ಸಾಗಲಿ ಪಯಣ

ಸಾಗಲಿ ಪಯಣ

ಕವನ

ನಡೆಯುವಾಗ ಎಡವುದು ಸಹಜ
ಓಡುವವ ಬೀಳುವುದೂ ಸಹಜ
ಬಿದ್ದವಗೆ ಕಾಡುವ ಭಯ ಸಹಜ
ಮತ್ತೆ ಏಳುವುದಾಗಬೇಕು ಸಹಜ

ನೂರು ನಲಿವುಗಳ ಮರೆವುದೇಕೆ
ಮೂರು ನೋವುಗಳ ನೆನೆವುದೇಕೆ
ಬೇಡದ ಚಿಂತನೆ ಬಿಡಬಾರದೇಕೆ
ನಂಬಬೇಕು ಜೀವನ ಸಾಗಲೀಕೆ

ಹೃದಯದ ಭಾರ ಹೆಚ್ಚಿರಬಹುದು
ಮನದೊಳು ಕೆಚ್ಚು ಹತ್ತಿರಬಹುದು
ಬಾಳಾಟದಿ ಹೆಚ್ಚೇ ಕಾಡಿರಬಹುದು
ಸವಿನೆನಪೇ ಮುಗಿಲ ತೋರಬಲ್ಲುದು

ತಲೆಯಲ್ಲಿನ ದುಗುಡಗಳ ಬದಿಗೊತ್ತಿ
ಹೃದಯದಿ ಆನಂದದ ಬತ್ತಿಯ ಹಚ್ಚಿ
ಯೋಚನೆಗಳ ಹಗುರಾಗಿ ಹಾರಿಸಿ
ಪಯಣವ ಸಾಗಿಸಿ ಆರ್ದ್ರತೆ ಒರೆಸಿ

- ಸಚಿನ್. ಎಲ್. ಎಸ್

(Photo credit : Google)

ಚಿತ್ರ್

Comments

Submitted by soumya d nayak Sun, 09/17/2017 - 12:54

ಸಾಗಲಿ ಸುಂದರ ಪಯಣ
ಪಯಣದ ಜೊತೆಗಿರಲಿ ಕವನ