ಬ್ರಷ್ಟರು ದುಷ್ಟರೇ?
http://www.dnaindia.com/money/report-indian-companies-most-hurt-by-corru...
೨೦೧೫ರ ದಿ ಗ್ಲೋಬಲ್ ಫ಼್ರಾಡ್ ರಿಪೋರ್ಟ್ ಹಾಗು ಎಕೊನೊಮಿಸ್ಟ್ ಇಂಟೆಲ್ಲಿಜೆನ್ಸ್ ಯೂನಿಟ್ ಹೊರಗಿದೆ. ಅದರ ಸರ್ವೆ ಕುರಿತು ಡಿ.ಎನ್.ಏ ಪತ್ರಿಕೆಯಲ್ಲಿ ಒಂದು ವರದಿ. ನಮ್ಮ ದೇಶದ ಧಾರ್ಮಿಕ ನಿಲುವುದಳ ಬಗ್ಗೆ ಅಸಹಿಷ್ಣುತೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಇದೂ ಒಂದು ರೀತಿ ಕಛೇರಿಗಳಲ್ಲಿ ಅದೇ ಧ್ವನಿ ಪ್ರತಿಬಿಂಬಿಸುವಂತಹದ್ದು ಹಾಗು ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯವಿದೆ. ಬ್ರಷ್ಟಾಚಾರ ಭಾರತದ ಕಚೇರಿಗಳಲ್ಲಿ ಶೇಖಡ ೨೫ ವ್ಯಾಪಿಸಿದೆ. ಅದರಲ್ಲಿ ಶೇಖಡ ೪೫ರಷ್ಟು ಕಛೇರಿಗಳಲ್ಲಿ ಕಿರಿಯ ಕೆಲಸಗಾರರಿಂದಲೇ ಬ್ರಷ್ಟಾಚಾರ ನಡೆಯುತ್ತೆ. ಹಿರಿಯ ಅಧಿಕಾರಿಗಳಿಂದ ಕೇವಲ ಶೇಖಡ ೨೫ರಷ್ಟು ಮಾತ್ರ ಕೈವಾಡ ಇರುತ್ತೆ ಎನ್ನುವುದು ಈ ವರದಿಯ ಮುಖ್ಯ ಸಾರಾಂಶವಾಗಿದೆ. ಈ ಸುದ್ದಿಯನ್ನು ಓದಿದ ನಂತರ ಇಂತಹ ಸರ್ವೆಯ ಮೂಲ ಉದ್ದೇಶದ ಬಗ್ಗೆ ವಿಶ್ಲೇಷಣೆ ಅಗತ್ಯವಿದೆ ಎಂದನಿಸಿತು.
ಸಾಮನ್ಯವಾಗಿ ಕಛೇರಿಗಳಲ್ಲಿ ಈಮೈಲ್ ಬರುವ ಸರ್ವೆಗಳನ್ನು ಎಷ್ಟು ಜನ ಪ್ರಾಮಾಣಿಕವಾಗಿ ಉತ್ತರಿಸುತ್ತಾರೆ? ಎಷ್ಟು ಜನ ಕಿರಿಯ ಉದ್ಯಮಿಗಳು, ಎಷ್ಟು ಜನ ಹಿರಿಯ ಅಧಿಕಾರಿಗಳು ಈ ಸರ್ವೆಗಳನ್ನು ಉತ್ತರಿಸುತ್ತಾರೆ? ಅದನ್ನು ಎಷ್ಟು ನಿಖರವಾಗಿ ಗಂಬೀರವಾಗಿ ತೆಗೆದುಕೊಳ್ಳುತ್ತಾರೆ? ಕಛೇರಿಯ ಮೇಲಾಧಿಕಾರಿಗಳಲ್ಲಿ ನಡೆಯುವ ಮೋಸಗಳನ್ನು ಬೆಕ್ಕಿನ ಮೂತಿಗೆ ಮೆತ್ತುವಂತೆ, ಕೆಳಗಿನವರ ಮೇಲೆ ಹೊರೆಸುವ ತಂತ್ರವೇ? ಮೇಳಿನವರ ಬೆಂಬಲ ಇಲ್ಲದೆ ಅಷ್ಟು ದೊಡ್ಡ ಮೊತ್ತದ ಮೋಸಗಳನ್ನು ಕಿರಿಯರು ಮಾಡಲು ಸಾಧ್ಯವೆ? ಸಾಧ್ಯವಾದರೆ, ಕಛೇರಿಯ ಎಲ್ಲಾ ವಿವಿಧ ಶಾಖೆಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ? ಸೆಕ್ಯೂರಿಟಿ ಹೆಚ್ಚಿಸುವ ಸಮಯವೇ? ಅಥವಾ ಭದ್ರತೆಯನ್ನು ದೃಢಗೊಳಿಸುವುದರಿಂದ ಇದನ್ನು ತಡೆಯುವುದಕ್ಕಾಗುತ್ತೇ? ಚಾಪೆಯ ಕೆಳಗೆ ತೂರಬಲ್ಲ ಕಳ್ಳ ರಂಗೋಲಿಯ ಕೆಳಗೆ ತೂರುವುದನ್ನು ಕಲಿಯುವುದಿಲ್ಲವೇ? ಬೇಲಿಯೇ ಇರದ ಮನೆಯಲ್ಲಿ ಕಳ್ಳತನ ಹೆಚ್ಚೋ ಅಥವ ಸ್ಮಾರ್ಟ್ ಸೆಕ್ಯುರಿಟಿ ಅಳವಡಿಸಿದ ಹೈ-ಟೆಕ್ ಮನೆಯಲ್ಲೋ? ಮನೆ ಯಾಕೆ ನಮ್ಮ ಫ಼ೋನುಗಳ ಉದಾಹರಣೆಗಳೇ ಇಲ್ಲವೆ? ಹೀಗೆ ಅನೇಕ ಪ್ರಶ್ನೆಗಳು ಮೂಡಿ ಇಂತಹ ಸರ್ವೆಗಳಿಂದ ನಿಜವಾಗಿಯೂ ಪ್ರಯೋಜನವಾಗುತ್ತಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ನೋಡುವ ಅಗತ್ಯ ಇದೆ.
ಮೂಲ ಉದ್ದೇಶ ಕಛೇರಿಗಳಲ್ಲಿ ಬ್ರಷ್ಟಾಚಾರ ನಿಗ್ರಹಿಸುವುದಾದರೆ, ರಾಜ ಪ್ರಜೆ ಎಂದು ಅಪವಾದ ಬದಲಾಯಿಸಿಕೊಳ್ಳುವ ಬದಲು, ತಪ್ಪು ರಾಜನದ್ದಾಗಲಿ, ಪ್ರಜೆಯದ್ದಾಗಲಿ ಶಿಕ್ಷೆಗೆ ಒಳಗಾಗುವುದು ರಾಜ, ನಂತರ ನೀರು ಹಾಗೆಯೇ ಮೆಟ್ಟಿಲು ಇಳಿದು ನೆಲದ ಕಡೆ ಹರಿಯಲೇಬೇಕಲ್ಲವೇ? ಯಾರು ಬ್ರಷ್ಟರು ಎಂದು ನಿರ್ಧರಿಸಲು, ಕಛೇರಿಯ ಜನರ ಅಭಿಪ್ರಾಯ ತಿಳಿದುಕೊಳ್ಳುವ ಸರ್ವೆಗಳು ನಿಜವಾಗಿಯು ಸರಿಯಾದ ಮಾಹಿತಿ ಬಿಂಬಿಸುತ್ತಿದೆಯೇ? ಯಾರು ಬ್ರಷ್ಟರು ಎನ್ನುವ ಪ್ರಶ್ನೆಗಿಂತ, ಯಾಕೆ ಬ್ರಷ್ಟಾಚಾರ ನಡೆಯುತಿದೆ ಎನ್ನುವುದು ಮೂಲ ಪ್ರಶ್ನೆಯಲ್ಲವೇ? ಮೂಲ ಸಮಸ್ಯೆ ಎಂದರೆ, ಯಾವ ಸಮಸ್ಯೆಯನ್ನೂ ಪರಿಹರಿಸದಿರುವುದು. ಸಮಸ್ಯೆ ಬಗೆಹರಿಯದಿದ್ದರೆ ಎಲ್ಲರಿಗೂ ಲಾಭ. ಸಮಸ್ಯೆ ಬಗೆಹರಿದುಹೋದರೆ ಕೆಲಸ ಇಲ್ಲದ್ದಿದ್ದರೆ ಎಂಬ ಭಯವನ್ನು ಹೇಗೆ ತಡೆಗಟ್ಟುವುದು? ಒಂದು ಸಮಸ್ಯೆ ಮುಗಿದರೆ ಹೊಸ ಸಮಸ್ಯೆ ಹುಟ್ಟುತ್ತದೆ. ಆದರೆ ತಿಳಿಯದ ಪ್ರಳಯಕ್ಕಿಂತ, ತಿಳಿದ ರಕ್ಷಸನೇ ವಾಸಿ. ಎನ್ನುವುದಕ್ಕೆ ಪರಿಹಾರವಿದೆಯೇ?
... ಮುಂದುವರೆಯಲಿದೆ
Comments
ಉ: ಬ್ರಷ್ಟರು ದುಷ್ಟರೇ?
ಕರುನಾಡ ಕನ್ನಡತಿಯವರೆ, ನಿಮ್ಮ ಚಿಂತನೆಯನ್ನು ಹಂಚಿಕೊಳ್ಳುವ ತವಕ ನಿಮ್ಮ ಬರಹದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಆದರೆ ಆ ಹುಮ್ಮಸ್ಸಿನಲ್ಲಿ ಎಷ್ಟೋ ತಪ್ಪು ಪದಗಳು ನುಸುಳುತ್ತಿವೆ: ಬ್ರಷ್ಟ, ಶೇಖಡ, ಮೇಲಾಧಿಕಾರಿ, ರಕ್ಷಸ, ವಿನಃ, ರಕ್ಷತಿಃ, ದ್ರುಷ್ಟಿ, ಆದಾರಸ್ಥಂಬ, ದೋಶಿ ಇತ್ಯಾದಿ. ಇವುಗಳ ಬಗ್ಗೆ ಎಚ್ಚರವಿರಲಿ. ಭಾಷೆಯ ಬಳಕೆಯಲ್ಲಿಯೂ ಅಲ್ಲಲ್ಲಿ ತಪ್ಪುಗಳಾಗಿವೆ: " ೨೦೧೫ರ ದಿ ... ಯೂನಿಟ್ ಹೊರಗಿದೆ" (ಯಾವುದರ ಹೊರಗೆ ಇದೆ? ಹೊರಬಂದಿದೆ ಎನ್ನಬೇಕಿತ್ತು); ಹಾಗೆಯೇ "ಎಷ್ಟೇ ನಿಖರ ಎಂದುಕೊಂಡರೂ ಕೂಡ ..." (ನಿಖರವಾದದ್ದು); "ತಿರುಗುಬಾಣದಂತೆ ಹೊಸ ತಿರುವು ಪಡೆಯುತ್ತಿದ್ದ " (ನೀವು ತೂರಿದ ಬಾಣಕ್ಕೆ ಉತ್ತರವಾಗಿ ಬಂದದ್ದು ತಿರುಗು ಬಾಣ, ಅದು ನೇರವಾಗಿಯೇ ಬಂದು ಮುಟ್ಟುತ್ತದೆ) ಎಂಬಲ್ಲಿಯೂ.
ಹೆಚ್ಚು ಹೆಚ್ಚು ಓದಿರಿ. ಓದಿದ್ದರಲ್ಲಿ ಭಾಷೆಯನ್ನು ಹೇಗೆ ಬಳಸಿದ್ದಾರೆ ಎಂಬುದನ್ನು ಚೆನ್ನಾಗಿ ಗಮನಿಸಿ, ಅದನ್ನು ನಿಮ್ಮ ಬರವಣಿಗೆಯಲ್ಲಿ ತನ್ನಿ. ಪ್ರಯತ್ನ ಮುಂದುವರೆಸಿ.
In reply to ಉ: ಬ್ರಷ್ಟರು ದುಷ್ಟರೇ? by gvmt
ಉ: ಬ್ರಷ್ಟರು ದುಷ್ಟರೇ?
ನಮಸ್ಕಾರ. ನೀವು ಗಮನಿಸಿರುವ ಸೂಕ್ಷ್ಮಗಳಿಗೆ ಧನ್ಯವಾದಗಳು. ಒಳ್ಳೆಯ ಪ್ರತಿಕ್ರಿಯೆಗಳಿಂದಲೇ ಬರವಣಿಗೆ ಸುಧಾರಿಸುವುದು. ಪ್ರಯತ್ನ ಮುಂದುವರೆಸುತ್ತೇನೆ.