ಹೀರೆಕಾಯಿ ಗೊಜ್ಜು !!!

ಹೀರೆಕಾಯಿ ಗೊಜ್ಜು !!!

ಬೇಕಿರುವ ಸಾಮಗ್ರಿ

ಹೀರೆಕಾಯಿ ಗೊಜ್ಜು

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಬೇಕಾಗುವ ಸಾಮಾಗ್ರಿಗಳು:

ಹೀರೆ ಕಾಯಿ ....೨
ಹಸಿರು ಮೆಣಸಿನಕಾಯಿ ....೬-೭ (ಖಾರಕ್ಕೆ ತಕ್ಕಂತೆ)
ಸಾಸಿವೆ/ ಜೀರಿಗೆ....ಒಗ್ಗರಣೆಗೆ (೧- ಚಮಚ)
ಕೆಂಪುಮೆಣಸಿನಕಾಯಿ ....೧-೨ ಒಗ್ಗರಣೆಗೆ
ಕರಿಬೇವು/ ಕೊತ್ತಂಬರಿ.....೨ ಎಸಳು/ ೩-೪ ಟ್ವಿಗ್ಸ್)
ಕಡ್ಳೇ ಬೇಳೆ/ ಉದ್ದಿನಬೇಳೆ....೨-೩ ಚಮಚ
ತೆಂಗಿನ ಕಾಯಿ ತುರಿ....ಅರ್ಧ ಕಪ್

ಮಾಡುವ ವಿಧಾನ:

ಹೀರೇಕಾಯಿಯನ್ನು, ಸ್ವಲ್ಪ ಸಿಪ್ಪೆ ತೆಗೆದು (ಪೂರ್ಣ ಸಿಪ್ಪೆ ತೆಗೆಯಬೇಡಿ), ಹುಳಿ ಅಥವಾ ತೊವ್ವೆ ಗೆ ಹೆಚ್ಚೋಹಾಗೆ ಹೆಚ್ಚಿಕೊಳ್ಳಿ. ಈಗ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ (ಪಲ್ಯ ಮಾಡೋಕ್ಕೆ ತರ - ೨ ಚಮಚ)ಕಾಯಿಸಿ, ಕಾದಮೇಲೆ ಸಾಸಿವೆ/ ಜೀರಿಗೆ ಹಾಕಿ. ಸಾಸಿವೆ ಚಿಟ - ಚಿಟ ಆದಮೇಲೆ ಕಡ್ಲೇ ಬೇಳೇ/ ಉದ್ದಿನಬೇಳೆ (ಸ್ವಲ್ಪ ಜಾಸ್ತಿ , ಒಗ್ಗರಣೆಗಿಂತ) ಹಾಕಿ. ಸ್ವಲ್ಪ ಅರಿಸಿನ ಪುಡಿ(ಅರ್ಧ ಚಮಚ)ಹಾಕಿ. ಬೇಳೆ ಸ್ವಲ್ಪ ಗೋಲ್ಡನ್ ಬ್ರೌನ್ ಆದಮೇಲೆ, ಹಸಿರುಮೆಣಸಿನ ಕಾಯಿ (ಇಡೀ) ಹಾಕಿ ಕೂಡಿಸಿ ಪಲ್ಯ ಮಾಡುವ ಹಾಗೆ. ಕರಿಬೇವು ೧ ಎಸಳು ಹಾಕಿ, ಎಣ್ಣೆಯಲ್ಲಿ ಚೆನ್ನಾಗಿ ಬಾಡಿಸಿ. ಹೀರೆಕಾಯಿ ಹೋಳುಗಳನ್ನು ಹಾಕಿ ಪಲ್ಯ ಮಾಡೋತರ ಬೇಯಿಸಿ. ಉಪ್ಪು ರುಚಿಗೆ ತಕ್ಕಂತೆ ಹೋಳುಗಳನ್ನು ಬೇಯಿಸುವಾಗ ಹಾಕಿದರೆ, ಹೋಳಿಗೆ ಉಪ್ಪು ಚೆನ್ನಾಗಿ ಹತ್ತುತ್ತೆ.

ಈಗ ಮಿಕ್ಸಿ ಯಲ್ಲಿ, ೧/೩ ಹೀರೆಕಾಯಿ ಬೇಯಿಸಿದ ಹೋಳುಗಳು, ತೆಂಗಿನಕಾಯಿ, ಕರಿಬೇವು - ೧ ಎಸಳು, ಕೊತ್ತಂಬರಿ, ಸ್ವಲ್ಪ ಕಡ್ಲೆ ಬೇಳೆ ಉದ್ದಿನಬೇಳೆ(ಒಗ್ಗರಣೆಗೆ ಹಾಕಿದರಲ್ಲಿ ತೆಗೆದು), ಸ್ವಲ್ಪ ಉಪ್ಪು, ಹುಣಸೆಹಣ್ಣಿನ ಪೇಸ್ಟ್(ರುಚಿಗೆ ತಕ್ಕಂತೆ) ಎಲ್ಲ ಹಾಕಿ ಮಿಕ್ಸಿ ಮಾಡಿ ತಿರುವಿ (ಚಟ್ನಿ ತಿರುವಹಾಗೆ, ಸ್ವಲ್ಪ ನೀರಾಗಿ). ಈಗ ತಿರುವಿದನ್ನ ಬಾಣಲೆಯಲ್ಲಿ ಹಾಕಿ ಒಂದೆರಡು ಕುದಿ ಬರುವವರೆಗೆ ಕುದಿಸಿ. ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ಹಾಕಿದರೆ, ಉಪ್ಪು, ಹುಳಿ ಖಾರ ಎಲ್ಲ ಹೊಂದಿಕೊಳ್ಳುತ್ತೆ.

ನಾನು ಪಲ್ಯ ಮಾಡೋವಾಗ ಹಸಿರುಮೆಣಸಿನಕಾಯಿ ಜೊತೆ ೧-೨ ಕೆಂಪು ಮೆಣಸಿನಕಾಯಿ ಹಾಕಿರುತ್ತೇನೆ. ಅದನ್ನು ತಿರುವುದಕ್ಕೆ ಹಾಕದೇ ಅಲ್ಲೇ ಬಿಟ್ಟರೆ ಅದು ಗೊಜ್ಜಿನ ಒಗ್ಗರಣೆಗೆ ಆಗತ್ತೆ. ಮತ್ತೊಮ್ಮೆ ಒಗ್ಗರಣೆ ಹಾಕೋ ಅವಶ್ಯಕತೆ ಇರುವುದಿಲ್ಲ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿ ಗೊಜ್ಜು ಕುದ್ದ ಮೇಲೆ ಸಿಂಪಡಿಸಿರಿ ಚಿತ್ರದಲ್ಲಿ ಕಾಣುವತರಹ. ಈಗ ನಿಮ್ಮ ಹೀರೆಕಾಯಿ ಗೊಜ್ಜು ರೆಡಿ. ಇದನ್ನು ಅನ್ನದ ಜೊತೆಗೆ, ಚಪಾತಿ ಜೊತೆಗೆ, ಬ್ರೆಡ್ ಮಧ್ಯೆ ಸ್ಯಾಂಡ್ವಿಚ್ ತರ ಮತ್ತು, ಬೋಂಡಾ, ಬಜ್ಜಿಗೆ ನೆಂಚುಕೊಂಡೂ ಸವಿಯಬಹುದು.

ತಯಾರಿಸುವ ವಿಧಾನ

Comments

Submitted by venkatb83 Fri, 03/06/2015 - 15:40

ಮೀನ ಮೇಡಂ  ಒಂದೊಳ್ಳೆ ಅಡುಗೆ ಮಾಡುವ ವಿಧಾನ ತಿಳಿಸಿರುವಿರಿ..ಇದು ತಯಾರಿಸಲು ಪ್ರಯತ್ನಿಸುವೆ ..ನನ್ನಿ 

ಶುಭವಾಗಲಿ..

\|/

Submitted by rasikathe Tue, 03/10/2015 - 23:10

ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು. ವೆಂಕಟೇಶ್, ಮೂರ್ತಿ, ಮತ್ತು ಕವಿ ನಾಗರಾಜ್? ಹೌದು, ಹೀರೇ ಕಾಯಿ ಸಿಪ್ಪೇ ಚಟ್ನಿ, ತೌವ್ವೆ, ಎಲ್ಲ ಚೆನಾಗಿರುತ್ತದೆ. ಫೈಬರ್ ಹಾಗೂ ಕಬ್ಬಿನದ ಅಂಶ ಸಿಪ್ಪೆಯಲ್ಲಿ ಇರುತ್ತೆ, ಅದು ಆರೋಗ್ಯಕ್ಕೆ ಒಳ್ಳೆಯದು.