ಮೇಣವೊಂದು ಬೆಂಕಿಯನು ಪ್ರೀತಿಸಿದ ಹಾಗೆ........

ಮೇಣವೊಂದು ಬೆಂಕಿಯನು ಪ್ರೀತಿಸಿದ ಹಾಗೆ........

ಮರುಭೂಮಿಗೂ ಒಂದು ಭಾವ ಬಂದು

ಸಿಹಿನೀರ ಕೊಳವನ್ನು ಪ್ರೀತಿಸುತ್ತಿದೆ, ಮನಸಾರೆ.

ಮೇಣವೊಂದು ಬೆಂಕಿಯನು ಪ್ರೀತಿಸಿದ ಹಾಗೆ;

 

ಬೆಳಕಿನ ಕಿರಣಗಳು ಜಗಮಗಿಸುವ ದಾವಂತದಲಿ

ತಂಪೆರೆಯುವುದನೇ ಮರೆತು

ಬಿಸಿ ಮುಟ್ಟಿಸಿವೆ ಮನದ ಮರುಭೂಮಿಗೆ ಸತತವಾಗಿ

 

ಝಣವೆನ್ನುವ ಹಣದ ರಾಶಿಯ ಬದಿಯಲ್ಲಿ

ಸತ್ತ ಮಾಲಿಕನ ಹೆಣ ಎತ್ತಲು ಚಟ್ಟವಿಲ್ಲ,

ಬದುಕಿದ್ದಾಗ, ಕೈಯೊಳಗೆ ಕಾಸಿದ್ದರೂ

ಅವನೆದೆ ಮರುಭೂಮಿಯಾಗಿತ್ತು.

 

ದಾವಂತದಲಿ ಬಂದ ತಂಗಾಳಿ, ಹಾರಿಸಿಕೊಂಡು

ತಂದ, ನೂರಾರು ಮರಳಿನ ಕಣಗಳು

ಎಷ್ಟು ಅಲೆದರೂ, ಇನ್ನೂ ಅಲೆಮಾರಿಗಳೇ,,

ಅವಕ್ಕಿನ್ನೂ ಮೋಕ್ಷಸಿಕ್ಕಿಲ್ಲ,

 

ಸಪಾಟು ನೆಲದಲಿ, ದೃಷ್ಟಿ ಹರಿಸಿದಷ್ಟೂ

ಬರಿಯ ಮರುಭೂಮಿ, ಆಧುನಿಕ ಗಂಡನ

ಹೆಂಡತಿಯ ಆಸೆಯಂತೆ, ಬದುಕಿದ್ದಷ್ಟು ದಿನವೂ

ದುಡಿದು, ಕೊನೆಗೆ ಕೂಡಿಟ್ಟು ಕಣ್ಣ ಮುಚ್ಚುವುದು.

 

ಇದ್ದ-ಬದ್ದ ಮರಗಳೆಲ್ಲ, ಮುಂದೆ ಹುಟ್ಟುವ

ಖಾರ್ಖನೆಗಳಿಗೆ, ರೋಡುಗಳಿಗೆ ಜೀವತೆತ್ತು ಹುತಾತ್ಮರಾಗಿ,

ಎತ್ತರದ ಗುಡ್ಡಗಳೆಲ್ಲ ಬಟಾ ಬಯಲಾಗಿ,

ಮರುಭೂಮಿಯಾಗಲು ಮುಂದಡಿ ಇಡುತ್ತಿವೆ,

 

ಮೆದುವಾದ ಭಾವಗಳ ಗಟ್ಟಿ ಗಂಡಸೊಬ್ಬ

ಯವ್ವನದಲಿ ಮರೂಭೂಮಿಯಂತಿದ್ದವನು

ಈಗ ಬೇಕೆಂದರೂ, ಒಂದಿನಿತೂ ಸಾಂತ್ವನ ನೀಡುವವರಿಲ್ಲದೆ

ಮತ್ತೆ ಮರುಭೂಮಿಯಾಗಿಹನು,

 

(14‍ ಜೂನ್ 2015 ರ ಅವಧಿಯಲ್ಲಿ ಪ್ರಕಟಿತ‌)

ಮುಗ್ಧಸಿಂಚನ‌

Comments

Submitted by naveengkn Thu, 07/16/2015 - 12:07

In reply to by kavinagaraj

ವಾ,,,,, ಒಂದೇ ಸಾಲಿನಲ್ಲಿ, ಬಹಳ‌ ವಿಷಯಗಳನ್ನು ತುಂಬಿಬಿಟ್ಟಿರಿ ಕವಿಗಳೇ,,, ಪ್ರತಿಕ್ರಿಯೆಗೆ ಧನ್ಯವಾದಗಳು