ಅ.ರಾ.ಮಿತ್ರ ಮತ್ತು ಯೋಗ
ನರೇಂದ್ರ ಮೋದಿಯವರು ವಿಶ್ವ ಯೋಗ ದಿನಾಚರಣೆ ಜಾರಿಗೆ ತಂದದ್ದು ವಿಶ್ವವೇ ಯೋಗದ ಕಡೆಗೆ ವಾಲುವಂತಾಯಿತು,ಇದಕ್ಕೆ ಸಾಕ್ಷಿಯೆಂಬಂತೆ 192 (47 ಮುಸ್ಲಿಂ ರಾಷ್ಟ್ರಗಳು) ದೇಶಗಳು ಆಚರಣೆಯಲ್ಲಿ ಭಾಗಿಯಾದವು, ಇದು ಗಿನ್ನೆಸ್ ದಾಖಲೆಗೂ ಸಹ ಸೇರ್ಪಡೆಯಾಯಿತು.ಆದರೆ ಕೆಲ ಭಾರತೀಯ ರಾಜಕಾರಣಿಗಳು ಅನಾವಶ್ಯಕ ಮಾತುಗಳನ್ನು ಖರ್ಚು ಮಾಡಿದರು, ಅದೆಲ್ಲ ಅವರ ಆಯ-ವ್ಯಯಕ್ಕೆ ಸಂಬಂಧಿಸಿದ್ದು.
ನಾನು ಅ.ರಾ.ಮಿತ್ರರ ‘ನಾನೇಕೆ ಕೊರೆಯುತ್ತೇನೆ’ ಎಂಬ ಪುಸ್ತಕವನ್ನು ಓದುತ್ತಿದ್ದಾಗ ಅವರ ಪ್ರಕಾರದ ಯೋಗಾಸನಗಳನ್ನು ವಿವರಿಸಿದ್ದರು, ಅವು ತುಂಬಾ ಹಾಸ್ಯಭರಿತವಾಗಿದ್ದವು, ಹೌದಲ್ಲವೇ ದಿನನಿತ್ಯ ನಾವು ಅರಿವಿಲ್ಲದೇ ಯೋಗಾಸನ ಮಾಡುತ್ತಿದ್ದೇವೆ ಎಂಬುದು ಮನದಲ್ಲಿ ಮೂಡದಿರಲು ಸಾಧ್ಯವೇ ಇರಲಿಲ್ಲ, ಅವರು ತಿಳಿಸಿದ ಕೆಲವು ಯೋಗಾಸನಗಳು ಇಂತಿವೆ.
ವಕ್ರಪಾದಾಸನ:- ನೂಕು-ನುಗ್ಗಲಿನಲ್ಲಿರುವ ರೈಲು, ಬಸ್ಸುಗಳಲ್ಲಿ ನಿಂತುಕೊಂಡೋ, ನೋಡುತ್ತಲೋ ಪ್ರಯಾಣಿಸುವರು ಅಭ್ಯಾಸ ಮಾಡಬೇಕಾದ ನಿಲ್ಲು ಭಂಗಿಯ ಆಸನ.
ಅರ್ಧಪೃಷ್ಠಾಸನ:- ಸ್ಕೂಟರ್/ ಬೈಕಿನಲ್ಲಿ ಹಿಂದಿನ ಸೀಟುಗಳನ್ನು ಅಲಂಕರಿಸುವ ಮಹಿಳೆಯರುಕುಳಿತುಕೊಳ್ಳುವ ಭಂಗಿಗೆ ಈ ಹೆಸರು.
ಪಾಶ್ರ್ವನಾಥಾಸನ:- ರೈಲುಗಳಲ್ಲಿ, ದೂರ ಪ್ರಯಾಣದ ಲಕ್ಷುರಿ (ಲಕ್ಷ+ಉರಿ=ಲಕ್ಷುರಿ) ಬಸ್ಸುಗಳಲ್ಲಿ ಪ್ರಯಾಣಿಸುವವರು ಪಕ್ಕದ ಪ್ಯಾಸೆಂಜರಿನ ಮೇಲೆ ಅಪಾರ ಭರವಸೆಯನ್ನಿಟು ್ಟ ಹೆಗಲಿಗೆ ಒರಗಿಕೊಂಡು ನಿದ್ರೆ ಮಾಡುವ ಒಂದು ಸುಖಾಸನ.
ದೀಪಪಾದಾಸನ (ಹರಡಿದ ದೀಪಪಾದಾಸನ):- ಟ್ರಾಫಿಕ್ ದೀಪಗಳಲ್ಲಿ ಕೆಂಪು ಸಿಗ್ನಲ್ ಕಂಡಕೂಡಲೇ ಸ್ಕೂಟರ್/ ಬೈಕಿಗೆ ಬಲವಾಗಿ ಬ್ರೇಕು ಹಾಕಿ ಎರಡೂ ಕಾಲುಗಳನ್ನು ನೆಲಕ್ಕೆ ಚಾಚಿ ಕುಳಿತುಕೊಂಡು ನಿಲ್ಲುವ ಭಂಗಿಯ ಆಸನವಿದು.
ಗೂಢ ನಿದ್ರಾಸನ:- ಗೂಢ ನಿದ್ರಾಸನ ಎಂದರೆ ಯಾರಿಗೂ ತಿಳಿಯದಂತೆ ಹಾಡಹಗಲೇ ನಿರುಂಬಳವಾಗಿ ನಿದ್ರೆ ತೆಗೆಯುವ ಆಸನದ ಭಂಗಿ-ಅಧಿಕಾರಿಗಳು, ಸಭಾಸದರು, (ಕಳ್ಳ ನಿದ್ರಾಸನ), ವಿದ್ಯಾರ್ಥಿ-ವಿದ್ಯಾರ್ಥಿನಿಯರ ನೆಚ್ಚಿನ ಆಸನ.
ಅನಂತಶಯನಾಸನ:- ನಿಮ್ಮ ದೇಹದ ಮೇಲೆ ಪೂರ್ಣ ಹತೋಟಿಯನ್ನು ಸಾಧಿಸಲು ನೆರವಾಗುವ ಒಂದುವಿಶಿಷ್ಠಾಸನ ಇದು.ಯಾವಾಗೆಂದರೆ ಆಗ ನಿದ್ದೆ ತೆಗೆಯಬಹುದಾದ ಒಂದು ಯೋಗಾಸನ.
ಉದಾ:ಎಂ.ಎಲ್.ಎ, ಎಂ.ಪಿ
ಪಕೃತಿ ಪುರುಷಾಸನ:- ಹದಿಹರೆಯದ ಒಬ್ಬ ಹುಡುಗಿ-ಹುಡುಗ ಸೇರಿ ತುಂಬ ಹೊತ್ತು ಮಾತನಾಡುತ್ತ ತ್ರಿಭಂಗಿಯಲ್ಲಿ ನಿಲ್ಲುವ ಒಂದು ಆಸನ.
ಅರ್ಧಶಯನಾಸನ(ಉದರವರ್ಧಾಸನ):- ಮನೆಗಳ ವರಾಂಡದಲ್ಲಿ, ಕಛೇರಿಯ ಕಾಯಿಗೋಣಿಗಳಲ್ಲಿ, ಪ್ರವಾಸಿ ಮಂದಿರಗಳಲ್ಲಿ ಆರಾಮಕುರ್ಚಿಯ ಆಕಾರಕ್ಕೆ ದೇಹವನ್ನು ಹೊಂದಿಸಿ ಅರ್ಧಕೂರುವ-ಅರ್ಧ ಮಲಗುವ ಒಂದು ಸುಖಾಸನ.
ಕೌಂಟರಾಸನ:- ಬ್ಯಾಂಕುಗಳಲ್ಲಿ, ಅಂಚೆ-ಕಛೇರಿಗಳಲ್ಲಿ, ವಿದ್ಯುತ್ ನಿಗಮದ ಕಛೇರಿ, ಅಬಕಾರಿ, ವಿಮಾ ಮೊದಲಾದ ಕಛೇರಿಗಳ ಪಾವತಿ ಕಟ್ಟೆಗಳಲ್ಲಿ ಸಾರ್ವಜನಿಕರು ಮಾಡಬೇಕಾದ ಆಸನ.
ಪಾದಫಲಕಯಾನಾಸನ:- ಬಸ್ಸಿನ ಪುಟ್ ಬೋರ್ಡ್ಗಳಲ್ಲೇ ನಿಂತು ತೂರಾಡುತ್ತ, ತೂಗಾಡುತ್ತ, ಪ್ರಯಾಣ ಮಾಡುವ ತರುಣ ಹಠಯೋಗಿಗಳು ಈ ಆಸನದಲ್ಲಿ ನಿಷ್ಣಾತರು.
ಇವಿಷ್ಟು ಅ.ರಾ.ಮಿತ್ರರ ಯೋಗಾಸನಗಳ ಝಲಕ್.
ಪುರಾತನದಿಂದ ಮುನ್ನಡೆಯುತ್ತಿರುವ ಯೋಗ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ, ಅದೇ ರೀತಿ ಅದರ ಉಪ’ಯೋಗ’ ಸಾರ್ವತ್ರಿಕ, ಅದರ ಬಗ್ಗೆ ಕೇವಲವಾಗಿ ಮಾತಾಡುವುದು.........ಎಷ್ಟರ ಮಟ್ಟಿಗೆ ಸರಿ......?
ವಿ ಚಲಪತಿ ಪಣಸಚೌಡನಹಳ್ಳಿ
Comments
ಉ: ಅ.ರಾ.ಮಿತ್ರ ಮತ್ತು ಯೋಗ
ಮಿತ್ರರೇ, ಅ.ರಾ.ಮಿತ್ರರ ಆಸನ ಪ್ರ'ಯೋಗ'ಗಳು ಈ ಆಸನದ (ie, ಹಾಸನದ!) ಆಸಾಮಿಗೆ ಬಹಳ ಹಿಡಿಸಿದವು. ತುಂಬಾ ಧನ್ಯವಾದಗಳು.
In reply to ಉ: ಅ.ರಾ.ಮಿತ್ರ ಮತ್ತು ಯೋಗ by santhosha shastry
ಉ: ಅ.ರಾ.ಮಿತ್ರ ಮತ್ತು ಯೋಗ
ಧನ್ಯವಾದಗಳು ಸಾರ್....ಬರವಣಿಗೆಯಲ್ಲಿ ನಾನಿನ್ನು ಹೊಸಬ....ನನ್ನ ಬರವಣಿಗೆಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ತಿಳಿಸಿ......
ಉ: ಅ.ರಾ.ಮಿತ್ರ ಮತ್ತು ಯೋಗ
:) ಚೆನ್ನಾಗಿದೆ. ಕಣ್ಣುಗಳ ವ್ಯಾಯಾಮಕ್ಕೆ ಸಂಬಂಧಿಸಿದಂತೆ, ಬಿರುನೋಟ, ವಕ್ರನೋಟ, ಕಿರುನೋಟ, ಓರೆನೋಟ, ಕುತ್ಸಿತನೋಟ, ಇತ್ಯಾದಿಗಳೂ ಇವೆ.
In reply to ಉ: ಅ.ರಾ.ಮಿತ್ರ ಮತ್ತು ಯೋಗ by kavinagaraj
ಉ: ಅ.ರಾ.ಮಿತ್ರ ಮತ್ತು ಯೋಗ
ಧನ್ಯವಾದಗಳು ಸಾರ್...ನಿಮ್ಮ ಎಲ್ಲಾ ಸಲಹೆಗಳಿಗೆ ಸದಾ ಸ್ವಾಗತ....