ಸರ್ವಜ್ಞನ ಒಗಟುಗಳು
ಸರ್ವಜ್ಞನ ಈ ಒಗಟುಗಳಿಗೆ ಉತ್ತರ ತಿಳಿಸಿ
ಇನ್ನು ಬಲ್ಲರೆ ಕಾಯಿ ಮುನ್ನೂರ ಅರವತ್ತು
ಹಣ್ಣು ಹನ್ನೆರೆಡು, ಗೊನೆ ಮೂರು, ತೊಟ್ಟೊ೦ದು
ಚೆನ್ನಾಗಿ ಪೇಳಿ ಸರ್ವಜ್ಞ II
ಹಲವು ಮಕ್ಕಳ ತಂದೆ | ತಲೆಯಲ್ಲಿ ಜುಟ್ಟವದೆ |
ಜಾವವರಿವವನ ಹೆಂಡತಿಗೆ|
ನೋಡಾ ಸರ್ವಜ್ಞ ||
ಕಚ್ಚಿದರೆ ಕಚ್ಚುವದು | ಕಿಚ್ಚಲ್ಲ ಚೇಳಲ್ಲ |
ಅರಿದಲ್ಲ ಈ ಮಾತು |
ಬಲ್ಲೆ ಸರ್ವಜ್ಞ ||
ಇರಿದರೆಯು ಏರಿಲ್ಲ | ಹರಿದರೆಯು ಸೀಳಿಲ್ಲ|
ಋಣವಿಲ್ಲ ಕವಿಗಳಲಿ |
ಪೇಳಿ ಸರ್ವಜ್ಞ ||
ಉರಿ ಬಂದು ಬೇಲಿಯನು | ಹರಿದು ಹೊಕ್ಕದ ಕಂಡೆ|
ಬಗೆಗೆ ಕವಿಕುಲ ಶೇಷ್ಠರು
ಪೇಳಿ | ಸರ್ವಜ್ಞ ||
ಎಂಟು ಬಳ್ಳದ ನಾಮ | ಗಂಟಲಲಿ ಮುಳ್ಳುಂಟು |
ಪಿಡಿದು ಬಡಿಸುವದು,
ಕವಿಗಳಲಿ |ಸರ್ವಜ್ಞ ||
ಮಣಿಯ ಮಾಡಿದನೊಬ್ಬ | ಹೆಣಿದು ಕಟ್ಟಿದನೊಬ್ಬ|
ಸತ್ತವನೊಬ್ಬ ಸಂತೆಯೊಳು |
ಮಾರಿದರು ಸರ್ವಜ್ಞ ||
ಅರೆವ ಕಲ್ಲಿನ ಮೇಲೆ ಮರವ ಹುಟ್ಟಿದ ಕ೦ಡೆ
ಮರದ ಮೇಲೆರೆಡು ಕರ ಕ೦ಡೆ, ವಾಸನೆಯು
ಬರುತಿಹುದ ಕ೦ಡೆ ಸರ್ವಜ್ಞ II
ಮೂರು ಕಾಲಲಿ ನಿ೦ತು, ಗೀರಿ ತಿ೦ಬುದು ಮರನ
ಆರಾರಿ ನೀರ ಕುಡಿದಿಹುದು, ಕವಿಗಳಲಿ
ಧೀರರಿದ ಪೇಳಿ ಸರ್ವಜ್ಞ II
ಹತ್ತುತಲೆ ಕೆಂಪು | ಮತ್ತಾರುತಲೆ ಕರಿದು |
ನೊಡಲ ನುರಿಸುವದು |
ಕವಿಗಳಿದರಪೇಳಿ ಸರ್ವಜ್ಞ ||
ಹಲ್ಲು ನಾಲಿಗೆಯಿಲ್ಲ | ಸೊಲ್ಲು ಸೋಜಿಗವಲ್ಲ |
ಮೃಗವ ಹಿಡಿಯುವದು ಲೋಕದೊಳ |
ಠಾವಿನಲಿ ಸರ್ವಜ್ಞ ||
Comments
ಉ: ಸರ್ವಜ್ಞನ ಒಗಟುಗಳು
ಸರ್ವಜ್ಞನ ಹೆಸರಿನಲ್ಲಿರುವ ಒಗಟುಗಳು ನಿಜವಾಗಿಯೂ ಸರ್ವಜ್ಞ ರಚಿಸಿದವೇ ಆಗಿವೆಯೇ? ಅನ್ಯಥಾ ಭಾವಿಸದಿರಿ, ಏಕೆಂದರೆ ಹಲವಾರು ರಚನೆಗಳು ಸರ್ವಜ್ಞ ರಚಿಸಿರದಿದ್ದರೂ ಆತನ ಹೆಸರಿನಲ್ಲಿ ಪ್ರಚುರಗೊಂಡಿವೆ.
ಉ: ಸರ್ವಜ್ಞನ ಒಗಟುಗಳು
ಮೇಡಂ , ಮೊದಲನೆಯದಂತೂ ಸುಲಭವಾಗಿತ್ತು. - ಒಂದು ವರ್ಷ.
ಉಳಿದ ಉತ್ತರ ಗಳನ್ನು ದಯವಿಟ್ಟು ವಿವರಣೆ ಸಹಿತ ತಿಳಿಸಿಬಿಡಿ