ನಮ್ಮ ಬದುಕು ನಮಗೆ.

ನಮ್ಮ ಬದುಕು ನಮಗೆ.

ಕೆಸರಲ್ಲಿ ಅರಳಿನಿಂತ

ಸುಮಕು ಒಂದು ಬದುಕಿದೆ.

ಹೇಗೆ ಇರಲಿ ಅದರ ಬಾಳು

ಅದಕೂ ಒಂದು ಹೆಸರಿದೆ.

 

ಅದರದಾದ ಬಣ್ಣವದಕೆ

ಅದರದಾದ ಗಂಧವು.

ಅದರದಾದ ರೂಪವದಕೆ

ಅದರದಾದ ಚಂದವು.

 

ನಮ್ಮ ಬದುಕು ನಮಗೆ

ಅದರ ಬದುಕು ಅದಕೆ

ನಮ್ಮಂತೆ ನಾವಿರುವುದೊಳಿತು

ನಮ್ಮ ಅದರ ಹಿತಕೆ.

 

ಅದರ ಬದುಕ ಅದಕೆ ಬಿಟ್ಟು

ತೆಪ್ಪಗಿರುವುದು ಒಳಿತು

ಒಳಿತಾಗುವುದು ಇರ್ವರಿಗೂ

ಹೊಂದಿ ಬಾಳಿದರೆ ಕಲೆತು.

 

--ಮಂಜು ಹಿಚ್ಕಡ್

Rating
No votes yet

Comments

Submitted by ಗಣೇಶ Mon, 01/05/2015 - 00:07

ಮಂಜು ಅವರೆ,
ನಾನು ಕವಿಯೂ ಅಲ್ಲ, ಸಾಹಿತಿಯೂ ಅಲ್ಲ..ಆದ್ದರಿಂದ ಕವನ ನಿಮ್ಮಂತೆ ಯೋಚಿಸಿ ಅರ್ಥಮಾಡಿಕೊಳ್ಳಲಾರೆ.
ಮೇಲೆ ಕವನದಲ್ಲಿ "ಅದರ ಬದುಕ ಅದಕೆ ಬಿಟ್ಟು ತೆಪ್ಪಗಿರುವುದು ಒಳಿತು" ಎಂದು ಹೇಳಿ, ಮುಂದಿನ ಸಾಲಲ್ಲೇ "ಒಳಿತಾಗುವುದು ಇರ್ವರಿಗೂ ಹೊಂದಿ ಬಾಳಿದರೆ ಕಲೆತು." ಅಂತೀರಲ್ಲ..

Submitted by manju.hichkad Mon, 01/05/2015 - 09:13

In reply to by ಗಣೇಶ

ಅಂದರೆ ಇನ್ನೋರ್ವರ ಬಾಳಲ್ಲಿ ಮೂಗು ತೂರಿಸಿ ಬದುಕುವ ಬದಲು ನಾವು ನಮ್ಮಷ್ಟಕ್ಕೆ ಸುಮ್ಮನೆ ಇರುವುದು ಒಳ್ಳೆಯದು. ಒಬ್ಬರ ಬಾಳಲ್ಲಿ ಇನ್ನೊಬ್ಬರು ಮೂಗುತೂರಿಸಿ ಬದುಕುವ ಬದಲು ಹೊಂದಿ ನಡೆದರೆ ಇಬ್ಬರಿಗೂ ಒಳ್ಳೆಯದು ಎನ್ನುವುದು ಆ ಸಾಲುಗಳ ಆಶಯ.