ಭಾಗ - ೧ ವೇದ ಗಣಿತ ಕಿರು ಪರಿಚಯ : ಸಂಸ್ಕೃತದಲ್ಲಿ ಸಂಖ್ಯೆಗಳನ್ನು ಹೇಳುವ ವಿಧಾನ

ಭಾಗ - ೧ ವೇದ ಗಣಿತ ಕಿರು ಪರಿಚಯ : ಸಂಸ್ಕೃತದಲ್ಲಿ ಸಂಖ್ಯೆಗಳನ್ನು ಹೇಳುವ ವಿಧಾನ

ನಮ್ಮ ದೇಶವನ್ನು ನಾವು ಗೌರವಿಸಬೇಕಾದರೆ ನಮ್ಮ ದೇಶದ ಚರಿತ್ರೆ, ಸಂಸ್ಕೃತಿ ಹಾಗು ಇತರೇ ರಂಗಗಳಲ್ಲಿನ ನಮ್ಮ ಪೂರ್ವಿಕರ ಸಾಧನೆ ಏನೆನ್ನುವುದನ್ನು ನಾವು ಅರಿಯಬೇಕು. ನಮ್ಮ ದೊಡ್ಡತನ ನಮಗೇ ತಿಳಿಯದಿದ್ದಲ್ಲಿ ನಮ್ಮ ಬಗೆಗೇ ನಾವು ಕೀಳರಿಮೆ ಬೆಳೆಸಿಕೊಂಡು ಬೇರೆಯವರನ್ನು ಹೊಗಳಲು ಮೊದಲು ಮಾಡುತ್ತೇವೆ. ಈ ಹಿನ್ನಲೆಯಲ್ಲಿ ನಮ್ಮ ಹಿರಿಯರು ವೈಜ್ಞಾನಿಕ ಕ್ಷೇತ್ರದಲ್ಲಿ ಅದರಲ್ಲೂ ಗಣಿತ ಕ್ಷೇತ್ರದಲ್ಲಿ ಎಷ್ಟು ಮುಂದುವರೆದಿದ್ದರು ಎನ್ನುವುದಕ್ಕೆ ಒಂದು ನಿದರ್ಶನ ವೇದ ಗಣಿತ. ಇದರ ಬಗೆಗೆ ಸಾಮಾನ್ಯ ತಿಳುವಳಿಕೆ ಹೊಂದಲು ಸಂಸ್ಕೃತ ಅಥವಾ ಗಣಿತಗಳಲ್ಲಿ ವಿಶೇಷ ಪಾಂಡಿತ್ಯವೇನೂ ಬೇಕಿಲ್ಲ. ವೇದಗಣಿತದಂತಹ ವಿಷಯಗಳನ್ನು ಸಾಮಾನ್ಯ ಓದುಗರಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಇಂಗ್ಲೀಷಿನಲ್ಲಿ VEDIC MATHEMATICS - 4,  (PUBLISHED BY SHRI VEDA BHARATHI, AUTHOR: Dr. Remella Avadhanulu) ಎನ್ನುವ ಒಂದು ಸರಳ ಪುಸ್ತಕ ಪ್ರಚುರಿತವಾಗಿದೆ. ಈ ಪುಸ್ತಕವು ವೇದ ಗಣಿತದ ವಿವಿಧ ರಂಗಗಳನ್ನು ಪರಿಚಯಿಸುವ ಹನ್ನೆರಡು ಕಿರು ಲೇಖನಗಳನ್ನೊಳಗೊಂಡಿದೆ, ಅದರ ಮೊದಲು ಕಂತು ಈಗ ನಿಮ್ಮ ಮುಂದೆ ಇದೆ. ಎಂದಿನಂತೆ ಸಹೃದಯರಾದ ಸಂಪದಿಗರು ಇದನ್ನು ಸ್ವೀಕರಿಸುವಿರೆಂದು ಆಶಿಸುತ್ತೇನೆ.
***
ಭಾಗ - ೧ ವೇದ ಗಣಿತ ಕಿರು ಪರಿಚಯ :  ಸಂಸ್ಕೃತದಲ್ಲಿ ಸಂಖ್ಯೆಗಳನ್ನು ಹೇಳುವ ವಿಧಾನ
ಸೂತ್ರ - ಅಂಕಂ ವಾಮತೋ ಗತಿಃ
ಅರ್ಥ - ಅಂಕೆಗಳ ದಿಕ್ಕು ಬಲಗಡೆಯಿಂದ ಎಡಗಡೆಗೆ ಇರುತ್ತದೆ.
ವಿವರಣೆ - ಸಂಖ್ಯೆಗಳನ್ನು ಸಂಸ್ಕೃತದಲ್ಲಿ ಹೇಳಬೇಕಾದರೆ ಅದಕ್ಕೆ ಅನುಸರಿಸುವ ಅಂಕನ ಪದ್ಧತಿಯು ಹೀಗಿದೆ - ಏಕಮ್ (ಒಂದು), ದಶಮ್ (ಹತ್ತು), ಶತಮ್ (ನೂರು), ಸಹಸ್ರಮ್ (ಸಾವಿರ), ಮೊದಲಾಗಿ. ಹಾಗು ಸಂಖ್ಯೆಗಳನ್ನು ಹೇಳುವಾಗ ಅಂಕೆಗಳನ್ನು ಬಲದಿಂದ ಎಡಕ್ಕೆ ಹೇಳುವ ಪದ್ಧತಿಯನ್ನು ಅನುಸರಿಸಲಾಗುತ್ತದೆ.
ಉದಾಹರಣೆ ೧ : ತ್ರಯೋದಶಿ
೧. ಇದರ ಅರ್ಥವೇನೆಂದರೆ ಮೂರನ್ನು ಹತ್ತಕ್ಕೆ ಸೇರಿಸಬೇಕು ಆಗ ಅದರ ಬೆಲೆಯು ೧೩ ಆಗುತ್ತದೆ.
೨. ಇಲ್ಲಿ ಏಕ ಸ್ಥಾನಬೆಲೆಯನ್ನು ಸೂಚಿಸುವ ಅಂಕೆ ೩ - ಮೂರನ್ನು ಮೊದಲು ಹೇಳಲಾಗಿದೆ. ಆಮೇಲೆ ದಶಮ ಸ್ಥಾನದ ಅಂಕೆಯಾದ ೧ನ್ನು ಹೇಳಲಾಗಿದೆ.
೩. ಆದ್ದರಿಂದ ಅಂಕೆ ೩ ಹಾಗು ಅಂಕೆ ೧ - ಇವುಗಳು ಬಲಗಡೆಯಿಂದ ಎಡಕ್ಕೆ ಬರೆಯಲ್ಪಟ್ಟು (ಕಾಣಿಸಿಕೊಂಡು) ಸಂಖ್ಯೆ ೧೩ನ್ನು ಉಂಟುಮಾಡಿವೆ.
ಉದಾಹರಣೆ ೨ : ಆಷ್ಟೋತ್ತರ ಶತ
೧. ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವಾಗ ಅಷ್ಟೋತ್ತರ ಶತನಾಮಾವಳಿ ಎನ್ನುವ ಶಬ್ದವನ್ನು ಬಳಸುತ್ತೇವೆ.
೨. ಇದರ ಅರ್ಥ ಎಂಟು; ನೂರು ಆದಮೇಲೆ ಅಂದರೆ ೮+೧೦೮ = ೧೦೮ ಆಗುತ್ತದೆ.
೩. ಈ ಉದಾಹರಣೆಯಲ್ಲಿಯೂ ಏಕ ಸ್ಥಾನವನ್ನು ಸೂಚಿಸುವ ಸಂಖ್ಯೆ ೮ನ್ನು ಮೊದಲು ಹೇಳಲಾಗಿದೆ.
೪. ಆಮೇಲೆ ಶತ ಅಂದರೆ ನೂರರ ಸ್ಥಾನವನ್ನು ತಿಳಿಸುವ ಅಂಕೆ ಅಂದರೆ ಒಂದು ನೂರನ್ನು ಹೇಳಲಾಗಿದೆ.
೫. ಆದ್ದರಿಂದ  ೮ (ಏಕ ಸ್ಥಾನ) ಮತ್ತು ೧ (ನೂರರ ಸ್ಥಾನ)ದ ಅಂಕೆಗಳು ಬಲದಿಂದ ಎಡಕ್ಕೆ ಹೇಳಲ್ಪಟ್ಟು ೧೦೮ ಸಂಖ್ಯೆಯನ್ನು ಉಂಟು ಮಾಡುತ್ತವೆ. 

Rating
Average: 5 (1 vote)

Comments

Submitted by makara Sat, 04/08/2017 - 19:09

ಎಂದಿನಂತೆ ಈ ಲೇಖನವನ್ನು ಸೇರಿಸಿದ ಒಂದು ದಿನದೊಳಗೇ ೨೦-೨೦ ಮ್ಯಾಚಿನಲ್ಲಿ ಗಳಿಸುವ ರನ್ನುಗಳಂತೆ ಶತಕಕ್ಕೆ ಸಮೀಪ ಹಿಟ್ಟುಗಳನ್ನು ಕೊಟ್ಟಿರುವ ಸಂಪದಿಗರಿಗೆ ಹಾಗು ಈ ಲೇಖನದ ಕೊಂಡಿಯನ್ನು ಹಂಚಿಕೊಂಡು ಹೆಚ್ಚಿನ ಓದುಗರಿಗೆ ವಿಷಯವನ್ನು ತಲುಪಿಸಲು ಅನುಕೂಲ ಮಾಡಿಕೊಟ್ಟ ನನ್ನ ’ಫೇಸ್ ಬುಕ್’ ಗೆಳೆಯರಾದ ಶ್ರೀಯುತ ನಾಗೇಶ್ ಹಾಗು ಶ್ರೀಮತಿ ಭಾರತಿ ಬಸವರಾಜ್ ಅವರಿಗೆ ವಿಶೇಷ ಧನ್ಯವಾದಗಳು. ಮುಂದಿನ ಲೇಖನವನ್ನು ಓದಲು ಈ ಕೊಂಡಿಯನ್ನು ಬಳಸಿ. https://sampada.net/blog/%E0%B2%B5%E0%B3%87%E0%B2%A6%E0%B2%97%E0%B2%A3%E...

Submitted by makara Tue, 04/11/2017 - 22:05

ವೇದ ಗಣಿತದ ಕಿರು ಪರಿಚಯ - ಈ ಸರಣಿಯ ಲೇಖನವನ್ನು ವಾರದ ವಿಶೇಷ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿರುವ ಸಂಪದದ ನಿರ್ವಾಹಕ ಮಂಡಳಿಗೆ ಧನ್ಯವಾದಗಳು. ವಂದನೆಗಳೊಂದಿಗೆ ಶ್ರೀಧರ್ :)

Submitted by makara Tue, 04/11/2017 - 22:06

ವೇದ ಗಣಿತದ ಕಿರು ಪರಿಚಯ - ಈ ಸರಣಿಯ ಲೇಖನವನ್ನು ವಾರದ ವಿಶೇಷ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿರುವ ಸಂಪದದ ನಿರ್ವಾಹಕ ಮಂಡಳಿಗೆ ಧನ್ಯವಾದಗಳು. ವಂದನೆಗಳೊಂದಿಗೆ ಶ್ರೀಧರ್ ಬಂಡ್ರಿ :)