ಪುಸ್ತಕ ಪ್ರಕಾಶನದಲ್ಲಿ ಕ್ರಾಂತಿ!
ಪುಸ್ತಕದ ಮೇಲೆ ಬೆಲೆಯನ್ನು ನಮೂದಿಸಿಲ್ಲ...
ಪುಸ್ತಕ ಓದಿ ಮೆಚ್ಚಿಗೆಯಾದಲ್ಲಿ ಮಾತ್ರ ಹಣ ಕೊಡಿ!
ಹಣ ನಿಮ್ಮಿಚ್ಛೆ..
ಪುಸ್ತಕಗಳು :
೧. ದೆವ್ವದ ಜತೆಯಲ್ಲಿ (೧೦ ಕತೆಗಳ ಸಂಗ್ರಹ)
೨. ಪ್ರೇಮ ಕಾಮ ಧ್ಯಾನ (ಮಿನಿ ಕಾದಂಬರಿ)
೩. ಗುಲ್ಜಾರ್ ಕವನಗಳ ಕನ್ನಡ ಭಾವಾನುವಾದ.
ನಿಮಗಿಷ್ಟವಾದ ಪುಸ್ತಕ ತಿಳಿಸಿ. ಅಂಚೆವೆಚ್ಚ ನನ್ನದೇ... ನಿಮ್ಮ ಮನೆಬಾಗಿಲಿಗೇ ಪುಸ್ತಕ! ಓದಿ..ಕನ್ನಡ ಬೆಳೆಸಿ..
ಉಚಿತ ಅಂದರೆ ಜನರಿಗೆ ಯಾವಾಗಲೂ ಸಂಶಯ-ಇದರಲ್ಲಿ ಏನೋ ಮೋಸವಿರಬಹುದು ಎಂದು.
ಸಂಪದ ಮಿತ್ರರಾದ್ದರಿಂದ ನಿಮ್ಮ ಬಳಿ ಹೇಳಿಕೊಳ್ಳುವೆ- ನನ್ನ ಮಿತ್ರ ತುಂಬಾ ವರ್ಷಗಳಿಂದ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿರುವನು. ನಾನು ಇತ್ತೀಚೆಗೆ ಅಲ್ಲಿಗೆ ಹೋಗಿದ್ದಾಗ ಖಾಲಿ ಪೇಪರ್ಗಳ ರಾಶಿ ರದ್ದಿಗೆಂದು ತೆಗೆದಿರಿಸಿದ್ದನು. "ಚೆನ್ನಾಗಿರುವ ಖಾಲಿ ಹಾಳೆಗಳನ್ನು ರದ್ದಿಗೇಕೆ?" ಎಂದು ವಿಚಾರಿಸಿದೆ. ಅದಕ್ಕಾತ, "ಯಾವುದೋ ಒಂದು ಕಂಪೆನಿಯವರ ಪುಸ್ತಕ ಪ್ರಿಂಟ್ ಮಾಡಿ ಉಳಿದ ಹಾಳೆಗಳು, ಅಳತೆ ಚಿಕ್ಕದಾಗಿರುವುದರಿಂದ ಯಾವುದಕ್ಕೂ ಉಪಯೋಗವಿಲ್ಲ. ನೀನೇನಾದರೂ ಲೇಖನ, ಕವನ, ಕಾದಂಬರಿ ಬರೆದಿದ್ದರೆ, ಈ ಸೈಜ್ನ ಪುಸ್ತಕ ಉಚಿತವಾಗಿ ಮಾಡಿಕೊಡುವೆ" ಎಂದನು.
ಸಿಕ್ಕ ಅವಕಾಶ ಯಾಕೆ ಬಿಡಬೇಕು ಎಂದು ಸಂಪದದಲ್ಲಿ ೭-೮ ವರ್ಷದಿಂದ ನಾನು ಬ್ಲಾಗ್ ಬರಹ ಬರೆಯುತ್ತಿರುವ ವಿಷಯ ಹೇಳಿ, "sampada.net" ನಿಂದ ಸಂಗ್ರಹಿಸಿ ಪುಸ್ತಕ ಮಾಡಲು ತಿಳಿಸಿದೆ. ಆತ ನೋಡಿದರೆ ೩ ಪುಸ್ತಕ ಮಾಡಿರುವನು! ಅರ್ಜೆಂಟ್ ಬಿಡುಗಡೆ ಮಾಡಬೇಕಿದ್ದರಿಂದ ಓದಲು ಟೈಮ್ ಇಲ್ಲ..ಪ್ರಿಂಟ್ ಮಾತ್ರ ಸಕತ್ತಾಗಿದೆ!
ಪುಸ್ತಕ ಖಾಲಿಯಾಗುವ ಮೊದಲು ತಮ್ಮ ವಿಳಾಸ ತಿಳಿಸಿ....
Comments
ಉ: ಉಚಿತ ಪುಸ್ತಕ!
;())))
ಗಣೇಶ್ ಅಣ್ಣಾ ನಿಮ್ಮ ಮನೆಯ ಮುಂದೆ ರೈಲು ಟ್ರಾಕು ಇರುವುದು -ಅಲ್ಲೋ ದಿನ ಹಲವು ರೈಲ್ಗಳು ಓಡುವುವು..ಆದರೆ ಹೈ ರೈಸ್ ಅಪಾರ್ಟ್ಮೆಂಟ್ ಆದ್ದರಿಂದ ಶಬ್ಧ ಸಂಸ್ಯೆ ಇರದೇನೋ..ಆದ್ರೆ ಭೂಮಿ ನಡುಗೊ ಶಬ್ಧ ಆಗಲ್ವೆ..!! ಏಪ್ರಿಲ್ ಫೂಲು ಕಿವಿಯ ಮೇಲಿಟ್ತಿರಿ..!! ದೆವ್ವದ ಜತೆಯಲ್ಲಿ 10 ಕಥೆಗಳು...!! ತರಹೇವಾರಿ ಅನುಭವಗಳೇ..!! ಇರಬಹುದೇನೋ..!!
ಶುಭವಾಗಲಿ
\\\|||||///
ಉ: ಉಚಿತ ಪುಸ್ತಕ!
ಪುಸ್ತಕ ಸಕತ್ತಾಗಿದೆ, ಸಾರ್. ಮಹಾವೀರ ಜಯಂತಿ ಮುಂಚಿನ ದಿನ, ಅವೆನ್ಯೂ ರಸ್ತೆಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುವವನು ನಿಮ್ಮ ಪುಸ್ತಕವನ್ನು "ಚೆನ್ನಾಗಿದೆ ಸಾರ್. ಓದಿ" ಎಂದು ನನಗೆ ಕೇವಲ ಹತ್ತು ರೂಪಾಯಿಗೆ ಮಾರಿದ್ದ. ಅವನಿಗೂ ಓದುವ ಅಭ್ಯಾಸ ಮಾಡಿಸಿದ್ ನಿಮ್ಮ ಪುಸ್ತಕ ಗ್ರೇಟ್ ಸಾರ್. ಮುಂದಿನ ವರ್ಶ ಸಹಾ ಇಂತಹದ್ದೇ ಪುಸ್ತಕ ಉಚಿತವಾಗಿ ಪ್ರಕಟಿಸಿ. ಶಶಿಧರ ಹಾಲಾಡಿ.
ಉ: ಉಚಿತ ಪುಸ್ತಕ!
ಸ್ಯಾಂಪ್ಲ್ ಯುಗ!
ಅಲ್ರೀ...ಮೂರ್ತಿಯವರೆ, ಪುಸ್ತಕನೇ ಉಚಿತಕೊಡುತ್ತೇನೆ ಎಂದಾಗಲೂ ಸ್ಯಾಂಪ್ಲ್ ಕೇಳ್ತಿದ್ದೀರಲ್ಲಾ.......!
ಅದೂ ದೆವ್ವದ ಕತೆ ಕೇಳುತ್ತಿದ್ದೀರಿ! ನನ್ನ ದೆವ್ವದ ಕತೆ ಓದಿದ ದೆವ್ವವೇ ೩ ದಿನ ಚಳಿಜ್ವರ ಬಂದು ಮಲಗಿತ್ತಂತೆ!(ಪಾರ್ಥರ ಬಳಿ ದೆವ್ವವೇ ಹೇಳಿದ್ದನ್ನು ಪಾರ್ಥರು ನನಗೆ ತಿಳಿಸಿದರು) ಸ್ಯಾಂಪ್ಲ್ ಹಾಕಲಾ?
ಸ್ಯಾಂಪ್ಲ್ ಹಾಕದಿರಲು ಇನ್ನೂ ಒಂದು ಕಾರಣವಿದೆ-
ನನ್ನದೂ ಪಾರ್ಥರದ್ದೂ ಮನೆ ಒಂದೇ ಬೀದಿಯಲ್ಲಿದೆ. ನನಗೆ ಸಿಕ್ಕಿದ ದೆವ್ವಗಳೇ ಅವರಿಗೂ ಸಿಕ್ಕಿ ನನ್ನ ಕತೆಗಳು ಅವರ ಕತೆಗಳೂ same to same ಇರಬಹುದು. ಅದನ್ನೆಲ್ಲಾ ಯೋಚಿಸದೇ ಕೆಲವರು ಪಾರ್ಥರ ಕತೆ ಗಣೇಶರು ಕದ್ದರು ಎಂದು ಅಪವಾದ ಹೊರಿಸಬಹುದು.
ನನಗೂ ಇಟ್ನಾಳರಿಗೂ ಉರ್ದು,ಹಿಂದಿ ಕಲಿಸಿದ ಗುರುಗಳು ಒಬ್ಬರೇ...ನಮ್ಮ ಭಾವಾನುವಾದವೂ ಒಂದೇ ರೀತಿ ಇರುವುದು...ಅಲ್ವಾ? ಆದರೆ ಕೆಲವರು.....
ಇನ್ನು ಮಿನಿಕಾದಂಬರಿ ವಿಷಯ- ನಾಗೇಶರಿಗೆ ಹೊಳೆದ ವಿಷಯವೇ ನನಗೂ ಹೊಳೆಯಿತು...ಸ್ವಲ್ಪ ತಡವಾಗಿ....ಆದರೆ ಈ ಕೆಲವರು.....
ಇನ್ನೂ ಸ್ಯಾಂಪ್ಲ್ ಬೇಕು ಎಂದರೆ ನಿಮ್ಮಿಷ್ಟ..ಹಾಕುವೆ.
ಉ: ಉಚಿತ ಪುಸ್ತಕ!
ಅಯ್ಯೋ, ನಾನು ನನ್ನ ಬರಹಗಳದ್ದೂ ಪುಸ್ತಕ ಮಾಡಿಸೋಣ ನಿಮಗೆ ಹೇಳಿ ಅಂತ ಅಂದುಕೊಂಡಿದ್ದೆ....:)
ಇವರೆಲ್ಲ, ಏಪ್ರಲ್ ಫೂಲ್ ಅಂತಾ ಇದ್ದಾರೆ...ಹೋಗ್ಲಿ ಬಿಡಿ ಗಣೇಶ್, ಮುಂದಿನಸಾರಿ ನಿಮ್ಮ ಸ್ನೇಹಿತರು ಕೇಳಿದ್ರೆ, ವರುಷದೊಳಗೆ, (ಏಪ್ರಲ್ ಒಂದರ ಮುಂಚೆ), ನನ್ನ ಪುಸ್ತಕ ಮಾಡಿಸಿಕೊಡಿ ಪ್ಲೀಸ್.....
ಚೆನ್ನಾಗಿತ್ತು ಮೂರ್ಖರ ಸಮಾಚಾರ...
ಮೀನಾ
ಉ: ಉಚಿತ ಪುಸ್ತಕ!
ಡಾಕ್ಟ್ರೆ,
ಕೃತಿಚೌರ್ಯ ಮಾಡುವುದು ಮಹಾಪಾಪ.ನಾನೂ ಅಡುಗೆಯಲ್ಲಿ ಎಕ್ಸ್ಪರ್ಟ್. ಆದರೆ ಅಮೆರಿಕಾ ಮತ್ತು ಇಲ್ಲಿನ ಟೈಮ್ ವ್ಯತ್ಯಾಸದ ಅಂದಾಜೇ ಯಾರೂ ಯೋಚಿಸುವುದಿಲ್ಲ- ನಾನೂ ಬಟರ್ ಸ್ಕ್ವಾಷ್ ಹಲ್ವ ಮಾಡಿ ರುಚಿನೋಡುವುದರೊಳಗೆ ನೀವು ರುಚಿನೋಡದೇ ಸಂಪದದಲ್ಲಿ ಹಾಕಿಬಿಟ್ಟ್ರಿ...
೪ನೇ ಪುಸ್ತಕ ಅಡುಗೆ ಬಗ್ಗೆ ಪ್ರಿಂಟಾಗುತ್ತಿತ್ತು, ಆದರೆ ಅಮೆರಿಕಾದ ಕಾನೂನು ಸಮಸ್ಯೆಯಲ್ಲಿ ಸಿಲುಕುವ ಭಯವಿತ್ತು. ಮುಂದಿನ ವರ್ಷ ನೋಡೋಣ :)
ಉ: ಉಚಿತ ಪುಸ್ತಕ!
ಏಪ್ರಿಲ್ ಒಂದು?