ನರಕವು ಹೇಗಿದೆ ಗೊತ್ತೆ..?
ನರಕವು ಹೇಗಿದೆ ಗೊತ್ತೆ..?
ನನ್ನ ತಮ್ಮ ಹೇಳಿದ ಥೇಟು ಲಾಸ್ ಏಂಜಲೀಸ್ ನಂತೆ.
ನಾನೂ ಕಲ್ಪಿಸಿಕೊಳ್ಳಬಲ್ಲೆ ಅದು ಇರಬಹುದು ಬೆಂಗಳೂರಂತೆ.
ನಾನಿರುವುದು ಅಲ್ಲೇ ..!
ಮತ್ತೆ ಅಲ್ಲಿಯೂ
ದೊಡ್ಡ ಉದ್ಯಾನದಲಿ, ದೊಡ್ಡ ಹೂವರಳಿರಬಹುದು
ದುಡ್ಡನೆರೆಯದಿರಲು ಬಾಡಬಹುದು
ದೊಡ್ಡ ಬುಟ್ಟಿಗಳ ತುಂಬಾ ಹಣ್ಣು ಮಾರಬಹುದು
ಅಂಕು ದೊಂಕಿಲ್ಲದ ರಸ್ತೆಯಲಿ. ಮಂಕು ಯೋಚನೆಗಳಷ್ಟೇ ವೇಗದಲಿ
ಝೇಂಕರಿಸಿ ಸಾಗಿರಬಹುದು
ಬಿಂಕದರಸರ ತೇರುಗಳು ಬಿಡುವಿಲ್ಲದಂತೆ.
ಬೆಡಗಿನ ಮಾನವರು, ಕಡೆದ ಶಿಲ್ಪಗಳಂತೆ
ಎಡೆಯಿಲ್ಲದೆಡೆಯಿಂದ ಬಂದು
ಕಡೆಯಿಲ್ಲದೆಡೆಗೆ ನಡೆದಿರಬಹುದು ಚಿಂತೆಯ ಬುತ್ತಿ ಹೊತ್ತು .
ಬಗೆ ಬಗೆಯ ಮನೆ, ಮೊಗೆ ಮೊಗೆವ ಸಂತಸ
ನಗೆಯ ಕಾರಂಜಿ ಇರಬಹುದಲ್ಲಿ.
ಹಗಲೇನು ಇರುಳಲೂ ಜನರಿದ್ದೂ ಖಾಲಿ.
ನರಕದ ಮನೆಯಲ್ಲಿ ಕೆಡುಕೇನು ಇಲ್ಲ
ಅರೆಗಳಿಗೆ ಕಾಡಿದರೆ, ಬೀದಿಗಿಳಿಯುವ ಚಿಂತೆ
ಮರುಗಳಿಗೆ ಅದು ಮನೆಯಲ್ಲ, ಯುದ್ದ ಶಿಬಿರವಂತೆ.
ಬರ್ಟೋಲ್ಟ ಬ್ರೆಕ್ಟ್ ನ “ Contemplating Hell ” ಕವಿತೆಯ ಭಾವಾನುವಾದ .
Rating
Comments
ಉ: ನರಕವು ಹೇಗಿದೆ ಗೊತ್ತೆ..?
ವಿಚಾರಪ್ರದವಾಗಿದೆ. ಅನುವಾದವೆಂದು ತೋರದಷ್ಟು ಸುಂದರ ಅನುವಾದ.