ರಾಜ್ಯೋತ್ಸವ ದಿನ ಬಿಡುಗಡೆ “ಸಾವಯವ ಸಂಪದ” ತಿಂಗಳ ಪತ್ರಿಕೆ

Submitted by addoor on Tue, 11/01/2016 - 20:57

ಕನ್ನಡನಾಡು ಉದಯವಾಗಿ ೬೦ ವರುಷಗಳು ತುಂಬಿರುವ ಹೊತ್ತಿನಲ್ಲಿ, “ಸಂಪದ" ಬಳಗದಿಂದ ಕನ್ನಡಿಗರೆಲ್ಲರಿಗೆ ಹಾರ್ದಿಕ ಶುಭಾಶಯಗಳು.
ಈ ಸಂಭ್ರಮದ ಸಂದರ್ಭದಲ್ಲಿ, “ಸಂಪದ"ದಿಂದ ಕನ್ನಡಿಗರಿಗೆ ಹಾಗೂ ಲೋಕಕ್ಕೆ ಅರ್ಪಿಸುತ್ತಿದ್ದೇವೆ, ಸಾವಯವ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಮೀಸಲಾದ ಆನ್ ಲೈನ್ ಮಾಸಪತ್ರಿಕೆ: “ಸಾವಯವ ಸಂಪದ”. " ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ " 
ನಮ್ಮ ಊಟದ ಬಟ್ಟಲಿನಲ್ಲಿ ವಿಷ ತುಂಬಿಕೊಳ್ಳುತ್ತಿರುವ ಈಗಿನ ಸನ್ನಿವೇಶದಲ್ಲಿ “ವಿಷಮುಕ್ತ ಊಟದ ಬಟ್ಟಲು ಆಂದೋಲನ” ನಮ್ಮ ಕನ್ನಡನಾಡಿನಲ್ಲಿ ಅಲ್ಲಲ್ಲಿ ಬಲಗೊಳ್ಳುತ್ತಿದೆ. ಇದರ ಜೊತೆಯಲ್ಲೇ, ವಿಷಮುಕ್ತ ಆಹಾರ ಒದಗಿಸಬಲ್ಲ ಸಾವಯವ ಕೃಷಿ ಅಲ್ಲಲ್ಲಿ ಬೇರುಬಿಡುತ್ತಿದೆ.
ಇವೆಲ್ಲವನ್ನು ದಾಖಲಿಸಲಿಕ್ಕಾಗಿ ಮತ್ತು ಸಾವಯವ ಕೃಷಿ ಸಂಘಟನೆಗಳ ನಡುವೆ ಹಾಗೂ ಸಾವಯವ ಕೃಷಿಕರ ನಡುವೆ ವಿಚಾರ ಮತ್ತು ಅನುಭವ ವಿನಿಮಯಕ್ಕಾಗಿ “ಸಾವಯವ ಸಂಪದ” ವೇದಿಕೆಯಾಗಬೇಕು ಎಂಬುದು ನಮ್ಮ ಆಶಯ.
ಮೊದಲ ಸಂಚಿಕೆ “ಸಂಪದ”ದಲ್ಲಿ ನಿಮ್ಮ ಎದುರಿಗಿದೆ. ನಿಮ್ಮ ಸಲಹೆಸೂಚನೆಗಳಿಗಾಗಿ ಕಾದಿದ್ದೇವೆ.
 
  ಅಡ್ಡೂರು ಕೃಷ್ಣ ರಾವ್                                         
  ಸಂಪಾದಕ