ಹೆಲ್ಮೆಟ್ ಇದ್ರೆ ಸಾಕಾ.. ???

ಹೆಲ್ಮೆಟ್ ಇದ್ರೆ ಸಾಕಾ.. ???

ನನ್ನ ಫ್ರೆಂಡ್ ಮತ್ತೇ ನಾನೂ ಬೈಕ್ ಅಲ್ಲಿ ಹೋಗ್ತಾ ಇದ್ದೆವು, ಪೀಣ್ಯ ಸಮೀಪ, ಅದೇನು ಅವನ ಕೆಲ್ಸ್ ಇತ್ತು, ಹಾಗೆ ಬಿಸಿಲಲ್ಲಿ ಮುಗಿಸ್‌ಕೊಂಡು,
ವಾಪಸ್ ಬರ್ತಾ ಇದ್ದೆವು, ಹೆಲ್ಮೆಟ್ ಎಲ್ಲ ಇತ್ತು, ತುಂಬಾ ಚಿಕ್ಕ ರೋಡ್, ಅಲ್ಲಿ ಡಾಂಬರ್ ಇರಲಿಲ್ಲ ಎಲ್ಲಾರ್ಗು, ಗೊತ್ತರಿರೋ ಹಾಗೆ ಪೀಣ್ಯ ನಲ್ಲಿ ಎಂಥ ರೋಡ್ ಇದೆ ಅಂತ,ನಮ್ಮ ಎದುರಿಗೆ ಒಬ್ಬ ಮನುಷ್ಯ ತನ್ನ ಬೈಕ್ ಅಲ್ಲಿ ಬಂದ, ಹೆಲ್ಮೆಟ್ ಹಾಕ್ಕೊಂದೇ ಇದ್ದ, ಹಾಗೆ ಇದೂರಿಗೆ ಇನ್ನೊಂದು ಲಾರಿ ಕೂಡಾ ಬಂತು, ಏನೋ ಬ್ಯಾಡ್ ಲಕ್ ನೋಡಿ ಆ ಮನುಷ್ಯಂದು, ಬೈಕ್ಇಂದ ಒಮ್ಮೆಲೇ ಜಾರಿ ಬಿದ್ದ, ಹೆಲ್ಮೆಟ್ ಕೆಳಕ್ಕೆ ಜಾರಿ ಬಿತ್ತು, ಲಾರಿಯ ಒಂದು, ಟೈಯರ್ ಅವನ ತೆಲೆ ಮೇಲೆ, ಓಡೋಕ ಆಗಲ್ಲ, ಸ್ಪಾಟ್ ಡೆತ್.ತುಂಬಾ ಬೇಜರಾಯಿತು, ಒಂದೇ ಕ್ಷಣ ನಮ್ಮ ಎದುರಲ್ಲೇ ಇದ್ದವನು ಒಮ್ಮೆಲೇ, ಈ ಲೋಕದಲ್ಲೇ ಇಲ್ಲ.ತುಂಬ ಭಯ ಆಗ್ತಾ ಇತ್ತು.ನೋಡಿ,ಅವನು ಹೆಲ್ಮೆಟ್ ಹಾಕಿದ್ದ,ಆದ್ರೆ ಕ್ಲಿಪ್ ಹಾಕಿರಲಿಲ್ಲ,ಹಾದಿಕ್ಕ ಅಂದ್ರೆ ಉಳುದ್ರು ಉಳಿಬಹುದಿತ್ತು ಅಂತ ಜನ ಮಾತಾಡ್ತಾ ಇದ್ರು ,ನನ್ನ ಫ್ರೆಂಡ್ ಕೂಡಾ ಕ್ಲಿಪ್ ಹಾಕಿರಲಿಲ್ಲ, ನಮ್ಮ ತೆಲೆ ಮೇಲೆ ದೇವರ್ ಕೈ ಇದೇ ಅಂತ ಹೇಳಿ ,ಆಗ ಅಲ್ಲಿಂದ ನಾವು ಹೊರಟೆವು.

ಅದ್ಕೆ ನಾನೂ ಯಾವಾಗ್ಲೇ ಎಷ್ಟು ಸಮೀಪ ಹೋಗೋದಿದ್ರೂ ಹೆಲ್ಮೆಟ್ ಹಾಕ್ತೀನಿ ಮತ್ತು ಮರಿಯದೇ ಕ್ಲಿಪ್ ಹಾಗೆ ಬಿಡಲ್ಲ.
ನಾನೂ ರೋಡ್ನಲ್ಲಿ ನೋಡ್ತೀನಿ, ತುಂಬಾ ಜನ ಹೆಲ್ಮೆಟ್ ಕ್ಲಿಪ್ ಹಾಗೆ ಬಿಟ್ಟಿರ್ತಾರೆ, ನಂಗೆ ಬರೀ ಅದೇ ಸೀನ್ ಏನಪಾಗುತ್ತೆ, ಮತ್ತೇ ನನ್ನ ಕ್ಲಿಪ್ ನೋಡ್ತೀನಿ.

ನೀವು ಕೂಡಾ ಫ್ರೆಂಡ್ಸ್ ಹೆಲ್ಮೆಟ್ ಅಂತೂ ಹಕಲೆಬೇಕು ಇಲ್ಲ ಅಂದ್ರೆ ಪೊಲೀಸರೂ ಫೈನ್ ಹಾಕ್ತಾರೆ, ಅದರ ಜೊತೆ ಕ್ಲಿಪ್ ಹಾಕೋದು ಯಾವತ್ತೂ ಮರೀಬೇಡಿ.

-ವಿನೋದ್.

Rating
No votes yet

Comments