ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ!
ಒಬ್ಬ ರೈತ ತನ್ನ ಹೊಲದಲ್ಲಿ ಹೊಸದಾಗಿ ದ್ರಾಕ್ಷಿ ಹಣ್ಣನ್ನು ಬೆಳಿಸಿದ್ದ. ತನ್ನ ಜಮೀನಿನಲ್ಲಿ ಬಿಟ್ಟ ಮೊದಲ ಫಲವನ್ನು ತಮ್ಮನ್ನಾಳುವ ಅರಸನಿಗೆ ಕೊಡಬೇಕೆಂಬುದು ಆ ದೇಶದ ಸಂಪ್ರದಾಯ. ಅದರಂತೆ, ಆ ರೈತ ಒಂದಷ್ಟು ಹಣ್ಣುಗಳನ್ನು ತೆಗೆದುಕೊಂಡು ಹೋಗಿ ರಾಜನಿಗೆ ಸಮರ್ಪಿಸಿದ. ಹಣ್ಣನ್ನು ತಿಂದ ರಾಜ ಕೆಂಡಾಮಂಡಲವಾದ; ಏಕೆಂದರೆ ಆ ಹಣ್ಣು ಬಹಳ ಹುಳಿಯಾಗಿತ್ತು. ಇದಕ್ಕೆ ಕಾರಣ ಆ ರೈತನ ಹೊಲದ ಮಣ್ಣಿನಲ್ಲಿ ಸವಳು ಅಂದರೆ ಉಪ್ಪಿನ ಅಂಶ ಹೆಚ್ಚಾಗಿತ್ತು. ಕುಪಿತಗೊಂಡ ರಾಜ ತಕ್ಷಣವೇ, ತನ್ನ ಸೇವಕರಿಗೆ ಆಜ್ಞಾಪಿಸಿದ, "ಇಂಥ ಹಣ್ಣನ್ನು ತಂದು ಕೊಟ್ಟ ಆ ರೈತನ ಗುದದ್ವಾರದಲ್ಲಿ ಆ ಹಣ್ಣುಗಳನ್ನು ತುರುಕಿ". ಇನ್ನೇನು ಆ ಶಿಕ್ಷೆಯನ್ನು ಅಮಲು ಮಾಡಬೇಕು, ಅಷ್ಟರಲ್ಲಿ ಆ ರೈತ ಪೆಕ-ಪೆಕನೆ ಬಿದ್ದು ಬಿದ್ದು ನಗಲಾರಂಭಿಸಿದ. ಇದರಿಂದ, ಆಶ್ಚರ್ಯಚಕಿತನಾದ ರಾಜನು, ಅವನ ನಗುವಿಗೆ ಕಾರಣವೇನೆಂದು ಕೇಳಿದ. ಆಗ ಆ ರೈತ ಹೇಳಿದ, "ಮಹಾಸ್ವಾಮಿ, ಅಲ್ಲಿ ಅನಾನಸ್ ಹಣ್ಣು ಹಿಡಿದುಕೊಂಡು ನಿಂತಿದ್ದಾನಲ್ಲ ಅವನು ಕೂಡ ಆ ಹಣ್ಣನ್ನು ನನ್ನ ಸವಳು ಹೊಲದ ಪಕ್ಕದ ಹೊಲದಲ್ಲೇ ಬೆಳೆದದ್ದು, ಅದಕ್ಕೇ ಅವನ ಪರಿಸ್ಥಿತಿಯನ್ನು ನೆನೆಸಿಕೊಂಡು ನಗು ಬಂತು!"
(ಬಹುಶಃ ಇದನ್ನು ಪ. ರಾಮಕೃಷ್ಣ ಶಾಸ್ತ್ರಿಯವರು ೭೦ ದಶಕದಲ್ಲಿ ಕರ್ಮವೀರದಲ್ಲಿ ಪ್ರಕಟಿಸಿದ್ದಂತೆ ನೆನಪು)
Comments
ಉ: ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ!
:-)
In reply to ಉ: ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ! by partha1059
ಉ: ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ!
ಪಾರ್ಥರೆ,
ಈ ಕಥೆಯಲ್ಲಿ ನಗುವಿನ ಜೊತೆಗೆ ಚಿಕ್ಕದೊಂದು ನೀತಿ ಅಡಗಿದೆ. "ಅದೇನೆಂದರೆ ಬೇರೆಯವರ ಕಷ್ಟದ ಮುಂದೆ ನಮ್ಮದು ಕಷ್ಟ ಚಿಕ್ಕದೆಂದುಕೊಂಡು ನಗುವುದನ್ನು ಕಲಿಯೋಣ"
In reply to ಉ: ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ! by makara
ಉ: ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ!
::)) ಚೆನ್ನಾಗಿದೆ.
In reply to ಉ: ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ! by kavinagaraj
ಉ: ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ!
ಧನ್ಯವಾದಗಳು, ಕವಿಗಳೆ.
In reply to ಉ: ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ! by makara
ಉ: ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ!
ಜೀ - ನಿಮ್ಮ ಈ ಜೋಕೂ ಸಹಾ ನಾ ಈಗಲೇ ಹೊಸದಾಗಿ ಓದಿದ್ದು ...!!
ಜೋಕಿನ ಅಂತ್ಯ ಬೇಜಾನ್ ನಗೆ ಉಕ್ಕಿಸುತ್ತೆ ..:(()),
ಇದನ್ನ ಸವಿಸ್ತಾರವಾಗಿ ಪ್ರತಿಕ್ರಿಯೆಯಲ್ಲಿ ಹೇಳಿರುವಿರಿ ..
ಪ :ರಾಮ ಕೃಷ್ಣ ಶಾಸ್ತ್ರಿ ಅವರು ತೆಂಕ ಕಾರಂದೂರು ಅವರೇನಾ?
ಅವರು ಈಗಲೂ ಹಲವು ಮಾಸಿಕ ದೈನಿಕಗಳಿಗೆ ಕಥೆ -ಕೃಷಿ ಸಂಬಂಧಿ ಬರ್ಹಗಳನ್ನು ಬರೆಯುತ್ತಾರೆ.
ಮಟ್ ಮಟ ಮಧ್ಯಾಹ್ನ ಒಳ್ಳೆ ನಗೆ ತರಿಸಿದಿರಿ ..
ಶುಭವಾಗಲಿ
ನನ್ನಿ
\|/
In reply to ಉ: ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ! by venkatb83
ಉ: ಜಮಾನಾದ ಜೋಕುಗಳು - ೨೭: ಅನಾನಸ್ ಹಣ್ಣು ಬೆಳೆದವನ ಪರಿಸ್ಥಿತಿ!
ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಸಪ್ತಗಿರಿಯವರೆ.
ನೀವು ಹೇಳುತ್ತಿರುವ ರಾಮಕೃಷ್ಣ ಶಾಸ್ತ್ರಿಗಳು ಮತ್ತು ನಾನು ಇಲ್ಲಿ ಉಲ್ಲೇಖಿಸಿರುವ ಪ. ರಾಮಕೃಷ್ಣ ಶಾಸ್ತ್ರಿಗಳು ಬಹುಶಃ ಒಬ್ಬರೇ ಅಲ್ಲವೆನಿಸುತ್ತದೆ. ಏಕೆಂದರೆ, ನಾನು ಹೇಳಿರುವ ಶಾಸ್ತ್ರಿಗಳು, ನಮಗಿಂತಲೂ ಬಹಳ ಹಿರಿಯರು.