ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'
ಕೈ ಹಿಡಿಯಲಿರುವಾತ ಇನ್ನು ಮುಂದೆ ಪತಿರಾಯ
ಬಂದು ಸೇರಿ ತಿಂದು ಹೋದವರು ಸಮುದಾಯ
ಉಂಡವರಾರೂ ಆಗುವವರಲ್ಲ ತರುವಾಯ
ವರದಕ್ಷಿಣೆ ಪಡೆದ ಗಂಡಿನವರಿಗೆ ಆದಾಯ
ತವರಿಗೆ ಮುಖದೋರಿ ಹೆಣ್ಣು ಹೇಳಿದ್ದು ವಿದಾಯ
ಅರಿಯದ ಜನರ ಮಧ್ಯೆ ಮದುಮಗಳು ಪರಕೀಯ
ಕೆಲವೊಮ್ಮೆ ಅತ್ತೆ ಮನೆ ಜನ ಅನುಕರಣೀಯ
ಹಲವೊಮ್ಮೆ ಹೊಕ್ಕ ಮನೆಯವರು ಅಮಾನವೀಯ
ಅಲ್ಲಲ್ಲೊಮ್ಮೆ ತವರಿನವರು ಬಂದರೆ ಅನಾದರಣೀಯ
ಎಷ್ಟೋ ಬಾರಿ ಗಂಡನ ಮನೆಯವರು ಅಸಹನೀಯ
ಇಂದಿಗೂ ಎಷ್ಟೋ ಕಡೆ ಬರೀ ಜೀತಕ್ಕಿದೆ ಅವಳ ಕಾಯ
ಆಸರೆಗಿಲ್ಲದ ಗಂಡ ಮಲಗಿದ್ದಾನೆ ಹರಡಿಕೊಂಡು ತನ್ನ ಮೈಯ
ಟಿವಿ'ಯಲ್ಲಿ ದೀಪಿಕನ್ನ ನೋಡ್ತಾ ಬಿಟ್ಕೊಂಡ್ ತನ್ನ ಬಾಯ !!
Comments
ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'
"ಯಾ ಕುಂದೇಂದು ತುಷಾರ....ಯಾ ವೀಣಾ....ಯಾ ಶ್ವೇತ..." ಹೀಗೆ ಸರಸ್ವತಿ ಪ್ರಾರ್ಥನೆ ಪ್ರಾರಂಭಿಸಿದರೆ, ಹೆಣ್ಣಿನ ತಾಪತ್ರ ಯಗಳನ್ನು ಯಂತ ಮೂಲಕ ತಿಳಿಸಿದ್ದೀರಿ..ಚೆನ್ನಾಗಿದೆ ಕವನ.
In reply to ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ' by ಗಣೇಶ
ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'
Wah wah wah ಧನ್ಯವಾದಗಳು ಗಣೇಶ್'ಜಿ
ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'
ಮದುವೆಯ ತರುವಾಯ, ಕಾಮಕ್ರಮೇಣ ಗಂಡನಿಗೇ ಅಪಾಯ! ಏಕೆಂದರೆ ಆಕೆಯೇ ಆಗುವಳು ತಳಪಾಯ!! ನೀಡಲಾರರು ಇತರರು ಸಹಾಯ!!! ಹೆಂಡತಿ ಹೇಳಿದ್ದಕ್ಕೆಲ್ಲಾ ತಲೆಯಾಡಿಸಿ ಎಲ್ಲದಕ್ಕೂ ಹೇಳಬೇಕಾಗುವುದು, "ಯಾ, ಯಾ"!
In reply to ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ' by kavinagaraj
ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'
ಹೊಸ ದೃಷ್ಟಿ ಕೋನ ಚೆನ್ನಾಗಿದೆ ಕವಿಗಳೇ! ಯಾ ಯಾ.
In reply to ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ' by kavinagaraj
ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'
’ಕಾಮಕ್ರಮೇಣ’ ??? ಕವಿಗಳೇ, ಇದು ಟೈಪಿಸುವಾಗ ತಿಳಿಯದೇ ನಡೆದ ತಪ್ಪೇ ಅಥವಾ ಇದರಲ್ಲಿ ಗೂಡಾರ್ಥವೇನಾದರೂ ಇದೆಯೇ?
In reply to ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ' by keshavmysore
ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'
ಅಚಾತುರ್ಯದಿಂದ ಆದ ತಪ್ಪು, ಗಮನಿಸದೇ ಮುಂದುವರೆದ ತಪ್ಪು! ಕ್ಷಮಿಸಿ.
In reply to ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ' by kavinagaraj
ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'
ಇದು ಕ್ಷಮೆ ಬೇಡುವಂತಹ ತಪ್ಪಲ್ಲ! ಚತುರ್ವಿಧ ಪುರುಷಾರ್ಥಗಳಲ್ಲಿ ಕಾಮವೂ ಒಂದಾದುದರಿಂದ ’ಕಾಮಕ್ರಮೇಣ’ ಎಂಬ ಬಳಕೆ ನಿಜಕ್ಕೂ ಒಂದು ಹೊಸ ಪ್ರಯೋಗವೆನಿಸಿತು. ಅದಕ್ಕಾಗಿ ಕೇಳಿದೆ ಅಷ್ಟೆ! ನಿಮಗೆ ಬೇಸರವಾಗಿದ್ದಲ್ಲಿ ಕ್ಷಮೆ ಕೇಳಬೇಕಾದವನು ನಾನು!
In reply to ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ' by kavinagaraj
ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'
ಕವಿಗಳೇ! ಕೇಶವ ಅವರು ಹೇಳಿದಂತೆ ಕ್ಷಮಿಸುವಂಥದ್ದು ಇಲ್ಲ ಅನ್ನಿಸುತ್ತೆ ... ನಿಮ್ಮ ನುಡಿಗಳಲ್ಲೇ (ಟೈಪಿಸಿದ್ದು) ಹೇಳುವುದಾದರೆ "ಮದುವೆಯ ತರುವಾಯ ಕಾಮಕ್ರಮೇಣ", ಮದುವೆಯ ತರುವಾಯ ಗಂಡ-ಹೆಂಡಿರಲ್ಲಿ ಇರಬೇಕಾದದ್ದು ಪ್ರೇಮ ... ಇದಾಗದಿದ್ದಾಗ ಗಂಡನಾದವನು ಕಾಮ ಅರಸಿಕೊಂಡು ಹೋದಾಗ ಗಂಡನಿಗೆ ಅಪಾಯವೇ ತಾನೇ?
ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'
ಅತೀ ಸರಳ ಭಾಷೆಯಲ್ಲಿ ಮೂಡಿಬಂದ ಉತ್ತಮ ಕವನ...
In reply to ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ' by Ba Lu
ಉ: ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'
ಧನ್ಯವಾದಗಳು ಬಾಲು ಅವರೇ !