ನಾ ಕಂಡ ಗೋರಿಗಳು....!

ನಾ ಕಂಡ ಗೋರಿಗಳು....!

ಗೋರಿಗಳು ಕತೆ ಹೇಳುತ್ತವೆ. ಒಮ್ಮೆ ಆ ಜಾಗಕ್ಕೆ ಹೋದರೆ, ಅಲ್ಲಿ ಹಲವು ಗೋರಿಗಳು ತಮ್ಮ ಬದುಕಿನ ಸತ್ಯ ಹೇಳೋ ಸಾಹಸ ಮಾಡುತ್ತವೆ. ಕೇಳಿಸಿಕೊಳ್ಳೋರು ಮತ್ತು ನೋಡೋರು ಬೇಕು ಅಷ್ಟೆ. ಆ ಅನುಭವದ ನನಗೆ ಆಯ್ತು.ಅದ್ಯಾವಾಲೋ ನೋಡಿದ ಗೋರಿಯನ್ನ, ಹುಡುಕಿಕೊಂಡು ಹೋದಾಗ ಅದು ಮತ್ತೆ ಸಿಕ್ತು.ಅದರ ಮೇಲೆ ಹೀಗೆ ಬರೆದಿತ್ತು.

ನೀನು ಈ ಭೂಮಿಗೆ ಯಾವುದೇ ಕಾರಣಕ್ಕೂ ಮತ್ತೆ ಬರಬೇಡ...!-ಕುಟುಂಬ.

ಈ ಸಾಲು ಚಿಂತನೆಗೆ ಹಚ್ಚುತ್ತದೆ.ಸತ್ತ ವ್ಯಕ್ತಿ ಎಂಥವನು. ಕ್ರೂರಿನಾ..? ಒಳ್ಳೆಯವನಾ..? ಇದು ತಿಳಿಯೋದೇಯಿಲ್ಲ. ಸಕಾರಾತ್ಮಕವಾಗಿ ಯೋಚಿಸಿದರೆ, ಆತ ಒಳ್ಳೆಯವನು. ನಕಾರಾತ್ಮಕವಾಗಿ ಚಿಂತಿಸಿದರೆ, ಕೆಟ್ಟವನು.

ಆದರೆ, ಗೋರಿ ಮೇಲೆ ಎಲ್ಲೂ ಸತ್ತವರು ಯಾರೂ...? ಹೆಣ್ಣೋ.? ಗಂಡೋ..? ಈ ಸತ್ಯ ತಿಳಿಯೋದೇಯಿಲ್ಲ.ಪುಟ್ಟ ಗೋರಿಯ ಮೇಲೆ ಇದನ್ನ ಬರೆಯಾಗಲಿದೆ.ಸಾಕಷ್ಟು ಗೋರಿಗಳಿರೋ ಆ ಜಾಗದಲ್ಲಿವೆ. ಆದರೆ, ಇದು ವಿಶಿಷ್ಠ ಅನಿಸುತ್ತದೆ.ಕೇವಲ ಗೋರಿ ಮೇಲೆ ಬರೆದ ಸಾಲುಗಳಿಂದ.

ಗೋರಿ ಇರೋ ಈ ಸ್ಮಶಾನಕ್ಕೆ ಹೋದರೇ,ಅದೇನೋ ನೆಮ್ಮದಿ. ಆ ನೆಮ್ಮದಿ ಕದಡಿತ್ತು ಮಾತ್ರ ಈ ಒಂದು ಗೋರಿನೇ. ಆ ವಿಚಾರಗಳು ಬಂದಾದ್ಮೇಲೆ, ಇಂತಹ ಇಂಟ್ರಸ್ಟಿಂಗ್ ಬರಹ ಇರೋ ಗೋರಿಗಳಾವವು. ಅದನ್ನ ಹುಡುಕ್ತಾ ಹೋದಾಗ, ಅಲ್ಲಿ ಗೋರಿಯೊಂದರ ಮೇಲೆ ಪುಸ್ತಕ ರೂಪದಲ್ಲಿ ಕಲ್ಲು ಹಾಕಲಾಗಿತ್ತು. ಅಲ್ಲೂ ಒಂದು ಬರಹ ಇತ್ತು. ಅದು ಹೀಗಿತ್ತು.

ತಂದೆ ನೀನು..ತಾಯಿ ನೀನು...ಬಂದು ನೀನು..ಬಳಗ ನೀನು..ಎಮಗೆ ನೀನಲ್ಲದೇ ಬೇರಾರು ಇಲ್ಲವಯ್ಯ ಕೂಡಲ ಸಂಗಮದೇವ..

ಇದು ಏನೂ ಅಂತ ಹೆಚ್ಚು ವಿವರಿಸೋದು ಬೇಡ. ಇದನ್ನ ದಾಟಿ ಮುಂದೆ ಹೋದರೆ, ಅಲ್ಲೂ ಹಲವು ಗೋರಿಗಳಿದ್ದವು. ಆ ಗೋರಿಗಳ ಮಧ್ಯೆ ಒಂದು ಪುಟ್ಟ ಗೋರಿ.ಆದರೆ, ಅದು ಈ ಹಿಂದೆ ನೋಡಿದಂತೆ ಗೋರಿ ತರ ಇರಲಿಲ್ಲ. ಪುಟ್ಟ ಚಪ್ಪರ.ಚಪ್ಪದ ಒಂದು ಭಾಗದಲ್ಲಿ ಭಾರತದ ಧ್ವಜ.ಕೆಲವೇ ದಿನಗಳ ಹಿಂದೆ ಅಂತ್ಯ ಸಂಸ್ಕಾರ ಮಾಡಿರೋ ಹಾಗೆ ಕಂಡಿತ್ತು. ಗೋರಿಯೊಳಗೆ ಇರೋ ವ್ಯಕ್ತಿ ಚಿಕ್ಕ ಹುಡುಗ.

ಗೋರಿಗಳ ದರುಶನ ಮಾಡ್ತಾ..ಮಾಡ್ತಾ ಹೋದಂತೆ,ಅದೇನೋ ಜೀವನ ನಶ್ವರ ಅನಿಸ್ತಾ ಹೋಯ್ತು. ಅಷ್ಟರಲ್ಲಿಯೇ ಆಂಟಿಕ್ ಪೀಸ್ ಥರ ಒಂದು ಗೋರಿ ಕಂಡಿತ್ತು.ಅದರ ರೂಪವೇ ತುಂಬಾ ಹಳೇಯದ್ದು. ಡೇಟ್ ನೋಡಿದರೆ,1946. ಸ್ವತಂತ್ರ ಪೂರ್ವದಲ್ಲಿಯೇ ಈ ಗೋರಿ ನಿರ್ಮಾಣವಾಗಿದೆ.

ಹಾಗೆ ಮುಂದೆ ಸಾಗಿದಂತೆ, ಅಲ್ಲೊಂದು ಬೋರ್ಡ್ ಕಂಡಿತು. ಅದನ್ನ ಓದಿದಾಗ ತಿಳಿದ ವಿಷ್ಯ ಇಷ್ಟೆ. ದೇಹವನ್ನ ದಫನ್ ಮಾಡಲು ಬರೋ ಒಂದು ದೇಹದ ಅಂತ ಸಂಸ್ಕಾರಕ್ಕೆ ಇಂತಿಷ್ಟು ಅಂತ ಬರೆದಿರೋ ರೇಟ್ ಬೋರ್ಡ್ ಅದು. ಫೋಟೋದಲ್ಲಿ ಅದನ್ನ ನೋಡಬಹುದು..

ಇಷ್ಟೆಲ್ಲ ಕಂಡದ್ದು, ಚಾಮರಾಜ್​ಪೇಟೆಯ ಲಿಂಗಾಯತರ ರುದ್ರಭೂಮಿಯಲ್ಲಿ.ಸುಮಾರು ವರ್ಷಗಳಿಂದಲೂ ಈ ರುದ್ರಭೂಮಿಯಲ್ಲಿ ಶವಸಂಸ್ಕಾರ ನಡೆಯುತ್ತಿವೆ. ಆದರೆ, ಆರಂಭದಲ್ಲಿ ಹೇಳಿದ ಆ ಗೋರಿ ಮಾತ್ರ ನಮ್ಮನ್ನ ಕಾಡುತ್ತದೆ. ಚಿಂತನೆಗೆ ಹಚ್ಚುತ್ತದೆ.
-ರೇವನ್​

Comments