ಕ್ವಿಲ್ಲಿಂಗ್ - ಟೀನ್ಸ್ ನ ತ್ರಿಲ್ಲಿಂಗ್ ಹವ್ಯಾಸ

ಕ್ವಿಲ್ಲಿಂಗ್ - ಟೀನ್ಸ್ ನ ತ್ರಿಲ್ಲಿಂಗ್ ಹವ್ಯಾಸ

ಚಿತ್ರ

    ಆಗ ಒಂದು ಕಾಲವಿತ್ತು. ಶಾಲೆಯ ಸಮವಸ್ತ್ರ ಬಿಟ್ಟು, ಬಣ್ಣ ಬಣ್ಣ ಬಟ್ಟೆ ಧರಿಸಬಹುದಾದಂತ ಕಾಲೇಜು ಸೇರಿದ ಕೂಡಲೇ, ಎಷ್ಟೋ ತಿಂಗಳುಗಳ ಪಾಕೆಟ್ ಮನಿ ಶೇಕರಿಸಿ ಇಟ್ಟುಕೊಂಡು ಓಲೆ ಕೊಳ್ಳುತ್ತಿದ್ದೆವು. ಆಗ ನಾಣ್ಯಗಳಲ್ಲಿ, ವುಲ್ಲನ್, ಕ್ರೋಶ ದಲ್ಲಿ ವಿವಿಧ ಸರ ಓಲೆ ಮಾಡಿದ್ದರೂ, ಈಗಿನಷ್ಟು ಕಡಿಮೆ ಖರ್ಚಿನಲ್ಲಿ  ಬಗೆ ಬಗೆ ಬಣ್ಣಗಳಿಂದ ಕೂಡಿದ ಆಭರಣಗಳನ್ನು ಮನೆಯಲ್ಲೇ ಮಾಡಿಕೊಳ್ಳುವಷ್ಟು ಸೌಲಭ್ಯ ಇರಲಿಲ್ಲ. ಈಗ ಇದಕ್ಕೆ ಸಾಮಗ್ರಿಗಳೊಡನೆ, ಮಾಡುವ ವಿಧಾನವು ಬಹಳ ಸುಲಭವಾಗಿ ಎಲ್ಲೆಡೆ ದೊರೆಯುತ್ತಿರುವುದರಿಂದ, ನಮ್ಮ ಟ್ರಬಲ್-ಟೀನ್ಸ್ ರನ್ನು ಟಿವಿ, ನೆಟ್ ಬಿಟ್ಟು ಮನೆಯಲ್ಲೇ ಅನೇಕ ಹವ್ಯಾಸಗಳಲ್ಲಿ ತೊಡಗಿಸುವ ಆಕರ್ಷಣೀಯ/ಉಪಯುಕ್ತ ಹವ್ಯಾಸ ಕ್ವಿಲ್ಲಿಂಗ್. ನನ್ನನ್ನೂ ಸೇರಿ ಬಹು ಮಂದಿ ಇಷ್ಟ ಪಡುವ ಕ್ವಿಲ್ಲಿಂಗ್ ಮೂಲ ತಿಳಿಯುವ ಉದ್ದೇಶದಿಂದ ಶುರುವಾಯಿತು ಪ್ರಾಯಾಣ. 
 
    ಕ್ವಿಲ್ಲಿಂಗ್ ಅನ್ನುವುದು ಬಣ್ಣ ಬಣ್ಣದ ಪೇಪರ್ ನಿಂದ ಮಾಡುವ ಅನೇಕ ಅಲಂಕಾರಿಕ ವಸ್ತುಗಳು. ಇದಕ್ಕೆ ಪೇಪರ್ ಫಿಲಿಗ್ರೀ ಅಂತ ಕೂಡ ಹೆಸರಿದೆ. ಇದನ್ನು ಮೊದಲು ಕೇವಲ ಆಧ್ಯಾತ್ಮಿಕದಲ್ಲಿ ಉತ್ಸಾಹ ಇರುವಂತಹವರು ಮಾತ್ರ ಬಳಸುತ್ತಿದ್ದರು. ಫೋಟೋ ಫ್ರೇಮ್, ಹ್ಯಾಂಡ್ ಬ್ಯಾಗ್, ಡಬ್ಬಿಗಳು, ಗ್ರೀಟಿಂಗ್ ಕಾರ್ಡ್ಸ್, ಈಸ್ಟರ್ ಮೊಟ್ಟೆ, ಬೇರುಗಳು, ಸ್ಟಾಂಡ್, ಹೀಗೆ ವಿವಿಧ ದಿನ ನಿತ್ಯ ಬಳಸುವ ವಸ್ತುಗಳನ್ನು ಪೇಪರ್ ನಿಂದ ಅಲಂಕರಿಸಬಹುದಾದ ಒಂದು ಕಲೆ. ಪೇಪರ್ ಅನ್ನು ಸುತ್ತಿ, ಅನೇಕ ಆಕರಗಳಲ್ಲಿ ಮಡಚಿ, ರೋಲ್ ಮಾಡಿ, ಕಾಯ್ಲ್ ಮಾಡಿ ಗಿಲ್ಲಿ, ಬಗೆಬಗೆಯ ಆಕಾರಗಳಾಗಿ ಮೊದಲು ೨ ಆಯಮಗಳಲ್ಲಿದ್ದ ಕಲೆ ಇಂದು ಅನೇಕ ರೀತಿಯಲ್ಲಿ ಬದಲಾವಣೆ ಹೊಂದಿ ೩ ಆಯಾಮಗಳ ಆಭರಣಗಳ ರೂಪಾಂತರಗೊಂಡಿದೆ. ಇದು ಮೂಲತಃ ಪ್ರಾಚೀನ ಈಜಿಪ್ಟ್ ನ ಒಂದು ಕಲೆ. ೪-೫ ನೆ ಶತಮಾನದಲ್ಲಿ ಕ್ವಿಲ್ಲಿಂಗ್ ನ ಒಂದು ಶೈಲಿ ಪೇಪರ್ ಬದಲು ಲೋಹದಿಂದ ಮಾಡುತ್ತಿದ್ದರಂತೆ. ಚಿನ್ನ, ಬೆಳ್ಳಿಯನ್ನು ಸುತ್ತಿ ಸುತ್ತಿ ಮಾಡುತ್ತಿದ್ದ ಕಲಾತ್ಮಕ ವಸ್ತುಗಳು ಸುಮಾರು ೧೩ನೆಯ ಶತಮಾನದಲ್ಲಿ ಪೇಪರ್ ಮೂಲಕ ಪ್ರಸಿದ್ಧವಾಯಿತು. ಇದಕ್ಕೆ ಅನೇಕ ಅಡ್ಡ ಕಥೆಗಳು ಇವೆ. ೧೬ ರಿಂದ ೧೭ ನೆಯ ಶತಮಾನದಲ್ಲಿ ಫ್ರಾನ್ಸ್ ಹಾಗು ಇಟಲಿ ರಾಜ್ಯಗಳಲ್ಲಿ ಪ್ರಾಮುಖ್ಯತೆ ಹೊಂದಿತ್ತು ಎನ್ನುವುದು ಒಂದು ವಾದವಾದರೂ 'ಚೀನ'ದಲ್ಲಿ ಪೇಪರ್ ಕಂಡುಹಿಡಿದ ನಂತರ 'ಓರಿಗಮಿ' ಕಲೆಯೊಂದಿಗೆ ಪ್ರಚಾರ ಪಡೆಯಿತು ಎನ್ನುವುದು ಇನ್ನೊಂದು. ಫ್ರಾನ್ಸ್ ಹಾಗು ಇಟಲಿ ರಾಜ್ಯಗಳ ಪಾದ್ರಿಗಳು, ನನ್ ಗಳು ಕ್ವಿಲ್ಲಿಂಗ್ ಅನ್ನು ಸಮಯ ಕಳೆಯಲು ಬಳಸುತ್ತಿದ್ದರಂತೆ ಎಂದು ಕೆಲವರ ಅಭಿಪ್ರಾಯ. ಇನ್ನು ಕೆಲವರು ೧೩ನೆಯ ಶತಮಾನದಲ್ಲಿ ಚಿನ್ನ, ಬೆಳ್ಳಿ ಕೊಳ್ಳಲಾಗದ ಆಧ್ಯಾತ್ಮಿಕ ಸ್ವಾಮಿ/ಪಾದ್ರಿಗಳು ಪೇಪರ್ ನಿಂದ ಕ್ವಿಲ್ಲಿಂಗ್ ಶುರು ಮಾಡಿದರು ಎಂದು ಕೂಡ ಕೆಲವರ ಅಭಿಪ್ರಾಯ. ದೃಡವಾಗಿ ಹೇಳುವಂತ ಮಾಹಿತಿ ಇನ್ನು ಸಂಗ್ರಹವಾಗಿಲ್ಲ. ೧೮ನೆಯ ಶತಮಾನದಲ್ಲಿ ಯುರೋಪ್ ದೇಶವನ್ನು ಈಗಿನ ಗಾಲ್ಫ಼್ ಆಟದಂತೆ  "ಶ್ರೀಮಂತ  ಮಹಿಳೆಯರ ಕಲೆ" ಎಂದು ಪ್ರಖ್ಯಾತವಾಗಿತ್ತು. ವಿಕ್ಟೋರಿಯಾ ರಾಣಿ ಇದನ್ನು ಹೆಚ್ಚು ಬಳಸುತ್ತಿದ್ದ ಉದಾಹರಣೆಗಳಿವೆ. ಯೂರೋಪ್ ಜೊತೆಗೂಡಿ ಅಮೇರಿಕಾ ದೇಶದ ಕಲಾತ್ಮಕ ವಸ್ತು ಸಂಗ್ರಹಾಲಯಗಳಲ್ಲೂ ಕ್ವಿಲ್ಲಿಂಗ್ ಕಣ್ಣಿಗೆ ಬೇಳುತ್ತೆ. ಪಾಶ್ಚಾತ್ಯ ಪ್ರಭಾವದಿಂದ ನಮ್ಮ ದೇಶದಲ್ಲೂ ಪ್ರಸಿದ್ಧ ಹೊಂದಿದ ಕಲೆಗಳಲ್ಲಿ ಕ್ವಿಲ್ಲಿಂಗ್ ಕೂಡ ಒಂದು. 
 
    ಕ್ವಿಲ್ಲಿಂಗ್ ಗೆ ವಿವಿಧ ರೀತಿಯ ಪೇಪರ್ ಉಪಯೋಗಿಸುತ್ತಿದ್ದರು. ಆಮ್ಲ-ರಹಿತ ಪೇಪರ್, ಎರಡು ಬಣ್ಣದ ಶೇಡೆಡ್ ಪೇಪರ್ ಇವುಗಳಲ್ಲಿ ಮುಖ್ಯವಾದುದ್ದು. ಇದಲ್ಲದೆ ನಮ್ಮ ಮಕ್ಕಳು ಉಪಯೋಗಿಸುವ ಚಾರ್ಟ್ ಪೇಪರ್ ನಿಂದ ಕೂಡ ಮಾಡಬಹುದು. ಅಲ್ಲದೆ ನ್ಯೂಸ್ ಪೇಪರ್ ಗೆ ಬಣ್ಣ ಹಚ್ಚಿ ಪೇಪರ್ ಮ್ಯಾಶ್ ಮಾಡಿದ ಪೇಪರ್ನಲ್ಲಿ ತುಂಡು ಮಾಡಿ ರೋಲ್ ಮಾಡಿ ಕೂಡ ಕ್ವಿಲ್ಲಿಂಗ್ ಮಾಡಬಹುದು. ಪ್ರತಿ ಬಟ್ಟೆಗೂ ಮ್ಯಾಚಿಂಗ್ ಬಳೆ, ಓಲೆ, ಸರ ಮನೆಯಲ್ಲೇ ಕೈಯಿಂದ ಮಾಡಿ ಹಾಕಿಕೊಳ್ಳುವ ಸಂಬ್ರಮವೇ ಅದ್ಭುತ. ಐಪ್ಯಾಡ್ ಇಂದ ಅರ್ಧ ಗಂಟೆ ಬಿಡುವು ತೆಗೆದುಕೊಂಡು ಕ್ವಿಲ್ಲಿಂಗ್ ಮಾಡುವ ಅಕ್ಕ-ಪಕ್ಕ ಟೀನ್ಸ್ ನೋಡಿದಾಗ, ಪಾಶ್ಚಾತ್ಯ ದೇಶಗಳಿಂದ ಬರೀ ಕೆಟ್ಟದ್ದೇ ಕಲಿಯುತ್ತಾರೆ ಎನ್ನುವವರ ಬಾಯಿ ಮುಚ್ಚಿಸುವಂತಹ ಕಲೆ ಕ್ವಿಲ್ಲಿಂಗ್. ನೀವೂ ಪ್ರಯೋಗ ಮಾಡಿ ನೋಡುತ್ತೀರ ತಾನೇ ಎಷ್ಟು ಸುಲಭ ಹಾಗು ಕಡಿಮೆ ಖರ್ಚಿನಲ್ಲಿ ರೆಡಿ ಆಗುತ್ತೆ ವೈವಿಧ್ಯಮ ಆಭರಣಗಳು ಅಂತ? 
 

Rating
No votes yet

Comments

Submitted by karunaadakannadati Mon, 01/04/2016 - 07:51

In reply to by ಗಣೇಶ

ಕಾಲೇಜಿಗೆ ಹೋಗುವ‌ ಟೀನ್ಸ್ ಗೆ ಆಭರಣಗಳು ತೆಕ್ಕೊಡದಿದ್ದರೆ, ಅವರೇ ಟೈಮ್ ಮಾಡ್ಕೊಳಿಂಗ್ :)