ಸುಗತಿ ಸಿಗುವುದೇ
ಕವನ
ಹೆಜ್ಜೆಯೊಳು ಶಂಕೆ ಮಾಡುತ
ಸಜೀವ ಈ ಜೀವ ದಹಿಸುತ
ಸಜ್ಜನಿಕೆ ತೋರೆಸುತ
ಸಂಯಮ ತಳೆದು ಎಷ್ಟೊಂದು ಬಾಳಲಿ
ಸುಗುಣಳು ನಾನಲ್ಲ ದುರ್ಗುಣ ಎನಗಿಲ್ಲ
ಷರ ಪಂಜರವಾದರೂ ಸರಿ
ವಿಷ ವರ್ತುಲವಾದರೂ ಸರಿ
ಆರೋಪ ಅಪಮಾನ ಸಹಿಸಲಾರೆರಿ
ಪರದೆ ಮುಂದೆ ಒಂದು ಮುಖ
ಪರದೆ ಹಿಂದೆ ಮತ್ತೊಂದು ಮುಖ
ಕ್ಷಣಿಕದ ಬದುಕಲಿ ತಂದು ದು:ಖ
ಪರರಿಗೂ ನೀಡದೆ ಸುಖ'
ಏನಿದು ಮಾಯೆ ಕಾಣದ ಮಾಯಾಗಾರ
ಏನಿದು ಲೀಲೆ ನೊವಿನ ಶೂಲೆ
ಸುಗತಿ ಸಿಗುವುದೇ ಎನಗೆ.
Comments
ಉ: ಸುಗತಿ ಸಿಗುವುದೇ
ಕವಿತೆ ಚೆನ್ನಾಗಿದೆ ಸರ್.
In reply to ಉ: ಸುಗತಿ ಸಿಗುವುದೇ by ರವಿ ಕಿರಣ
ಉ: ಸುಗತಿ ಸಿಗುವುದೇ
ravi kiran thank you sir