ನನ್ನಿಂದ ನಿನಗಾಗಿ...
ದಿನದಲ್ಲಿ ನಾ ಹಿಂಬಾಲಿಸುವೆ ನಿನ್ನ ನೆರಳಿನಂತೆ,
ಇರುಳಲ್ಲಿ ನಾ ಜೊತೆಯಾಗುವೆ ಚಂದಿರನ ಹೊಂಬೆಳಕಿನಂತೆ...
ಬಿಸಿಲಿನ ತಾಪದಿ ನೀ ಬಳಲುತಿದ್ದರೆ ನಾ ಬರುವೆ ತಂಗಾಳಿಯಂತೆ..
ಚಳಿಯನಡುವೆ ಮೈ ನಡುಗುತಿದ್ದರೆ ನಾ ತರುವೆ ಬೆಚ್ಚನೆಯ ಅಪ್ಪುಗೆಯೊಂದ..
ನಿನ್ನಯ ಕನಸುಗಳ ಕನವರಿಕೆಯಾಗುವೆ...
ತುಂತುರುಮಳೆಯ ಕಾಮನ ಬಿಲ್ಲಗುವೆ...
ನಿನ್ನ ಕೈಯೊಳು ನಾ ಕೈಇರಿಸಿ ಜೊತೆ ಜೊತೆಯಲಿ ಹೆಜ್ಜೆಗಳನಿಡುತಾ
ಮಳೆಯ ಹನಿಗಳನಡುವೆ ಮಾತನಾಡುತಾ ನಿನ್ನ ಮನಸಿಗೆ ಮುದ ನೀಡುವೆ...
ನಿನ್ನಯ ಮಡಿಲಿನಲಿ ನಾನೊಂದು ಮಗುವಾಗಿ ನಿನ್ನಯ ಒಲವನ್ನು ಪಡೆಯುವಾಸೆ...
ನಿನ್ನ ಅಪ್ಪುಗೆಯ ಬಂಧನದಿ ಮೈ ಮರೆತು ನಿನ್ನನ್ನು ರಮಿಸಿ ಮುದ್ದಾಡುವಾಸೆ...
ನಿನ್ನಯ ಒಡನಾಟಕೆ ನಾ ಕಾದು ಕುಳಿತಿಹೆನು...
ಮೌನದಲಿ ಹೃದಯದ ಮಾತ ಮಿಡಿದಿಹೆನು...
ನೀನಿಲ್ಲದ ಬದುಕು ಗುಡಿಯೊಳಗಿನ ದಿವ್ಯಶಕ್ತಿ ಇಲ್ಲದಂತೆ...
ಬಾ ಒಲವೇ... ಪ್ರೀತಿಯ ದೀವಿಗೆಯ ಹಚ್ಚಿ, ನಾ ಸಲ್ಲಿಸುವ ಪೂಜೆಯ ಸ್ವೀಕರಿಸು...
Rating
Comments
ಉ: ನನ್ನಿಂದ ನಿನಗಾಗಿ...
ಚೆನ್ನಾಗಿ ಮೂಡಿಬಂದಿದೆ ನಿಮ್ಮ ಪ್ರೀತಿಯ ಕಾಳಜಿ.
ಧನ್ಯವಾದಗಳು.
In reply to ಉ: ನನ್ನಿಂದ ನಿನಗಾಗಿ... by ravindra n angadi
ಉ: ನನ್ನಿಂದ ನಿನಗಾಗಿ...
ನನ್ನ ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು :)
ಉ: ನನ್ನಿಂದ ನಿನಗಾಗಿ...
ಕೊಡಬಯಸುವುದೆಲ್ಲವೂ ಪಡೆಯಲಿಕ್ಕಾಗಿ!! :)
ಬಯಸಿದ್ದು ಸಿಗಲಿ, ಪೂಜೆಯ ಫಲ ದೊರೆಯಲಿ!
In reply to ಉ: ನನ್ನಿಂದ ನಿನಗಾಗಿ... by kavinagaraj
ಉ: ನನ್ನಿಂದ ನಿನಗಾಗಿ...
ನನ್ನ ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು :)