ಕನ್ನಡ OCR

ಕನ್ನಡ OCR

ನಾನು  ಕನ್ನಡ OCR ಸಾಫ್ಟ್ವೇರ್ ಬಗ್ಗೆ ಈ ಹಿಂದೆಯೇ ಬರೆದಿದ್ದೆ. ಈಚಿನ ಸಂತೋಷದ ಸಂಗತಿ ಎಂದರೆ ಸಾಕಷ್ಟು ನಿಖರತೆಯೊಂದಿಗೆ ಕನ್ನಡ ಓಸಿಆರ್ ಸೌಲಭ್ಯ ಗೂಗಲ್ ಡಾಕ್ಸ್‌ನಲ್ಲಿ ಲಭ್ಯವಿದೆ. ಈಗ ಈ ಸೌಲಭ್ಯ ಆನ್ ಲೈನ್‌ನಲ್ಲಿ ಮಾತ್ರ ಲಭ್ಯವಿದೆ. ಇದು ಆಫ್ ಲೈನ್ ಮುಂದೊಂದು ದಿನ ಆದರೆ ಅದ್ಭುತವಾದೀತು.

ಓಸಿಆರ್ ತತ್ರಾಂಶ ಕೆಲವು ಯೂರೋಪಿನ ಭಾಷೆಗಳಿಗೆ ಮೊದಮೊದಲು ಲಭ್ಯವಿದ್ದು, ಇದು ಭಾರತೀಯ ಭಾಷೆಗಳಿಗೆ ದೊರಕಲು ಅಸಾಧ್ಯವೆಂದಿದ್ದ ಕಾಲವೊಂದಿತ್ತು. ಗಮನಿಸಬೇಕಾದ ಸಂಗತಿಯೆಂದರೆ ಗೂಗಲ್ ಡಾಕ್ಸ್‌ ಓಸಿಆರ್‌ನಲ್ಲಿ ಸುಮಾರು 230 ಭಾಷೆಗಳಿದ್ದು ಭಾರತದ ಅನೇಕ ಭಾಷೆಗಳು ಸೇರಿವೆ.  ಗೂಗಲ್‌ ಡಾಕ್ಸ್‌ ಬಹು ಮುಖ ಶಕ್ತಿಯೆಂದರೆ ಯಾವ ಭಾಷೆಯೆಂದು ಅದೇ ಗುರುತಿಸಿ ಆ ಭಾಷೆಯ ಓಸಿಆರ್‌ ಕೆಲಸ ಮಾಡುತ್ತದೆ.  [ಹೀಗಾಗಿ ಕೆಲವೊಮ್ಮೆ ನಿಮ್ಮ ಇಳುವರಿಯಲ್ಲಿ ಬೇರೆ ಭಾಷೆಯ ಲಿಪಿ ಕಾಣಬಹುದು-ಇದು ಲಿಪಿಗಳ ಸಾಮ್ಯತೆ ಮತ್ತು/ಅಥವಾ bug(?) ಕಾರಣಕ್ಕಾಗಿ ಇರಬಹುದು].  

ಅನೇಕ ಪ್ರಯತ್ನಗಳು ಅಷ್ಟು ಫಲಕಾರಿಯಾಗಿರಲಿಲ್ಲ. ಈಗ ಅರುಣೋದಯವಾಯಿತು. ನೀವು ಇದನ್ನು ಪ್ರಯತ್ನಿಸಿ ಟೈಪಿಂಗ್ ಶ್ರಮವನ್ನು ಉಳಿಸಬಹುದು.

ಯಾವುದೇ Gmail ಬಳಕೆದಾರರು ಜಿ ಡ್ರೈವಿನಲ್ಲಿ ತನ್ನ ಫೈಲ್ಗಳನ್ನು ಸಂಗ್ರಹಿಸಲು ಸೌಲಭ್ಯವಿದೆ.  ಜಿ ಡ್ರೈವಿನಲ್ಲಿರುವ PNG, jpg ಮತ್ತು ಪಿಡಿಎಫ್ ಫೈಲ್‌ಗಳನ್ನು 'Google ಡಾಕ್ಸ್' ಬಳಸಿ ತೆರೆದರೆ  ಒಂದು ಚಿತ್ರವಾಗಿ ಮತ್ತು ಅದರ ತಳದಲ್ಲಿ ಪಠ್ಯವಾಗಿ ತೆರೆಯುತ್ತದೆ.  Google ಡಾಕ್ಸ್‌ನಲ್ಲಿ ಹೆಚ್ಚಿನ ಭಾಷೆಗಳ (ಕನ್ನಡವೂ ಸೇರಿ) ಓಸಿಆರ್ ತತ್ರಾಂಶವನ್ನು ಈಚೆಗೆ ಅಳವಡಿಸಿಕೊಂಡಿದ್ದರಿಂದ ಇದು ಸಾಧ್ಯವಾಗಿದೆ.

ಮೂಲತಃ ನೀವು ಮೊದಲು Google ಡ್ರೈವ್ ನಂತರ Google ಡಾಕ್ಸ್ ಬಳಸಬೇಕು.. ನೀವು Google ID. ಬಳಸಿಕೊಂಡು ಇದನ್ನು ಪಡೆಯಬಹುದು.  Gmail ಪುಟದಲ್ಲಿ ಒಂಬತ್ತು ಬ್ಲಾಕ್ಸ್(ಮೂರು ಸಾಲುಗಳಲ್ಲಿ ಮೂರು ಬ್ಲಾಕ್‌ಗಳು) ಇರುವ ಐಕಾನ್ ಕ್ಲಿಕ್‌ ಮಾಡಿ Google ಡ್ರೈವ್  ತೆರೆದುಕೊಳ್ಳಿ.

1.ನೀವು ಓಸಿಆರ್ ಬಯಸುವ ಯಾವುದೇ ಚಿತ್ರ ಕಡತ ( PNG ಮತ್ತು JPEGಮಾತ್ರ) Upload ಮಾಡಿ. PDF ಕಡರವಾದರೂ ಸರಿ.  ("mydrive ಫೋಲ್ಡರ್" ಹೋಗಿ "MyDrive" ಕ್ಲಿಕ್‌ ಮಾಡಿದರೆ   "ಫೈಲ್ಗಳನ್ನು ಅಪ್ಲೋಡ್"/ "ಇಮೇಜ್ ಫೈಲ್" ಮೇಲೆ ಕ್ಲಿಕ್ ಮಾಡಿ  ಕಡತ ಅಪ್ಲೋಡ್ ಮಾಡಿ)
2.  ಅಪ್ಲೋಡ್ ಮಾಡಿದ ಚಿತ್ರವನ್ನು  ರೈಟ್ ಕ್ಲಿಕ್ ಮಾಡಿ  "Google ಡಾಕ್ಸ್" ಅನ್ನ ಫೈಲ್ ತೆರೆಯಲು ಆಯ್ಕೆ ಮಾಡಿ.
3.Google ಡಾಕ್ಸ್ ಬ್ರೌಸರ್ನಲ್ಲಿ ಚಿತ್ರ ಮತ್ತು ಕೆಳಗೆ ಪಠ್ಯ ನೋಡುತ್ತೀರಿ. ನಕಲಿಸಿ ಎಲ್ಲಿಬೇಕಾದರಲ್ಲಿ ಅಂಟಿಸಬಹುದು.
4.ನೀವು ಡಾಕ್ಯುಮೆಂಟ್ ಡೌನ್ಲೋಡ್ ಆಯ್ಕೆ ಮಾಡಿ   MS ವರ್ಡ್ ನಲ್ಲಿ ಡಾಕ್ ಸ್ವರೂಪಕ್ಕೆ ಮಾರ್ಪಾಡಾಗುತ್ತದೆ.

ನಿಖರತೆ ಇನ್ನೂ ಒಂದು ಸಮಸ್ಯೆಯಾಗಿದೆ ಮತ್ತು ಚಿತ್ರ / ಸ್ಕ್ಯಾನಿಂಗ್ ಉತ್ತಮ ವೇಳೆ ನಾವು ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಒಂದು ಮಿತಿಯನ್ನು Google ಡಾಕ್ಸ್ ಸಮಯದಲ್ಲಿ ಮಾತ್ರ 10  ಪುಟಗಳು ನಿರ್ವಹಿಸಲು ಮಾಡುತ್ತದೆ.

 

Comments

Submitted by smurthygr Sun, 09/13/2015 - 18:42

ಬಹಳ ಒಳ್ಳೆಯ ಸುದ್ದಿ, ಬರುಬರುತ್ತಾ ಇನ್ನೂ ಸುಧಾರಿಸಬಹುದು. ಹಾಗೇ offline ಬಳಕೆಗೂ ಲಭ್ಯವಿದ್ದಿದ್ದರೆ ಚೆನ್ನಾಗಿರುತ್ತಿತ್ತು.

Submitted by kavinagaraj Wed, 09/16/2015 - 12:57

ಉತ್ತಮ ಮಾಹಿತಿ, ಧನ್ಯವಾದಗಳು. ಸಂತೋಷದ ವಿಷಯವಾಗಿದೆ.

Submitted by ravindra n angadi Thu, 09/17/2015 - 17:10

ಒಳ್ಳಯ ಮಾಹಿತಿಗೆ ಧನ್ಯವಾದಗಳು ಸರ್.