ದೂರದರ್ಶನದ ಚಂದನ ವಾಹಿನಿ ಬಿತ್ತರಿಸುತ್ತಿದ್ದ 'ಸತ್ಯದರ್ಶನ' ಕಾರ್ಯಕ್ರಮ, ೧,೦೦೦ ಕಂತುಗಳನ್ನು ಮುಟ್ಟಿದೆ !

ದೂರದರ್ಶನದ ಚಂದನ ವಾಹಿನಿ ಬಿತ್ತರಿಸುತ್ತಿದ್ದ 'ಸತ್ಯದರ್ಶನ' ಕಾರ್ಯಕ್ರಮ, ೧,೦೦೦ ಕಂತುಗಳನ್ನು ಮುಟ್ಟಿದೆ !

೨೦೧೬  ನೇ  ಮೇ ತಿಂಗಳ ೭ ನೇ ತಾರೀಖು ದೂರದರ್ಶನ ಚಂದನದ   ಇತಿಹಾಸದಲ್ಲಿ ಒಂದು ಮಹತ್ವದ ದಿನ. ! ಅಂದು ಚಂದನ  ವಾಹಿನಿಯ   ಅತಿ ಜನಪ್ರಿಯ. ಕಾರ್ಯಕ್ರಮಗಳಲ್ಲೊಂದಾದ ಸತ್ಯದರ್ಶನ ಕಾರ್ಯಕ್ರಮ  ೧,೦೦೦  ಕಂತುಗಳಿಗೆ ಬಂದು ಮುಟ್ಟಿತು. . ವೈದಿಕ ಧರ್ಮದ ಹಲವಾರು ಶಂಕೆಗಳಿಗೆ ಸೂಕ್ತ ಸಮಾಧಾನ ಕೊಡುವ ದಿಶೆಯಲ್ಲಿ ದೂರ  ದರ್ಶನದ  ಚಂದನ ವಾಹಿನಿಯಲ್ಲಿ  ಮೂಡಿಬರುತ್ತಿರುವ ಈ  ಕಾರ್ಯಕ್ರಮ  ಒಂದು ಹೊಸ ದಾಖಲೆಯನ್ನೇ ಸ್ಥಾಪಿಸಿದೆ  ಇದೊಂದು ಅದ್ಭುತ ಸಾಧನೆಗಳಲ್ಲೊಂದು. ಇದರ ರುವಾರಿಗಳಾದ ಡಾ  ಪಾವಗಡ ಪ್ರಕಾಶ್ ರಾಯರು ನಿರಂತರವಾಗಿ ಕೇಳುಗರ ಪ್ರಶ್ನೆಗಳಿಗೆ ಸಮರ್ಪಕವಾದ, ಮತ್ತು  ಎಲ್ಲಾ ವರ್ಗಗಳ , ಜಾತಿ, ಪಂಥ, ಭಾಷೆ,ಮತ್ತು ವಯೋಮಿತಿಗೆ ಅರ್ಥವಾಗುವ ಹಾಗೆ ತಮ್ಮ  ನಿರೂಪಣೆಯನ್ನು ಕೊಡುತ್ತಾ  ಬಂದಿದ್ದಾರೆ.  ಸತತವಾಗಿ ಆಳವಾದ   ಅಧ್ಯಯನ ನಡೆಸಿ, ಕೇಳಿದ ಪ್ರಶ್ನೆಗಳಿಗೆಲ್ಲಾ  ಉತ್ತರ ಕಂಡು ಹಿಡಿದುಕೊಂಡಿದ್ದಾರೆ. ಪ್ರೇಕ್ಷಕರುಗಳು ಕೇಳುವ ವೇದ, ಆಗಮ, ಶಾಸ್ತ್ರ, ವ್ಯಾಕರಣ, ಸಾಹಿತ್ಯ,  ಜ್ಯೋತಿಷ, ಮಹಾಪುರುಷರ ಚರಿತ್ರ್ಯೆ ಗಳು, ಮಹಾಭಾರತ, ರಾಮಾಯಣ, ಭಾಗವತ, ಯೋಗ, ಆಚಾರ್ಯ ತ್ರಯರಾದ  ಶಂಕರಾಚಾರ್ಯ,ಮಧ್ವಾಚಾರ್ಯ, ರಾಮಾನುಜಾಚಾರ್ಯ,ರ ಬಗ್ಗೆ ವಿಸ್ತೃತ  ವಿದ್ವತ್ ಪೂರ್ಣ ಪ್ರವಚನಗಳು ಎಲ್ಲರ ಮನಸೆಳೆದವು. ಮತ್ತೆ   ಆಳ್ವರುಗಳು, ಚಾರಿತ್ರ್ಯಿಕ ಮಹಾಪುರುಷರಾದ, ಗಾಂಧೀಜಿ, ತಿಳಕ್, ಗೋಖಲೆ, ನೆಹರೂ, ಪಟೇಲ್, ಅಂಬೇಡ್ಕರ್,  ಇಂದಿರಾಗಾಂಧಿ, ಮಹಾದಾರ್ಶನಿಕರಾದ ರಾಧಾಕೃಷ್ಣನ್, ಸರ್ ಎಂ ವಿಶ್ವೇಶ್ವರಯ್ಯ, ವಿಜ್ಞಾನಿಗಳಾದ ಸರ್. ಸಿ. ವಿ. ರಾಮನ್, ಸಿ. ಎನ್. ಅರ್ ರಾವ್   ಮುಂದಾದವರ ಬಗ್ಗೆಯೂ ಪ್ರಶ್ನೋತ್ತರಗಳ ಸಮಯದಲ್ಲಿ ತಿಳಿಯ ಹೇಳುತ್ತಾರೆ.  ಸಾಮಾನ್ಯವಾಗಿ ನಾವೆಲ್ಲಾ ಕೆಲವು ವಿಧಿಗಳನ್ನು, ಮತ್ತು  ಅವಕ್ಕೆ   ಸಂಬಂಧ ಪಟ್ಟ ಪದಗಳನ್ನು  ತಪ್ಪಾಗಿ ಹೇಳುತ್ತೇವೆ. ನಮಗೆ ಗೊತ್ತಿರದ ಪದಗಳನ್ನು ಯಾರೂ  ತಿದ್ದುತ್ತಿಲ್ಲ.  ಉದಾಹರಣೆಗೆ ಶನಿಶ್ಚರ, ಜ್ಯೋತಿಷ, ಮೊದಲಾದ ಪದಗಳನ್ನು  ಇಂದು ತಿಳಿದು  ಸರಿಯಾಗಿ  ಉಚ್ಚರಿಸುತ್ತಿದ್ದೇವೆ. ಪ್ರಕಾಶ್ ರಾಯರು  ಪ್ರತಿ ಪದದ ವ್ಯುತ್ಪತ್ತಿಯಾದ  ಬಗೆ,ಮತ್ತು ಆ ಪದದ  ವ್ಯಾಪ್ತಿಯನ್ನು ಉದಾಹರಣೆಗಳೊಂದಿಗೆ ತಿಳಿಯಹಹೇಳುತ್ತಾರೆ. . ಪದಗಳ ಸರಿಯಾದ ಉಚ್ಚಾರಣೆಗಳನ್ನೂ ತಮ್ಮ ಉಪನ್ಯಾಸದ ಸಮಯದಲ್ಲಿ ತಪ್ಪದೆ ತೋರಿಸಿಕೊಡುತ್ತಿದ್ದಾರೆ. ಯಾವುದೋ ತರಗತಿಗೆ ಗಡಿಬಿಡಿಯಿಂದ  ಪಾಠಮಾಡುವ ಶಿಕ್ಷಕನ ತರಹ ಇರದೆ,  ತಮ್ಮ ಸ್ಪಷ್ಟ ಉಚ್ಚಾರಣೆ, ಅತ್ಯುತ್ತಮ ಕನ್ನಡ ಭಾಷೆಯ ಪ್ರಯೋಗ,  ಎಂತಹ  ತೊಡಕಾದ ವಿಷಯಗಳನ್ನೂ ಕನ್ನಡದಲ್ಲಿ ಯಾವ ತ್ರುಟಿ ಇಲ್ಲದೆ  ಹೇಳಬಹುದೆನ್ನುವುದನ್ನು ತೋರಿಸಿಕೊಡುತ್ತಿದ್ದಾರೆ
 
ಸತ್ಯದರ್ಶನದ ಮೊದಲ  ಕಂತು, ೨೦೦೩ ರ,  ನವೆಂಬರ್ ೧ರಂದು ಆರಂಭವಾಯಿತು. ಮೊದಲು ವಾರಕ್ಕೊಮ್ಮೆ  ರವಿವಾರದಂದು  ಬಿತ್ತರವಾಗುತ್ತಿದ್ದ  ಈ ಕಾರ್ಯಕ್ರಮ ದೂರದರ್ಶನದ ಹಿಂದಿನ ನಿಯಮದಂತೆ  ಕೇವಲ ೧೪ ಕಂತುಗಳಿಗೆ ಸೀಮಿತವಾಗಿತ್ತು.  ಆದರೆ  ಅದನ್ನು ನೋಡುವ ಕೇಳುವ ಶ್ರೋತೃವೃಂದದ  ಆಶೆಯಂತೆ ೧೦೮ ಎಪಿಸೋಡ್ ಗಳಿಗೆ ಮುಂದುವರೆಸಲ್ಪಟ್ಟಿತು. ದೂರದರ್ಶನದ  ಉತ್ಸಾಹಿ ನಿರ್ದೇಶಕ  ಮಹೇಶ್  ಜೋಷಿಗಳು ಕಾರ್ಯವಹಿಸಿಕೊಂಡಾಗ ವಾರಕ್ಕೆ ೨ ದಿವಸ  ನಡೆಸಿಕೊಡಿ ಎಂದು  ಸಲಹೆಮಾಡಿದರು.   ಅಂದು  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಸಚ್ಚಿದಾನಂದ  ಸರಸ್ವತಿ ಸ್ವಾಮಿಗಳೂ ತಮ್ಮ ಭಾಷಣದಲ್ಲಿ ಕಾರ್ಯಕ್ರಮವನ್ನು  ಮೆಚ್ಚಿ ಮುಂದುವರೆಸುವಂತೆ ಆಜ್ಞಾಪಿಸಿದ್ದರಿಂದ ಹಾಗೆಯೇ ಮುಂದುವರೆದು ಇಂದಿನ ಸಹಸ್ರ ಕಂತಿಗೆ ತಲುಪಿದೆ.  ಧರ್ಮ  ಗ್ರಂಥಗಳಲ್ಲಿ ನಮೂದಿಸಿರುವ ಹಲವಾರು ನಿಯಮಗಳಿಗೆ  ಸರಿಯಾದ  ಅರ್ಥ ತಿಳಿಯದೆ ಕುರುಡು ನಂಬಿಕೆಯಿಂದ ತೊಳಲುತ್ತಿರುವ  ಜನರಿಗೆ ನೈಜ ಅರ್ಥ ತಿಳಿದಾಗ ಮನಸ್ಸು ತಿಳಿಯಾಗುತ್ತದೆ.  ಸನಾತನ ಧರ್ಮಗಳಲ್ಲಿನ ಕೆಲವು ಆಚರಣೆಗಳು, ಸಾಹಿತ್ಯಗಳ ಸತ್ಯಾನ್ವೇಷಣೆಮಾಡಿಸುವಲ್ಲಿ ನಿರಂತರವಾಗಿ   ತಮ್ಮನ್ನು ತೊಡಗಿಸಿಕೊಂಡಿರುವ ಪ್ರಕಾಂಡ ಪಂಡಿತ, ಪ್ರಕಾಶ್  ರಾಯರು ನಮಗೆಲ್ಲಾ ಆದರ್ಶ  ಪ್ರಾಯರು. ಮತ್ತು ಸರಿಯಾದ ಅರ್ಥದಲ್ಲಿ ಗುರುಗಳು. 
ಸಾವಿರ ಎಪಿಸೋಡ್ ಮುಗಿಸಿದ ಸಮಯದ ದಿನದಂದು,  ದೂರದರ್ಶನದ  ಕಾರ್ಯಕ್ರಮದ  ನಿರೂಪಕಿ, ಸೌ ಚೇತನ ಹೆಗಡೆಯವರು ಪ್ರಕಾಶ ರಾಯರ ಜೊತೆ ನಡೆಸಿದ ಸಂದರ್ಶನದ ವಿವರಗಳು ಕೆಳಗೆ  ದಾಖಲಿಸಲ್ಪಟ್ಟಿವೆ.  
ಚೇತನಾ ಹೆಗಡೆ :  ಗುರುಗಳೇ  ಸತ್ಯದರ್ಶನ ಕಾರ್ಯಕ್ರಮ ಶುರುವಾದದ್ದು ಹೇಗೆ ಯಾರ ಪ್ರೇರಣೆಯಿಂದಾಗಿ,ತಿಳಿಸಿ ಕೊಡಿ   ? 
ಪಾವಗಡ ಪ್ರಕಾಶರಾವ್  : 
ಆಗಿನ  ಕಾಲದ   ಆಕಾಶವಾಣಿ ಡೈರೆಕ್ಟರ್ ಜನರಲ್ ಶ್ರೀ . ಆರ್.  ವೆಂಕಟೇಶ್ವರಲು ಆಂಧ್ರದಲ್ಲಿ ಧರ್ಮಸಂದೇಹ ವೆಂಬ ಕಾರ್ಯಕ್ರಮ ನಡೆಸಲು ಪ್ರೋತ್ಸಾಹ ನೀಡಿದ್ದರು. ಒಮ್ಮೆ  ಅವರು, ರಾಮಚಂದ್ರ ಮೂರ್ತಿಗಳು,  ಮತ್ತು  ನಾನು, ಒಟ್ಟಿಗೆ ಅವರ ಮನೆಯಲ್ಲಿ  ಸೇರಿದಾಗ ತಮಗಾಗಿರುವ ಧಾರ್ಮಿಕ   ಹಸಿವನ್ನುನಿವಾರಿಸಲು ಒಂದು ಯೋಜನೆ  ಹಾಕಿಕೊಳ್ಳುವ ಆಲೋಚನೆ ನಡೆಸಿದರು. ಕನ್ನಡದಲ್ಲೂ ಅದೇ ತರಹದ  ಒಂದು ಕಾರ್ಯಕ್ರಮವನ್ನು ನಡೆಸಿಕೊಂಡು ಬರುವ ಪ್ರಬಲವಾದ ಆಶೆಯನ್ನು ವ್ಯಕ್ತ ಪಡಿಸಿದರು.ಹಾಗಾಗಿ   ಕನ್ನಡ ಭಾಷೆಯಲ್ಲಿ ಸತ್ಯದರ್ಶನ ಚಂದನ ವಾಹಿನಿಯಲ್ಲಿ ಮೂಡಿಬಂತು. ಕೇವಲ ೪-೫ ದಿನಗಳಲ್ಲಿ,  ಅಂದರೆ,   ೨೦೦೩ ರಲ್ಲಿ ಶ್ರಿ. ಜಿ.ವಿ. ಅಯ್ಯರ್  ರವರ ಹಸ್ತದಿಂದ ಉದ್ಘಾಟನಾ ಮಹೋತ್ಸವವನ್ನು ಆಚರಿಸಲಾಯಿತು. ಆಗಿನ ಸಮಯದಲ್ಲಿ ಶ್ರೀ  ಅಯ್ಯರ್ ರವರು 'ನಾನು ಕಂಡ  ರಾಮಾಯಣ' ಎಂಬ  ಪುಸ್ತಕವನ್ನು ಬರೆದು ಅದನ್ನು   ಚಲನ ಚಿತ್ರರೂಪದಲ್ಲಿ ಪ್ರಸ್ತುತ ಪಡಿಸುವ ಮಹದಾಶೆಯನ್ನು ಹೊಂದಿದ್ದರು.  ರಾಮಾಯಣದ  ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು  ಪ್ರಕಾಶ್  ರಾವ್ ಜೊತೆ ಮುಕ್ತವಾಗಿ ೩ ತಿಂಗಳ ಕಾಲ ಚರ್ಚೆಯನ್ನು  ತಮ್ಮ ಭಾರದ್ವಾಜಾಶ್ರಮದಲ್ಲಿ  ಆಯೋಜಿಸಿದ್ದರು .  ಆಗ ಪ್ರಕಾಶ್  ರಾಯರು, ಅಯ್ಯರ್  ರವರ   ಪುಸ್ತಕಕ್ಕೆ ೩೫  ಪುಟಗಳ   ಮುನ್ನುಡಿಯನ್ನು ಬರೆದುಕೊಟ್ಟು ಪುಸ್ತಕವನ್ನು   ಬಿಡುಗಡೆ ಮಾಡಿದರು.  ಪಾವಗಡ ಪ್ರಕಾಶರಾಯರು ಸತತವಾಗಿ ಹನ್ನೆರಡೂವರೆ ವರ್ಷಗಳಿಂದ ನಡೆಸಿ ಕೊಡುತ್ತಿರುವ ಸತ್ಯದರ್ಶನ ಕಾರ್ಯಕ್ರಮ,  ದಾಪುಗಾಲು ಹಾಕುತ್ತಾ  ಸಾಗುತ್ತಿದ್ದು  ಈಗ ಸಹಸ್ರಕಂತಿಗೆ ಬಂದು ನಿಂತಿದೆ  ಬಹುಶಃ ಸಾವಿರಾರು ಶ್ರೊತೃಗಳ ಬೇಡಿಕೆಯಿಂದ ನಡೆಸಿಕೊಂಡು ಬರುತ್ತಿರುವ ಹಲವಾರು ವಿಧಿ-ವಿಧಾನಗಳಿಗೆ  ವೈಜ್ಞಾನಿಕವಾದ ಮತ್ತು ಸಮಾಧಾನಕರವಾದ, ಎಲ್ಲರೂ ಒಪ್ಪುವಂತಹ ಉತ್ತರಗಳು ಎಲ್ಲಾ  ವರ್ಗದ ಜನರ  ಅವರ ಮನಸ್ಸಿಗೆ ಹಿಡಿಸುತ್ತಿದ್ದವು. ಪ್ರಶ್ನೋತ್ತರ ವ್ಯವಸ್ಥೆ. ಧರ್ಮ ಸಾಹಿತ್ಯದ ಬಗ್ಗೆ ಗೊಂದಲಗಳನ್ನು ಅರ್ಥಮಾಡಿಸುವ ಪರಿ. ಅನನ್ಯ 
ಚೇತನಾ ಹೆಗಡೆ :  ಗುರುಗಳೇ,  ನಾನು ನೋಡಿದಂತೆ ಎಲ್ಲಾ ಪ್ರವಚನಕಾರರೂ ಒಂದು ಪುಸ್ತಕವನ್ನಾದರೂ ತಮ್ಮ ಮುಂದೆ  ಇರಿಸಿಕೊಂಡಿರುತ್ತಾರೆ ಆದರೆ ನೀವು ಹಾಗಲ್ಲ. ನಿಮ್ಮ ಜ್ಞಾಪಕ ಶಕ್ತಿ ಅಗಾಧ.  ನಿಮ್ಮ ಕಾರ್ಯಕ್ರಮದ  ಮೊದಲ   ನಿರ್ಮಾಪಕ ಅಧಿಕಾರಿ ಯಾರು 
ಪಾವಗಡ ಪ್ರಕಾಶರಾಯರು  :    ಮೊಟ್ಟಮೊದಲ ನಿರ್ಮಾಪಕರು,  ಶ್ರೀಮತಿ ಆರತಿಯವರು. ಶ್ರೀಮತಿ ಆರತಿಯವರು ಸುಮಾರು ೩೦೦ ಕಂತುಗಳ ವರೆಗೆ  ತಮ್ಮ ಯೋಗದಾನ ನೀಡಿದರು.
ಚೇತನಾ  ಹೆಗಡೆ :  ಮೊದಲ   ಪ್ರೇಚ್ಚಕ  ಪತಿನಿಧಿ  ಯಾರು  ಕೇಳಿದರು 
ಪಾವಗಡ ಪ್ರಕಾಶರಾಯರು  : ಮೊದಲ ಪ್ರಶ್ನೆಯನ್ನು   ನನ್ನ  ಗೆಳೆಯ  ಗೋಪಾಲ ಕೃಷ್ಣ ಎಂಬ ಗೆಳೆಯರು  ನಮ್ಮ ರಾಜ್ಯಕ್ಕೆ ಕರ್ನಾಟಕ  ಎಂಬ  ಕಾರಣ, ಮತ್ತು ಅದರ ಅರ್ಥ ವಿವರಣೆಯನ್ನು  ತಿಳಿಸಿ ಎಂದು ಫೋನ್  ನಲ್ಲಿ ಕೇಳಿದರು. ಸಮಯದ ಅಭಾವದಿಂದ  ಪ್ರೆಚ್ಚಕ ಪ್ರತಿನಿಧಿಯನ್ನು ಆರಿಸುವುದು ಕಷ್ಟವಾಯಿತು  ಅದನ್ನು  ನನ್ನ  ೧೪  ವರ್ಷದ  ಮಗ, ಅಲೋಕ್  ರಾಯ್  ಕೇಳಿದನು
ಚೇತನ  ಹೆಗಡೆ  :  ವ್ಯಾಖ್ಯಾನಕಾರರಾಗಿ   ಹೆಚ್ಚು ಪ್ರವಾಸಗಳನ್ನು ಮಾಡುತ್ತಿರುವ  ತಮಗೆ ಭೇಟಿಯಾದ ಪ್ರೇಕ್ಷಕ  ವ್ಯಕ್ತಿಗಳ ಹಿನ್ನೆಲೆ ಅವರ ಜೊತೆಗಿನ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ :
ಪಾವಗಡ ಪ್ರಕಾಶರಾಯರು  :  ಆ  ತರಹದ ಅನುಭವಗಳು ಸಾಕಷ್ಟಿವೆ  ಕೆಲವನ್ನು ಮಾತ್ರ ಇಲ್ಲಿ ದಾಖಲಿಸಲು  ಇಚ್ಚಿಸುತ್ತೇನೆ.   ಪ್ರವಾಸಗಳಲ್ಲಿ ಬೆರೆತ  ವ್ಯಕ್ತಿಗಳ ಜೊತೆಗೆ ಅನುಭವಗಳು ಅನನ್ಯ. ಹುಬ್ಬಳ್ಳಿಯ  ಧೃಡಕಾಯ ತರುಣನೋರ್ವ ನಿಮ್ಮೊಡನೆ  ಮಾತಾಡುವುದಿದೆ, ಎಂದು   ಹೇಳಿ ತನ್ನ   ಮನೆಗೆ ಕರೆದುಕೊಂದು ಹೋದ. ಹಿಮಾಲಯದ ಗಾಡಿಯಲ್ಲಿ ಭಾರತದ ಸೈನ್ಯದ ಶಿಬಿರದಲ್ಲಿ ಸೈನಿಕನಾಗಿ  ಕೆಲಸಮಾಡುತ್ತಿದ್ದ  ಸೈನಿಕ ಯುದ್ಧವಿಲ್ಲದ ಸಮಯದಲ್ಲಿ  ದಿನವೆಲ್ಲಾ   ಹಿಂದಿ ಮತ್ತು ಇತರ ಭಾಷೆಗಳಲ್ಲಿ  ರೇಡಿಯೋ  ಕೇಳಿ ಬೇಸತ್ತು, ಬೆಳಗಿನ  ಹೊತ್ತಿನಲ್ಲಿ  ರೇಡಿಯೋದಲ್ಲಿ ನಿಮ್ಮ ಸತ್ಯದರ್ಶನ ಕನ್ನಡ ಕಾರ್ಯಕ್ರಮ ಕೇಳಿ ದಾಗ  ಅವನಿಗೆ  ಮುದಸಿಗುತ್ತಿತ್ತು. ನಂತರ ಸಮಾಧಾನ ಚಿತ್ತದಿಂದ  ಚೆನ್ನಾಗಿ ನಿದ್ದೆ ಮಾಡುತ್ತೇನೆ  ಎನ್ನುವ ಸಂಗತಿ  ನನಗೆ ಬಹಳ ರೋಮಾಂಚನ ಹಾಗೂ ಒಂದು  ತರಹದ  ಸಾರ್ಥಕತೆಯ ಭಾವ ಮನಸ್ಸಿನಲ್ಲಿ ಮೂಡಿತು. 
 
ಲಂಡನ್ ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆಂದು ಅಲ್ಲಿನ   ವಿಮಾನನಿಲ್ದಾಣದಿಂದ ಇಳಿದು  ಹೊರಗೆ ಬರುತ್ತಿದ್ದಂತೆಯೇ ೭೦-೮೦ ಜನ ಸತ್ಯ ದರ್ಶನ ಕಾರ್ಯಕ್ರಮ ಕೇಳಿದ ಶ್ರೋತೃಗಳು   ನನ್ನನ್ನು ಭೇಟಿಮಾಡಲು  ಕಾಯುತ್ತಿದ್ದರು. ಇದೇ  ತರಹ ಬೇರೆ ದೇಶಗಳಲ್ಲೂ   ಜನರು ಸತ್ಯ ದರ್ಶನ ಕಾರ್ಯಕ್ರಮವನ್ನು ಅಸ್ತೆಯಿಂದ ನೋಡುತ್ತಿರುವುದನ್ನು ಗಮನಿಸಿದ್ದೇನೆ. 
 
ಹೊಸಪೇಟೆಯಲ್ಲಿ ವಸಂತ ಮಾಧವ ರಾವ್, ಜೊತೆಗೆ  ಕಳೆದ ಅನುಭವಗಳು. ಅವರು ಎಲ್ಲಾ ಕಂತುಗಳನ್ನು ತಪ್ಪದೆ  ನೋಡುತ್ತಿರುವ ವಿಷಯ ವನ್ನು ಅವರ ಬಾಯಿನಿಂದ  ಕೇಳಿ ಭಾವುಕನಾದೆ.    
 
ವರ್ಷಕ್ಕೊಮ್ಮೆ ಶಿವಮೊಗ್ಗ  ನಗರಕ್ಕೆ ಹೋದಾಗ ಮಾಧವರಾವ್  ಜೊತೆಕಳೆದ ಕ್ಷಣಗಳು ಮರೆಯಲಾರದ ನೆನಪನ್ನು  ಮೂಡಿಸಿವೆ ಅವರು   ಉಪಹಾರಕ್ಕೆ ಕರೆದರು. ಹತ್ತು ನಿಮಿಷ ಕೂಡಲು ಹೇಳಿ ಸ್ನಾನಮಾಡಿ ಮಡಿಯುಟ್ಟು ಬಂದು  ಶ್ರದ್ಧಾ ಭಕ್ತಿಗಳಿಂದ ಭಗವದ್ಗೀತೆಯ ಪ್ರವಚನ ಕೇಳಲು ಆರಂಬಿಸಿದ್ದನ್ನು ನೋಡಿ  ಮೂಕ ವಿಸ್ಮಿತನಾದೆನು.  
 
ಹಿತವಾದ ಭಾವುಕತೆಯಿಂದ ನಲುಗಿದ ಮತ್ತೊಂದು ಸಮಯ.  ಕಾರವಾರದ ಸದಾಶಿವರಾಯರ ಮನೆಯಲ್ಲಿ ಉಪಹಾರಕ್ಕೆ ಸ್ವಾಗತ ಮಾಡಿದ್ದರು.  ಒಬ್ಬ ವೃದ್ಧರನ್ನು ಕರೆದುಕೊಂಡು ಬಂದು  ತೆಲೆವಿಶನ್ ಪೆಟ್ಟಿಗೆ ಮುಂದೆ  ಕೂಡಿಸಿದರು. ಆತ ನಿಧಾನವಾಗಿ ತನ್ನ  ಕೈಬೆರಳುಗಳಿಂದ ತಡವರಿಸುತಾ  ನನ್ನ  ಗಡ್ಡ ಮುಖಗಳನ್ನು  ಸವರಿ ಪ್ರೀತಿಯಿಂದ  ಮಾತಾಡಿಸಿದರು   ನನಗೆ ಆತ   ಕುರುಡನೆಂಬ ಭಾವನೆ ಸ್ವಲ್ಪವೂ ಬರಲಿಲ್ಲ. ಅದಲ್ಲದೆ ಬಹಳಷ್ಟು ಕಂತುಗಳನ್ನು ಕೇಳಿದ (ವೀಕ್ಷಿಸಿದ) ಮಧುರ  ಅನುಭವಗಳನ್ನು ನೆನೆಯುತ್ತಾ, ಮತ್ತೆ ಹಲವಾರು ಪ್ರಶ್ನೆಗಳನ್ನು ಕೇಳಿ  ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡ ಪರಿ ನನ್ನನ್ನು ಮೂಕ ನನ್ನಾಗಿಸಿತು    
 
ಚೇತನ  ಹೆಗಡೆ  : ಇಷ್ಟು  ವರ್ಷಗಳ ತಮ್ಮ ಉಪನ್ಯಾಸಗಳ ನಂತರ  ನೆರೆದ  ಪ್ರೇಕ್ಷರು  ನಿಮ್ಮನ್ನು ಹೆಚ್ಚಾಗಿ ಕೇಳುವ ಪ್ರಶ್ನೆಗಳಾವುವು  ?
 
ಪಾವಗಡ ಪ್ರಕಾಶರಾಯರು  :   ಜನರಿಗೆ ಬದುಕಿನ ಸಮಯಕ್ಕಿಂತ  ಸತ್ತಮೇಲೆ ಮಾಡಬಹುದಾದ  ತಿಥಿ,  ಆತ್ಮ ಸ್ಥಿತಿ,ಪಿಂಡಪ್ರದಾನ, ಅಪರಕರ್ಮಗಳಬಗ್ಗೆ, ಹೆಚ್ಚು ಆಸಕ್ತಿ ತೋರಿಸುತ್ತಾರೆ. ವೇದಾಂತಕ್ಕೆ ಹೋಲಿಸಿದರೆ, ಸಾಹಿತ್ಯ, ಮತ್ತು ಇತಿಹಾಸದ ವಿಷಯಗಳಲ್ಲಿ ಕಡಿಮೆ ಪ್ರಶ್ನೆಗಳನ್ನು  ಕೇಳಿದಂತೆ ಅನಿಸಿಕೆ.  ರಾಮಾಯಣ ಮಹಾಭಾರತಗಳಲ್ಲಿ ಬರುವ ಪಾತ್ರಗಳ ಬಗ್ಗೆ  ಪ್ರಶ್ನೆಗಳು ಮತ್ತು ತಮ್ಮ ವೈಯಕ್ತಿಕ ಅನಿಸಿಕೆಗಳು  ಇತ್ಯಾದಿ 
 
ಚೇತನ  ಹೆಗಡೆ  :  ಒಂದು ಸಾವಿರ ಕಂತುಗಳನ್ನು ಮುಗಿಸಿರುವ  ಹಿನ್ನೆಲೆಯಲ್ಲಿ ಇನ್ನೇನಾದರೂ  ಹೇಳಲು ಇಚ್ಚಿಸುವಿರಾ  ?   
ಈ ಸಮಯದಲ್ಲಿ ಶ್ರೋತೃಗಳ ಮಧ್ಯೆ  ಹೇಳಾಲೇ ಬೇಕಾದ  ವಿಷಯಗಳ ಪಟ್ಟಿಏನಾದರೂ  ಇದೆಯೇ ದಯಮಾಡಿ ತಿಳಿಸಿ  :
 
ಪಾವಗಡ ಪ್ರಕಾಶರಾಯರು  :   ಹೌದು ದೊಡ್ಡ ಪಟ್ಟಿಯೇ ಇದೆ. ಅವರುಗಳ ಸಹಕಾರವಿಲ್ಲದೆ ಈ ಕಾರ್ಯಕ್ರಮ   ಕಳೆಕಟ್ಟುತ್ತಿರಲಿಲ್ಲ ಉದಾಹರಣೆಗೆ : 
ದೂರದರ್ಶನದ  ಇಲಾಖೆಯ  ಡ್ರೈವರ್ ಗಳು, ಕಾರ್ಯಕ್ರಮದ ತಯಾರಕರು, ನಿರ್ದೇಶಕರು,  ಬೆಳಕು,ಧ್ವನಿ ಪರೀಕ್ಷೆ, ದರ್ಶನ ಪರೀಕ್ಷೆ  ಮೊದಲಾದ ಪರಿಕರಗಳ ನಿರ್ದೇಶಕರು, ಮೇಕ್ ಅಪ್ ತಜ್ಞರು, ಛಾಯಾಗ್ರಾಹಕರನ್ನು ಪ್ರೀತಿಯಿಂದ ನೆನೆದು ಅವರಿಗೆ ಕೃತಜ್ಞತೆ  ಸಲ್ಲಿಸುವ ಅನಿವಾರ್ಯತೆಯ  ಪರಮ ಸತ್ಯದ  ಬಗ್ಗೆ  ಹೃದಯ ತುಂಬಿ ಬರುತ್ತದೆ.  ನಿರ್ಮಾಪಕ ಸುಧಾಕರ ಪ್ರಿಯ ಈಗ ನಮ್ಮ ಜೊತೆಗಿದ್ದಾರೆ.  ಹಿಂದಿದ್ದ ಹಲವರಲ್ಲಿ ನನಗೆ ನೆನಪಾಗುವುದು, ಪ್ರಕಾಶ್, ಹರೀಶ್, ಚಿಕ್ಕ ರಂಗಯ್ಯ, ಮೊದಲಾದವರು. 
ಪ್ರಚ್ಚಕ ಪ್ರತಿನಿಧಿಗಳಲ್ಲಿ ಸುಮಾರು ೧೪   ಮಂದಿ ಇದ್ದರು. ಅದರಲ್ಲಿ ಈಗ ಇರುವಾಕೆ  ಚೇತನಾ  ಹೆಗಡೆಯೋಬ್ಬಳೇ . ಆಕೆ  ಈಗಾಗಲೇ ೫೦೦+ ಕಂತುಗಳ. ನಿರೂಪಣೆಯನ್ನು ಸಮರ್ಪಕವಾಗಿ ಮಾಡಿದ್ದಾಳೆ  ಪ್ರತಿ ಕಾರ್ಯಕ್ರಮದ ಮೊದಲು ನಿರೂಪಕಿಯಾಗಿ  ಅದೆಷ್ಟು ತಯಾರಿಮಾಡಿಕೊಳ್ಳಬೇಕಾಗುತ್ತದೆ ಎನ್ನುವುದು ತಿಳಿಸುವುದು ಕಷ್ಟ.
 
ದೂರದರ್ಶನ ಚಂದನ ವಾಹಿನಿಯ  ರೂವಾರಿ  ಮಹೇಶ್ ಜೋಶಿಗಳ ಪ್ರೊತ್ಸಾಹ ಮತ್ತು ಹಿತನುಡಿಗಳು ನಮಗೆಲ್ಲಾ   ಅತ್ಯಂತ ಪ್ರಿಯವಾದ ಸತ್ಯದರ್ಶನ ಕಾರ್ಯಕ್ರಮಗಳು  ಇದುವರೆಗೆ ಮುಂದುವರೆಸಲು ಕಾರಣವಾದವು.  
ಚೇತನಾ ಹೆಗಡೆ  : ಚಂದನ ವಾಹಿನಿ ಕನ್ನಡಿಗರ ಜ್ಞಾನ ವಾಹಿನಿಯಾಗಿ ಜ್ಞಾನ  ಸುಧೆಯನ್ನು ನೀಡುತ್ತಾ ಬಂದಿದೆ ಎಲ್ಲ ಶ್ರೋತೃಗಳ ಪರವಾಗಿ  ತಮಗೆ  ಅಭಿನಂದನೆಗಳು. 
ದೂರದರ್ಶನದ  ವೀಕ್ಷಕನೊಬ್ಬನ   ಅನಿಸಿಕೆಗಳು :   
ನನ್ನ ಹೆಸರು ಲಕ್ಷ್ಮೀ ವೆಂಕಟೇಶ,  ೫೦  ವರ್ಷಗಳಿಂದ ಮುಂಬಯಿ ನಗರದ ಘಾಟ್ಕೊಪರ್ ಉಪನಗರದ  ನಿವಾಸಿ.  
ಚಂದನ   ವಾಹಿನಿಯಲ್ಲಿ ಬಿತ್ತರಿಸಲ್ಪಡುವ   ಶನಿವಾರ- ರವಿವಾರ   ಪ್ರತಿ  ಕಂತಿನ ನಿಮ್ಮ  ಕಾರ್ಯಕ್ರಮಗಳನ್ನು ತಪ್ಪದೆ ವಿಕ್ಷಿಸುವರಲ್ಲಿ ನಾ
ನೂ  ಒಬ್ಬ. ನಮ್ಮ ಮನೆಯ  ಎಲ್ಲಾ ಸದಸ್ಯರು ನಿಮ್ಮ  ಉಪನ್ಯಾಸವನ್ನು ಮೆಚ್ಚಿಕೊಂಡಿದ್ದಾರೆ   
 
ನನಗೆ ಪ್ರಿಯರಾದ ಪ್ರವಚನಕಾರರು  :
 
ಸುಮಾರು ನನ್ನ  ೨೩ ನೇ ವಯಸ್ಸಿನಿಂದ ನಾನು ಪ್ರವಚನಕೇಳುವ ಅಭ್ಯಾಸ ಮಾಡಿಕೊಂಡೆ. ಬಾಲ್ಯದಲ್ಲಿ ನನ್ನ  ಅಜ್ಜಿಯವರ ಜೊತೆ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್ ನಲ್ಲಿದ್ದ ವಾಲ್ಮಿಕಾಶ್ರಮದಲ್ಲಿ  ಗುರುರಾಜುಲು ನಾಯಿಡು, ಭದ್ರಗಿರಿಕೇಶವದಾಸ್, ಇತ್ಯಾದಿ. ಸ್ವಾಮಿರಂಗನಾಥಾನಂದ್ ಜಿ,
ಮುಂಬಯಿಗೆ  ಬಂದಮೇಲೆ ಶ್ರೀ  ಚಿನ್ಮಯಾನಂದ್ ಜಿ, ಕೃಪಾಳುಮಹಾರಾಜ್, ಭಕ್ತಿವೇದಂತ ಪ್ರಭುಪಾದ , ಅಷ್ಟಾವಧಾನಿಗಣೇಶ್, ಮೊದಲಾದವರು,
 
ಈಗ ಸುಮಾರು  ೧೩ ವರ್ಷಗಳಿಂದ  ಪ್ರಕಾಶರಾಯರುಕೊಡುತ್ತಿರುವ   ಸತ್ಯ ದರ್ಶನ ಕಾರ್ಯಕ್ರಮ,ಮತ್ತು    ಭಗವದ್ಗೀತೆಯ ಪ್ರವಚನಗಳನ್ನು  ನಾವು ವಿದೇಶಗಳಲ್ಲಿದ್ದಾಗಲೂ  ಮರೆಯದೆ ನೋಡಿ ಕೇಳುತ್ತಿದ್ದೆವು. ದೂರದರ್ಶನವಲ್ಲದೆ ಅತಿ ಹೆಚ್ಚು  ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ,ಅನೇಕ ಊರುಗಳಲ್ಲಿ  ಮತ್ತು ವೇದಿಕೆಗಳಲ್ಲಿ ಅವರು ಪ್ರವಚನಗಳನ್ನು ಕೊಡುತ್ತಾ ಬಂದಿದ್ದಾರೆ.  ಪ್ರಕಾಶ್ ರಾಯರು ಒಬ್ಬ ಮಹಾನ್ ಚಿಂತಕ,  ಸದಾ  ಅಧ್ಯನ ಶೀಲ, ಉನ್ನತ ವಿಚಾರಗಳ ಹೆಮ್ಮೆಯ  ಭಾರತೀಯ, ಶ್ರೇಷ್ಠ ಕನ್ನಡಿಗ  ಮತ್ತು ನಿಜವಾದ ಅರ್ಥದಲ್ಲಿ  ಗುರುವೆಂದು  ಅಭಿಮಾನಗಳ ಬಾಯಿಂದ   ಕರೆಸಿಕೊಳ್ಳಲರ್ಹವಾದ ವ್ಯಕ್ತಿ ಗಳಲ್ಲೊಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ    

Comments