ದೊಡ್ಡ ಆಲದ ಮರ ಭಾರತದ ೪ ನೇ ಅತಿ ದೊಡ್ಡ ಆಲದ ಮರ.
ದೊಡ್ಡ ಆಲದ ಮರವು ಬೆಂಗಳೂರು ನಗರದಿಂದ ೨೮ ಕಿಮೀ ದೂರದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ಕೇತೋಹಳ್ಳಿ ಗ್ರಾಮದಲ್ಲಿದ್ದು,ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ೮ ಕಿಮೀ ದೂರದಲ್ಲಿದೆ.ದೊಡ್ಡ ಆಲದ ಮರವು ೪೦೦ ವರ್ಷ ಹಳೆಯದಾಗಿದ್ದು ಭಾರತದಲ್ಲಿನ ಪುರಾತನ ಆಲದ ಮರಗಳಲ್ಲಿ ಪ್ರಸ್ತುತ ೪ನೇ ದೊಡ್ಡ ಆಲದ ಮರವಾಗಿದೆ.ಮೊದಲ,ಎರಡನೆಯ ಮತ್ತು ಮೂರನೆಯ ಸ್ಥಾನದಲ್ಲಿನ ಆಲದ ಮರಗಳು ಆಂಧ್ರಪ್ರದೇಶ, ಕಲ್ಕತ್ತ, ಮತ್ತು ಚೆನ್ನೈನ ಅದಿಪುರ್ ಪ್ರದೇಶದಲ್ಲಿದೆ.ಈ ಮರವು ೯೫ಅಡಿಗಳಷ್ಟು ಎತ್ತರವಾಗಿದ್ದು ಮೇಲ್ಭಾಗವು ೧೨೦ ಮೀ ವ್ಯಾಪ್ತಿಯ ಪ್ರದೇಶದಲ್ಲಿ ಹರಡಿಕೊಂಡಿದೆ ಹಾಗೂ ಒಟ್ಟಾರೆಯಾಗಿ ಆಲದ ಮರವು ೩ ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.ಮರದ ಪ್ರದಾನ ಕಾಂಡವು ನಶಿಸಿದೆ ಆದರೆ ಮರವು ಅನೇಕ ಕೊಂಬೆಗಳ ಆಧಾರ ಮತ್ತು ಪೋಷಣೆಯಲ್ಲಿ ಬೆಳೆಯುತ್ತಿದೆ.ಇದರ ರೆಂಬೆಗಳು ಈಗಲೂ ಪ್ರಬಲವಾಗಿ ಮತ್ತು ಹೆಚ್ಚು ವೇಗವಾಗಿ ಬೆಳೆಯುತ್ತಿವೆ.ಈ ಮರವು FICUS BENGHALENSIS ಪ್ರಭೇದಕ್ಕೆ ಸೇರಿದೆ.ವಾರಂತ್ಯದಲ್ಲಿ ಗೆಳೆಯರ ಜೊತೆ ಹೋಗಿದ್ದೆ ಸುಂದರ ಅನುಭವ ಇಲ್ಲಿ ಮುನೇಶ್ವರ ದೇವಾಲಯವಿದೆ ಹಾಗೂ ತುಂಬಾ ವರ್ಷಗಳ ಹಿಂದೆ ಇಲ್ಲಿ ಯಾರೋ ಮುನೇಶ್ವರ ವಿಗ್ರಹವನ್ನು ರಾತ್ರೋರಾತ್ರಿಯಲ್ಲಿ ತಂದಿಟ್ಟಿದ್ದಾರೆ ಅದು ಈಗಲೂ ದೇವಾಲಯದ ಹೊರಗಿದೆ.ರಾತ್ರಿ ೮ಗಂಟೆಯ ಮೇಲೆ ಇಲ್ಲಿ ಯಾರು ಓಡಾಡುವುದಿಿಲ್ಲ.ಕಾರಣ ಇಲ್ಲಿ ಮುನಿಗಳು,ಋಷಿಗಳು,ದೆವ್ವವು ಓಡಾಡುತ್ತವೆಂದು ಹೇಳಲಾಗುತ್ತದೆ.ಇಲ್ಲಿ ಹೋದರೆ ನಿಮ್ಮ ವಸ್ತುಗಳ ಮೇಲೆ ಗಮನ ಇರಬೇಕು ಇಲ್ಲಿ ಕೋತಿಗಳ ಕಾಟವು ಇದೆ.
Comments
ಉ: ದೊಡ್ಡ ಆಲದ ಮರ ಭಾರತದ ೪ ನೇ ಅತಿ ದೊಡ್ಡ ಆಲದ ಮರ.
ಚಿತ್ರ ಅಳವಡಿಸಿದ್ದರೆ ಲೇಖನಕ್ಕೆ ಪೂರಕವಾಗುತ್ತಿತ್ತು. ಮಾಹಿತಿಗೆ ಧನ್ಯವಾದಗಳು.
ಉ: ದೊಡ್ಡ ಆಲದ ಮರ ಭಾರತದ ೪ ನೇ ಅತಿ ದೊಡ್ಡ ಆಲದ ಮರ.
ಚಿತ್ರ ಅಳವಡಿಸಲಾಗಿದೆ, ಸಂಪದ ಟೀಮ್ ದಯವಿಟ್ಟು display ಮಾಡಿ.
ಉ: ದೊಡ್ಡ ಆಲದ ಮರ ಭಾರತದ ೪ ನೇ ಅತಿ ದೊಡ್ಡ ಆಲದ ಮರ.
ಹರೀಶ್, ನೀವು ಲೇಖನ ಅಪ್ಲೋಡ್ ಮಾಡುವಾಗ ಚಿತ್ರ ಸೀರಿಸಿರುವಂತೆ ಕಾಣುತ್ತಿಲ್ಲ. ಅಥವ ಅಪ್ಲೋಡ್ ಸರಿಯಾಗಿ ಆಗಿಲ್ಲದಿರಬಹುದು.