ಆತ್ಮೀಯ ಕರೆಯೋಲೆ,,,,
ಇದೇ ಭಾನುವಾರ, ಮಾರ್ಚ್ ಎಂಟನೇ ತಾರೀಕು (08-March-2015) "ನವಕರ್ನಾಟಕ ಪ್ರಕಾಶನ"ದಿಂದ "ವಿಶ್ವಮಾನ್ಯರು" ಎಂಬ ಮಾಲಿಕೆಯ ಅಡಿಯಲ್ಲಿ, ನೂರು ಕೃತಿಗಳ ಲೋಕಾರ್ಪಣ ಸಮಾರಂಭವಿದೆ,
ಇದೇ ಶುಭ ಸಂದರ್ಭದಲ್ಲಿ ನಾನು ಬರೆದ ಎರಡು ಚೊಚ್ಚಲ ಕೃತಿಗಳು ಲೋಕಾರ್ಪಣೆಗೊಳ್ಳುತ್ತಿವೆ, ಬಿಡುವಿದ್ದವರು ದಯವಿಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.
ಪುಸ್ತಕ ಪರಿಚಯ :
1) ಒಂಟಿ ಕಾಲಿನ ಎವರೆಸ್ಟ್ ಸಾಹಸಿ : ಒಂದೇ ಕಾಲಿನಲ್ಲಿ ಎವರೆಸ್ಟ್ ಹತ್ತಿ ಭಾರತೀಯ ಹಾಗು ರಾಷ್ಟ್ರೀಯ ಇತಿಹಾಸದಲ್ಲಿ ದಾಖಲೆ ಬರೆದು, ಎವರೆಸ್ಟ್ ಏರಿದ ಪ್ರಪಂಚದ ಮೊತ್ತ ಮೊದಲ ಅಂಗವಿಕಲ ಮಹಿಳೆ ಎಂಬ ಬಿರುದು ಪಡೆದ ಅರುಣಿಮಾ ಸಿನ್ಹಾ ರ ಜೀವನ-ಸಾಧನೆಯ ಕಿರು ಪರಿಚಯ.
,
2) ಬಚೇಂದ್ರಿಪಾಲ್ : ಹೆಣ್ಣು ಹೆಚ್ಚು ಓದುವುದೇ ಪ್ರಪಂಚಕ್ಕಂಟಿದ ಕಳಂಕ ಎಂಬ ಪರಿಸ್ಥಿತಿಯಲ್ಲಿ, ಹಳ್ಳಿಗರಲ್ಲೇ ಮೊದಲಿಗರಾಗಿ ಓದಿ, ಇಡೀ ದೇಶದಲ್ಲಿನ ಹೆಂಗೆಳೆಯರ ಶಕ್ತಿಯ ಪ್ರತೀಕವಾಗಿ ಭಾರತದಿಂದ ಎವರೆಸ್ಟನ್ನು ಏರಿದ ಪ್ರಥಮ ಮಹಿಳೆಯ ಜೀವನದ ಯಶೋಗಾಥೆ.
(ಅವ್ವನಂತೆ ಕಿವಿ ಹಿಡಿದು ಪುಸ್ತಕ ಬರೆಸಿದ ನಲ್ಮೆಯ ನೇಮಿಚಂದ್ರ ಅವರನ್ನು, ಹಾಗು ನವಕರ್ನಾಟಕ ಪ್ರಕಾಶನ ಕುಟುಂಬವನ್ನು, ಮತ್ತು ಸದಾ ಮುಗುಳುನಗುತ್ತ ಜೀವನ ಪಾಠ ಕಲಿಸಿದ (ಕಲಿಸುವ) ನಾ ಸೋಮೇಶ್ವರ ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ)
-GKN
Comments
ಉ: ಆತ್ಮೀಯ ಕರೆಯೋಲೆ,,,,
ನವೀನರೆ ಅಭಿನಂದನೆಗಳು! ತಮ್ಮ ಪುಸ್ತಕಗಳೆರಡು ಯಶಸ್ವಿ ಲೋಕಾರ್ಪಣೆಯಾಗಲಿ, ಮತ್ತಷ್ಟು ಪುಸ್ತಕಗಳಿಗೆ ಸ್ಪೂರ್ತಿ, ನಾಂದಿಯಾಗಲಿ ಎಂಬ ಆಶಯದೊಂದಿಗೆ ಶುಭಾಶಯ ಕೋರುತ್ತೇನೆ.
In reply to ಉ: ಆತ್ಮೀಯ ಕರೆಯೋಲೆ,,,, by nageshamysore
ಉ: ಆತ್ಮೀಯ ಕರೆಯೋಲೆ,,,,
ನಾಗೇಶರೇ ಶುಭಾಷಯಗಳಿಗೆ ನಾನು ಋಣಿ,,,,,, ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿತು, "ನಾ ಡಿಸೋಜ" ಅವರ ಅಧ್ಯಕ್ಷತೆ ಹಾಗು "ನಾ ಸೋಮೇಶ್ವರ" ಅವರ ಸಮ್ಮುಖದಲ್ಲಿ, ಹಾಗು ನೂರ ಹತ್ತು ಕೃತಿಗಳನ್ನು ಬರೆದ ನಲವತ್ತು ಉತ್ಸಾಹಿ ಲೇಖಕರ ಉಪಸ್ಥಿತಿಯಲ್ಲಿ, ಸುಂದರ ವಾತವರಣದಿಂದ ಮನಸೂರೆಗೊಳಿಸಿತು....
ಉ: ಆತ್ಮೀಯ ಕರೆಯೋಲೆ,,,,
ಅಭಿನಂದನೆಗಳು. ಶುಭವಾಗಲಿ.
In reply to ಉ: ಆತ್ಮೀಯ ಕರೆಯೋಲೆ,,,, by kavinagaraj
ಉ: ಆತ್ಮೀಯ ಕರೆಯೋಲೆ,,,,
ಕವಿಗಳೇ,,,,, ಸದಾಕಾಲ ಬರಹಗಳನ್ನು ಪ್ರೋತ್ಸಾಹಿಸಿ, ತಪ್ಪುಗಳನ್ನು ಕೈ ಹಿಡಿದು ತಿದ್ದಿ, ಇಲ್ಲಿಯವರೆಗೂ ನಡೆಸಿಕೊಂಡು ಬಂದ ನಿಮ್ಮ ತಾಳ್ಮೆಯುತ ಮನಕ್ಕೆ ನಮನ,,,,,