ಮುಲ್ಕ್‌ರಾಜ್ ದಂತಹ ಶಬ್ದ ಬರೆಯುವುದು ಹೇಗೆ?

ಮುಲ್ಕ್‌ರಾಜ್ ದಂತಹ ಶಬ್ದ ಬರೆಯುವುದು ಹೇಗೆ?

ಮುಲ್ಕ್‌ರಾಜ್ ದಂತಹ ಶಬ್ದ -ಮುಲ್ಕ್‌ ಬರೆದ ಮೇಲೆ ರಾಜ್ ಬರೆಯಲು ಹೋದರೆ ಅದು ಮುಲ್ಕ್ರಾಜ್ ಆಗಿಬಿಡುತ್ತದೆ.

( ಪ್ರಶ್ನೆಯಲ್ಲಿನ ಮುಲ್ಕ್‌ರಾಜ್ ನಾನು ಹೇಗೆ ಬರೆದೆ ಅಂತ ಕೇಳ್ತೀರಾ ? ಅದು ಬೇರೆ ಕಡೆಯಿಂದ ನಕಲು ಮಾಡಿದ್ದು )

Rating
No votes yet

Comments

Submitted by keshavmysore Mon, 05/02/2016 - 15:46

’ಬರಹ”ವನ್ನು ಬಳಸುತ್ತಿದ್ದರೆ: -
ರಾಜ್ ಮತ್ತು ಕುಮಾರ್ ಮಧ್ಯೆ ^ ಬಳಸಿದರೆ ಅದು ’ರಾಜ್‍ಕುಮಾರ್’ ಎಂದಾಗುತ್ತದೆ.
ಆದರೆ ಮುಲ್ಕ್ ಮತ್ತು ರಾಜ್ ಮಧ್ಯೆ ^ ಚಿನ್ಹೆ ಒಂದು ಬಾರಿ ಬಳಸಿದರೆ ಅದು ’ಮುಲ್ಕ್‍ರಾಜ್’ ಎಂದಾಗುತ್ತದೆ.
ಹಾಗಾಗಿ ಮುಲ್ಕ್ ಮತ್ತು ರಾಜ್ ಮಧ್ಯೆ ^ಚಿನ್ಹೆಯನ್ನು ಎರಡುಬಾರಿ ಬಳಸಬೇಕು: ಮುಲ್ಕ್^^ರಾಜ್ ಎಂದು ಬರೆದರೆ ಆಗ ’ಮುಲ್ಕ್‌ರಾಜ್’ ಎಂದಾಗುತ್ತದೆ.
ಅಂದರೆ ಪೂರ್ಣಾಕ್ಷರದ ಮೊದಲು ಬರುವ ಅರ್ಧಾಕ್ಷರವು ಒಂದು ವ್ಯಂಜನಾಕ್ಷರವಾದರೆ ಪೂರ್ಣಾಕ್ಷರ ಅರ್ಧಾಕ್ಷರಗಳ ನಡುವೆ ^ ಚಿನ್ಹೆ ಒಂದುಬಾರಿ;
ಅದು ಎರಡು ವ್ಯಂಜನಾಕ್ಷರಗಳಿಂದ ಕೂಡಿದ ಅರ್ಧಾಕ್ಷರವಾದರೆ ^ ಎರಡು ಬಾರಿ ಉಪಯೋಗಿಸಬೇಕು.
ಹೆಚ್ಚಿನ ವಿವರಕ್ಕೆ, ’ಬರಹ’ದಲ್ಲಿನ ಹೆಲ್ಪ್ - ಕನ್ನಡ ಕೊಂಡಿಯನ್ನು ನೋಡಿ.

Submitted by shreekant.mishrikoti Sun, 05/08/2016 - 12:18

ಪ್ರತಿಕ್ರಿಯೆ ನೀಡಿದ mnsrao ಮತ್ತು keshavmysore ರಿಗೆ ಧನ್ಯವಾದಗಳು.
www.linuxaayana.net ನ ಓಂಶಿವಪ್ರಕಾಶ್ ಎಚ್. ಎಲ್. ಅವರು ವಿಕಿಪೀಡಿಯದಲ್ಲಾದರೆ x ಬಳಸಬೇಕು ಎಂದು ತಿಳಿಸಿದರು. ಅವರ ಜತೆಯ ಮಾತುಕತೆಯಿಂದ zero width space , zeo width joiner ಎಂಬ ಪದಗಳು ತಿಳಿದವು.
ಗೂಗಲ್ ನಲ್ಲಿ ಹುಡುಕಿದಾಗ ಸಿಕ್ಕ ಒಂದು ಪರಿಹಾರ ಹೀಗಿದೆ. .. ZWS is inside the angle brackets.. >​< .. copy this , paste whereever you want and remove the brackets.