ಜೀವನದ ಒಂದು ಪುಟ್ಟ ಕತೆ

ಜೀವನದ ಒಂದು ಪುಟ್ಟ ಕತೆ

                                          ಎಲ್ಲೊ ಅಪರಿಚಿತರಿದ್ದಂತೆ ನಾವು,

                             ಪರಿಚಿತಗೊಂಡು, ಒಂದಾಗಿ ಬಾಳಬಂಡಿಯನ್ನು ಕಟ್ಟೀದೆವು.

            ಆ ಬಾಳಬಂಡಿ ಜೀವನದ ದಾರಿಯಲ್ಲಿ ತಗ್ಗು, ದಿನ್ನೆ, ಮಣ್ಣು, ಕಲ್ಲು ಲೆಕ್ಕಿಸದೆ ಸಾಗತೊಡಗಿತು.

      ಆ ನಿನ್ನ ಎದೆಆಳದಿಂದ ಬರುತ್ತಿರುವ ನಗು, ಕಣ್ನಿನಾಳದಿಂದ ಚಿಮ್ಮುತ್ತಿರುವ ಪ್ರೀತಿಯನ್ನು ಅನುಭವಿಸಿದಾಗ

                          ಈ ಜಗತ್ತು ಅದೆಷ್ಟು ಸುಂದರ ಆನಿಸಿತು, ಜಗತ್ತೇ ನ್ನನ್ನದೆನಿಸಿತು.......

 

                 ಕಾಲಚಕ್ರ ಊರುಳಿದಂತೆ, ಅದುಯಾಕೊ ನಿನ್ನ ನಗು ಕ್ರುತಕವೆನಿಸತೊಡಗಿತು

                   ಸಣ್ನ ಪುಟ್ಟ ನೊವುಗಳು, ಬಹಳ ಡೊಡ್ಡ ಸಮಸ್ಸೆಗಳಾಗತೊಡಗಿದವು,

                                ಆದೇ ತಗ್ಗು ದಿನ್ನೆಗಳು, ದೊಡ್ಡ ಗುಡ್ಡಗಳಾದವು.

                                   ಅದೇನೊ ಕೊರಗು........ಗೊತ್ತಿಲ್ಲಾ.

                                 ಅದುಯಾಕೊ, ನನಗೆ ತಿಳೀಯಲಿಲ್ಲಾ.

           ಹೌದು, ನಾನು ಒಬ್ಬ ಗಂಡಸು, ನನಗೆ ಬಾಳಿನ ಕೆಲ ಸೂಕ್ಶ್ಮತೆಗಳು ಅರ್ಥವಾಗುವದಿಲ್ಲ

ಒಂದು ದಿನ, ಆ ನಿನ್ನ ಬರೀದಾದ ಮಡಿಲು, ನನ್ನ ಕಣ್ಣು ಚುಚ್ಹಿತು. ನೊಡಿದಾಗ ನಮ್ಮ ಮನೆಯ ಅಂಗಳದ  ಗಿಡಾ ಒಣಗುತ್ತಿತ್ತು.

ಆಗ ನಿನ್ನ ನೊವು ನನಗೆ ತಿಳಿಯತೊಡಗಿತು. ಆದರೆ, ನನ್ನ ಜೀವನ ಬರೀ ಯಾಂತ್ರಿಕತೆಯಲ್ಲಿ ಮುಳುಗಿಹೊಗಿತ್ತು.

                              ಮುಂದೆ ಹೆಗೆ......ಎಂದು ಗೊತ್ತಾಗಲಿಲ್ಲಾ..

 

  ಆದರೂ, ನಿಮ್ಮಲ್ಲಿ ಪ್ರೀತಿ, ದೇವರಲ್ಲಿ ವಿಶ್ವಾಸವಿರಲಿ ಎಂದು ನನ್ನ ಆತ್ಮ ಪದೆ ಪದೆ ಹೆಳುತಿತ್ತು.

          ಆದರಮೆಲೆ ಅದೆನೊ ಬಲವಾದ ನಂಬಿಕೆ... ನನಗೆ.

 

      ಕಾಲ ಕಳೆದಾಗ, ಒಂದು ದಿನ ಬೆಳಗಿನ ಜಾವ, ಹಕ್ಕಿಗಳ ಕಲರವ, ಚಿಲಿಪಿಲಿ ನನ್ನನ್ನು ಯಬ್ಬಿಸಿತು

       ಕೊಣೆಯ ಕಿಟಕಿ ತೆರೆದಾಗ, ಆ ಸೂರ್ಯನ ಕಿರಣ ನನ್ನನ್ನು ಪ್ರೀತಿಯಿಂದ ತಬ್ಬಿಕೊಂಡಿತು

                         ಒಂಥರಾ ಸಂತೋಷವೆನಿಸಿತು.

      ತಿರುಗಿದಾಗ, ಆ ನಿನ್ನ ತುಂಬಿದ ಮಡಿಲು ನೊಡಿದೆ. ಆಗ ನಿನ್ನ ಮುಖದಮೆಲೆ ಬೇರೆ ಕಳೆಯೇ ಬಂದಿತ್ತು.

      ಮತ್ತೆ ಆ ನಿನ್ನ ನಗು, ಎದೆಯಾಳದಿಂದ ಬರಹತ್ತಿತು. ಅಂಗಳದ  ಗಿಡಾ ಮತ್ತೆ ಚಿಗುರತೊಡಗಿತು

                       ಮನೆ ನಂದನ ವನವಾಗತೊಡಗಿತು.

Comments