ಮುಸ್ಸಂಜೆ
ಚಿತ್ರ
ಒಂದು ಮುಸ್ಸಂಜೆಯಲಿ ನಾ ಕಾದು ಕುಳಿತೆ
ಸೂರ್ಯ ಕೆಂಪಾಗುವ ಸಮಯದಲಿ
ನೀ ಬರುವ ಹಾದಿ ನೋಡುತ್ತಾ
ಬಂಡೆಯ ಮೇಲೆ ನಾ ಕುಳಿತೆ ಗೆಳೆಯ
ಮನದಲಿ ಏನೋ ತಳಮಳ
ಯಾರಿಗೂ ಹೇಳಲಾರದ ವೇದನೆ
ಮನದಲಿ ಅಡಗಿಹ ನೋವು
ನಿನ್ನ ಬಳಿ ತೋಡಿಕೊಳ್ಳುವ ಆಸೆ
ಏನೋ ಗೊತ್ತಿಲ್ಲ ನೀನೆಂದರೆ ಸಂತೋಷ
ನೀನೆಂದರೆ ಸ್ಪೂರ್ತಿ, ನೀನೆಂದರೆ ಹುಮ್ಮಸ್ಸು
ನಾ ಕಣ್ಣಾದರೆ ನೀ ಅದರ ರೆಪ್ಪೆಯಂತೆ
ನಾ ದೇಹವಾದರೆ ನೀ ಅದರ ಜೀವದಂತೆ
ಎಲ್ಲ ಸಂದರ್ಭದಲ್ಲಿ ನೀ ನಿಂತೆ ಜೊತೆಯಾಗಿ
ಗೆಳೆಯರು ನೂರಿದ್ದರೂ ನಿನ್ನಂತೆ ಸಿಗಲಿಲ್ಲ
ಸುಖದಲ್ಲಿ ಬಂದಂತೆ ಕಷ್ಟದಲ್ಲಿ ಭಾಗಿಯಾಗಲಿಲ್ಲ
ಹಣವಿದ್ದರೆ ಗೆಳೆತನ ಎಂದು ನಿರೂಪಿಸಿದವರು ಅನೇಕ
ಸ್ನೇಹವೆ ಬೇರೆ ಹಣವೆ ಬೇರೆ ಎಂದವನು ನೀನು ಮಾತ್ರ
ನನ್ನ ಹೃದಯ ನೀಡಿತು ವಿಶೇಷ ಸ್ಥಾನ ನಿನಗಾಗಿ
ಸುಖ-ದುಃಖದಲಿ ಜೊತೆಯಾದೆ ನನಗಾಗಿ
ಈ ಮುಸ್ಸಂಜೆ ವೇಳೆಯಲಿ ಕಾದಿಹೆನು ನಿನಗಾಗಿ
ಮನದ ನೋವನು ಕೇಳಲು ಬರುವೆಯಾ ನನಗಾಗಿ
ಚಿತ್ರಕೃಪೆ: ಗೂಗಲ್
Rating
Comments
ಉ: ಮುಸ್ಸಂಜೆ
ನಿರೀಕ್ಷೆಗಳಿಲ್ಲದ ನಿಸ್ವಾರ್ಥ ಕೆಳೆ ಸಿಗುವುದು ಬಹಳ ಕಷ್ಟ. ಬಾಲ್ಯದ ಅಂತಹ ಗೆಳೆತನದ ನೆನಪು ಮೂಡಿಸಿತು ನಿಮ್ಮ ಕವನ :-)
In reply to ಉ: ಮುಸ್ಸಂಜೆ by nageshamysore
ಉ: ಮುಸ್ಸಂಜೆ
ನಮಸ್ಕಾರ ಸರ್
ನಿಮ್ಮ ಪ್ರತಿಕ್ರಿಯಗೆ ನನ್ನ ಧನ್ಯವಾದಗಳು .
ನನ್ನ ಜೀವನದಲ್ಲಿ ಬಂದಂತಹ ಸ್ನೇಹದಶಕ್ತಿ ದೊಡ್ಡದು.
ಧನ್ಯವಾದಗಳು
ಉ: ಮುಸ್ಸಂಜೆ
ರವೀಂದ್ರ ಸರ್ ಅವರಿಗೆ ನಮಸ್ಕಾರಗಳು. ನಿಸ್ವಾರ್ಥ ಸ್ನೇಹ ಸಿಗುವುದು ತುಂಬಾ ವಿರಳ ಸರ್.ಸಿಕ್ಕರೆ ಅದು ಜೀವನದ ಕೊನೆಯವರೆಗೂ ಹಾಗೆ ಉಳಿಯುತ್ತದೆ.ಒಳ್ಳೆಯ ಲೇಖನ ಸರ್.
In reply to ಉ: ಮುಸ್ಸಂಜೆ by Nagaraj Bhadra
ಉ: ಮುಸ್ಸಂಜೆ
ನಮಸ್ಕಾರ ನಾಗರಾಜ ಸರ್
ನಿಮ್ಮ ಪ್ರತಿಕ್ರಿಯಗೆ ನನ್ನ ಆನಂತ ಧನ್ಯವಾದಗಳು ಕಳೆಯುವುದು ಸರಳ ಗಳಿಸುವುದು ಕಷ್ಟ ಆದರೆ ಉಳಿಸುವುದು ಜಾಣತನ ಅಂತಾ ನನ್ನ ಅಬಿಪ್ರಾಯ.
ಧನ್ಯವಾದಗಳು
ಉ: ಮುಸ್ಸಂಜೆ
:) ಕಾಯುವಿಕೆ ಸಫಲವಾಗಲಿ!
In reply to ಉ: ಮುಸ್ಸಂಜೆ by kavinagaraj
ಉ: ಮುಸ್ಸಂಜೆ
ನಮಸ್ಕಾರ ಸರ್
ಕಲ್ಮಶವಿಲ್ಲದ ಸ್ನೇಹವಿದ್ದರೆ ಖಂಡಿತಾ ಸಾಧ್ಯವಿದೆ.
ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು