“ ಮಗುವು ಮಾನವನಾಗಿ, ನಾಗರಿಕನಾಗಿ ಎಲ್ಲರೊಡನೆ ಸ್ನೇಹ, ಘನತೆ ಮತ್ತು ಗೌರವದಿಂದ ವರ್ತಿಸುವಂತೆ ಮಾಡುವುದೇ ಶಿಕ್ಷಣ”.

“ ಮಗುವು ಮಾನವನಾಗಿ, ನಾಗರಿಕನಾಗಿ ಎಲ್ಲರೊಡನೆ ಸ್ನೇಹ, ಘನತೆ ಮತ್ತು ಗೌರವದಿಂದ ವರ್ತಿಸುವಂತೆ ಮಾಡುವುದೇ ಶಿಕ್ಷಣ”.

'ಶಿಕ್ಷಣ' ಜಗತ್ತಿನ ಬಹುತೇಕ ಜ್ಞಾನಿಗಳು ಹೇಳುತ್ತಾರೆ ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ/ಬದಲಾವಣೆ ಹೊಂದಬೇಕಾದರೆ ಅಲ್ಲಿನ ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂದು. ಅಲ್ಲವೇ?

ಆದರೆ ಆ ಶಿಕ್ಷಣ ಅಂದರೆ ಎಂತಹದು? ಯಾವ ರೀತಿಯ ಶಿಕ್ಷಣ? ಅದರಲ್ಲಿರಬೇಕಾದ ಅತ್ಯಂತ ಮೂಲಭೂತ ಅಂಶಗಳೇನು? ಆ ಅಂಶಗಳನ್ನು ಹೇಗೆ ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಅಳವಡಿಸಿ ಕಾರ್ಯರೂಪಕ್ಕೆ ತರಬೇಕು? ಎಂದು ಯಾರೊಬ್ಬರು ಚಿಂತಿಸಿ ಶಿಕ್ಷಣ ವ್ಯವಸ್ಥೆಯಲ್ಲಿನ 'ನ್ಯೂನತೆ' ಗಳನ್ನು ಪರಿಹರಿಸಲು ಮುಂದಾಗಿಲ್ಲದಿದ್ದುದು ಶಿಕ್ಷಣ ಎಂಬ ಅರ್ಥಕ್ಕೆ ಧಕ್ಕೆಯುಂಟಾಗಿದೆ!

ಶಿಕ್ಷಣವೆಂದರೆ ಏನು? ಅದರ ವ್ಯಾಖ್ಯಾನವೇನು? ಎಂದು ಕೆಲವು ಮಹಾನ್ ವ್ಯಕ್ತಿಗಳ ಹೇಳಿಕೆಗಳು ಗಮನಿಸಿದಾಗ ಅದು ಹೀಗಿದೆ.

" " ಶಿಕ್ಷಣವು ನಮ್ಮೆಲ್ಲ ಬಂದಗಳನ್ನು ಕಿತ್ತೊಗೆದು, ಪರಮ ಶಾಂತಿ, ಸುಖ, ಸೌರ್ಹಾದತೆಗಳನ್ನು ನೀಡುವ ಸಾಧನ.ಶಿಕ್ಷಣವು ನೀಡುವ ಸಂಪತ್ತೆಂದರೆ, ಆಂತರಿಕ ಬೆಳಕು, ಶಕ್ತಿಯೆಂದರೆ ಅದಮ್ಯ ಚೇತನ ತುಂಬಿದ ಶ್ರೇಷ್ಠತೆಯ ಪ್ರೀತಿ, ಸತ್ಯದ ಸರ್ವಾದಾ ಅಭಿವ್ಯಕ್ತಿ". -ರವೀಂದ್ರನಾಥ ಟ್ಯಾಗೋರ್

ಇನ್ನು ಶಿಕ್ಷಣ ತಜ್ಞ ಡಾ! ರಾಧಾಕೃಷ್ಣನ್ ಅವರ ಅಭಿಪ್ರಾಯವೆಂದರೆ ಹೀಗಿದೆ;

-“ ಮಗುವು ಮಾನವನಾಗಿ, ನಾಗರಿಕನಾಗಿ ಎಲ್ಲರೊಡನೆ ಸ್ನೇಹ, ಘನತೆ ಮತ್ತು ಗೌರವದಿಂದ ವರ್ತಿಸುವಂತೆ ಮಾಡುವುದೇ ಶಿಕ್ಷಣ”.

ಡಾ.ರಾಧಾಕೃಷ್ಣಾನ್.

ರವೀಂದ್ರನಾಥ ಟ್ಯಾಗೋರ್ ಅವರಲ್ಲಿ ಕ್ಷಮೆ ಕೇಳುತ್ತಾ ಆ ವ್ಯಾಖ್ಯಾನವನ್ನು ಈಗಿನ ವಾಸ್ತವಿಕ ಪರಿಸ್ಥಿತಿಗನುಗುಣವಾಗಿ ಬದಲಾಯಿಸಿದಾಗ ....

"ಶಿಕ್ಷಣವು ಆಂತರಿಕ ವಿಕಾಸವನ್ನು ಕಿತ್ತೊಗೆದು, ಕೇವಲ ಬಾಯಿಪಾಠ ಹಾಗೂ ಅಂಕಪಟ್ಟಿ್ಗೆ ಸೀಮಿತವಾದ ವ್ಯಕ್ತಿಯೊಬ್ಬ ತನ್ನ ಜೀವನದ ಹಸಿನೈದಕ್ಕಿಂತ ಹೆಚ್ಚಿನ ವರ್ಷ ಆಂತರಿಕ ವಿಕಾಸಹೊಂದದೆ ಜೀವನದ ಅತ್ಯಂತ ಮಹತ್ವದ ಕಾಲವನ್ನು ಅಂಕಗಳಿಸಲು ಮಾತ್ರ ಹಾಗೂ ನೌಕರಿ ಮತ್ತು ಹಣ ಸಂಪಾದಿಸಲು ಇರುವ ಏಕೈಕ ಮಾರ್ಗವೆಂದು ಹೇಳಬಹುದು!

ಇನ್ನೂ ಡಾ! ರಾಧಾಕೃಷ್ಣನ್ ಅವರ ವ್ಯಾಖ್ಯಾನ?! ಬಿಡಿ ಅದು ತುಂಬಾ ವಿಶಾಲಾರ್ಥದಲ್ಲಿ ಇದೆ.

ಇನ್ನು ಅಹಿಂಸೆಯಿಂದ ಕ್ರಾಂತಿಯನ್ನೇ ಹುಟ್ಟುಹಾಕಿದ ಮಹಾತ್ಮಾ ಗಾಂಧೀ ಅವರು ಶಿಕ್ಷಣದ ಬಗ್ಗೆ ಏನು ಹೇಳುವರು ಗೊತ್ತೇನು?

ಮಗುವಿನ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣವೆಂದು!

ಇಲ್ಲಿ 'ಸರ್ವತೋಮುಖ ' ಈ ಪದದ ಅರ್ಥ ಮತ್ತು ಅನುಷ್ಠಾನ ಇವೆರಡನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು. ನಮ್ಮ ಈಗಿನ ಶಿಕ್ಷಣ ತಜ್ಞನರಿಗೆ ಈ ಪದದ ಅರ್ಥ ಮತ್ತು ಅನುಷ್ಠಾನಕ್ಕೆ ತರುವ ಮನಸ್ಸು ಇಲ್ಲವೇ ಇಲ್ಲವೇನೋ? ಎಂಬಂಥ ಲಕ್ಷಣಗಳು ಈಗಿನ ಶಿಕ್ಷಣ ಎಲ್ಲಿ ಕಾಣಿಸುತ್ತವೆ.

ಮಹಾತ್ಮಾಜಿಯವರಲ್ಲಿ ಕ್ಷಮೆ ಕೋರುತ್ತಾನೆ ಮತ್ತೆ ಅವರ ವ್ಯಾಖ್ಯಾನವನ್ನು ಈಗಿನ ಪರಿಸ್ಥಿತಿಗೆ ತಕ್ಕಂತೆ ಹೀಗೆ ವ್ಯಾಖ್ಯಾನಿಸಬಹುದೇನೊ?

ಮಗುವಿನ ಅಂಕತೋಮುಖ ಬೆಳವಣಿಗೆಯೇ ಶಿಕ್ಷಣ ವೆಂದು!

ಸರಿ, ಒಂದು ಅಂಕಪಟ್ಟಿ ಒಬ್ಬನ ಸಂಪೂರ್ಣ ವ್ಯಕ್ತಿತ್ವವನ್ನು ಹಾಗೂ ಸರ್ವತೋಮುಖ ಜ್ಞಾನವನ್ನು ಪ್ರತಿಬಿಂಬಿಸಿಬಿಡುತ್ತದೆಯೇ?

ಒಂದು ಅಂಕಪಟ್ಟಿ ವ್ಯಕ್ತಿಯ ಜೀವನವನ್ನೇ ರೂಪಿಸಿಬಿಡುತ್ತದೆಯೇ?

ಒಂದು ಅಂಕಪಟ್ಟಿ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸಿಬಿಡುತ್ತದೆಯೇ? ಖಂಡಿತ ಇಲ್ಲ,

ಆದರೂ ಸಹ ಈ ಶಿಕ್ಷಣ ವ್ಯವಸ್ಥೆಗೆ ಒಂದು ಮಾನದಂಡ ಬೇಕು ಅದುವೇ 'ಅಂಕಪಟ್ಟಿ'ಯಾಗಿದೆ ಅಷ್ಟೇ!

ಆ ಅಂಕಪಟ್ಟಿಗಳೆಲ್ಲವೂ ಪ್ರಾಮಾಣಿಕವಾಗಿ ಪಡೆದದ್ದೇನಾಗಿರುವುದಿಲ್ಲ ಬಿಡಿ ಒಂದನೇ ತರಗತಿಯಿಂದ ಹಿಡಿದು ಪಿ.ಎಚ್.ಡಿ ತನಕ ನಕಲು ನಡೆದ ಪತ್ರಿಕಾವರದಿಗಳನ್ನು ನಕಲು ಸಂಶೋಧನಾ ಪ್ರಬಂಧಗಳನ್ನು ನೋಡಿಯೇ ನೋಡಿರುತ್ತೇವೆ.

ಹಣ ಕೊಟ್ಟರೆ 'ಸರ್ಟಿಫಿಕೇಟ್' ವಿಶ್ವವಿದ್ಯಾಲಯದ ಮೆಟ್ಟಿಲನ್ನೇ ಹತ್ತದೇ ಇದ್ದರೂ ಪ್ರಭಾವ ಬಳಸಿಕೊಂಡು ಸರ್ಟಿಫಿಕೇಟುಗಳನ್ನು ಪಡೆಯುವವರ ಸಂಖ್ಯೆಯೇನೂ ಕಡಿಮೆಯಿಲ್ಲ.

ಮೊನ್ನೆ ಮೊನ್ನೆ ಒಂದು ವಿಷಯವನ್ನು ನೀವು ಗಮನಿಸಿರಬಹುದು ಅದೇನೆಂದರೆ

UGC ಯ ನಿಯಮಗಳನ್ನು ಪಾಲಿಸದೆ ಮನಬಂದಂತೆ ವಿಶ್ವದ್ಯಾಲಯದಲ್ಲಿ ಡಿಗ್ರಿ ನೀಡಿದ ನಮ್ಮ ರಾಜ್ಯದ 'ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಾನಸ ಗಂಗೋತ್ರಿ'ಯಲ್ಲಿ ಇತ್ತೀಚಿಗೆ ಪದವಿ ಪೂರೈಸಿದವರು ಯಾವುದೇ 'ಸ್ಪರ್ಧಾತ್ಮಕ' ಪರೀಕ್ಷೆ ಬರೆಯಲು ಅರ್ಹರಲ್ಲವೆಂದು ಆದೇಶ ಹೊರಡಿಸಿಬಿಟ್ಟಿತ್ತು UGC.

ಆಮೇಲೆ ಕೆ.ಪಿ.ಎಸ್.ಸಿ.ಸ್ಪರ್ಧಾರ್ಥಿಗಳು ಒಕ್ಕೊರಲಿನಿಂದ ಮತ್ತೆ ನ್ಯಾಯಾಂಗದ ಮೊರೆ ಹೋದಾಗ ಅವರಿಗೆ ಇದೊಂದು ಬಾರಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ ಎಂದು ಪತ್ರಿಕಾವರದಿಗಳಿಂದ ತಿಳಿದು ಬಂತು ಆದರೆ

ಒಂದು ವಿಶ್ವವಿದ್ಯಾಲಯ ಈ ಪರಿ ಅವಮಾನಕ್ಕೊಳಗಾಗುವುದು ಶೋಭೆಯೇ?

ಛೇ ...ಧುರಂತವೆನ್ನದೇ ಮತ್ತೇನೆನ್ನಲಿ?

ಮಕ್ಕಳ ಕೈ ಗೆ ರಕ್ತ ಬರುವ ಹಾಗೆ ಹೊಡೆಯುವ ಕೆಲ ಶಿಕ್ಷಕರು,

ಕಾಲೇಜಿನ ಹುಡುಗಿಯರ ಟಾಯ್ಲೆಟ್ ನಲ್ಲಿ ಸಿ.ಸಿ.ಕ್ಯಾಮೆರಾ ಇಡುವ ಕಾಮುಕ ಪ್ರಿನ್ಸಿಪಾಲರು, ಹೆಚ್ಚಿನ ಅಂಕಗಳನ್ನು ಕೊಡುವುದಾಗಿ 'ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳುವ ಕೆಲ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳು

ವಿದ್ಯಾರ್ಥಿಗಳ ಮೇಲೆ ದ್ವೇಷ ಸಾಧಿಸಿ ಅಂಕ ಕಡಿಮೆ ಕೊಟ್ಟು ವಿದ್ಯಾರ್ಥಿಗಳ ಜೀವನವನ್ನು ಹಾಳು ಮಾಡಲು ಪ್ರಯತ್ನಿಸುವ ಕೆಲ ಶಿಕ್ಷಕರು ಇವರೆಲ್ಲ ಶಿಕ್ಷಣ ವ್ಯವಸ್ಥೆಯ 'ಕಪ್ಪು ಚುಕ್ಕೆಗಳು'

ತಮ್ಮ ಪವಿತ್ರ ವೃತ್ತಿಗೆ ದ್ರೋಹಬಗೆಯುವ ದ್ರೋಹಿಗಳು!

ಮಾನವೀಯ ಮೌಲ್ಯಗಳನ್ನು ಭೂತಕನ್ನಡಿಯಿಂದ ಹುಡುಕುವ ಕಾಲ ಬಂದಿದೆ.ಮಗುವಿನ ಬೆಳವಣಿಗೆ ಮಾಡಬೇಕಾದ ಜವಾಬ್ದಾರಿ ಹೊತ್ತವರೆ ಆ ಮಗುವನ್ನು ಪರೋಕ್ಷವಾಗಿಯೋ ಅಪರೋಕ್ಷವಾಗಿಯೋ ಚಿವುಟಲು ಯತ್ನಿಸುವ ಈ ಕೀಳು ಗುಣ ನಿಜಕ್ಕೂ ಸಮಾಜಕ್ಕೆ ಮಾರಕ!

ಈ ಎಲ್ಲ ಮೇಲಿನ ಧುರಂತಗಳನ್ನು ತಪ್ಪಿಸಿ 'ಮಾನವೀಯ ಮೌಲ್ಯಗಳನ್ನು' ಬಿತ್ತಿ ಸಮಾಜದ ಸ್ವಾಸ್ಥ್ಯಕ್ಕೆ ಭದ್ರಬುನಾದಿ ಹಾಕಬೇಕಾದರೆ ಈಗಿನ ಶಿಕ್ಷಣವನ್ನು ಆಮೂಲಾಗ್ರವಾಗಿ ಮತ್ತೊಮ್ಮೆ ಪರಿಶೀಲಿಸಿ

ಇಲ್ಲಿನ ಇಂತಹ ನೂರಾರು ನ್ಯೂನತೆಗಳನ್ನು ತೆಗೆದುಹಾಕಿ ಹೊಸ ವಿಧಾನಗಳನ್ನು ಶಿಕ್ಷಣದಲ್ಲಿ ಜಾರಿಗೊಳಿಸಬೇಕು ಅದು ಮಾನವೀಯ ಮೌಲ್ಯಗಳ ಹಾಗೂ ಮಗುವಿನ ಸರ್ವತೋಮುಖ ಬೆಳವಣಿಗೆ ಅತ್ಯಂತ ಪೂರಕವಾಗಿರಬೇಕು ಅಂದಾಗ ಶಿಕ್ಷಣದಿಂದ ಕ್ರಾಂತಿ ಈ ಕ್ರಾಂತಿಯಿಂದಲೇ ದೇಶದ ಬದಲಾವಣೆ ಸಾಧ್ಯ!

~ವಿಶ್ವನಾಥ ಬಿ.ಎಮ್.

Rating
Average: 3 (1 vote)

Comments