ಹುಲಿ ಕಳೆದು ಕೊಂಡಿದೆ..ಹುಡುಕಿ ಕೊಡಿ..!

ಹುಲಿ ಕಳೆದು ಕೊಂಡಿದೆ..ಹುಡುಕಿ ಕೊಡಿ..!

ಒಂದು ನದಿ. ನದಿ ತೀರದಲ್ಲಿ ಕೆಲವ್ರು ಸ್ನಾನ ಮಾಡ್ತಿದ್ದಾರೆ. ಆಗ ಊರಿನ ನಾಯಕನ ಖಾಲಿಗೆ ಏನೋ ತಾಕಿದಂತೆ ಆಗುತ್ತದೆ. ಆಗ ತಿರುಗಿ ನೊಡ್ತಾನೆ ಆ ನಾಯಕ.ಅಲ್ಲಿ ಪುಟ್ಟ ಬುಟ್ಟಿಯಲ್ಲಿ ಮಗು ತೇಲಿ ಬಂದಿರುತ್ತದೆ. ಮಗುವನ್ನ ಎತ್ತಿಕೊಂಡು ನಾಯಕ ಮನೆಗೆ ತೆರಳುತ್ತಾನೆ.. ತಮಿಳಿನ ಪುಲಿ ಚಿತ್ರದ ಕಥೆ

ತೆರೆದುಕೊಳ್ಳೋದೇ ಹಿಂಗೆ. ಆ ಹುಡುಗ ಯಾರು ಅಂತ ನಿಮಗೆ ಈಗಲೇ ತಿಳಿದಿರಬಹುದು. ಹೌದು.ಅದು ಬೇರೆ ಯಾರೂ ಅಲ್ಲ. ಇಳಯ ದಳಪತಿ ವಿಜಯ್. ಮುಂದೆ ಬೆಳೆದು ಈ ಹುಡುಗ ಊರನ್ನ ಕಾಪಡೋಕ್ಕೆ ಮುಂದಾಗ್ತಾನೆ...

ಕಥೆ ಹೀಗೆ ತೆರೆದುಕೊಂಡ್ರು, ಅಲ್ಲಿ ರೋಚಕತೆಯ ಸಳೆತ ಕಡಿಮೆ. ಎಳೆತವೇ ಜಾಸ್ತಿ. ಫ್ಯಾಂಟಸಿಯ ಬೆರಗಳು ಹಂಗೆ ಬಂದು ಹೀಗೆ ಹೊಗುತ್ತವೆ. ಹಂಗಾಗಿ ಅದನ್ನ ಬೆರಗು ಅನ್ನೋದಕ್ಕಿಂತಲೂ ಕೊರತೆ ಅಂದರೆ ತಪ್ಪಿಲ್ಲ. ಫ್ಯಾಂಟಸಿ ಸಿನಿಮಾ ಅಂದಾಗ ಸಹಜವಾಗಿಯೇ ಒಂದು ಕಲ್ಪನೆ ಮೂಡುತ್ತದೆ. ಅಶ್ಚರ್ಯಕರ ಸನ್ನಿವೇಶಗಳು. ಕಲ್ಪನೆಗೆ ಹಚ್ಚೋ ಪ್ರಾಣಿಗಳು. ಹೀಗೆ ಏನೋನೋ. ಆದರೆ, ನಮಗೆ ಇಲ್ಲಿ ಅಂತಹ ಪ್ರಾಣಿಗಳು ಸಿಗೋದೇಯಿಲ್ಲ. ಸಿಕ್ಕರು ಅದು ದೊಡ್ಡದೊಂದು ಆಮೆ. ಬಿಟ್ಟರೇ, ಕಾಡಲ್ಲಿ ಸಿಗೋ ಲಿಲಿಪುಟ್ ಥರದ ಕಾಡು ಜನಾಂಗ. ಮಾತನಾಡೋ ಹಕ್ಕಿ.

ಸಾಹಸದ ವಿಚಾರಕ್ಕೆ ಬಂದ್ರೆ, ಅಲ್ಲಿ ಸಾಹಸವೂ ಅಂತಹ ಪರಿಣಾಮಕಾರಿ ಏನೂ ಅಲ್ಲ. ದೊಡ್ಡದೊಂದು ನದಿ ಬರುತ್ತದೆ. ಆ ನದಿ ದಾಟಲು ಮೊದಲೇ ತಿಳಿದಿರೋ ಗುರುತುಗಳನ್ನ ಬಳಸಿ, ನಾಯಕ ಬೆಟ್ಟದಲ್ಲಿ ಅಡಗಿರೋ ಕಲಿನ ಸೇತುವೆಯನ್ನ ಹೊರಬರೋವಂತೆ ಮಾಡ್ತಾನೆ. ಇದರ ಹೊರತಾಗಿ ಸಾಹಸ ಅಂದ್ರೆ ಕಪ್ಪು ಹುಲಿ ಜೊತೆಗೆ ತಮಿಳು ಪುಲಿ ಹೊಡೆದಾಡೋದು.

ಚಿತ್ರದಲ್ಲಿ ಎರಡು ಪಾತ್ರಗಳು ಹೆಚ್ಚು ಇಷ್ಟವಾಗೋದು. ಅಷ್ಟೇ ಪರಿಣಾಮ ಬೀರೋದು. ಒಂದು ಖಳನಾಯಕ ಸುದೀಪ್ ಅಭಿನಯ. ಇಡೀ ಚಿತ್ರದಲ್ಲಿ ಹೆಚ್ಚೇನೂ ಸಮಯ ಬರದೆ ಇದ್ದರೂ,ಇದ್ದ ಸಮಯದಲ್ಲಿ ಸುದೀಪ್ ದಳಪತಿ ಜಲತರಂಗ ಪಾತ್ರದಿಂದ ಗಮನ ಸೆಳೆಯುತ್ತಾರೆ.

ಎರಡನೇಯದ್ದು, ಶ್ರೀದೇವಿ ಅಭಿನಯ. ಬಹು ದಿನಗಳ ನಂತರ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡು, ತಮ್ಮ ಅಷ್ಟೂ ದಿನದ ಅನುಭವನ್ನ ಬಸೆದು ಅಭಿನಯಿಸಿದ್ದಂತಿದೆ. ದುಷ್ಟ ಶಕ್ತಿಗಳನ್ನ ಬಂಧಿತಳಾದ ಯವನರಾಣಿ ( Yavanaraani) ಪಾತ್ರ ಶ್ರೀದೇವಿ ಈ ಚಿತ್ರದಲ್ಲಿ ಕಂಗೊಳಿಸುತ್ತಾರೆ.ಆದರೆ, ಈ ಪಾತ್ರ ಶುರುವಾಗೊದೇ ದ್ವಿತಿಯಾರ್ಧದಲ್ಲಿ.

ಪುಲಿ ಚಿತ್ರದಲ್ಲಿ ಬರೋ ರಾಜ್ಯ ಮನೆತದನವರ ಕಣ್ಣುಗಳು ನೀಲಿ..ನೀಲಿ. ಬೇಕೆಂದಾಗ ಕೋರೆ ಹಲ್ಲುಗಳು ಬರುತ್ತವೆ. ಒಂದು ರೀತಿ ಹಾಲಿವುಡ್​ ನ ತೋಳ ಮನುಷ್ಯರ ಥರ. ಆದರೆ, ದಕ್ಷಿಣ ಭಾರತದ ರಾಜರ ಮನತೆನದ ಕಥೆಗಳಲ್ಲಿ ತೋಳಮಾನವರ ಕಥೆ ಎಲ್ಲಿ ಬರುತ್ತದೆ. ಚಿತ್ರ ಕಾಲ್ಪನಿಕ ಎಂದು ಸುಮ್ಮನಾಗಬೇಕು ಅಷ್ಟೆ. ವಿಜಯ್ ಪಾತ್ರದ ವಿಷ್ಯಕ್ಕೆ ಬಂದ್ರೆ, ಇಲ್ಲಿ ರಾಜ ಮತ್ತು ಯುವರಾಜನಾಗಿ ಕಾಣಿಸಿಕೊಂಡಿದ್ದಾರೆ. ಮರುಧೀರನ್ ಮತ್ತು ಪುಲಿವರ್ಧನ್​ ಎಂಬ ತಂದೆ ಮಗನ ಪಾತ್ರದಲ್ಲಿ. ಆದರೆ, ಎರಡಲ್ಲೂ ಅಂತಹ ಪರಿಣಾಮಕಾರಿ ಅಭಿನಯ ಕಾಣಿಸೋದಿಲ್ಲ. ವಿಜಯ್ ಗೆ ಈ ಚಿತ್ರ ಬೇಕಿತ್ತಾ ಎಂಬ ಪ್ರಶ್ನೆನೂ ಕೇಳುವಂತೆ ಮಾಡುತ್ತದೆ.

ನಿರ್ದೇಶಕ ಚಿಂಬು ದೇವನ್ ಗಟ್ಟಿ ಕಥೆಯನ್ನ ಮಾಡಬೇಕಿತ್ತು. ಆದರೂ, ಆ ಜಾಳು.ಜಾಳು ಕಥೆ ಬಗ್ಗೆ ಹೇಳೋದಾದರೆ, ದುಷ್ಟದಳಪತಿಯ ದುಷ್ಟ ಸೈನಿಕರು ವಿಜಯ್ ಪತ್ನಿ ಶೃತಿ ಹಾಸನನ್ನ ಅಪಹರಿಸಿರುತ್ತಾರೆ.ಆಕೆಯನ್ನ ತಿರುಗೆ ಕರೆ ತರೋದೇ ಇಡೀ ಚಿತ್ರದ ಸಾಹಸಮಯ ಕಥೆ. ಅದು ಬಿಟ್ಟರೇ. ಚಿತ್ರದಲ್ಲಿ ಗ್ರಾಫಿಕ್ಸ್ ಮತ್ತು ವಿಜಯ್ ಕತ್ತಿವರಸೆಯ ಫೈಟ್ಸ್​ಗಳು ಹೆಚ್ಚು ಇಷ್ಟವಾಗುತ್ತವೆ.

ಹೊರ ನಡೆದ ಪ್ರೇಕ್ಷಕಕನಿಗೆ ದೇವಿ ಶ್ರೀ ಪ್ರಸಾದ್ ಸಂಗೀತದ ಮತ್ತು ವಿಜಯ್ ಹಾಗೂ ಶೃತಿ ಹಾಸನ್ ಹಾಡಿದ ಹಾಡು ನೆನಪಿನಲ್ಲಿ ಉಳಿಯಬಹುದು. ವಿಜಯ್ ತೆರೆ ಮೇಲೆ ಬಂದಾಗ, ಹಿನ್ನೆಲೆಯಾಗಿ ಬರೋ ಪುಲಿ..ಪುಲಿ ಅಂತಲೇ ಪ್ರತಿ ಬಾರಿ ಬರೋ ಹಾಡು ಕಂಡಿತ ನನಪಿಲನಲ್ಲಿ ಉಳಿಯುತ್ತದೆ. ಹಾಗಂತ ಚಿತ್ರದಲ್ಲಿ ಹುಲಿಯನ್ನ ಹುಡುಕ ಬೇಡಿ. ಅಲ್ಲಿ ಕನ್ನಡ ಹುಲಿನೂ ಸಿಗೋದಿಲ್ಲ. ತಮಿಳು ಭಾಷೆಯ ಪುಲಿನೂ ಸಿಗೋದಿಲ್ಲ.
-ರೇವನ್

Comments