ ಸುತ್ತ ಮುತ್ತ ರಕ್ತ ರಕ್ತ ...ಕಾರಣ ಪಾನು ಪಾ-ರಾಗು ಗುಟ್ಕಾ ....!!
ಸುಲಭ್ ಶೌಚಾಲಯ ಶುಚಿಯಾಗಿರುವುದು-ಆದರೆ ಚಿತ್ರ ಮಂದಿರಗಳ ಅವ್ಯವಸ್ಥೆ ಅಬ್ಬ್ಬಬ್ಬ ಆಘ್ರಾಣಿಸಿ ಅನುಭವಿಸಿದವರಿಗೆ ಮಾತ್ರ ಗೊತ್ತು .... ಮಲ್ಟಿ ಪ್ಲೆಕ್ಸ್ಗಳಿಗೆ ದುಬಾರಿ ಕಾಸು ಕೊಟ್ಟು ಜನ ಹೋಗೋದು ಈ ಶುಚಿ ಬಯಸಿಯೆ-ಅಲ್ಲಿಯ ತೆರೆ ಮೇಲೆ (ತೆರೆಗೆ ಬೆಳಕು ಮುಂದಿನಿಂದ ಅಲ್ಲದೆ -ತೆರೆಯ ಹಿಂದೆಯೇ ಬರುವುದು-ಕ್ರಿಸ್ಟಲ್ ಕ್ಲಿಯರ್ ಸಿನೆಮಾ ನೋಡಬಹುದು.)ಮೂಡುವ ಚಿತ್ರ ಕಣ್ಣ ಮುಂದೆಯೇ ಮೂಡುವುದು..
ಇನ್ನೂ ಸಿನೆಮಾ ಬಗ್ಗೆ (ಪೀ ಕೆ -ಅದನ್ನು pee kay ಎಂದೂ ಕರೆದಿರುವರು ):
ಇದು ಈ ಹಿಂದೆ ನಾನು ಬರೆದಿದ್ದ http://bit.ly/1yiA6L5 ಓ ಮೈ ಗಾಡ್ ಹಿಂದಿ ಚಲನ ಚಿತ್ರದ ನಕಲು -ಮತ್ತು ಕೆಟ್ಟ ನಕಲು ಎನ್ನಲು ಅಡ್ಡಿ ಇಲ್ಲ ...:(((
ಅವರು ಅಂದೇ ಹೇಳಿದರು ಇವರಿಗೆ ಅದನ್ನೇ ಮತ್ತೆ ಹೇಳಲು ಇಸ್ಟು ವರ್ಷ ಬೇಕಾಯ್ತು ..:(((
ಈ ಪೀ ಕೆ ಚಿತ್ರದ ಕಥೆ ಬರೆಯಲು ಮತ್ತು ಅದನ್ನು ನಿರ್ದೇಶಿಸಲು ರಾಜು ಹಿರಾನಿಯೇ ಬೇಕಿತ್ತಾ? ಅನಿಸುವುದು..!!
ಈ ಹಿಂದಿನ ಮುನ್ನಾಭಾಯ್ ಸರಣಿಗಳು ಮತ್ತು 3 ಈಡಿಯಟ್ಸ್ ಚಿತ್ರಗಳಲ್ಲಿ ಅವುಗಳನ್ನು ನೋಡಿಸಿಕೊಂಡು ಹೋಗುವ ಕಥಾ ಚಿತ್ರ ಇತ್ತು ,ಆದರೆ ಬರ್ತಾ ಬರ್ತಾ ರಾಯರ ಕುದುರೆ ... ಆಯ್ತು ಅನ್ನೋ ಹಾಗೆ ಈ ತರ್ಹದ ಹೆಸರಾಂತ ನಿರ್ದೇಶಕರು-ನಟರು ತಾವ್ ಏನೋ ಮಾಡಿದರೂ ತೆಗೆದರೂ ಜನ ನೋಡಬಹುದು ಎಂಬ ಭ್ರಮೆಯಲ್ಲಿ ಈ ತರ್ಹದ್ದು ತೆಗೆದು ಅದನ್ನು ನಮ್ಮವರು ನೋಡಿ ನಗಾಡುವರು...:((( ಓ ಮೈ ಗಾಡ್ ನಲ್ಲಿ ಎಲ್ಲ ಧರ್ಮಗಳ ಸಾರ ಮತ್ತು ಅವುಗಳಲ್ಲಿನ ಕೆಲ ತಪ್ಪು ಒಪ್ಪುಗಳನ್ನು ಭಲು ನಾಜೂಕಾಗಿ ನಿರೂಪಿಸಿದ್ದರು ,ಹೀಗಾಗಿ ಅದಕ್ಕೆ ಗಲಾಟೆ ಆಗಲಿಲ್ಲ ,ಆದರೆ ಇದರಲ್ಲಿ ಎಲ್ಲ ಧರಮಗಳ ಬಗ್ಗೆ ಹೇಳುತ್ತಾ ಕೇವಲ ಹಿಂದೂ ಧರ್ಮದ ಬಗ್ಗೆ ಮೊದಲಿಂದ ಕೊನೆವರ್ಗೆ ಕೊರೆದಿರುವರು...ಇದು ಸಹಜವಾಗಿ ಹಿಂದೂಗಳನ್ನು ಕೆರಳಿಸುವುದು...ಇದು ಆರ್ಥಿಕವಾಗಿ ಎಸ್ಟ್ ಕಾಸು ಮಾಡಿದರೂ ಜನರ ಮನದಲ್ಲಿ ಒಂದು ಅವರೇಜ್ ಚಿತ್ರವಾಗಿ ಉಳಿಯುವುದು..
ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿರುವ ಉತ್ತರ್ ಅಪ್ರದೇಶದ ಸಿ ಎಮ್ಮು ಇದನ್ನು ನೆಟ್‌ನಲ್ಲಿ ಡೌನ್ಲೋಡ್ ಮಾಡಿ ನೋಡಿದ್ದಂತೆ ..!!(ಮಾಡೋದೇ ಅಪರಾಧ ಅದನ್ನು ಹೇಳಿಕೊಳ್ಳೋದು ...!!!) ಇನ್ನೂ ಬಿಹಾರ ಸಿ ಎಮ್ಮು ಇದನ್ನು ಅದ್ಭುತ ಚಿತ್ರ ಎಂಬಂತೆ ಅದನ್ನು ನೋಡಬೇಕು ಎಂದಿದ್ದಾರೆ ...!!
ಇವರ ಕೆಟ್ಟ ವೋಟು ಬ್ಯಾಂಕು ಪಾಲಿಟಿಕ್ಸ್ ಇಲ್ಲೂ ಕೆಲ್ಸ ಮಾಡುತ್ತಿದೆ ...:(((
ಅದಕ್ಕೆ ಇಟ್ಟಿರುವ ಶೀರ್ಷಿಕೆಯೂ ಆ ಚಿತ್ರದ ಬಗೆಗಿನ ಗುಲ್ಲನ್ನು ಇನ್ನಸ್ಟು ಹೆಚ್ಚಿಸುವುದು (ಇದ್ಕೆ ಪಾಕಿ ಪಾತಕಿಗಳು -ಮತಾಂತರಿಗಳು ಹಣ ಹೂಡಿದ್ದಾರೆ ಎನ್ನೋದು ) ..
ಅದ್ಕೆ ತಕ್ಕುದಾಗಿ ಹಿರಿಯ ಪತ್ರಕರ್ತ ತರುಣ ವಿಜಯ್ ಅವರು ಬರೆದಿರುವ ಈ ಬರಹ ನೋಡಿ ...http://epapervijayavani.in/epaperimages/212015/212015-md-hr-12/153335484...
ಶುಭವಾಗಲಿ
\|/

Submitted by partha1059 Sat, 01/03/2015 - 19:30

In reply to by venkatb83

ಸಪ್ತಗಿರಿಯವರೆ ಹೌದು ಆ ಚಿತ್ರದ‌ ಬಗ್ಗೆ ಬಹಳಷ್ಟು ವಿರುದ್ದ‌ ಅಭಿಪ್ರಾಯಗಳೆ ಬರುತ್ತಿವೆ, ನಾನು ಗಮನಿಸಿರುವೆ, ಚಿತ್ರದಲ್ಲಿಯೂ ಅಷ್ಟೆ ಹಿಂದೂ ದರ್ಮದಲ್ಲಿನ‌ ಮೋಸಗಾರರನ್ನು ವಿಮರ್ಷಿಸುವಾಗ‌ ಇರುವ‌ ಗಟ್ಟಿ ದ್ವನಿ ಬೇರೆ ಧರ್ಮ‌ ಟೀಕಿಸುವಾಗ‌ ಇರುವದಿಲ್ಲ‌. ಅದಕ್ಕೆ ನಮ್ಮ‌ ಧರ್ಮದಲ್ಲಿ ಅವರಿಗೆ ವಿರೋಧ‌ ಹಾಗು ಸಪೋರ್ಟ್ ಎರಡು ಸಮನಾಗಿ ಇರುತ್ತದೆ ಅವರಿಗೆ ತಿಳಿದಿದೆ. ದೇವಾಲಯದ‌ ಒಳಗೆ , ಚರ್ಚಿನ‌ ಒಳಗೆ ತೋರಿಸುವ‌ ಚಿತ್ರ‌ ಮಸೀದಿಯ‌ ಒಳಗೆ ಸಹ‌ ಹೋಗಲ್ಲ‌ ಈಚಿನಿಂದಲೇ ನಾಯಕನನ್ನು ಓಡಿಸಿಬಿಡುತ್ತಾರೆ, ಅದನ್ನು ನೀವು ಹೇಗೆ ಬೇಕಾದರು ಅರ್ಥಮಾಡಿಕೊಳ್ಳಬಹುದು :‍)
ಧರ್ಮ‌ ಹಾಗು ಹಿಂಬಾಲಕರರಲ್ಲಿ ಇರುವ‌ ಲೋಪಗಳನ್ನು ಎತ್ತಿ ತೋರಿಸಿದ್ದಾರೆ , ಒಪ್ಪುತ್ತೇನೆ ಅದರಿಂದ‌ ಮನವೂ ಕೆರಳುತ್ತದೆ
ಆದರೆ
ಅದೇ ಹೀನ‌ ಕೆಲಸವನ್ನು ನಮ್ಮ‌ ಕನ್ನಡ‌ ಸಿನಿಮಾ ಮಂದಿಯೂ ಮಾಡಿದ್ದಾರೆ, ತಪಸ್ವಿ ನಾರದರನ್ನಾಗಲಿ, ದರ್ಮದೇವತೆ ಯಮದರ್ಮನನ್ನಾಗಲಿ ಚಿತ್ರಗುಪ್ತನನ್ನಾಗಲಿ ಅಥವ‌ ಇತರೇ ಯಾವುದೇ ದೇವರನ್ನಾಗಲಿ ಬಪೂನ್ ಗಳಿಗಿಂತ‌ ಕೆಟ್ಟದಾಗಿ ಚಿತ್ರಿಸಿದ್ದಾರೆ, ಹಿಂದಿನ‌ ಒಂದು ಸಿನಿಮಾ ಹೆಸರು ಮರೆತಿದೆ, ದೇವಾಲಯದಲ್ಲಿ ಅತ್ಯಾಚಾರವನ್ನು ಸಹ‌ ಚಿತ್ರಿಸಿದ್ದಾರೆ, ಅದನ್ನು ವಿರೋಧಿಸುವುದು ನಮ್ಮ‌ ಧರ್ಮವಾಗಿತ್ತು ಆದರೆ ಆಗೆಲ್ಲ‌ ಎಲ್ಲರೂ ನಕ್ಕು ಸುಮ್ಮನಾಗಿದ್ದೇವೆ.
ಬರಿ ಸಿನಿಮಾ ಏಕೆ ಸಾಹಿತ್ಯದಲ್ಲಿಯೂ ಅತಿ ಉಗ್ರವಾಗಿ ದೈವ‌ ನಿಂದನೆ ಆಗುವಾಗಲು ಸುಮ್ಮನಿರುತ್ತೇವೆ,
ಈಗ‌ ಮಾತ್ರ‌ ವಿರೋದ‌ ಅನ್ನುವಾಗ‌ ಒಮ್ಮೆ ನಮ್ಮ‌ ಸಮಾಜದಲ್ಲಿ ಆಯ್ದ‌ ವಿರೋದವಿರುತ್ತದೆ ಅನ್ನಿಸುತ್ತದೆ
ಇನ್ನು ದೇಶದ್ರೋಹಿಗಳು ನಮ್ಮ‌ ಸಿನಿಮಾ ದಲ್ಲಿ ಹಣ‌ ಹೂಡುತ್ತ‌ ಲಾಭ‌ ಗಳಿಸುತ್ತಿದ್ದಾರೆ ಎನ್ನುವ‌ ಮಾತಿದೆ, ಹಾಗಾದರೆ ನಮ್ಮ‌ ಅಧಾಯ ತೆರಿಗೆ ಇಲಾಖೆ, ಅಥವ‌ ಕಾನೂನು ಇಲಾಖೆಗಳೆಲ್ಲ‌ ಏನು ಮಾಡುತ್ತಿವೆ.
ಕಾನೂನಿನ‌ ಪಾಲನೆಯ‌ ಬಗ್ಗೆ ಇಲ್ಲಿ ನಂಬುವಂತೆಯೇ ಇಲ್ಲ‌ , ಸಿನಿಮಾದವರು ರಾಜಕೀಯದವರು ಅಂದರೆ ಯಾವ‌ ರಿಯಾಯಿತಿ ಬೇಕಿದ್ದರು ಇದೆ ಅಲ್ಲವೆ ಉದಾಹರಣೆ: ಸಂಜಯ‌ ದತ್ತ‌, ಜೈಲಿನ‌ ರಜೆ ಕೊಡುತ್ತಿದ್ದಾರೆ, ವರ್ಷದಲ್ಲಿ ಆರುತಿಂಗಳು ಮನೆಯಲ್ಲಿಯೇ ಇರುತ್ತಾರೆ :‍)

Submitted by partha1059 Sat, 01/03/2015 - 19:36

In reply to by anand33

ಆನಂದರವರೆ ಪೀಕೆಯ‌ ಬಗ್ಗೆ ಹತ್ತು ಹಲವು ಅಭಿಪ್ರಾಯಗಳು ವ್ಯಕ್ತಿವಾಗುತ್ತಿವೆ, ಅದೇ ಆ ಸಿನಿಮಾಗೆ ಮಾರ್ಕೆಟಿಂಗ್ ಆಗುತ್ತಿದೆ.
ನಮ್ಮ‌ ಹಾಗು ಎಲ್ಲರ‌ ಅಭಿಪ್ರಾಯಗಳು 'ಹಣ‌'ವಾಗಿ ಪರಿವರ್ತಿತವಾಗಿ ಸಿನಿಮಾ ನಿರ್ಮಾಪಕರ‌ ಜೇಬು ಸೇರುತ್ತಿದೆ
ಅದನ್ನೆಲ್ಲ‌ ನೋಡುವಾಗ‌ ಒಮ್ಮೊಮ್ಮೆ ಈ ವಿರೋಧವನ್ನು ಬೇಕೆಂದು ಹುಟ್ಟು ಹಾಕಲಾಗಿದೆ ಎಂದು ನನಗನ್ನಿಸುತ್ತಿದೆ.
ಯಾವುದೇ ಮಾರ್ಗವನ್ನು ಅನುಸರಿಸಿಯಾದರು ಸರಿ ಹಿಂದಿ ಸಿನಿಮಾದವರು ಹಣ‌ ಮಾಡುತ್ತಾರೆ,
ಇದು ಪ್ರಾಯೋಜಿನ‌ ವಿರೋದವಿದ್ದರು ಆಶ್ಚರ್ಯವಿಲ್ಲ‌ ಬಿಡಿ
ನಾನು ಸಿನಿಮಾ ನೋಡಿ ನನಗೆ ತೋಚಿದ‌ ಸಾಲುಗಳನ್ನು ಮಾತ್ರ‌ ಬರೆದಿರುವೆ, ಅಷ್ಟೆ !

Submitted by partha1059 Sat, 01/03/2015 - 19:36

In reply to by anand33

ಆನಂದರವರೆ ಪೀಕೆಯ‌ ಬಗ್ಗೆ ಹತ್ತು ಹಲವು ಅಭಿಪ್ರಾಯಗಳು ವ್ಯಕ್ತಿವಾಗುತ್ತಿವೆ, ಅದೇ ಆ ಸಿನಿಮಾಗೆ ಮಾರ್ಕೆಟಿಂಗ್ ಆಗುತ್ತಿದೆ.
ನಮ್ಮ‌ ಹಾಗು ಎಲ್ಲರ‌ ಅಭಿಪ್ರಾಯಗಳು 'ಹಣ‌'ವಾಗಿ ಪರಿವರ್ತಿತವಾಗಿ ಸಿನಿಮಾ ನಿರ್ಮಾಪಕರ‌ ಜೇಬು ಸೇರುತ್ತಿದೆ
ಅದನ್ನೆಲ್ಲ‌ ನೋಡುವಾಗ‌ ಒಮ್ಮೊಮ್ಮೆ ಈ ವಿರೋಧವನ್ನು ಬೇಕೆಂದು ಹುಟ್ಟು ಹಾಕಲಾಗಿದೆ ಎಂದು ನನಗನ್ನಿಸುತ್ತಿದೆ.
ಯಾವುದೇ ಮಾರ್ಗವನ್ನು ಅನುಸರಿಸಿಯಾದರು ಸರಿ ಹಿಂದಿ ಸಿನಿಮಾದವರು ಹಣ‌ ಮಾಡುತ್ತಾರೆ,
ಇದು ಪ್ರಾಯೋಜಿನ‌ ವಿರೋದವಿದ್ದರು ಆಶ್ಚರ್ಯವಿಲ್ಲ‌ ಬಿಡಿ
ನಾನು ಸಿನಿಮಾ ನೋಡಿ ನನಗೆ ತೋಚಿದ‌ ಸಾಲುಗಳನ್ನು ಮಾತ್ರ‌ ಬರೆದಿರುವೆ, ಅಷ್ಟೆ !

Submitted by kavinagaraj Sun, 01/04/2015 - 13:41

ಸಿನೆಮಾ ಟಾಕೀಸು ಮತ್ತು ಸಿನೆಮಾ ಕುರಿತು ವಿಮರ್ಶೆ ಚೆನ್ನಾಗಿದೆ. ಹಿಂದೂ ಧರ್ಮದ ಕುರಿತು ಹಿಂಜರಿಕೆಯಿಲ್ಲದೆ ಹೀಯಾಳಿಸುವ ಪ್ರವೃತ್ತಿ ಲಾಭದಾಯಕ, ಹೆಸರು ಗಳಿಕೆಗೆ ಸಾಧನವಾಗಿದೆ. ಹಿಂದೂಗಳಲ್ಲಿ ಜಯಚಂದ್ರರ ಸಂತತಿಯವರು ಹೆಚ್ಚಾಗಿದ್ದಾರೆ.

Submitted by ಗಣೇಶ Mon, 01/05/2015 - 00:38

ಪಾರ್ಥರೆ, ಪಿಕೆ ಸಿನೆಮಾ ಕ್ರಿಸ್‌ಮಸ್ ದಿನ ಮಾಲ್‌ನಲ್ಲಿ ನೋಡಿದ್ದೆ. ಅದರ ಬಗ್ಗೆ ಬರೆಯಬೇಕೆಂದಿದ್ದೆ. ನಿಮ್ಮ ಲೇಖನ ಮತ್ತು ಪ್ರತಿಕ್ರಿಯೆಗಳಲ್ಲಿ ನಾನು ಏನು ಹೇಳಬೇಕೆಂದಿದ್ದೆನೋ ಅದೆಲ್ಲಾ ಇನ್ನೂ ಚೆನ್ನಾಗಿ ಹೇಳಿದ್ದೀರಿ. ನೀವಂದಂತೆ ಈ ಗಲಾಟೆಗಳೂ ಸಹ ಪ್ರಾಯೋಜಿತವೇ.. ಕನ್ನಡ ಸಿನೆಮಾಗಳು ಇದಕ್ಕಿಂತ ಕೆಟ್ಟದಾಗಿ ದೇವರನ್ನು ಚಿತ್ರಿಸಿವೆ..
ಹೆಚ್ಚಿನವರು ನೀವು ಹೇಳಿದ ಕಾರಣಕ್ಕೇ ಸಾವಿರಾರು ರೂ ಟಿಕೆಟ್‌ಗೆ+ ತಿನ್ನಲು ಖರ್ಚಾದರೂ ಮಾಲ್‌ಗಳಲ್ಲೇ ಸಿನೆಮಾ ನೋಡಲು ಹೋಗುವುದು.

Submitted by anand33 Mon, 01/05/2015 - 11:15

ಪೀಕೇ ಸಿನೆಮಾ ಇದುವರೆಗೆ ಭಾರತ ಹಾಗೂ ವಿಶ್ವದಾದ್ಯಂತ ೫೫೭ ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂಬ ವರದಿ ಇದೆ. ನೋಡಿ http://www.koimoi.com/box-office/pk-grosses-557-crores-business-worldwid...
ಪೀಕೇ ಚಿತ್ರದ ಬಗೆಗಿನ ಒಂದು ಆರೋಗ್ಯಕರ ವಿಮರ್ಶೆಗಾಗಿ ಈ ಕೊಂಡಿಯನ್ನು ನೋಡಬಹುದು http://www.bhanuvara.com/edition10/issue52/page10.html