ಬಱಿಗಣ್ಣಿಗೆ ಕಾಣುವ ಎಲ್ಲಾ ಐದು ಗ್ರಹಗಳು ಇನ್ನು ಹದಿನೈದು ದಿನಗಳವರೆಗೆ ಬೆಳಿಗ್ಗೆ ೫.೩೦ಱಿಂದ ಕಾಣುತ್ತವೆ

ಬಱಿಗಣ್ಣಿಗೆ ಕಾಣುವ ಎಲ್ಲಾ ಐದು ಗ್ರಹಗಳು ಇನ್ನು ಹದಿನೈದು ದಿನಗಳವರೆಗೆ ಬೆಳಿಗ್ಗೆ ೫.೩೦ಱಿಂದ ಕಾಣುತ್ತವೆ

ಬಱಿಗಣ್ಣಿಗೆ ಕಾಣಿಸುವ ಬುಧ, ಶುಕ್ರ, ಶನಿ, ಮಂಗಳ ಮತ್ತು ಗುರು ಕ್ರಮವಾಗಿ ಪೂರ್ವದಿಂದ ಪಶ್ಚಿಮಕ್ಕೆ  ಕನಿಷ್ಠ ಪಕ್ಷ ಇನ್ನು ಹದಿನೈದು ದಿನಗಳವರೆಗೆ ಕಾಣುತ್ತವೆ ಜನವರಿ ೩೧ ೨೦೧೧೬ಱಂದು ಮಂಗಳನೊಡನೆ ಚಂದ್ರ, ಫೆಬ್ರುವರಿ ೧ಱಂದು ಶನಿಯೊಡನೆ ಮತ್ತು ಫೆಬ್ರುವರಿ ೪ಱಂದು ಶುಕ್ರನೊಡನೆ ಚಂದ್ರ ಕಾಣುತ್ತಾನೆ. ಶುಕ್ರನ ಕೆಳಗೆ ಪೂರ್ವದಲ್ಲಿ ಸ್ವಲ್ಪ ಉತ್ತರಕ್ಕೆ (ಪೂರ್ವಾಭಿಮುಖವಾಗಿ ನಿಂತಾಗ ಶುಕ್ರನಿಗೆ ಸ್ವಲ್ಪ ಕೆೞಕ್ಕೆ ಎಡಭಾಗದಲ್ಲಿ ಬುಧ ಕಾಣುತ್ತಾನೆ. ಹೆಚ್ಚಿನ ವಿವರಗಳಿಗೆ skychart.skyandtelescope.comಗೆ ಪ್ರವೇಶಿಸಿ ನಿಮ್ಮ ಸ್ಥಳದ ವಿವರಗಳನ್ನು ಕೊಟ್ಟು ನೋಡಬಹುದು. ಈ ವಿಚಾರವಾಗಿ ಒಂಟಿಕೊಪ್ಪಲ್ ಅಥವಾ ಇನ್ನಾವುದೇ ಪಂಚಾಂಗವೂ ಸಹಾಯಕ್ಕೆ  ಬರುತ್ತದೆ

Comments

ಗಣೇಶರೇ, ನಿಮ್ಮ ದೃಷ್ಟಿ ಅವುಗಳ ಮೇಲೆ ಬಿದ್ದಿದೆಯಲ್ಲಾ!! :)

ಅಂ‍‍‍ದು ‍‍‍ಯಾರೂ ವಕ್ರರಿರಲಿಲ್ಲ. ಇಂದು ಮಂಗಳ, ಶುಕ್ರರು ವಕ್ರ.