ಓ..ಒಲವೇ(9)

ಓ..ಒಲವೇ(9)

ಆದರೂ ಮನಸ್ಸಿಗೆ ಸಮಾಧಾನ ಮಾಡಿಕೊಂಡಳು. ಇಲ್ಲ ಇಲ್ಲ ಸಾಧ್ಯವೇ ಇಲ್ಲ, ಸಂಜು ನನಗೆ ಈ ರೀತಿ ಮಾಡೋದೇ ಇಲ್ಲ. ಅವನು ತಮಾಷೆ ಮಾಡುತ್ತಿರಬಹುದು.ನಾನು ಹೇಗೆ ಇದನ್ನು ಸ್ವೀಕಾರ ಮಾಡ್ತೀನಿ ಅಂತ ನೋಡೋಕೆ ನನ್ನ ಈ ರೀತಿ ಪರೀಕ್ಷೆ ಮಾಡುತ್ತಿರಬಹುದು.ಇದೆಲ್ಲ ಸ್ವಲ್ಪ ದಿನ ಅಷ್ಟೆ ಆಮೇಲೆ ಅವನು ಮೊದಲಿನಂತೆ ನನ್ನ ಪ್ರೀತಿ ಮಾಡಬಹುದು ಅಂತ ಕಾಯುತ್ತಿದ್ದಳು ಆದ್ರೆ ಯಾವುದೇ ಮಾರ್ಪಾಟು ಸಂಜುವಿನಲ್ಲಿ ಕಾಣಲೇ ಇಲ್ಲ.ತನು ಮನಸಿಗೆ ಇದು ತುಂಬಾ ನೋವು ಕೊಡುತ್ತಿತ್ತು. ಈಗಂತು ಸಂಜು msg ಮಾಡ್ತಾನೆ ಇರ್ತಿರ್ಲಿಲ್ಲ. 2 ದಿನಕ್ಕೋ 3 ದಿನಕ್ಕೋ ಒಮ್ಮೆ reply ಮಾಡ್ತಿದ್ದ.ಅದೂ ಬರೀ gud mrng ಅಥವಾ gud ngt ಅಷ್ಟೆ.call ಅಂತೂ ಇಲ್ಲವೇ ಇಲ್ಲ.ಸಂಜು ನ ಈ ತಾತ್ಸಾರ ತನು ಮನಸ್ಸನ್ನು ತುಂಬಾ ಗಾಯಗೊಳಿಸಿತ್ತು.ಇಲ್ಲ ಇದನ್ನು ಹೀಗೇ ಬಿಟ್ಟರೆ ಸರಿ ಹೋಗೋಲ್ಲ, ಸಂಜುನ ಕೇಳ್ಕೋತೀನಿ ಪ್ರೀತಿ ಮಾಡು ಅಂತ ಅವನು ನನ್ನ ಮಾತು ಇಲ್ಲ ಅನ್ನೋಲ್ಲ, ಖಂಡಿತಾ ಒಪ್ಕೋತಾನೆ ಅಂತ ಅವಳೆ ಸಂಜು ಗೆ call ಮಾಡಿದಳು.
"ಸಂಜು ನಾನು ಕೇಳೋ ಪ್ರಶ್ನೆಗಳಿಗೆ ಉತ್ತರ ಮಾಡ್ತೀಯ ?"
"ನಾನು ತುಂಬಾ ಬ್ಯುಸಿ ಅದೇನು ಕೇಳಬೇಕೋ ಬೇಗ ಕೇಳು ಸಾಧ್ಯವಾದರೆ ಉತ್ತರ ಕೊಡ್ತೀನಿ"
"ನಾನು ಯಾವತ್ತಾದರೂ ನನಗೆ ಒಳ್ಳೆ ಒಳ್ಳೆ ಬೆಲೆಬಾಳುವ ವಸ್ತುಗಳನ್ನ ಗಿಫ್ಟ್ ಮಾಡು ಅಂತ ಕೇಳಿದ್ದೀನ?"
"ಇಲ್ಲ."
"ಯಾವತ್ತಾದರೂ ಅಲ್ಲಿ ಇಲ್ಲಿ ಸುತ್ತೋಕೆ ಕರೆದುಕೊಂಡು ಹೋಗು ಅಂತ ಕೇಳಿದ್ದೀನ ?"
"ಇಲ್ಲ."
"ನಿಮಗೆ ಇರುವ ಆಸ್ತಿಯಲ್ಲಿ ನನಗೂ ಪಾಲು ಬೇಕು ಅಂತ ಕೇಳಿದ್ದೀನ ?"
"ಇಲ್ಲ."
"ಯಾವಾಗಲೂ ಎಲ್ಲಾ ಕೆಲಸ ಬಿಟ್ಟು ನನ್ನೊಂದಗೇ ಮಾತನಾಡುತ್ತಿರಿ ಅಂತ ಕೇಳಿದ್ದೀನ ?"
"ಇಲ್ಲ."
ಅಥವಾ ನೀವು ನಿಮ್ಮ ಹೆಂಡತಿಯನ್ನು ಪ್ರೀತಿ ಮಾಡ್ಬೇಡಿ,ಅವಳನ್ನು ಬಿಟ್ಟು ಬಿಡಿ, ನನ್ನನ್ನು ಮಾತ್ರ ಪ್ರೀತಿ ಮಾಡಿ ಅಂತ ಕೇಳಿದ್ದೀನ ?"
"ಇಲ್ಲ."
"ನೋಡಿ ನನ್ನಿಂದ ನಿಮಗೆ ಯಾವುದೇ ರೀತಿಯ ತೊಂದರೆ ಇಲ್ಲ, ಆದ್ರೂ ನೀವು ಯಾಕೆ ಈ ರೀತಿ ಮಾಡ್ತಾ ಇದ್ದೀರ ?"ಅಂದಳು
"ನೀವು ಏನೇ ಹೇಳಿದರೂ ನನ್ನ ನಿರ್ಧಾರ ಬದಲಾಗೋಲ್ಲ" ಅಂದ ಸಂಜು
"ಸಂಜು ಪ್ಲೀಸ್ ಈ ರೀತಿ ಮಾಡೋ ಹಾಗಿದ್ರೆ ನನ್ನ ಯಾಕೆ ಪ್ರೀತಿ ಮಾಡ್ಬೀಕಿತ್ತು.ನಾನು ನಿಮ್ಮ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದೀನಿ.ನನ್ನ ನಂಬಿಕೆಗೆ ದ್ರೋಹ ಮಾಡ್ಬೇಡಿ" ಅಂತ ಅಳಲಾರಂಭಿಸಿದಳು
ಅಳೋದ್ರಿಂದ ಏನೂ ಪ್ರಯೋಜನವಿಲ್ಲ ರೀ,ಇನ್ಮೇಲೆ ನಾನು ಪ್ರೀತಿ ಮಾಡ್ತೀನಿ ಅನ್ನೋ ಆಸೆ ಇಟ್ಕೋಬೇಡಿ ಇದರಿಂದ ಏನೂ ಪ್ರಯೋಜನವಿಲ್ಲ.
ಹೀಗೆ ಹೇಳೋದಕ್ಕೆ ನಿಮಗೆ ಮನಸಾದ್ರೂ ಹೇಗೆ ಬರುತ್ತೆ,ನಾನು ಮುಂಚೆಯಿಂದಾನೆ ಹೇಳ್ತಾ ಇದ್ದೆ, ಈ ಪ್ರೀತಿ ಗೀತಿ ಎಲ್ಲ ಬೇಡ, ಅದೆಲ್ಲ ಸರಿಹೋಗೋಲ್ಲ, ನಾವಿಬ್ಬರೂ ಗೆಳೆಯರಾಗೇ ಇರೋಣ ಅಂದ್ರೆ ನೀವು ಆಗೆಲ್ಲ ನನ್ನ ಮಾತು ಕೇಳಲೇ ಇಲ್ಲ, ನಾನು ನನ್ನ ಜೀವನದಲ್ಲಿ ಕಷ್ಟಾನೋ, ಸುಖಾನೋ ಗಂಡ ಒಳ್ಳೆಯವನೋ, ಕೆಟ್ಟವನೋ ಹೇಗೋ ಎಲ್ಲಾ ಸಹಿಸಿಕೊಂಡು ಬಾಳ್ವೆ ಮಾಡುತ್ತಿದ್ದೆ. ಆದ್ರೆ ನೀವು ನನ್ನ ಜೀವನದಲ್ಲಿ ಕಾಲಿಟ್ಟು ನನಗೆ ಪ್ರೀತಿ ಅನ್ನೋ ಆಸೆ ತೋರಿಸಿ ಈಗ ಮೋಸ ಮಾಡ್ತಾ ಇದ್ದೀರ.ಬೇಡ ಸಂಜು ನನ್ನ ಭಾವನೆಗಳ ಜೊತೇಲಿ ಚೆಲ್ಲಾಟ ಆಡಬೇಡಿ ಪ್ಲೀಸ್.
ನಾನು ಯಾರ ಜೊತೇನೂ ಚೆಲ್ಲಾಟ ಆಡಿಲ್ಲ ನಾನೇನೂ ನಿಮ್ಮ ಹಿಂದೆ ಬಿದ್ದು ನನ್ನ ಪ್ರೀತಿ ಮಾಡಿ ಅಂತ ಕೇಳ್ಕೊಂಡಿಲ್ಲ, ಆಗ ನನಗೆ ಪ್ರೀತಿ ಮಾಡಬೇಕು ಅನಿಸಿತ್ತು, ಪ್ರೀತಿ ಮಾಡಿದೆ. ಈಗ ಬೇಡ ಅನಿಸ್ತಾ ಇದೆ ಅದಕ್ಕೆ ಪ್ರೀತಿ ಮಾಡೋದನ್ನ ಬಿಟ್ಟಿದ್ದೀನಿ.ಈಗ ಹಳೇ ಕಥೆ ಪುರಾಣ ಎಲ್ಲಾ ಬೇಡ ಅಂದ.ತನು ಗೆ ಮನಸ್ಸು ಒಡೆದು ಹೋಯ್ತು.ದುಃಖ ತಡೆಯಲಾಗಲಿಲ್ಲ.
ಹೋಗಲಿ ನನ್ನಿಂದ ಏನಾದರೂ ತಪ್ಪಾಗಿದ್ದರೆ ಹೇಳಿ ಅದನ್ನ ತಿದ್ದಿ ಕೊಳ್ತೀನಿ ಮತ್ತೆ ಯಾವತ್ತೂ ಅ ತಪ್ಪು ಮಾಡೋಲ್ಲ.ನೀವು ಯಾವಾಗ್ಲೂ ಹೇಳ್ತಿದ್ರಿ ಅಲ್ವಾ, ತನು ನಿನ್ನಿಷ್ಟಾನೆ ನನ್ನಿಷ್ಟ, ನೀನು ಏನೇ ಕೇಳು ಇಲ್ಲ ಅಂತ ಹೇಳೋಕೆ ನಂಗೆ ಮನಸ್ಸು ಬರೋಲ್ಲ ಅಂತ. ಈಗ ನನ್ನ ಸ್ವಾಭಿಮಾನ ಬಿಟ್ಟು ಕೇಳ್ಕೋತಾ ಇದ್ದೀನಿ ನನಗೆ ನೀವು ಬೇಕು ಸ್ವಲ್ಪೇ ಸ್ವಲ್ಪ ನಿಮ್ಮ ಪ್ರೀತಿ ಕೊಡಿ. ಸಾಯುತ್ತಿರುವವನಿಗೆ ಅಮೃತ ಸಿಕ್ಕಿದಷ್ಟು ಸಂತೋಷ ಆಗುತ್ತೆ.ನಿಮ್ಮ ಎರಡೇ ಎರಡು ಪ್ರೀತಿಯ ಮಾತುಗಳು ಸಾಕು ನನ್ನ ಜೀವನ ಸಾಗಿಸೋಕೆ ಪ್ಲೀಸ್ ಇಲ್ಲ ಅಂತ ಮಾತ್ರ ಅನ್ಬೇಡಿ ಅಂದಳು ಅಳುತ್ತಾ.
ನೋಡಿ ನೀವು ಏನೇ ಹೇಳಿದರೂ ನನ್ನ ನಿರ್ಧಾರ ಬದಲಾಗೋಲ್ಲ.ನಾನು ತೀರ್ಮಾನ ಮಾಡಿ ಆಗಿದೆ ಅಂದ.
ಸಂಜು ಇದು ನಮ್ಮಿಬ್ಬರಿಗೂ ಸಂಬಂಧ ಪಟ್ಟಿರೋ ವಿಷ್ಯ.ನನಗೆ ಒಂದು ಮಾತೂ ತಿಳಿಸದೇ ನೀವೊಬ್ಬರೆ ತೀರ್ಮಾನ ತೆಗೆದುಕೊಳ್ಳೋಕೆ ಹೇಗೆ ಸಾಧ್ಯ, ನಾನೇನೂ ಆಟದ ಗೊಂಬೆಯಲ್ಲ ಇಷ್ಟ ಬಂದಾಗ ಮುದ್ದು ಮಾಡಿ, ಬೇಡ ಅನ್ನಿಸಿದಾಗ ತೆಗೆದು ಬಿಸಾಕೋಕೆ,ನಾನೂ ಎಲ್ಲರಂತೆ ಮನುಷ್ಯಳು. ಪ್ಲೀಸ್ ನನಗೆ ಮೋಸ ಮಾಡ್ಬೇಡಿ.ದುಃಖ ತಡೆಯಲು ಸಾಧ್ಯವಾಗದೆ ಇನ್ನೂ ಜೋರಾಗಿ ಅಳತೊಡಗಿದಳು.ಸಂಜು ಮನಸ್ಸು ಮಾತ್ರ ಕಲ್ಲಿನಂತೆ ಕಠೋರವಾಗಿತ್ತು.ಅವನು ಹೇಳಿದ ನೋಡಿ ನನಗೆ ಕೆಲಸ ಜಾಸ್ತಿ ಇದೆ ಬೇಗ ಮಾತು ಮುಗಿಸಿ, ಮತ್ತೆ ಇನ್ನೊಂದು ಮಾತು, ಇವತ್ತು ನನಗೆ ನೀವು call ಮಾಡಿದ ಹಾಗೆ ಸಡನ್ನಾಗಿ ಯಾವತ್ತೂ call ಮಾಡ್ಬೇಡಿ, ನನ್ನ ಹೆಂಡತಿಗೆ ಗೊತ್ತಾದ್ರೆ ಅಷ್ಟೆ ಅಮೇಲೆ ಅಂದ.ಈ ಮಾತು ಕೇಳಿ ತನು ಗೆ ಆಕಾಶವೇ ತಲೆಯ ಮೇಲೆ ಬಿದ್ದ ಹಾಗಾಯ್ತು ನೀನು ಯಾವಾಗ ಬೇಕಾದರೂ call ಮಾಡು msg ಮಾಡು ಅಂತಿದ್ದವನು ಇವತ್ತು ಈ ರೀತಿ ಹೇಳ್ತಾ ಇದ್ದಾನಲ್ಲಾ ಅಂತ. Call ಕಟ್ ಮಾಡಿ ಹಾಸಿಗೆ ಮೇಲೆ ಬಿದ್ದು ಒಂದೇ ಸಮನೆ ಹುಚ್ಚಿಯಂತೆ ಅಳತೊಡಗಿದಳು.

N....R....

ಮುಂದುವರೆಯುತ್ತದೆ......

Comments

Submitted by smurthygr Tue, 06/02/2015 - 19:05

ಇಲ್ಲಿ "ಪ್ರೀತಿ" ಎಂದರೆ ಏನು ಅನ್ನುವ ಸಂದೇಹ ಉಂಟಾಗಿದೆ.