ಗೆಳತಿ ನಿನ್ನದೇ ನೆನಪಿನಲ್ಲಿ...

ಗೆಳತಿ ನಿನ್ನದೇ ನೆನಪಿನಲ್ಲಿ...

ಕವನ

1. ಕನಸಿನ ಬಾಗಿಲು ಬಡಿದು
    ದೂರ ಹೋಗಿರುವೆಯಲ್ಲಾ?
    ಮರಳಿ ಬಂದರೆ 
    ಬಂದುಬಿಡು ಗೆಳತಿ...
    ನನ್ನ ಹೃದಯದ ಬಾಗಿಲು
    ನಿನಗೆಂದೇ ತೆರೆದಿಡುವೆನು.....
 
2.  ನೋವು ನನಗಿರಲಿ
     ಕಣ್ಣೀರು ನನ್ನದಾಗಲಿ
     ನಿರಾಸೆ ನನ್ನಲಿರಲಿ
     ನೀ ನಗುತ್ತಿರು
     ಹೂವಿನ ಹಾಗೆ...
 
3.  ಸಾವಿರ ಜನುಮವಿದ್ದರೂ ನಾನು
     ಹೂವಾಗಬಯಸುವೆನು..
     ಎಂದಾದರೊಮ್ಮೆ ನೀ ನನ್ನನು
     ಮುಡಿಗೇರಿಸುವೆ ಎನ್ನುವ
     ಚಿಕ್ಕ ಆಸೆಯಿಂದ ನಾ ಕಾಯುತ್ತಿರುವೆನು
     ನಿನಗಾಗಿ.....

Comments