ತೋತಾಪುರಿ ಮಾವಿನ‌ ಜಾಮ್ [Totapuri Mango Jam]

ತೋತಾಪುರಿ ಮಾವಿನ‌ ಜಾಮ್ [Totapuri Mango Jam]

ಬೇಕಿರುವ ಸಾಮಗ್ರಿ

ಒಂದು ದೊಡ್ಡ ತೋತಾಪುರಿ ಮಾವಿನ ಕಾಯಿ
ಮಾವಿನ ತುರಿಯಷ್ಟೇ ಅಳತೆಯಲ್ಲಿ ಸಕ್ಕರೆ
ಚಿಟಿಕೆ ಉಪ್ಪು
ತುರಿಯುವ ಪಾತ್ರೆ
ದಪ್ಪತಳದ ಪಾತ್ರೆ ‍ , ಸೌಟು

ತಯಾರಿಸುವ ವಿಧಾನ

ಒಂದು ದೊಡ್ಡ ತೋತಾಪುರಿ ಮಾವಿನ ಕಾಯನ್ನು [ಹಸಿರು ಸಿಪ್ಪೆ ಇರಬೇಕು] ತೊಳೆದು ಸಿಪ್ಪೆ ತೆಗೆಯಿರಿ. ಒಳಗಿನ ಕಾಯಿಯನ್ನು ವಾಟೆಯಿಂದ‌ ಬೇರ್ಪಡಿಸಿ ತುರಿಯಿರಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುರಿದ ಕಾಯನ್ನು ಹಾಕಿ ಹತ್ತು ನಿಮಿಷ ಬಾಡಿಸಿ. ನಂತರ ಮಾವಿನ ತುರಿಯಷ್ಟೇ ಅಳತೆಯಲ್ಲಿ ಸಕ್ಕರೆಯನ್ನು ಸೇರಿಸಿ. ಸುಮಾರು ಮೂವತ್ತು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಆಗಾಗ‌ ಕೈಯಾಡಿಸುತ್ತಾ ಬೇಯಿಸಿ. ಮಿಶ್ರಣವು ಪಾತ್ರೆಯ ತಳವನ್ನು ಬಿಡಲು ಆರಂಭಿಸುತ್ತಿದ್ದಂತೆಯೇ ಒಂದು ಚಿಟಿಕೆ ಉಪ್ಪು ಸೇರಿಸಿ . ಪಾತ್ರೆಯನ್ನು ಒಲೆಯಿಂದ ಇಳಿಸಿ ಮೂವತ್ತು ನಿಮಿಷ ತಣಿಯಲು ಬಿಡಿ. ನಂತರ ಗಾಳಿಯಾಡದಂತೆ ಜಾಡಿಯಲ್ಲಿ ತುಂಬಿಸಿಡಿ. ಹುಳಿ‍‍‍ ‍‍‍ಸಿಹಿ ರುಚಿಯ‌ ಈ ಜಾಮ್  ದೋಸೆ, ಇಡ್ಲಿ, ರೊಟ್ಟಿ, ಚಪಾತಿ , ಬ್ರೆಡ್ ಇತ್ಯಾದಿಗಳಿಗೆ ನೆಂಜಿಕೊಳ್ಳಲು ಸೂಕ್ತ‌. ಒಂದು ತಿಂಗಳು ಕೆಡದೇ ಇರುತ್ತದೆ.

Comments