ಸಾವಿನ ಮನೆ

ಸಾವಿನ ಮನೆ

ನಡು ರಾತ್ರಿಯಲಿ ತಟ್ಟೆಂದು
ಕಿಟಾರನೆ ಕಿರುಚಿದ ನನ್ನಾತ್ಮ
ನಿಧಾನವಾಗಿ
ಸಾವಿನ ಮನೆಯ ಬಾಗಿಲಿನಲ್ಲಿ 
ಇಣುಕಿ ನೋಡಿ ಮುಗುಳ್ನಗುತ್ತಿತ್ತು,,,

ಕಿಟಕಿ ಬಾಗಿಲುಗಳಿಲ್ಲದ 
ಸಾವಿನ ಮನೆಯ ಒಳಗೆ 
ಮಂದ ಬೆಳಕು
ನವಿರಾಗಿ ಪಸರಿಸಿತ್ತು 

ದೇಹವಿಲ್ಲದ ಅನೇಕ ಆತ್ಮಗಳು 
ಅಲ್ಲಿ ಸ್ವಚ್ಚಂದವಾಗಿ 
ನಲಿವಿನ ಉತ್ತುಂಗದಲ್ಲಿದ್ದವು 

ಧರ್ಮಗಳ ಹೆಸರೇ ಇಲ್ಲದೇ 
ಜಾತಿ ವ್ಯವಸ್ಥೆಯ ವ್ಯಭಿಚಾರವಿಲ್ಲದೆ 
ಗಂಡು ಹೆಣ್ಣೆಂಬ ಭೇದವಿಲ್ಲದೆ. 
ಆತ್ಮಗಳೆಲ್ಲ ಸಂತೃಪ್ತಿಯಿಂದ
ಸಂಭ್ರಮಿಸುತ್ತಿದ್ದವು. 

ಸಾವಿನೊಳಗಿನ ಬದುಕು ಇಷ್ಟೊಂದು 
ಸರಳವೇ !! ನನ್ನಾತ್ಮ ಆಶ್ಚರ್ಯಗೊಂಡಿತು. 
"ವಸುದೈವ ಕುಟುಕಂಬಕಂ" ಅಲ್ಲಿಯೇ 
ವಿರಾಜಮಾನವಾಗಿದ್ದ ಬೆಳಕಿನ ಆತ್ಮ 
ಪದೇ ಪದೇ ನುಡಿಯುತ್ತಿತ್ತು. 

ಧರ್ಮವೆಂಬ ಹೆಸರಿನ ಗುಂಪನ್ನು  
ಹುಟ್ಟು ಹಾಕಿದ ಕೆಲವೇ ಆತ್ಮಗಳು,,
ಭೂಮಿಯ ಮೇಲ್ಮೈಯನ್ನು ನೋಡಿ,,,,,
ಮನೆಯ ಮೂಲೆಯಲಿ, ಶೋಕತಪ್ತರಾಗಿ 
ತಾವು ಮಾಡಿದ ತಪ್ಪಿಗೆ ಅಳುತ್ತಾ ಕುಳಿತಿದ್ದವು.... 

ಭೂಮಿಯ ಮೆಲ್ಪದರದಿಂದ ಬರುವ 
ಬಂದೂಕಿನ-ರಕ್ತದ ವಾಸನೆಗೆ ಅವು 
ಪದೇ ಪದೇ ವ್ಯಥೆ ಪಡುತ್ತಿದ್ದವು...... 
ಬೆಳಕಿನಾ ಆತ್ಮ ಮತ್ತೆ ಮತ್ತೆ,
"ವಸುದೈವ ಕುಟುಕಂಬಕಂ" ಎನ್ನುತ್ತಲೇ ಇತ್ತು,,,,

ನನ್ನಾತ್ಮ,,,, "ನಾನು" ಸಾಯುವುದೇ 
ಬದುಕಿನ ಮಾರ್ಗ ಎಂದು ಕಂಡುಕೊಂಡಂತಿತ್ತು. 

-ಜೀ ಕೇ ನ 
 

Comments

Submitted by kavinagaraj Sun, 03/08/2015 - 13:59

ಆತ್ಮಕ್ಕೆ ಅಳಿವಿಲ್ಲ, ಅಂತ್ಯವಿಲ್ಲ, ಭಾವನೆಗಳೂ ಇರಲಾರವು! ಅದೇನಿದ್ದರೂ ಪಂಚಭೂತಗಳಿಂದೊಡಗಡಿದ ಶರೀರದಲ್ಲಿದ್ದಾಗ ಮಾತ್ರ ಎಂಬುದು ಅನುಭಾವಿಗಳ ಮಾತು!! 'ನಾನು' ಅಳಿದಾಗ ನಿಜವಾದ 'ನಾನು' ಬದುಕುತ್ತದೆ!