ಹುಚ್ಚು ಮನಸ್ಸೇ......ಭಾಗ(2)
ಹುಚ್ಚು ಮನಸ್ಸೇ.
ಅಜೇಯು ಸ್ವಲ್ಪ ಹೊತ್ತು ಕಾಯಿದ ಅವಳ reply ಬರಬಹುದು ಅಂತ.ಆದರೆ ಯಾವ ಮೆಸೇಜ್ ಬರಲಿಲ್ಲ ಅವಳು ಮಲಗಿರಬಹುದು ಅಂತ ಯೋಚಿಸಿ ಮಲಗಿದ್ದ. ಅವನ ಮನಸ್ಸಿನ ತುಂಬ ಭಯದ ವಾತಾವರಣ ಆವರಿಸಿತ್ತು ನಿದ್ರೆಯೆ ಬರಲಿಲ್ಲ. ಬೆಳಗ್ಗೆ ಎಂದು ಕ್ಷಣ ಮೋಬ್ಯಾಲ್ ನೋಡಿದ ಆದರೆ ಅವಳ ಯಾವ ಮೆಸೇಜ್ ಬಂದಿರಲಿಲ್ಲ. ಅವನಿಗೆ ತುಂಬಾ ಭಯವಾಯಿತ್ತು ಅವಳು ಬೇಜಾರಾಗಿದ್ದಾಳೇನು ಅಂತ. ಹೀಗೆ ಎರಡೂ ದಿನಗಳು ಕಳೆದವು ಅವಳ ಯಾವ ಮೆಸೇಜ್ ಬರಲಿಲ್ಲ. ಅವನಿಗೆ ಏನು ಮಾಡಬೇಕು ತಿಳಿಯಲಿಲ್ಲ I m sorry please excuse me ಅಂತ ಮೆಸೇಜ್ ಕಳುಹಿಸಿದ ಅವಳಿಗೆ. ಆದರೂ ಯಾವ reply ಬರಲಿಲ್ಲ. ಅಜೇಯು ಅವಳು ತನ್ನ ಜೀವನದಲ್ಲಿ ಮತ್ತೆ ಬರೋದಿಲ್ಲ ಏನೋ ಅಂತ ತುಂಬಾ ದುಖಃ ಪಡುತ್ತಿದ್ದನು.ಅವತ್ತು ರಾತ್ರಿ ಸುನೀತಾಳಿಂದ ಹಾಯ್ ಮೆಸೇಜ್ ಬಂತು.ಅವನಿಗೆ ತುಂಬಾ ಸಂತೋಷವಾಯಿತ್ತು ಹೇಲೋ ಹೇಳಿ ಮತ್ತೆ ಕ್ಷಮೆ ಕೇಳಿದ.ಅವಳು its ok,ನಾನು ನಿನ್ನ ತುಂಬ ಪ್ರೀತಿಸುತ್ತಾಯಿದೆ,ಆದರೆ ಮೊದಲು ನೀನು ಹೇಳಲಿ ಅಂತ ಕಾಯುತ್ತಿದ್ದೆ ಎಂದಳು.ಅಜೇಯಗೆ ಸಂತೋಷ ತಡೆಯೋಕೆ ಆಗದೆ ಅವಳಿಗೆ ಕಾಲ್ ಮಾಡಿದ. ಸುನೀತಾ I lv u ,Thank u lot ನಾನು ಬದುಕಿದೆ,ನಾನು ನನ್ನ ಜೀವನ ಮುಗಿಯಿತು ಏನೋ ಅಂತ ಭಾವಿಸಿದೆ ಥ್ಯಾಂಕ್ಯೂ.ನಾನು ಯಾವತ್ತೂ ನಿನಗೆ ನೋವು ಮಾಡೋದಿಲ್ಲ, ಮೋಸ ಮಾಡೋದಿಲ್ಲ ಅಂತೆಲ್ಲಾ ಹೇಳಿದನು.ಸುನೀತಾಳು ಥ್ಯಾಂಕ್ಯೂ ಹೇಳಿದಳು.ಹೀಗೆ ಶುರುವಾದ ಅವರ ಪ್ರೀತಿ ತುಂಬಾ ಗಾಢವಾಗಿ ಬೆಳೆಯಿತ್ತು. ದಿನದ ಸುಮಾರು ಗಂಟೆಗಳು ಅವರಿಬ್ಬರೂ ಕಾಲ್,ಮೆಸೇಜ್ ಮಾಡೊದ್ದರಲ್ಲಿ ಕಳೆಯುತ್ತಾಯಿದ್ದರು.
ಸ್ವಲ್ಪ ದಿನಗಳಾದ ಮೇಲೆ ಅವರಿಬ್ಬರೂ ಗಾಡನ್೯ಗಳು,ಚಿತ್ರ ಮಂದಿರಗಳಿಗೆ,ಹೋಟೆ ಸುತ್ತಾಡೊಕ್ಕೆ ಶುರು ಮಾಡಿದ್ದರು.ಅವರಿಬ್ಬರೂ ಪ್ರೀತಿಯ ಲೋಕದಲ್ಲಿ ಸುಂದರವಾದ ಕನಸುಗಳನ್ನು ಕಾಣುತ್ತ ಚಲಿಸುತ್ತಿದ್ದರು. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದಿರು. ಇಬ್ಬರೂ ಒಂದು ದಿನವು ಕಾಲ್,ಮೆಸೇಜ್ ಮಾಡದೇ ಇರುತ್ತಿರಲಿಲ್ಲ. ಅವಳು ಎಲ್ಲರನ್ನೂ ತುಂಬಾ ಬೇಗನೆ ಹಚ್ಚಿಕೊಳ್ಳುತ್ತಿದಳು.ಆದ್ದರಿಂದ ಅವಳಿಗೆ ತುಂಬಾ ಜನ ಹುಡುಗಿಯರು, ಹುಡುಗರು ಸ್ನೇಹಿತರರಿದ್ದರು. ಎಲ್ಲರ ಬಗ್ಗೆಯು ಅಜೇಯ ಹತ್ತಿರ .ಹೇಳಿದಳು. ಒಂದು ದಿನ ಸುನೀತಾಳು ಅಜೇಯಯನ್ನು ಮನೆಯವರಿಗೆ ಭೇಟಿ ಮಾಡಿಸಲು ಮನೆಗೆ ಕರೆದಳು.ಅಜೇಯಗೆ ಅವಳ ಮನೆಗೆ ಹೋಗೋಕ್ಕೆ ತುಂಬಾ ಭಯವಾಯಿತು .ಅವನು ಬೇಡ ಬೇಡ ಅಂತ ಹೇಳಿದ.ಅದಕ್ಕೆ ಸುನೀತಾ ನಮ್ಮ ಮನೆಯವರು ಆಗೇನುಯಿಲ್ಲ Free ಇದ್ದಾರೆಂದು,ಅವರು ಏನೂ ತಪ್ಪು ತಿಳಿಯೊದಿಲ್ಲ ಯೋಚನೆ ಮಾಡಬೇಡ ಅಂತ ಹೇಳಿದಳು.ಅಜೇಯು ಅವಳು ಒತ್ತಾಯದಿಂದ ಒಪ್ಪಿಕೊಂಡನು ಮನೆಗೆ ಬರಲು.ಅವನು ಚೆನ್ನಾಗಿ ತಯಾರಾಗಿ ಸುನೀತಾಳು ಹೇಳಿದ ಸಮಯಕ್ಕೆ ಮನೆಗೆ ಹೋದನು. ಅವಳ ಕುಟುಂಬದಲ್ಲಿ ನಾಲ್ಕು ಜನರಿದ್ದರು,ಅವಳು,ಅವಳ ಅಣ್ಣ ರಾಜು, ಅವಳ ತಂದೆ,ತಾಯಿ.
ಸುನೀತಾ ಅವಳ ಮೋಬ್ಯಾಲ್ exchange ಆಗಿದ ಬಗ್ಗೆ ಹೇಳಿ ಅವರೇ ಇವರು ಅಂತ ಅಜೇಯಯನ್ನು ಪರಿಚಯಿಸಿದಲು. ಆ ಘಟನೆನಿಂದ ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದೆ ಅಂತ ಹೇಳಿದಳು. ಮನೆಯವರೆಲ್ಲರು ಅಜೇಯಯನ್ನು ತುಂಬಾ ಆತ್ಮೀಯವಾಗಿ ಮಾತಾಡಿಸಿದ್ದರು. ಅಜೇಯಗೆ ಅವಳ ಮನೆಗೆ ಹೋಗುವಾಗ ಇದ್ದ ಭಯ,ಆತಂಕವೆಲ್ಲಾ ಮಾಯವಾಗಿತು ಮನೆಯಿಂದ ವಾಪಾಸ ಬರುವಾಗ.ಅವನು ಪುಲ್ ಖುಷಿಯಿಂದ ಅವಳ ಮನೆಯಿಂದ ಹೊರಬಂದ.
ಇಬ್ಬರ ಪ್ರೀತಿ ಎಷ್ಟು ಹೆಚ್ಚಾಗಿತ್ತು ಅಂದರೆ ಸಣ್ಣ,ಸಣ್ಣ ತಪ್ಪುಗಳಿಗೆ ಮುನಿಸು ಕೊಳ್ಳುತ್ತಿದ್ದರು ಮತ್ತೆ ಬೇಗನೆ ಒಂದಾಗುತ್ತಿದ್ದರು. ಅಜೇಯಗೆ ಸುನೀತಾಳೆ ಅವನ ಜೀವನವಾಗಿ ಬಿಟ್ಟಿದ್ದಳು.ಅವನ ಸಂತೋಷ,ದುಖಃ ಎಲ್ಲವೂ ಅವಳೆ ಆಗಿದ್ದಳು. ಅವನು ಯಾರದ್ದರು ಮೋಬ್ಯಾಲ್ ಯಲ್ಲಿ ತುಂಬಾ ಮಾತಾಡಿದ್ದರೆ ಬೈಯತ್ತಾಯಿಂದ ಅವನಿಗೆ ಈಗ ಅಥ೯ವಾಗಿತ್ತು. ಅವನು ಪ್ರೀತಿಯಲ್ಲಿ ಬಿದ್ದ ಮೇಲೆ ಅವರು ಯಾಕೆ ಎಷ್ಟು ಮೋಬ್ಯಾಲ್ ಯಲ್ಲಿ ಮಾತಾಡುತ್ತಾರೆಂದು. ಸುನೀತಾಳ ಮನೆಯವರಿಗೆ ಅಜೇಯ ಪರಿಚಯವಾದ ಮೇಲೆ ಅವಳು ಅವನ ಜೊತೆ ಮೋಬ್ಯಾಲ್ ಯಲ್ಲಿ ಮಾತಾಡಿದ್ದರೆ ಅವರು ಏನು ಅನುತ್ತಿರಲಿಲ್ಲ. ಇದ್ದರಿಂದ ಅವರಿಬ್ಬರೂ ಮೋಬ್ಯಾಲ್ ಯಲ್ಲಿ ಮಾತಾಡೊದ್ದು ಹೆಚ್ಚಾಯಿತು. ಇಬ್ಬರ ಮಧ್ಯೆ ಪ್ರೀತಿಯು ಹೆಚ್ಚಾಗಿ,ದೂರವಾದ್ದರೆ ಸಾಯೋ ಮಾತಾಡುತ್ತಿದ್ದರು. ಹೀಗೆ ಮೂರು,ನಾಲ್ಕು ತಿಂಗಳು ಕಳೆದವು. ಒಂದು ದಿನ ಅಜೇಯು ರಾತ್ರಿ ಸುಮಾರು ೯:೩೦ ಗಂಟೆಗೆ ತುಂಬಾ ಸುತ್ತು ಆಗಿದೆ ಅಂತ ಬೇಗ ಮಲಗಬೇಕು ಅನೋಷ್ಟರಲ್ಲಿಯೇ ಒಂದು ಅಪರಿಚಿತ ಮೋಬ್ಯಾಲ್ ನಂಬರ್ ನಿಂದ ಮೆಸೇಜ್ ಬಂತು.
ಅಜೇಯು ಮೆಸೇಜ್ open ಮಾಡಿದ.ಅದರಲ್ಲಿ ನಾನು ಸುನೀತಾಳ ಅಣ್ಣ ರಾಜು ಅಂತ ಇತ್ತು.ಅಜೇಯಗೆ ಆತಂಕವಾಯಿತ್ತು.ಹಾಗೆ ಮೆಸೇಜ್ ಮಾಡೋಕ್ಕೆ ಶುರು ಮಾಡಿದ.ರಾಜು ಅಜೇಯುಗೆ ನನ್ನ ತಂಗಿ ಮತ್ತೆ ನಿನ್ನ ನಡುವೆ ಏನು ನಡೆಯುತ್ತಾಯಿದೆ ಅಂತ ಕೇಳಿದ.ಅಜೇಯಗೆ ಪುಲ್ ಶಾಕಯಾಯಿತ್ತು....
ಅಜೇಯು ರಾಜುಗೆ ಏನು ಉತ್ತರ ನೀಡಿದ ?...
To be continued ......
Comments
ಉ: ಹುಚ್ಚು ಮನಸ್ಸೇ......ಭಾಗ(2)
ಪ್ರೀತಿ ಎಂದರೆ ಹಾಗೆ ಅಲ್ಲವೇ ಅದರಲ್ಲಿ ಸಂತೋಷ, ಮುನಿಸು, ಬೇಸರ ಎಲ್ಲವೂ ಸಾಮಾನ್ಯ.....................::)
ಅಜೇಯು ರಾಜುಗೆ ಏನು ಉತ್ತರ ನೀಡಿದ ?... ಎನ್ನುವುದೇ ಕುತೂಹಲಕಾರಿ ವಿಷಯ.................
ಧನ್ಯವಾದಗಳು......
In reply to ಉ: ಹುಚ್ಚು ಮನಸ್ಸೇ......ಭಾಗ(2) by ravindra n angadi
ಉ: ಹುಚ್ಚು ಮನಸ್ಸೇ......ಭಾಗ(2)
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ರವೀಂದ್ರ ಸರ್.ಅಜೇಯ ಉತ್ತರವನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಿ....
ಉ: ಹುಚ್ಚು ಮನಸ್ಸೇ......ಭಾಗ(2)
2 ಭಾಗಗಳನ್ನೂ ಓದಿದೆ. ಮುಂದಿನ ಕಂತು ಬರಲಿ.
In reply to ಉ: ಹುಚ್ಚು ಮನಸ್ಸೇ......ಭಾಗ(2) by kavinagaraj
ಉ: ಹುಚ್ಚು ಮನಸ್ಸೇ......ಭಾಗ(2)
ಧನ್ಯವಾದಗಳು ಸರ್.ಮುಂದಿನ ಭಾಗ ಶೀಘ್ರದಲ್ಲೇ ನೀರಿಕ್ಷಸಿ ಸರ್.