' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ಕಳೆದ ಶತಮಾನದ ಆರನೆ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದಿಂದ ಮೋಡಿ ಮಾಡಿದ ಹಿಂದಿ ಚಲನಚಿತ್ರರಂಗದ ಸುಂದರಿ ಸಾಧನಾ ಇನ್ನು ಬರಿ ನೆನಪು ಮಾತ್ರ. ತೀವ್ರವಾದ ಕ್ಯಾನ್ಸರ್ ಕಾಯಿಲೆಯಿಂದಾಗಿ ನಿಧನಳಾಗಿದ್ದಾಳೆ. ತನ್ನ 74 ವರ್ಷದ ಸುಧೀರ್ಘ ಪಯಣದಲ್ಲಿ ಕಾಯಿಲೆಯ ತೀವ್ರತೆಯಿಂದಾಗಿ ತನ್ನ ಫ್ಲಾಟ್‍ನಲ್ಲಿ ಏಕಾಂಗಿಯಾಗಿ ಜೀವಿತಾವಧಿ ಕಳೆದು ಬದುಕಿಗೆ ವಿದಾಯ ಹೇಳಿದ್ದಾಳೆ. ತನ್ನ ರೊಮ್ಯಾಂಟಿಕ್ ಪಾತ್ರಗಳಿಂದ ಅಭಿಮಾನಿಗಳನ್ನು ರಂಜಿಸಿದ್ದ ಆಕೆ ಹಿಂದಿ ಚಿತÀ್ರರಂಗದ ದುರಂತ ನಾಯಕಿಯ ಪಾತ್ರದಂತೆ ನಿಜ ಜೀವನದಲ್ಲಿ ಅದೂ ತನ್ನ ಕೊನೆಯ ದಿನಗಳಲ್ಲಿ ಸಂಯಮದಿಂದ ಬದುಕಿ ಇಹಲೋಕ ಯಾತ್ರೆಯನ್ನು ಮುಗಿಸಿದ್ದು ಮನ ಮಿಡಿವ ಸಂಗತಿ. ಹಲೆಯ ತಲೆಮಾರಿನ ಎಲ್ಲ ನಟ ನಟಿಯರು ಒಬ್ಬೊಬ್ಬರಾಗಿ ನಮ್ಮನ್ನಗಲಿ ಹೋಗುತ್ತಿದ್ದಾರೆ. ಅವರು ತಮ್ಮ ನಟನಾ ಕೌಶಲ್ಯದಿಂದ ನಿರ್ಮಿಸಿದ ಸುಂದರ ಗಂಧರ್ವ ಲೋಕದಿಂದ ನಿರ್ಗಮಿಸುತ್ತಿದ್ದಾರೆ. ಇದು ಜಗದ ನಿಯಮವಾದರೂ ಅವರನ್ನು ಆರಾಧಿಸಿ ತಮ್ಮ ಹೃದಯ ಸಿಂಹಾಸನದಲ್ಲಿ ಸ್ಥಾಪಿಸಿಕೊಂಡಿದ್ದ ಅವರ ಅಭಿಮಾನಿಗಳಿಗೆ ಶಾಶ್ವತ ವಿಯೋಗದ ನೋವು. ಸಾಧನಾಳ ನಿರೀಕ್ಷಿತ ಸಾವು ಸಹ ಆ ಸಾಲಿಗೆ ಸೇರುವಂತಹುದು.
ಸಾಧನಾಳ ನಿಜ ಹೆಸರು ಸಾಧನಾ ಶಿವದಾಸನಿ, ಆಕೆಯ ತಂದೆ ಹರಿ ಶಿವದಾಸನಿ ಆತ ಸಹ ಕೆಲ ಹಿಂದಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾನೆ. ಈಕೆ 1941 ನೇ ಇಸವಿ ಸಪ್ಟಂಬರೆ 2 ರಂದು ಸ್ವಾತಂತ್ರ ಪೂರ್ವದ ಸಿಂಧ ಪ್ರಾಂತದ ಕರಾಚಿಯ;ಲ್ಲಿ ಜನಿಸಿದಳು. ಬಾಲ್ಯದಿಂದಲೆ ಆಕೆಗೆ ಅಭಿನಯದ ಕಡೆಗೆ ಒಲವು. ಕಾರಣ ತನ್ನ ಹದಿನೈದನೆ ವಯಸ್ಸಿನಲ್ಲಿ ಆಕೆ ರಾಜಕಪೂರ ಅಭಿನಯದ ಶ್ರೀ 420 ಚಿತ್ರದಲ್ಲಿ ಸಹ ನಟಿ ನಾದಿರಾ ಮೇಲೆ ಚಿÀತ್ರಿಸಲಾದ ‘ಮುಡ ಮುಡಕೆ ನ ದೇಖ ಮುಡ ಮುಡಕೆ’ ನೃತ್ಯ ಸನ್ನಿವೇಶದಲ್ಲಿ ಸಹ ನರ್ತಕಿಯರಲ್ಲಿ ಒಬ್ಬಳಾಗಿ ನಟಿಸಿದ್ದಾಳೆ. ಮುಂದೆ ಅದೇ ಸಾಧನಾ ಖ್ಯಾತ ನಟ ರಾಜಕಪೂರ್‍ಗೆ ನಾಯಕಿಯಾಗಿ ದುಲ್ಹಾ ದುಲ್ಹನ್ ಚಿತ್ರದಲ್ಲಿ ನಟಿಸಿದಳು. ಸಾಧನಾ ಹಿಂದಿ ಚಿತ್ರರಂಗದಲ್ಲಿ ನಾಯಕಿಯಾಗ ಬೇಕೆಂಬ ಕನಸು ಹೊತ್ತು ಮುಂಬೈಗೆ ಬಂದವಳು. ಆಗಿನ ಕಾಲದ ಸುಂದರ ಭಿನ್ನ ನಟನಾ ಶೈಲಿಯ ಮೂಲಕ ಜನಮನ ಗೆದ್ದಿದ್ದ ದೇವ ಆನಂದನಲ್ಲಿಗೆ ಅವಕಾಶ ಕೇಳಿ ಹೋದಾಗ ಆಕೆಯ ಪೀಚು ದೇಹವನ್ನು ನೋಡಿದ ಆತ ಸ್ವಲ್ಪ ಕಾಲ ಕಾಯುವಂತೆ ಸಲಹೆ ನೀಡುತ್ತಾನೆ. ಆದರೆ ಮುಂದೆ 1960 ರಲ್ಲಿ ಆರ್.ಕೆ.ನಯ್ಯರ್ ತನ್ನ ಬ್ಯಾನರಿನಲ್ಲಿ ಆತನದೆ ನಿರ್ಮಾಣ ಮತ್ತು ನಿರ್ದೇಶನದ ಚಿತ್ರ ‘ಲವ್ ಇನ್ ಸಿಮ್ಲಾ’ ದಲ್ಲಿ ಅವಕಾಶ ನೀಡುತ್ತಾನೆ. ಆಕೆಯ ಜೊತೆ ನಟಿಸಿದ ನಟ ಜಾಯ್ ಮುಖರ್ಜಿ. ಸಿಮ್ಲಾ ಮತ್ತು ಕಾಶ್ಮೀರ್‍ಗಳ ಸುಂದರ ಹೊರಾಂಗಣದಲ್ಲಿ ಚಿತ್ರಣಗೊಂಡ ಈ ಚಿತ್ರ ಹೊಸ ಜೋಡಿ ಓ.ಪಿ.ನಯ್ಯರ್‍ನ ಮಾಧುರ್ಯಪೂರ್ಣ ಸಂಗೀತ ಸಂಯೋಜನೆಗಳಿಂದಾಗಿ ಗಮನ ಸೆಳೆಯುತ್ತದೆ. ಅದು ಆ ವರ್ಷದ ಶ್ರೇಷ್ಟ ಯಶಸ್ವಿ ಹತ್ತು ಚಿತ್ರಗಳ ಪೈಕಿ ಇದೂ ಒಂದÉ್ರಂದು ಪರಿಗಣಿಸಲ್ಪÀಡುತ್ತದೆ.
ಮುಂದೆ ಖ್ಯಾತ ನಿರ್ದೇಶಕ ಬಿಮಲ್ ರಾಯ್‍ರ ‘ಪರಖ’ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮನೊಜ್ಞ ಅಭಿನಯ ನೀಡಿ ತಾನೊಬ್ಬ ಶ್ರೇಷ್ಟ ನಟಿ ಉದಯಿಸಿದ್ದೇನೆ ಎಂದು ತೊರಿಸಿ ಕೊಡುತ್ತಾಳೆ. 1961 ರಲ್ಲಿ ‘ನವ ಕೇತನ’ ದವರ ನಿರ್ಮಾಣದ ಚಿತ್ರ ‘ಹಮ್ ದೋನೋ’ದಲ್ಲಿ ಅವಕಾಶ ದೊರೆಯುತ್ತದೆ. ದೇವ ಆನಂದನ ದ್ವಿಪಾತ್ರದ ಅಭಿನಯವಿದ್ದ ಈ ಚಿತ್ರದಲ್ಲಿ ಒಂದು ಪಾತ್ರಕ್ಕೆ ನಂದಾ ಜೋಡಿಯಾಗಿದ್ದರೆ ಇನ್ನೊಂದು ಪಾತ್ರಕ್ಕೆ ಸಾಧನಾ ಜೋಡಿ ಯಾಗುತ್ತಾಳೆ. ಚಿತ್ರ ಅದ್ಭುತ ಯಶಸ್ಸು ಕಾಣುತ್ತದೆ. ಮುಂದೆ ಆಕೆ ತನ್ನ ವತ್ತಿ ಬದುಕಿನಲ್ಲಿ ಹಿಂದಿರುಗಿ ನೋಡಿದ್ದೆ ಇಲ್ಲ. ಇದೇ ಚಿತ್ರ 2011 ರಲ್ಲಿ ವರ್ಣದಲ್ಲಿ ಮರು ತೆರೆ ಕಾಣುತ್ತದೆ. ಈ ಚಿತ್ರದಲ್ಲಿ ದೇವ ಮತ್ತು ಸಾಧನಾರ ಮೇಲೆ ಚಿತ್ರೀಕರಿಸಲಾದ ‘ಅಭಿ ನ ಜಾವೋ ಛೋಡಕರ್ ಅಭಿ ಏ ದಿಲ್ ಭರಾ ನಹೀ’ ಒಂದು ಸಾರ್ವಕಾಲಿಕ ಮನ ಮುಟ್ಟುವ ಗೀತೆ. 1962 ರಲ್ಲಿ ಕಿಶೋರ್ ಕುಮಾರ ಜೊತೆಗೆ ‘ಮುನೀಮ್‍ಜಿ’ ಎಂಬ ಹಾಸ್ಯ ಪ್ರಧಾನ ಚಿತ್ರದಲ್ಲಿ ಅಭಿನಯಿಸಿ ಎಂತಹ ಪಾತ್ರಗಳಲ್ಲೂ ತಾನು ಅಭಿನಯಿಸಬಲ್ಲೆ ಎಂಬುದನ್ನು ಸಾಬೀತು ಪಡಿಸುತ್ತಾಳೆ. ಅಲ್ಲದೆ ಅದೆ ವರ್ಷ ಹೃಷಿಕೇಶ ಮುಖರ್ಜಿ ನಿರ್ದೇಶನದ ‘ಅಸಲಿ ನಕಲಿ’ ಚಿತ್ರದಲ್ಲಿ ದೇವ ಆನಂದ ಜೊತೆ ಮತ್ತು ರಾಜ್ ಖೋಸ್ಲಾ ನಿರ್ದೇಶನದ ‘ಏಕ ಮುಸಾಫಿರ್ ಏಕ್ ಹಸೀನಾ’ ಚಿತ್ರದಲ್ಲಿ ಜಾಯ್ ಮುಖರ್ಜಿ ಜೊತೆ ನಟಿಸುತ್ತಾಳೆ.
1963 ರಲ್ಲಿ ಹೆಚ್.ಎಸ್.ರಾವಲ್ ನಿರ್ಮಾಣ ನಿರ್ದೇಶನದ ಚಿತ್ರ ‘ಮೆರೆ ಮೆಹಬೂಬ್’ ಚಿತ್ರದಲ್ಲಿ ರಾಜೇಂದ್ರ ಕುಮಾರ ಜೊತೆಗೆ ಅಭಿನಯಿ ಸುತ್ತಾಳೆ. ಸತ್ವಪೂರ್ಣ ಕಥೆ ನೌಶಾದರ ಮನಿ ಮಿಡಿವ ಸಂಗೀತ ಸಂಯೋಜನೆ ಪಾತ್ರಧಾರಿಗಳ ಅಭಿನಯದಿಂದಾಗಿ ಚಿತ್ರ ಅಭೂತಪೂರ್ವ ಯಶಸ್ಸು ಪಡೆಯುತ್ತದೆ. 1964 ರಲ್ಲಿ ಮತ್ತೆ ರಾಜ್ ಖೋಸ್ಲಾ ನಿರ್ದೇಶನದ ‘ ವೋ ಕೌನ್ ಥಿ’ ಚಿತ್ರದಲ್ಲಿ ಮನೋಜ ಕುಮಾರ ಶಶಿಕಲಾ ಜೊತೆಗೆ ಅಭಿನಯಿಸುತ್ತಾಳೆ. ಮದನ ಮೋಹನರ ಸುಮಧುರ ರಾಗ ಸಂಯೋಜನೆ ಲತಾ ಹಾಡಿದ ‘ನೈನಾ ಬರಸೆ ರಿಮ್ ಝಿಮ್ ರಿಮ್ ಝಿಮ್’ ಮತ್ತು ಆಶಾ ಹಾಡಿದ ‘ಲಗಜಾ ಗಲೆ’ ಹಾಡುಗಳು ಕೇಳುಗನÀನ್ನು ಮೋಡಿ ಮಾಡುತ್ತವೆ. ಈ ಚಿತ್ರದಲ್ಲಿ ಸಾಧನಾ ಸಂಧ್ಯಾ ಮತ್ತು ಸೀಮಾ ಎಂಬ ದ್ವೀಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದು ಉತ್ತಮ ನಾಯಕಿ ನಟಿ ಎಂದು ಫಿಲಂ ಫೇರ್ ಪÀ್ರಶಸ್ತ್ತಿ ಪಡೆಯುತ್ತಾಳೆ. 1965 ರಲ್ಲಿ ಬಿಆರ್ ಛೋಪ್ರಾ ಬ್ಯಾನರಿನ ಬಹು ತಾರಾಗಣದ ಚಿತ್ರÀ ‘ವಖ್ತ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾಳೆ. ಇದರಲ್ಲಿ ನಾಯಕನಾಗಿ ಸುನಿಲ್‍ದತ್ ಪೂರಕ ಪಾತ್ರಗಳಲ್ಲಿ ರಾಜಕುಮಾರ, ಬಲರಾಜ ಸಹಾನಿ, ಅಚಲಾ ಸಚದೇವ, ಶಶಿ ಕಪೂರ, ಶರ್ಮಿಳಾ ಟ್ಯಾಗೋರ್, ಮದನಪುರಿ, ಶಶಿಕಲಾ ನಟಿಸಿದ್ದಾರೆ. ಈ ಚಿತ್ರದಲ್ಲಿನ ತನ್ನ ಅಭಿನಯಕ್ಕಗಿ ಆಕೆ ಮತ್ತೆ ಫಿಲಂ ಫೇರ್ ಪ್ರಶಸ್ತಿ ಪಡೆಯುತ್ತಾಳೆ. ಮುಂದೆ ಅದೇ ರಾಜ್ ಖೋಸ್ಲಾ ನಿರ್ದೇಶನದ ‘ಮೆರಾ ಸಾಯಾ’ ಚಿತ್ರದಲ್ಲಿ ಪುನಃ ಸುನಿಲ್‍ದತ್ ಜೊತೆ ಅಭಿನಯಿಸುತ್ತಾಳೆ. ಇದು ಸಹ ಜನ ಮನ್ನಣೆ ಪಡೆದ ಚಿತ್ರ. ಈ ಚಿತ್ರದಲ್ಲಿ ಮದನ್ ಮೋಹನ್ ರಾಗ ಸಂಯೋಜನೆಯಲ್ಲಿ ಲತಾ ಹಾಡಿದ ‘ನಯನೋ ಮೆ ಬದರಾ ಛಾಯೆ ಬಿಜಲೀ ಸೀ ಛಮಕೆ ಹಾಯೆ’ ಮತ್ತು ‘ತೂ ಜಂಹಾ ಜಂಹಾ ಚಲೇಗಾ ಮೇರಾ ಸಾಯಾ ಸಾಥ ಹೋಗಾ’ ಮತ್ತು ಆಶಾ ಹಾಡಿದ ‘ಝೂಮಕಾ ಗಿರಾರೆ ಬರೇಲಿ ಕಿ ಬಾಜಾರ್ ಮೆ’ ಗೀತೆಗಳು ಸಾರ್ವಕಾಲಿಕ ಗೀತೆಗಳಾಗಿವೆ. ಈ ಹಾಡಿಗೆ ನೃತ್ಯ ಸಂಯೋಜನೆಯನ್ನು ಸೋಹನ್‍ಲಾಲ್ ಮಾಡಿದ್ದು ಅವರಿಗೆ ಸಹಾಯಕಳಾಗಿ ಸರೋಜ್ ಖಾನ್ ಇದ್ದಳು ಎಂಬುದು ಗಮನಿಸ ಬೇಕಾದ ಸಂಗತಿ. ಅದೇ ರೀತಿ ಮನೋಜ ಕುಮಾರ ಜೊತೆಗೆ ಅನಿತಾ ಚಿತ್ರದಲ್ಲಿ ಅಭಿನಯಿಸುತ್ತಾಳೆ.
ಮುಂದೆ ಥೈರಾಯಿಡ್ ಕಾಯಿಲೆಗೆ ತುತ್ತಾದ ಈಕೆ ಅಮೇರಿಕಾದ ಬೋಸ್ಟನ್ ಆಸ್ಪತ್ರೆಯಲ್ಲಿ ಪಡೆಯಲು ಹೋಗುತ್ತಾಳೆ. ಕಾರಣ 1967-68 ರಲ್ಲಿ ಆಕೆಯ ಅಭಿನಯದ ಯಾವ ಚಿತ್ರಗಳೂ ತೆರೆಗೆ ಬರುವುದಿಲ್ಲ. 1969 ರಲ್ಲಿ ಸಂಜಯ್ ಜೊತೆಗೆ ಆರ್.ಕೆ.ನಯ್ಯರ ನಿರ್ದೇಶನದ ‘ಇಂತಕಾಮ್’, ರಮಾನಂದ ಸಾಗರ ನಿರ್ಮಾಣ ನಿರ್ದೇಶನದ ದ’ ಏಕ್ ಫೂಲ್ ದೋ ಮಾಲಿ’ ಚಿತ್ರUಳÀಲ್ಲಿ ಅಭಿನಯಿಸುತ್ತಾಳೆ. ಎರಡೂ ಚಿತ್ರಗಳೂ ಯಶಸ್ಸು ಪಡೆಯುತ್ತವೆ. 1971 ರಲ್ಲಿ ‘ಆಪ್ ಆಯೆ ಬಹಾರ್ ಆಯೆ’, 1972 ರಲ್ಲಿ ರಾಜೇಶ ಖನ್ನಾ ಜೊತೆಗೆ ‘ದಿಲ್ ದೌಲತ್ ದುನಿಯಾ’ ಚಿತ್ರಗಳಲ್ಲಿ ನಟಿಸುತ್ತಾಳೆ. 1974 ರಲ್ಲಿ ‘ಗೀತಾ ಮೇರಾ ನಾಮ್’ ಚಿತ್ರದಲ್ಲಿ ನಟಿಸಿ ನಿರ್ದೇಶಿಸುತ್ತಾಳೆ. ಅಲ್ಲದೆ 1959 ರಲ್ಲಿ ‘ಅಬಾನಾ’ ಮತ್ತು 1968 ರಲ್ಲಿ ‘ಸ್ತ್ರೀ’ ಎಂಬ ಹೆಸರಿನ ಪಂಜಾಬಿ ಮತ್ತು ಓರಿಯಾ ಚಿತ್ರಗಳಲ್ಲಿ ನಟಿಸುತ್ತಾಳೆ. ಅವು ಆಕೆಯ ಅಭಿನಯದ ಕ್ಲಾಸಿಕ್ ಚಿತ್ರಗಳೆಂದು ಹೆಸರು ಪಡೆದಿವೆ. ಆಕೆ ತನ್ ವೃತ್ತಿ ಬದುಕಿನಲ್ಲಿ ಸುಮಾರು 33 ಚಿತ್ರಗಳಲ್ಲಿ ಅಭಿನಯಿಸಿದ್ದುÁ ಪೈಕಿ 27 ಚಿತ್ರಗಳು ಯಶಸು ಪಡೆದ ಚಿತ್ರಗಳು.
1960 ರಲ್ಲಿ ಲವ್ ಇನ್ ಸಿಮ್ಲಾ ಚಿತ್ರದ ಚಿತ್ರೀಕರಣದ ವೇಳೆ ಆರ್.ಕೆನಯ್ಯರ್ ಮತ್ತು ಸಾಧನಾರ ಮಧ್ಯೆ ಪ್ರೇಮಾಂಕುರವಾಗುತ್ತದೆ. ಆದರೆ ಸಾಧನಾಗೆ ಇನ್ನೂ ಸಣ್ಣ ವಯಸ್ಸು ಎಂದು ಆಕೆಯ ತಂದೆ ಒಪ್ಪಿಗೆ ಸೂಚಿಸುವುದಿಲ್ಲ. ಮುಂದೆ 1966ರ ಮಾರ್ಚ ತೀಮಗಳ ಏಳರಂದು ಅವರಿಬ್ಬರೂ ಮದುವೆ ಯಾಗುತ್ತಾರೆ. ಅವರ ದಾಂಪತ್ಯಕ್ಕೆ ಮಕ್ಕಳಾಗುವುದಿಲ್ಲ ಅದೊಂದು ಕರೆತಯಾಗಿ ಅವರನ್ನು ಕಾಡುವುದಿಲ್ಲ. ಮುಂದೆ ಹೈಪರ್ ಥೈಯೋರೈಡಿನಂ ಕಾಯಿಲೆ ತೀವ್ರವಾಗಿ ಕಾಡಿ ಎರಡೂ ಕಣ್ಣುಗಳಿಗೆ ತೊಂದರೆಯಾಗುತ್ತದೆ ಆಕೆಯ ವಿಪರೀತ ದೇಹ ತೂಕವನ್ನು ಪಡೆಯುತ್ತದೆ. ಆ ಸುಂದರ ನಟಿ ಮತ್ತೆ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅನಾಮಿಕಳಂತೆ ಬಾಳಿದಳು. 1995 ರಲ್ಲಿ ಆಕೆಯ ಪತಿ ನಯ್ಯರ್ ಅಸ್ತಮಾ ಕಾಯಿಲೆಯಿಂದಾಗಿ ನಿಧನವಾಗುತ್ತಾನೆ. ಮುಂದೆ ಆಕೆಯದು ಒಂಟಿ ಬದುಕು. ಆಕೆ ತನ್ನ ಚಿತ್ರಗಳನ್ನು ತೆಗೆದು ಪತ್ರಿಕೆಗಳಲ್ಲಿ ಪ್ರಕಟಿಸಲು ಅವಕಾಶ ಕೊಡುವುದಿಲ್ಲ ತನ್ನ ನಟನಾ ಬದುಕಿನ ಸುಂದರ ಚಿತ್ರ ಸಿನೆ ಪ್ರಿಯರ ಮನದಲ್ಲಿದೆ ಅದಕ್ಕೆ ತಾನು ಧಕ್ಕೆ ತರಲು ಇಚ್ಚಿಸುವುದಿಲ್ಲ ಎಂದು ಸ್ಪಷ್ಟ ನಿಲುವು ತಳೆದು ಬಿಡುತ್ತಾಳೆ. ಆಕೆ ತನ್ನ ಇಳಿವಯದಲ್ಲಿ ಮುಂಬೈನ ಸಾಂತಾಕೃಜ್‍ನಲ್ಲಿ ಆಶಾ ಭೋಸಲೆ ಮಾಲಿಕತ್ವದ ಅಪಾರ್ಟಮೆಂಟ್ ಒಂದರಲ್ಲಿ ಸಾಯುವ ಕ್ಷಣದ ವರೆಗೂ ಇದ್ದಳು. ತನ್ನ ಇಳಿ ವಯದಲ್ಲಿ ಆಕೆ ತನ್ನ ಸೋದರ ಸಂಬಂಧಿ ಬಬಿತಾಳ ಜೊತೆ ಅಷ್ಟಾಗಿ ಒಡನಾಟವಿಟ್ಟು ಕೊಳೂವುದಿಲ್ಲ, ಆದರೆ ತನ್ನ ಜಮಾನಾದ ನಟಿಯರಾದ ಆಶಾ ಪಾರೇಖ, ವಹಿದಾ ರೆಹಮಾನ್ ನಂದಾ ಮತ್ತು ಹೆಲೆನ್ ಜೊತೆಗೆ ಒಡನಾಟವಿಟ್ಟು ಕೊಂಡಿದ್ದಳು.
ಸಾಧನಾ ಒಂದು ಮರೆಯಲಾಗದ ಸುಂದರ ಕನಸÀು. ಈಕೆ ತನ್ನ ಅಭಿನಯ ಕಾಲದಲ್ಲಿ ಎಲ್ಲ ತರಹದ ಉಡುಪುಗಳಲ್ಲಿ ಕಾಣಿಸಿ ಕೊಂಡರೂ ಆಕೆಯ ಪ್ರೀತಿಯ ಉಡುಪು ಚೂಡಿದಾರ, ಕುರ್ತಾ ಮತ್ತು ಸಲ್ವಾರ್ ಕಮೀಜ್ ಆಕೆಗೆ ವಿಶೇಷವಾಗಿ ಒಪ್ಪುತ್ತಿದ್ದವು. ಅವಳ ಫ್ಯಾಷನ್ ಡಿಸೈನರ್ ಆಸ್ಕರ್ ವಿಜೇತೆ ಭಾನು ಅತ್ತಯ್ಯ. ಆಕೆ ತನ್ನ ಹಣೆಯ ಮೇಲೆ ವಿಶೇಷ ವಿನ್ಯಾಸದಲ್ಲಿ ಹರಡಿ ಕೊಂಡಿರುತ್ತಿದ್ದ ಕೇಶ ವಿನ್ಯಾಸ ಸಾಧನಾ ಹೇರ್ ಸ್ಟೈಲ್ ಎಂದು ಹೆಸರು ಪಡೆದಿತ್ತು. ಅದು ಆಕೆಯ ಮುಖಕ್ಕೆ ಒಂದು ವಿಶೇಷ ಮೆರುಗನ್ನು ನೀಡಿತ್ತು. ಆಕೆ ಈ ವಿಷಯದಲ್ಲಿ ಆಗಿನ ಕಾಲದ ಹಾಲಿವುಡ್‍ನ ಖ್ಯಾತ ತಾರೆ ಆಡ್ರಿ ಹೆಪ್‍ವರ್ನಳ ಅನುಕರಣೆ ಮಾಡುತ್ತಾಳೆ ಎಂಬ ಗಾಸಿಪ್ ಸಹ ಇತ್ತು.. ಅದು ಅಷ್ಟು ನಿಜವಾಗಿರಲಿಲ್ಲ ಅವಳ ಕೇಶ ವಿನ್ಯಾಸವೆ ಹಾಗಿತ್ತು. 2002 ರಲ್ಲಿ ಆಕೆಗೆ ಐಐಎಫ್‍ಎ ಲೈಫ್ ಟೈಮ್ ಅಚೀವ್‍ಮೆಂಟ್ ಅವಾರ್ಡ ನೀಡಿ ಗೌರವಿಸಿತು.
ಆ ಕಾಲದ ಜನಪ್ರಿಯ ತಾರೆಯರಾದ ವೈಜಯಂತಿ ಮಾಲಾ, ವಹೀದಾ ರೆಹಮಾನ್, ಆಶಾ ಪಾರೇಖ, ಸಾಯಿರಾಬಾನು, ನಂದಾ, ಶರ್ಮಿಳಾ ಟ್ಯಾಗೋರ್ ಮುಂತಾದ ಖ್ಯಾತನಾಮರ ಮಧ್ಯೆ ತನ್ನದೆ ಛಾಪನ್ನು ಮೂಡಿಸಿ ಜನಮನ ಗೆದ್ದಿದ್ದ ನಟಿ ಈಕೆ. ವೈಜಯಂತಿ ಮಾಲಾÀಳನ್ನು ಹಿಂದಿ ಚಿತ್ರರಂಗದ ಸೋಫಿಯಾ ಲಾರೆನ್ ಮತ್ತು ಸಾಧನಾಳನ್ನು ಎಲಿಜಬೆತ್ ಟೇಲರ್ ಎಂದು ಸಿನೆ ಪ್ರಿಯರು ಆರಾಧಿಸುತ್ತಿದ್ದರು. ಈಕೆ ಆ ಕಾಲದ ಎಲ್ಲ ಖ್ಯಾತ ನಟರ ಜೊತೆಗೆ ನಟಿಸಿದ್ದಳು.. ಆದರೆ ದಿಲೀಪ ಕುಮಾರ ಜೊತೆ ಅಭಿನಯಿಸಬೇಕೆಂದಿದ್ದ ಆಕೆಯ ಆಶೆ ಕೈಗೂಡದೆ ಹೋದುದು ಒಂದು ಬೇಸರದ ಸಂಗತಿ. ಆಕೆ ತನ್ನ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಸಂಘರ್ಷ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಬಂದಿದ್ದುದು ಕಾರಣಾಂತರದಿಂದ ಆ ಪಾತ್ರ ವೈಜಯಂತಿಮಾಲಾಳ ಪಾಲಿಗೆ ಹೋಯಿತು. ವಯಸ್ಸಾದಂತೆ ಆಕೆ ತೆರೆಯ ಹಿಂಬದಿಗೆ ಸರಿದು ಹೋದಳು. ಆ ಜಮಾನಾದ ಪ್ರೇಕ್ಷಕರಿಗೆ ಸಾಧನಾ ಒಂದು ಸುಂದರ ನೆನಪು.
(ಚಿತ್ರಕೃಪೆ ;ಸಾಧನಾ ಶಿವದಾಸನಿ ಫೋಟೊ ಗ್ಯಾಲರಿಯಿಂದ }
ಹ.ಅ.ಪಾಟೀಲ.
Comments
ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ಪಾಟೀಲರಿಗೆ ನಮಸ್ಕಾರಗಳು
ಖ್ಯಾತ ತಾರೆ ಸಾಧನ ಅವರ ಕುರಿತಾದ ಲೇಖನ ಸಾಂರ್ದಭಿಕವಾಗಿದ್ದು ಇನ್ನಷ್ಟು ವಿವರದಿಂದ ಕೂಡಿದ್ದರೆ ನಮಗೆ ಅವರ ಅಭಿನಯದ ಚಿತ್ರಗಳ ನೆನಪು ಮನಸ್ಸಿನಲ್ಲಿ ಮೂಡಿ ಸಂತೋಷ ವಾಗುತ್ತಿತ್ತು. ಚಿತ್ರಗಳ ಸಂಗೀತವಂತೂ ಎಷ್ಟುಸಲ ಕೇಳಿದರೂ ಸಾಲದು. ಸಾಧನ ಹೇರ‍್ಕಟ್ ಸ್ಟೈಲ್ ಇಂದು ಸಹ ಕೇಳುತ್ತೇವೆ.
ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ
In reply to ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು ' by swara kamath
ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ರಮೇಶ ಕಾಮತರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ನಮ್ಮ ಮಾಧ್ಯಮಿಕ ಶಾಲಾದಿನಗಳಲ್ಲಿ ಸಾಧನಾ ಹೆಸರು ಉತ್ತುಂಗದಲ್ಲಿತ್ತು, ಆಕೆಯ ಅಭಿನಯದ ರಾಜಕುಮಾರ,ವಖ್ತ್, ಮೇರಾ ಸಾಯಾ ಮುಂತಾದ ಚಿತ್ರಗಳಲ್ಲಿ ಅದ್ಭುತ ಆಭಿನಯ ನೀಡಿದ್ದಳು. ಅದು ಆಕೆಯ ಫಿಲ್ಮಿ ಅಭಿನಯದ ಉತ್ತುಂಗ ಕಾಲ, ತಮ್ಮ ಅಭಿಪ್ರಾಯ ನೋಡಿದ ನಂತರ
ಆಕೆಯು ಮಾಡಿದ್ದ ಮೋಡಿಯ ಬಗೆಗೆ ಇನ್ನಷ್ಟು ಬರೆಯ ಬಹುದಿತ್ತು ಎನಿಸಿತು, ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ಸಾಧನಾ ನಮ್ಮಕಾಲೇಜು ದಿನಗಳ ಜನಪ್ರಿಯ ನಾಯಕಿಯಾಗಿದ್ದರು. ಮಧುಬಾಲಾ, ವೈಜಯ೦ತಿಮಾಲಾ
ಇತ್ಯಾದಿ ನಾಯಕಿಯರಿಗೆ ಹೋಲಿಸಿದರೆ ಸಾಧನಾ ಮತ್ತು ನೂತನ ಅವರಿಗೆ ಇನ್ನೂ ಕಾಲೇಜು ಹುಡುಗಿಯ
ಖಳೆ ಇದ್ದಿತು. ದೇವ ಆನ೦ದರ ಜೊತೆನಟಿಸಿದ ' ಹಮ್ ದೋನೋ' ನಲ್ಲಿ ಸಾಧನಾ ಜೊತೆಯ ಹಾಡು' ಅಭಿ ನಾ
ಜಾವೊ ಛೋಡಕರ' ಮರೆಯಲಾಗುವುದಿಲ್ಲ
In reply to ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು ' by Palahalli Vishwanath
ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ಪಾಲಹಳ್ಳಿ ವಿಶ್ವನಾಥರವರಿಗೆ ವಂದನೆಗಳು
ತಮ್ಮ ಆಭಿಪ್ರಾಯ ಸರಿ ವೈಜಯಂತಿ ಮಾಲಾಳಿಗಿಂತ ಮಧುಬಾಲಾ ಹಳಬಳು, ಮೀನಾ ಕುಮಾರಿ ಮಧುಬಾಲಾ ನರ್ಗಿಸ್ ಮಾಲಾ ಸಿನ್ಹಾ ಬೀನಾ ರಾಯ್ ನಲಿನಿ ಜಯವಂತ ನಾದಿರಾ ಒಂದು ಕಾಲದ ಪ್ರಸಿದ್ಧ ನಾಯಕಿಯರು. ನಂತರದ ಜಮಾನಾದ ನಾಯಕಿಯರು ವೈಜಯಂತಿ ಮಾಲಾ ಪದ್ಮಿನಿ ನೂತನ ಸಾಧನಾ ಮುಂತಾದವರು, ಆ ಕಾಲದ ನಾಯಕಿಯರೆಂದರೆ ಮಧುರ ಗೀತೆಗಳ ಜೊತೆಗೆ ನೆನಪಿನಲ್ಲುಳಿಯುವ ನಟ ನಟಿಯರು. ಪ್ರತಿಕ್ರಿಯೆಗೆ ಧನ್ಯವಾದಗಳು.
In reply to ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು ' by Palahalli Vishwanath
ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ಪಾಲಹಳ್ಳಿ ವಿಶ್ವನಾಥ ಸರ್ ವಂದನೆಗಳು.. ನಿಮ್ಮ ಪ್ರತಿಕ್ರಿಯೆ ಸರಿಯಾಗಿದೆ. ನಮ್ಮ ಕಡೆ ಸಾಧನಾ ಸ್ಟೈಲ್ ಎಂದರೆ ತುಂಬಾ ಪ್ರಸಿದ್ಧಿ ಪಡೆದಿದ್ದಿತು. ಪ್ರತಿಯೊಬ್ಬರೂ ತಮ್ಮ ಮಕ್ಕಳಲ್ಲಿ ಸಾಧನಾರ ನಗೆ ಕಾಣಲು ಅವರ ಶೈಲಿಯನ್ನು ಅನುಸರಿಸುತ್ತಿದ್ದರು. ಅಷ್ಟೊಂದು ಫೇಮಸ್ ನಟಿಯಾಗಿದ್ದರು ಅವರು. ಹನುಮಂತ ಅನಂತ ಪಾಟೀಲ್ ಅವರಿಗೂ ಧನ್ಯವಾದಗಳು.
ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ಪಾಟೀಲರೆ
ಹಳೆಯ ಚಿತ್ರಗಳ ನಾಯಕ ನಾಯಕಿಯರ ಬಗ್ಗೆ ಸುಂದರ ವಿವರಣೆ ನೀಡುತ್ತೀರಿ.
ಈಗನ ಯುವ ಜನತೆಗೆ ಇವರೆಲ್ಲ ಬಹುತೇಕ ಅಪರಿಚಿತರು.
ಹಳೆಯ ಸಿನಿಮಾ ನೋಡುತ್ತಿದ್ದ ಮಂದಿಗೆ ಆಪ್ತತೆ ಮೂಡುತ್ತದೆ,
ಸಾಧನ ಬಹುಷಹ ನಾನು ಸಿನಿಮಾ ನೋಡುವ ವೇಳೆಗೆ ಆಗಲೆ ನಟಿಸುವದನ್ನು ಹೆಚ್ಚು ಕಡಿಮೆ ನಿಲ್ಲಿಸುತ್ತಿದ ಕಾಲ
...
ಸಾಮಾನ್ಯವಾಗಿ ನಟ/ನಟಿಯರ ಬಗ್ಗೆ ನಿಮ್ಮ ಬರಹ ಶ್ರದ್ದಾಂಜಲಿ ರೂಪದಲ್ಲಿ ಯೆ ಬರುತ್ತಿದೆ.
ಸಾದ್ಯವಿದ್ದಲ್ಲಿ ತಮಗೆ ಅವಕಾಶವಾದಲ್ಲಿ
ಈಗಲೂ ಇರುವ ಅಂತಹವರ ಬಗ್ಗೆ ಬರಹಗಳನ್ನು ಪ್ರಕಟಿಸಿ , ನಿಮ್ಮ ಶೈಲಿಯಲ್ಲಿ ಓದಲು ಆಸೆ.
ಅಮಿತಾಭ್ ರಾಜೇಶ್ ಖನ್ನಾ ರೇಖಾ ಜಯಲಲಿತ ಕನ್ನಡದ ರಾಜೇಶ್ ಭಾರತಿ ಲೀಲಾವತಿ
ಮುಂತಾದ ಹತ್ತು ಹಲವು ನಟ/ನಟಿಯರಿದ್ದಾರೆ
In reply to ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು ' by partha1059
ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ಪಾರ್ಥಸಾರಥಿಯವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ತಮ್ಮ ಅಭಿಪ್ರಾಯ ಸರಿ ಇದೆ, ನನ್ನ ಬಹುತೇಕ ಬರಹಗಳು ಶ್ರದ್ಧಾಂಜಲಿ ರೂಪದ ಬರಹಗಳಾಗಿರುತ್ತವೆ. ನಾನು ಈಗಾಗಲೆ ರಾಜೇಶ ಖನ್ನಾ ಬಗೆಗೆ ಬರದಿದ್ದೇನೆ ಅದೂ ಸಹ ಶ್ರದ್ಧಾಂಜಲಿ ರೂಪದ ಬರಹ. ಅವರೆಲ್ಲ ಬದುಕಿರುವಾಗಲೆ ಬರೆಯ ಬಹುದಿತ್ತು ಇನ್ನೂ ನಮ್ಮ ಮಧ್ಯೆ ಇರುವರಲ್ಲ ಎನ್ನುವ ಭಾವನೆ ಬರೆಯಲು ಮನಸು ಮಾಡಲಿಲ್ಲ. ಇನ್ನು ಬರೆದ ಉಳಿದವರ ಬಗೆಗೆ ಬರೆಯ ಬೇಕಿದೆ ಪ್ರಯತ್ನಿಸುತ್ತೇನೆ. ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ಪಾಟೀಲರಿಗೆ ನಮಸ್ಕಾರಗಳು
ಸರ್ ನಾನು ಕೂಡಾ ಒಬ್ಬ ಕಲಾ ಪ್ರೇಮಿ, ಅದರಲ್ಲೂ ಹಳೆಯ ತಲೆಮಾರಿನ ಚಲನ ಚಿತ್ರಗಳು ಹಾಗೂ ನಟರು,ನಿರ್ದೇಶಕರು ಎಂದರೇ ತುಂಬಾ ಅಚ್ಚು ಮೆಚ್ಚು ನಾನು 1987-88 ರಲ್ಲಿ ಎಸ್.ಎಸ್.ಎಲ್ .ಸಿ ವಿದ್ಯಾರ್ಥಿಯಾಗಿದ್ದಾಗ ಅಂದು ನಾವುಗಗಳು ರೇಡಿಯೋದಲ್ಲಿ ಹಲವಾರು ಹಿಂದಿ ಕನ್ನಡ ಚಿತ್ರಗಿತೆಗಳನ್ನು ಆಲಿಸುವುದು ಅಂದರೇ ತುಂಬಾ ಇಷ್ಟಾವಾದ ಹವ್ಯಾಸವಾಗಿತ್ತು. ಅಂದು ಬಹುತೆಕ ಎಲ್ಲಾ ಸಿನಿಮಾಗಳಲ್ಲಿ ಕಥೆಯಷ್ಟೆ ಸಂಗೀತ ಹಾಗೂ ಸಾಹಿತ್ಯವು ನಮ್ಮ ನಾಡು ನುಡಿ ಹಾಗೂ ನಮ್ಮ ಸಂಸ್ಕೃತಿ ಮತ್ತು ಇತಿಹಾಸವನ್ನು ನಮ್ಮ ಮುಂದೆ ತಂದು ನಿಲ್ಲಿಸಿ ಒಂದು ಕ್ಷಣ ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತಿದ್ದವು. ನಾನು ಈಗಲೂ ಹಳೆಯ ಚಿತ್ರಗಿತೆಗಳನ್ನು ಸದಾ ಕೆಳುತ್ತೇನೆ ಹಾಗೂ ನನ್ನ ಬಾಲ್ಯವನ್ನು ಮೇಲಕು ಹಾಕುತ್ತೇನೆ, ಕೆಲವೂಂದು ಪ್ರಸಂಗದಲ್ಲಿ ಹಳೆಯ ನೆನಪುಗಳು, ಹಳೆಯ ಚಿತ್ರಗೀತೆಗಳನ್ನು ಆಲಿಸುವಾಗ ನನ್ನನ್ನು ಭಾವುಕನನ್ನಾಗಿ ಮಾಡುತ್ತವೆ ಅಂತ ಶಕ್ತಿ ಚಿತ್ರ ಸಂಗೀತ ಮತ್ತು ಸಾಹಿತ್ಯದಲ್ಲಿದೆ. ತಾವು ಹಿರಿಯರು ನಮಗಿಂತಲೂ ಹಿಂದಿನ ಭಾರತಿಯ ಚಿತ್ರರಂಗವನ್ನು ಪರಿಚಯಿಸಿದ್ದಿರಿ ನಾನು ಬಹಳ ದಿನಗಳ ನಂತರ ತಮ್ಮ ಲೇಖನಕ್ಕೆ ಪ್ರತಿಕ್ರಿಯಿಸುವದರೊಂದಿಗೆ ಮತ್ತೆ ಸಂಪದಕ್ಕೆ ಆಗಮಿಸಿದ್ದೇನೆ ಕಾರಣವಿಷ್ಟೆ ನನ್ನ ಕೆಲಸದ ಒತ್ತಡದಲ್ಲಿ ಸಂಪದದಿಂದ ದೂರವಾಗಿದ್ದು ಗಣರಾಜ್ಯೋತ್ಸವದ ರಜಾದಿನದಂದು ಮರೆತುಹೋದ ನನ್ನ ಪಾಸವರ್ಡನ್ನು ನೆನಪಿಸುವಂತೆ ಮಾಡಿತು. ತಮ್ಮ ಒಂದು ಲೇಖನ ನಮ್ಮನ್ನಲಿಗದ ಹಿರಿಯ ನಟಿ ಸಾದನಾರಿಗೆ ತಾವು ಸಲ್ಲಿಸಿರುವ ಗೌರವಕ್ಕೆ ನಮ್ಮ ಪ್ರತಿಕ್ರಿಯೆಯ ಮೂಲಕ ಸಲ್ಲಿಸುವ ನುಡಿನಮವಾಗಿದೆ.
ಧನ್ಯವಾದಗಳು ಪಾಟೀಲಜೀ
In reply to ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು ' by Amaresh patil
ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ಅಮರೇಶ ಪಾಟೀಲರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ನೋಡಿದೆ ತಡವಾ ಗಿ ಉತ್ತರಿಸುತ್ತಿದ್ದೇನೆ ನಾನೂ ಸಹ ಈಗ್ಗೆ ಕೆಲ ತಿಂಗಳುಗಳಿಂದ ನಿಯಮಿತವಾಗಿ ಬರುತ್ತಿಲ್ಲ,ನನಗೂ ಸಹ ಅಂತರ್ಜಾಲ ಸಂಪರ್ಕದ ಸಮಸ್ಯೆ. ಬಹಳ ವಿಶದವಾಗಿ ತಮ್ಮ ಆಸಕ್ತಿಗಳ ಕುರಿತು ಭಾವುಕವಾಗಿ ಪ್ರತಿಕ್ರಿಯಿಸಿದ್ದಿರಿ ಲೇಖನದ ಮೆಚ್ಚುಗೆಗೆ ಧನ್ಯವಾದಗಳು.
ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ಪಾಟೀಲರಿಗೆ ನಮಸ್ಕಾರ. ಸಾಧನಾರ ಹಲವು ಚಿತ್ರಗಳನ್ನು ಬಾಲ್ಯದಲ್ಲಿ ನೋಡಿದ ನೆನಪು ಮರುಕಳಿಸುವಂತೆ ಮಾಡಿರುವಿರಿ. ಸುಂದರ ಚಿತ್ರಣ ಮುಂದಿಟ್ಟಿರುವಿರಿ, ಅಭಿನಂದನೆಗಳು. ಪಾರ್ಥಸಾರಥಿಯವರ ಸಲಹೆ ಸೂಕ್ತವಾಗಿದೆ. ಹಿರಿಯ ನಟಿ ಲೀಲಾವತಿಯವರ ಮಾಹಿತಿ ಕಲೆ ಹಾಕಿ ಸುಂದರ ಲೇಖನವಾಗಿಸುವ ಶಕ್ತಿ ನಿಮಗಿದೆ. ಓದಲು ನಮ್ಮಂತಹವರು ಇದ್ದೇ ಇರುತ್ತೇವೆ. :)
In reply to ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು ' by kavinagaraj
ಉ: ' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '
ಕವಿ ನಾಗರಾಜರವರಿಗೆ ವಂದನೆಗಳು
ನಿಮ್ಮ ಹಾಗೂ ಪಾರ್ಥಸಾರಥಿಯವರ ಸಲಹೆಗಳು ಗಮನದಲ್ಲಿವೆ ಬರೆಯಲು ಪ್ರತ್ನಿಸುತ್ತೇನೆ ಧನ್ಯವಾದಗಳು.