ಟೊರಾಂಟೋ ನಗರದ ಪಬ್ಲಿಕ್ ಲೈಬ್ರರಿ !

ಟೊರಾಂಟೋ ನಗರದ ಪಬ್ಲಿಕ್ ಲೈಬ್ರರಿ !

ಟೊರಾಂಟೋನಗರದ ಪಬ್ಲಿಕ್ ಲೈಬ್ರರಿ ನನಗೆ ಬಹಳ ಪ್ರಿಯವಾಯಿತು. ವಿಕಿಪಿಡಿಯ ಬರಹಗಾರನಾದ ನನಗೆ ಅಲ್ಲಿ ಬಹಳಷ್ಟು ಮಾಹಿತಿಗಳು ದೊರಕಿದವು. ಅದಲ್ಲದೆ, ಈ ಲೈಬ್ರರಿ ನಮ್ಮ ಮನೆಗೆ ಅತಿ ಹತ್ತಿರದಲ್ಲಿತ್ತು. ಮೇಲಾಗಿ ಅಲ್ಲಿನ ಲೈಬ್ರರಿ ಮುಖ್ಯಸ್ಥ ಬಹಳ ಹಸನ್ಮುಖಿ ಹಾಗು ನನಗೆ ಬೇಕಾದ ಮಾಹಿತಿಗಳನ್ನು ಒದಗಿಸುವಲ್ಲಿ ತುಂಬಾ ಸಹಕರಿಸಿದ. ಆ ನಗರದ ಜನರೇ ಹಾಗೆ. ನಾನು ಲೈಬ್ರರಿಯ ಮೊದಲನೆಯ ಮಹಡಿ ಹತ್ತಿ ಅಲ್ಲಿಂದ ಈ ಸುಂದರ ಚಿತ್ರ ತೆಗೆದುಕೊಂಡೆ. ಅಲ್ಲಿ ಕುಳಿತು ಅಭ್ಯಾಸ ಮಾಡುತ್ತಿರುವವರ ಮುಖ ಕಾಣದಂತೆ ನಿಗಾವಹಿಸಿ, ಎಂದು ಆಟ ಹೇಳಿದ ಅಷ್ಟೇ !  ನಿಂತಿರುವ ವ್ಯಕ್ತಿ, ಲೈಬ್ರೇರಿಯನ್ ಬಳಿ ಮಾಹಿತಿಗೋಸ್ಕರ ನಿಂತಿದ್ದಾನೆ. ಎಡಭಾಗದಲ್ಲಿ ಕಂಪ್ಯೂಟರ್ ಗಳಿವೆ. ಅವು ಅಲ್ಲಿ ಓದುವವರಿಗೆ ಲಭ್ಯ. ಆದರೆ ಮೊದಲೇ ಅವನ್ನು ಕೇಳಿ ಪಡೆದಿಟ್ಟಿರಬೇಕು ! 

ಬ್ರಿಟಿಷ್ ಲೈಬ್ರರಿಯನ್ನು ಹೋಲುವ ಈ ಸಾರ್ವಜನಿಕ ಪುಸ್ತಕಾಲಯ ಹಲವಾರು ಅತ್ಯುತ್ತಮ  ವ್ಯವಸ್ಥೆಗಳನ್ನು ಹೊಂದಿದೆ. ಇನ್ನೇನು ೩ ವರ್ಷಗಳಲ್ಲಿ ಈ ಲೈಬ್ರೈಗೆ ನೂರುವರ್ಷದ ಹುಟ್ಟುಹಬ್ಬ. ಈಗಾಗಲೇ ಅಲ್ಲಿಗೆ ಬಂದು ಭೇಟಿಕೊಡುವ ಪ್ರತಿ ನಾಗರಿಕನೂ ಅದನ್ನು ಹೇಗೆ ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ಬಗ್ಗೆ ತಲೆಕೆಡೆಸಿಕೊಳ್ಳುತ್ತಿದ್ದಾರೆ. ತಮ್ಮ ದೇಶ, ಸಂಸ್ಕೃತಿ, ಕಲೆ, ಸಾಹಿತ್ಯ ಮೊದಲಾದವನ್ನು ಅವರು ಅದೆಷ್ಟು ಪ್ರೀತಿಸುತ್ತಾರೆ ! ತಮ್ಮ ನಗರದ ಪರಿಸರವನ್ನು ಅದೆಷ್ಟು ಸುಂದರವಾಗಿ ಇಡಲು ಪಡುವ ಕಳಕಳಿ ನಮಗೆ ಪಾಠ ಕಲಿಸುವಮ್ತಹದು. ಭಾರತೀಯರು ಇದರಲ್ಲಿ ಅತಿ ಹಿಂದೆ. ಉಡಾಫೆ, ಮಾತಿನಲ್ಲಿ ಸಿರಿಯಸ್ನೆಸ್ ಇಲ್ಲವೇ ಇಲ್ಲ. ತಮ್ಮ ಬಗ್ಗೆ, ಕೊಚ್ಚಿಕೊಳ್ಳುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಬೇರೆಯವರ ಒಳ್ಳೆಯ ನಡವಳಿಕೆ, ಒಳ್ಳೆಯತನ, ಮೊದಲಾದುವನ್ನು ಕಲಿಯಲು ಪ್ರಯತ್ನಿಸಬೇಡವೇ !

 

Comments

Submitted by H A Patil Sat, 10/13/2012 - 19:07

ಹೊರಲಂ ವೆಂಕಟೇಶ ರವರಿಗೆ ವಂದನೆಗಳು ' ಟೊರಂಟೋ ನಗರದ ಪಬ್ಲಿಕ್ ಲೈಬ್ರರಿ ' ಲೇಖನ ಓದಿದೆ, ಹರ್ಷವಾಯಿತು ಆದರೆ ನಮ್ಮಲ್ಲಿಯ ಗ್ರಾಮೀಣ ಪ್ರದೇಶದ ಕಿಷ್ಕಿಂಧೆಯಂತಹ ಲೈಬ್ರರಿಗಳು, ಅಲ್ಲಿಯ ಖುರ್ಚಿ ಟೇಬಲ್ ಗಳ ಮೇಲೆ, ಪುಸ್ತಕಗಳು ಹಾಗೂ ಅವುಗಳನ್ನಿಟ್ಟ ರ್ಯಾಕ್ ಗಳ ಮೇಲೆ ಹರಡಿದ ಧೂಳು ಲೈಬ್ರರಿಯನ್ಗಳ ಗಂಟು ಮುಖ, ನೂರೆಂಟು ಇಲ್ಲಗಳು ಲೈಬ್ರರಿಗೆ ಹೋಗುವುದೇ ಒಂದು ತರಹದ ಹಿಂಸೆ. ಅಲ್ಲಿಯ ತರಹದ ಲೈಬ್ರರಿಗಳು ನಮಗೆ ದಕ್ಕುವುದು ಯಾವಾಗ? ಬಹುಶಃ ಅವುಗಳನ್ನುನೋಡುವಷ್ಟು ಆಯುಷ್ಯ ನಮಗೆ ಇಲ್ಲ.
Submitted by venkatesh Sat, 10/13/2012 - 21:04

In reply to by H A Patil

ಬೆಂಗಳೂರಿನ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ಹ್ ವರ್ಲ್ಡ್ ಕಲ್ಚರ್ ಲೈಬ್ರರಿ' ಅತ್ಯಂತ ಉತ್ತಮವಾದ ಲೈಬ್ರರಿ. ಇತರೆ ಪುಸ್ತಕಾಲಯಗಳು ಉತ್ತಮವಾಗಿವೆ. ಮತ್ತೆ ಕೆಲವಲ್ಲಿ ಪುಸ್ತಕದ ಹಾಳೆಗಳು ಹರಿದಿರುತ್ತವೆ. ಇಲ್ಲವೇ ಉತ್ತಮಮಟ್ಟದಲ್ಲಿರುವುದಿಲ್ಲ. ಇದಕ್ಕೆ ನಮ್ಮ ಓದುಗರೂ ಜವಾಬ್ದಾರರು. ಕೆಲವರು ಪುಸ್ತಕಗಳಲ್ಲಿ ಗೀಚುವ ಇಲ್ಲವೇ ಬರೆಯುವ ಪರಿಪಾಠವಿಟ್ಟುಕೊಂಡಿರುತ್ತಾರೆ. ಮಕ್ಕಳ ಕೈಗೆ ಪುಸ್ತಕಗಳನ್ನೂ ಕೊಟ್ಟು ಅವುಗಳ ದುರ್ದಶೆಗೆ ಕಾರಣರಾಗುತ್ತಾರೆ. ಇನ್ನು ನಮ್ಮಲ್ಲಿ ಲೈಬ್ರರಿ ಅಧಿಕಾರಿಗಳ ಒಳ್ಳೆಯ ನಡವಳಿಕೆ ಸಾಮಾನ್ಯವಾಗಿ ಅತಿ ಕಡಿಮೆಎಂದು ವಿಶಾದದಿಂದ ಹೇಳಬೇಕು. ಸಿಡುಕು ಸ್ವಭಾವ, ಮತ್ತು ಸಹಾಯಮಾಡುವ ಒಳ್ಳೆಯ ಬುದ್ಧಿ ಇಲ್ಲದಿರುವುದು ನನಗೆ ಕಂಡ ವಿಷಯವಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಇದನ್ನು ಧನಾತ್ಮಕ ಬುದ್ಧಿಯಿಂದ ವಿಚಾರಮಾಡಬಹುದು. !
Submitted by venkatesh Tue, 10/13/2015 - 16:40

In reply to by H A Patil

ಬಹುಷಹ‌ ಹಳೆಯ‌ ಮೈಸೂರು ರಾಜ್ಯ‌ ಇದಕ್ಕೆ ಅಪವಾದವೆನ್ನಿಸುತ್ತದೆ. ಪ್ರತಿ ಜಿಲ್ಲಾ ಮುಖ್ಯಪ್ರದೇಷಗಳಲ್ಲಿ ಪಬ್ಲಿಕ್ ಲೈಬ್ರೆರಿಗಳಿದ್ದವು. ಚಿತ್ರದುರ್ಗದಲ್ಲಿ, ಮೈಸೂರು, ಬೆಂಗಳೂರು ಮತ್ತು ಅನೇಕ‌ ಊರುಗಳಲ್ಲಿ ಇಂತಹ‌ ವ್ಯವಸ್ಥೆ ಇತ್ತು. ಒಳ್ಳೆಯ‌ ಪುಸ್ತಕಗಳ‌ ಸಂಗ್ರಹದ‌ ಜೊತೆಗೆ ಅವನ್ನು ವಿತರಿಸುವ‌ ಪರಿ ಅತ್ಯಂತ‌ ಸೊಗಸಾಗಿತ್ತು. ನಾನು ಇದರ‌ ಉಪಯೋಗಪಡೆದಿದ್ದೇನೆ. ಮೈಸೂರು ರಾಜ್ಯವನ್ನು ರಾಮರಾಜ್ಯವೆಂದು ಮಹಾತ್ಮ‌ ಗಾಂಧಿಯವರು ಕರೆದದ್ದು ನಿಜಕ್ಕೂ ಸತ್ಯ‌ ! ಅದು ನಮ್ಮ‌ ಕ್ರುಷ್ನ‌ ರಾಜ‌ ಒಡೆಯರ‌ ಕಾಲದಲ್ಲಿ !