ನೆರಳ ಹೆಜ್ಜೆ

ನೆರಳ ಹೆಜ್ಜೆ

ಪುಸ್ತಕದ ಲೇಖಕ/ಕವಿಯ ಹೆಸರು
ತೇಜಸ್ವಿ ಎ.ಸಿ.
ಪ್ರಕಾಶಕರು
ನಿರೂಪ್ ಪಬ್ಲಿಕೇಷನ್ಸ್
ಪುಸ್ತಕದ ಬೆಲೆ
ರೂ. 70

ತೇಜಸ್ವಿ ಎ.ಸಿ ಯವರ ಕವನ ಸಂಕಲನ "ನೆರಳ ಹೆಜ್ಜೆ" ಮಾರ್ಚ್ ೧೫, ೨೦೧೫ರಂದು ಬಿಡುಗಡೆಗೊಂಡಿದೆ. ಜೀವನದ ಅನುಭವಗಳನ್ನು ಅನುಭವಿಸುತ್ತಾ, ಸಣ್ಣ ಪುಟ್ಟ ವಿಷಯಗಳಲ್ಲೂ ಸ್ವಾರಸ್ಯವನ್ನು ಕಾಣುತ್ತ, ಜೀವನದ ಹಲವು ಮಜಲುಗಳನ್ನು ಕವನಗಳ ರೂಪದಲ್ಲಿ ಸೆರೆ ಹಿಡಿದು.
ಈ ಎಲ್ಲಾ ಕವನಗಳನ್ನು ಪೋಣಿಸಿ ಕವನ ಸಂಕಲವನ್ನಾಗಿ ಮಾಡಲಾಗಿದೆ.
ಬಾಲ್ಯದಲ್ಲಿ ಮಕ್ಕಳ ತುಂಟಾಟ, ಪ್ರಕೃತಿ ವರ್ಣನೆ, ಜೀವನ ಪಾಠಗಳು, ಸ್ಫೂರ್ತಿ ಕೊಡುವ ವಿಷಯಗಳು, ಕನಸುಗಳು, ನೆನಪುಗಳು, ಮಧುರ ಭಾವನೆಗಳು ಹೀಗೆ ಹಲವಾರು ವಿಷಯಗಳನ್ನು ಕವನದ ರೂಪದಲ್ಲಿ ಈ ಹೊತ್ತಿಗೆ ಹೊಂದಿದೆ.
೨೦೧೫ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕವಿ ಡಾ. ಸಿದ್ಧಲಿಂಗಯ್ಯನವರು ಈ ಕೃತಿ ಲೋಕಾರ್ಪಣೆ ಮಾಡಿ, ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
 

Comments