ನಾಯಕ ಹೊಡೆದ್ದೇ ಏಟು. ಹಿಡಿದದ್ದೇ ಅಸ್ತ್ರ..!
ಅಸ್ತ್ರಗಳ ಅಬ್ಬರ.ಹೊಡೆದ್ದೇ ಏಟು ಹಿಡಿದದ್ದೇ ಅಸ್ತ್ರ. ನಾಯಕ ಹಿಡಿಯೋ ವಿಚಿತ್ರ ಆಯುಧ.ಖಳನನ್ನ ಕೊಲ್ಲಲು ನಾಯಕನ ಹೊಸ ಅಸ್ತ್ರ.ಕೈಗೆ ಸಿಗೋ ವಸ್ತುಗಳೇ ಈಗೀಗ ವೆಪನ್.ನೈಜ ಫೈಟ್ ಕಂಪೋಜ್ ಹಿನ್ನೆಲೆ ಈ ಅಬ್ಬರ.ಕನ್ನಡದಲ್ಲಿ ಹೆಚ್ಚುತ್ತಿದೆ ನ್ಯಾಚುರಲ್ ಫೈಟ್ ಟ್ರೆಂಡ್.ಡಿಫರಂಟ್ ಡ್ಯಾನಿ- ರವಿ ವರ್ಮ ನೈಜ ಕಂಪೋಜರ್.
ನ್ಯಾಚುರಲ್ ಫೈಟ್ ನ್ಯಾಚುರಲ್ ಥ್ರಿಲ್-ವೆಪನ್. ಶೂಟಿಂಗ್ ಸ್ಪಾಟ್ ಅಲ್ಲಿ ಸಿಗೋ ವಸ್ತುಗಳೇ ಆಯುಧ
-----
ನಾಯಕ ಹೊಡೆದ್ದೇ ಏಟು. ಹಿಡಿದದ್ದೇ ಅಸ್ತ್ರ. ಮಾಡಿದ್ದೇ ಫೈಟು. ಹೌದು..! ನ್ಯಾಚುರಲ್ ಫೈಟ್ಗಳಿಗೆ ಈಗ ಬೇಡಿಕೆ ಹೆಚ್ಚು. ಸಿನಿಮ್ಯಾಟಿಕ್ ಫೈಟ್ ಗಳು ಈಗ ಹಳೇ ಟ್ರೆಂಡು. ಅದಕ್ಕೆ ಈಗೀಗ ನಮ್ಮ ಹೀರೋಗಳ ಕೈಯಲ್ಲಿ ಸಿಗುತ್ತಿವೆ. ಚಿತ್ರ-ವಿಚಿತ್ರ ವಸ್ತುಗಳು. ಅವೇ ಈಗ ಆಕರ್ಷಣೀಯ ಅಸ್ತ್ರಗಳು. ಯಾರ್ ಹೇಗೆ ಹೊಡೆದಾಡಿದ್ದಾರೆ. ಯಾವ ವೆಪನ್ ಹಿಡಿದು, ಯಾವ ನಾಯಕ, ವಿಲನ್ ಸಾಮ್ರಾಜ್ಯವನ್ನ ದ್ವಂಸ ಮಾಡಿದ್ದಾರೆ.
ಸಿನಿಮಾ ಮೇಕಿಂಗ್ ಬದಲಾಗುತ್ತಿದೆ. ಜನರ ಅಭಿರುಚಿನು ಚೇಂಜ್ ಆಗಿದೆ. ಚಿತ್ರಗಳನ್ನ ಆಗ ನೋಡ್ತಿದ್ದ ಸಿನಿಪ್ರೇಮಿಗಳು, ಈಗೀಲ್ಲ. ಈಗ ಇರೋರ ಎಲ್ಲ ತಿಳಿಯೋ ಬುದ್ದಿವಂತ ಪ್ರೇಕ್ಷಕ. ಅವರನನ್ನ ಯಾಮಾರಿಸಲು ನಿಜಕ್ಕೂ ಆಗೋದಿಲ್ಲ. ಫೈಟ್ ಅಂದಾಗ ಈಗ ನಿಜವಾದ ಫೈಟ್ ಗಳನ್ನೇ ತೆಗೆಯಬೇಕು. ನ್ಯಾಚುರಲ್ ಫೈಟ್ ಟ್ರೆಂಡ್ ಶುರುವಾಗಿದ್ದೇ ಹಂಗೆ. ಬೆಳ್ಳಿ ತೆರೆ ಈಗೀಗ ನ್ಯಾಚುರಲ್ ಫೈಟ್ ಗಳಿಂದ ಕಂಗೊಳಿಸುತ್ತಿದೆ.
ಈ ಬದಲಾವಣೆಯ ಪರ್ವದಲ್ಲಿ ನಾಯಕರು ಹಿಡೋ ಅಸ್ತ್ರಗಳು ಬದಲಾಗುತ್ತಿವೆ. ಚಿತ್ರ-ವಿಚಿತ್ರವೂ ಆಗಿರುತ್ತದೆ. ಜನ ಅದನ್ನೇ ನೋಡೆಕೆ ಇಷ್ಟಪಡುತ್ತಿದ್ದಾರೆ. ಅದನ್ನ ಅನುಕರಣೆ ಮಾಡಿದರೂ ಅಚ್ಚರ್ಯವಿಲ್ಲ. ಅಷ್ಟು ನ್ಯಾಚುರಲ್ ಆಗಿಯೇ ಇರುತ್ತವೆ. ಸಾಹಸ ನಿರ್ದೇಶಕ ಡಿಫರಂಟ್ ಡ್ಯಾನಿ ಮಾಸ್ಟರ್ ಹೇಳೋದು ಅದನ್ನೆ.
ನಮಗೆ ತುಂಬಾ ಇಷ್ಟವಾಗೋದು ಫೈಟ್. ನಿಜ ಜೀವನದಲ್ಲಿ ಅದನ್ನ ಮಾಡೋಕೆ ಆಗೋದಿಲ್ಲ. ನಮ್ಮ ನೆಚ್ಚಿನ ನಾಯಕರು ಅದನ್ನ ಮಾಡ್ತಾರೆ. ಅಂತಹ ಒಂದು ಭಾವದಲ್ಲಿಯೇ ಪ್ರೇಕ್ಷಕ ಸಿನಿಮಾ ನೋಡೋದು. ಅಭಿಮಾನಿ ಅದನ್ನೇ ಆದರಿಸೋದು.ಆದರೂ ಪ್ರತಿ ಚಿತ್ರದ ಫೈಟ್ ನಲ್ಲೂ ನಿರ್ದೇಶಕರ ಇನ್ಪುಟ್ಸ್ ಇದ್ದೇ ಇರುತ್ತದೆ.
ನಾಯಕ ಉಪಯೋಗಿಸೋ ಆಯುಧ ಕಥೆಗೆ ಸಿಂಕ್ ಆಗುತ್ತದೆಯೋ ಇಲ್ಲವೋ. ಆದರೆ, ನೋಡುಗರನ್ನ ಒಮ್ಮೆ ಸೆಳೆದು ಬಿಡುತ್ತದೆ. ರಾಜಮೌಳಿಯವ ಸಿನಿಮಾ ನಾಯಕನ ಕೈಯಲ್ಲಿ ರೋ ಅಸ್ತ್ರವೇ ಆಕರ್ಷಕ. ಮತ್ತು ಗಮನಾರ್ಹ.
ಆದರೆ, ಕನ್ನಡದಲ್ಲೂ ಆ ಟ್ರೆಂಡ್ ಶುರುವಾಗಿತ್ತು. ಜನರನ್ನೂ ಸೆಳೆಯಿತು.ಈಗೀಗ ನ್ಯಾಚುರಲ್ ಫೈಟ್ಸ್ಗೆ ಜನರ ಸೆಳೆಯೋ ಶಕ್ತಿ ಇದೆ. ಅದನ್ನೇ ಮುಖ್ಯವಾಗಿಟ್ಟುಕೊಂಡು, ಹಲವು ಸಾಹಸ ನಿರ್ದೇಶಕರು ಸಾಹಸ ಮಾಡುತ್ತಿದ್ದಾರೆ. ಪುನೀತ್ ಅಭಿನಯದ ರಣವಿಕ್ರಮದ ಸಾಹಸ ನಿರ್ದೇಶಕ ರವಿ ವರ್ಮ, ಅಪ್ಪು ಕೈಯಲ್ಲಿ ಹ್ಯಾಮರನ್ನೇ ಕೊಟ್ಟಿದ್ದಾರೆ.
ತುಂಬಾ ನೈಜ ಚಿತ್ರಗಳಲ್ಲಿ ಇದು ಸೂಕ್ತ ಅನಿಸುತ್ತದೆ. ದುನಿಯಾ ಸೂರಿ ಚಿತ್ರಗಳು ನೈಜ ಜೀವನಕ್ಕೆ ಹತ್ತಿರವಾಗಿರುತ್ತವೆ. ದುನಿಯಾ ಚಿತ್ರದಲ್ಲಿ ಆ ಜೀವಂತಿಕೆ ಕಂಡು ಬಂತು. ಸಾಹಸ ನಿರ್ದೇಶಕ ಡಿಫರಂಟ್ ಡ್ಯಾನಿ ಅಲ್ಲಿ ಮಾಡಿದ್ದು ಅದೇ ಪ್ರಯೋಗವನ್ನೇ.
ಆದರೆ, ನೈಜ ಫೈಟ್ಗಳ ಅಬ್ಬರದಲ್ಲಿ ಎಲ್ಲವೂ ನಾಯಕ ಹಿಡೋ ಅಸ್ತ್ರಗಳೇ ಆಗುತ್ತಿವೆ. ಸ್ಮಾನದಲ್ಲಿ ಚಿತ್ರೀಕರಣ ಇದ್ದರೆ. ಅಲ್ಲಿ ಸಿಗೋ ವಸ್ತುಗಳೇ ನಾಯಕನ ಆಯುಧ ಆಗುತ್ತದೆ. ಅದನ್ನ ಹಿಡಿದು ಅಬ್ಬರಿಸುತ್ತಾನೆ.ಜಾಕಿ ಚಿತ್ರದಲ್ಲಿ ಅಂತಹ ಒಂದು ಬೆಂಕಿ ಫೈಟ್ ಇದೆ. ನೋಡಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಲಾಸಿಪಾಳ್ಯ ಚಿತ್ರದಲ್ಲೂ ಒಂದು ಭರ್ಜರಿ ಫೈಟ್ ಇದೆ. ಅಲ್ಲಿ ನಾಯಕ ದರ್ಶನ್ ಕ್ರಿಕೆಟ್ ಆಡುತ್ತಾರೆ. ತಂಡದ ಮಧ್ಯೆ ಜಗಳ ಶುರುವಾಗುತ್ತದೆ. ಆಗ ಕೈಯಲ್ಲಿ ಸಿಗೋದು ಬ್ಯಾಟ್. ಆ ಬ್ಯಾಟೇ ದರ್ಶನ್ ಅಸ್ತ್ರ.
ಮುಂಬೈನಲ್ಲೂ ಮಿಂಚುತ್ತಿದ್ದಾರೆ ರವಿ ವರ್ಮ. ಶಾರುಖ್ ಖಾನ್ ಅಭಿನಯದ ‘ರಹೀಸ್’ ಚಿತ್ರದಲ್ಲಿ ರವಿ ವರ್ಮ ಒಂದು ಫೈಟ್ ಕಂಪೋಜ್ ಮಾಡಿದ್ದಾರೆ. ಎಕ್ಸ್ಕ್ಲೂಸೀವ್ ಆಗಿದೆ. ಆ ಫೈಟ್ ಬಗ್ಗೆ ರವಿ ವರ್ಮ ನಮ್ಮೊಟ್ಟಿಗೆ ಫೋನ್ ನಲ್ಲಿ ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ. ಆ ಮಾಹಿತಿಯ ತಿರುಳು ಇಷ್ಟೆ. ಬಟ್ ಮಾರ್ಕೆಟ್ ನಲ್ಲಿ ನಡೆಯೋ ಫೈಟ್ ದೃಶ್ಯದಲ್ಲಿ ಶಾರುಖ್, ಕುರಿಯ ತಲೆಯನ್ನೇ ಹಿಡಿದು ಹೊಡೆದಾಡುತ್ತಾನೆ. ಅದು ನಿಜಕ್ಕೂ ಹೊಸತು.
ಸಿನಿಮಾಗಳಲ್ಲಿ ಅಸ್ತ್ರಗಳು ಹೊಳೆಯುತ್ತಿವೆ. ನೋಡುಗರ ಹುಚ್ಚು ಹೆಚ್ಚಾಗುತ್ತಿದೆ. ಯಾರೂ ಅದನ್ನ ನಿಜ ಜೀವನದಲ್ಲಿ ಬಳಸಿ ಹಾಲಾಳಾಗದೇ ಇದ್ದರೇ ಒಳ್ಳೆಯದು. ನಮ್ಮ ಆಸೆಯನೂ ಅದೇನೇ.
-ರೇವನ್ ಪಿ.ಜೇವೂರ್
Comments
ಉ: ನಾಯಕ ಹೊಡೆದ್ದೇ ಏಟು. ಹಿಡಿದದ್ದೇ ಅಸ್ತ್ರ..!
ಹೌದು ಸರ್, ಕೆಲವೊಂದನ್ನು ನೋಡಿ ಮನರಂಜಿಸಬೇಕು ಅವನ್ನ ಪ್ರ್ಯಾಕ್ಟಿಕಲ್ ಆಗಿ ಮಾಡಬಾರದು.
ಧನ್ಯವಾದಗಳು.
ಉ: ನಾಯಕ ಹೊಡೆದ್ದೇ ಏಟು. ಹಿಡಿದದ್ದೇ ಅಸ್ತ್ರ..!
<<ಸಿನಿಮಾಗಳಲ್ಲಿ ಅಸ್ತ್ರಗಳು ಹೊಳೆಯುತ್ತಿವೆ. ನೋಡುಗರ ಹುಚ್ಚು ಹೆಚ್ಚಾಗುತ್ತಿದೆ. ಯಾರೂ ಅದನ್ನ ನಿಜ ಜೀವನದಲ್ಲಿ ಬಳಸಿ ಹಾಳಾಗದೇ ಇದ್ದರೇ ಒಳ್ಳೆಯದು. ನಮ್ಮ ಆಸೆಯನೂ ಅದೇನೇ.>
ನಮ್ಮದೂ ಇದೇ ನಿರೀಕ್ಷೆಯೇ!! :)