ನಗೆಹನಿಗಳು ( ಹೊಸವು ?) - 41 ನೇ ಕಂತು

ನಗೆಹನಿಗಳು ( ಹೊಸವು ?) - 41 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)
****
- ಮೊನ್ನೆ ಒಂದು ಜೋಕ್ ಕೇಳಿದೆ. ನಿನಗೆ ಹೇಳಿದ್ದೀನೋ ಇಲ್ಲವೋ ……
- ಹಾಸ್ಯಮಯ ಆಗಿದೆಯೆ ಅದು ?
- ಹೌದು.
- ಹಾಗಾದರೆ ನೀನು ಹೇಳಿಲ್ಲ, ಈಗ ಹೇಳು.
****
- ಪತ್ರಿಕೆಗಳ ಸ್ಥಾನವನ್ನು ಇಂಟರ್‌ನೆಟ್ ವಹಿಸಲು ಸಾಧ್ಯವಿಲ್ಲ
- ಏಕೆ ?
- ಇಂಟರ್‌ನೆಟ್ ನಿಂದ ಗಾಳಿ ಹಾಕಿಕೊಳ್ಳಲು ಸಾಧ್ಯವೇ ?
ಇಂಟರ್‌ನೆಟ್ ಮೇಲೆ ಅವಲಕ್ಕಿ ಹಾಕಿಕೊಂಡು ತಿನ್ನಬಹುದೇ ?
****
- ಇವತ್ತಿನ ತಾರೀಕು ಏನು ?
- ನಿನ್ನ ಹತ್ತಿರ ಇರೋ ಪೇಪರ್ ನೋಡಬಾರದೇ ?
- ಅದರಿಂದ ಏನೂ ಲಾಭ ಇಲ್ಲ, ಅದು ನಿನ್ನೆಯದು !
****
- ಗುಂಡ ತುಂಬಾ ಜಾಣ.
- ಜಾಣನೇ ? ಕೋಟ್ಯಾಧೀಶನ ಮಗಳನ್ನು ಮದುವೆ ಆಗಿದ್ದಾನೆ , ಅಷ್ಟೇ.
- ಅಷ್ಟೇನೆ ? ನೀನು ಯಾವನಾದರೂ ಕೋಟ್ಯಾಧೀಶನ ಮಗಳನ್ನು ಮದುವೆ ಆಗಲು ಪ್ರಯತ್ನಿಸಿದ್ದೀಯಾ ?

Rating
No votes yet

Comments