ಕುಡಿವ ನೀರು!

ಕುಡಿವ ನೀರು!

ಬಯಲು ಸೀಮೆಯ

ಬಯಲ ನಡುವಲ್ಲಿರಲಿ

ದಟ್ಟ ಮಲೆನಾಡಿನ

ಗಿರಿ ವನಗಳ ನಡುವಲ್ಲಿರಲಿ

ಕರಾವಳಿಯ ಕಡಲಿನ

ಉಪ್ಪು ನೀರಿನ ತೀರದಲ್ಲಿರಲಿ

ಬೇಕಲ್ಲವೇ ನಮಗೆ ಕುಡಿವ ನೀರು!

 

ಮಾಂಸಹಾರಿಯೇ ಇರಲಿ

ಸಸ್ಯಹಾರಿಯೇ ಇರಲಿ

ಹಿಂದು, ಮುಸಲ್ಮಾನ,

ಕ್ರಿಸ್ತನೇ ಇರಲಿ

ಬೇಕಲ್ಲವೇ ನಮಗೆ ಕುಡಿವ ನೀರು!

 

ಕಂಡ ಕಂಡಲೆಲ್ಲಾ

ಕಿಂಡಿಯ ಕೊರೆದು

ಕೊಳವೆಗಳ ತುರುಕಿಸಿ

ಭೂಮಿ ಒಡಲ ಹಿಂಡಿದರೆ

ಇನ್ನೆಷ್ಟು ದಿನ ನಮಗೆ ಕುಡಿವ ನೀರು!

 

ಪಕ್ಕದ ಮನೆಯವನ ಗುಂಡಿಯಲಿ

ಹೆಪ್ಪುಗಟ್ಟಿದ ಹೊಲಸು ನೀರು

ನಮ್ಮ ಬಾವಿಯಲಿ ಇಂಗಿ

ತೇಪೆ ಕಟ್ಟಿ ಕುಳಿತಿರುವಾಗ

ಇನ್ನೆಲ್ಲಿ ನಮಗೆ ಕುಡಿವ ನೀರು!

 

ಕಾಡು ಕಡಿ ಕಡಿದು

ಕಾಡೆಲ್ಲಾ ನಾಡಾಗಿ

ಮಳೆಯಿರದೇ ಮುಂದೆ

ನಾಡು ಸುಡುಗಾಡು ಆದಲ್ಲಿ

ಇನ್ನೆಲ್ಲಿ ನಮಗೆ ಕುಡಿವ ನೀರು!

 

ಭೂಮಿ ಅವ್ವನ ಒಡಲ ಹಿಂಡಿ

ಬದುಕಬಹುದೇನೋ ನಾವು ನಾಲ್ಕು ದಿನ

ಮುಂದೆ ನಾವು ಹೆತ್ತು ಹೊತ್ತವರಿಗಾದರೂ

ಬೇಕಲ್ಲವೇ ಕುಡಿವ ನೀರು!

 

ಹಿತವಿರಲಿ, ಮಿತವಿರಲಿ

ನೀರು ಚೆಲ್ಲಿ ಹರಿದಾಡದಿರಲಿ

ಇರುವುದರಲ್ಲಿ ಉಳಿಸಿ ನಡೆದರೆ

ಮುಂದಿನ ಜನ್ಮಕ್ಕೂ ಸಿಗುವುದು

ಕುಡಿವ ನೀರು!

 

--ಮಂಜು ಹಿಚ್ಕಡ್

 

Rating
No votes yet

Comments

Submitted by santhosha shastry Tue, 10/20/2015 - 18:51

ಎತ್ತಿನಹೊಳೆ ಯೋಜನೆಯ ಹಿನ್ನೆಲೆಯಲ್ಲಿ ಕವನ ಸಾಕಷ್ಟು ಅರ್ಥಗರ್ಭಿತವಾಗಿದೆ. ಧಾಟಿ ಚೆನ್ನಾಗಿದೆ.

Submitted by Nagaraj Bhadra Wed, 10/21/2015 - 00:08

ಕವನ ಚೆನ್ನಾಗಿ ಮೂಡಿ ಬಂದಿದೆ. ಬರಿ ಮನುಷ್ಯನಿಗೆ ಮಾತ್ರ ಕುಡಿಯುವ ನೀರುಬೇಕಾಗಿಲ್ಲ.ಭೂಮಿಯ ಮೇಲೆ ವಾಸಿಸುತ್ತಿರುವ ಪ್ರತಿಯೊಂದು ಪ್ರಾಣಿಯು ಬದುಕಲು ಅತ್ಯಾವಶ್ಯಕವಿದೆ.