ಆಶಾ ಪಾಶ

ಆಶಾ ಪಾಶ

ಕವನ

ಬೇಕೆಂಬ ಆಸೆ 
ಬೆಂಬತ್ತಿ ಬೆನ್ನೇರಿ 
ಹಗಲು ಕೆಲಸದಲಿ
ನಿದ್ದೆ ಕನಸಿನಲಿ 
ಶ್ವಾಸ ನಿಶ್ವಾಸದಲಿ 
ರಕ್ತದಲಿ ಒಂದಾಗಿ 
ಬೆರೆತ ಫಲವಾಗಿ 
ಕಪ್ಪು ಬಿಳುಪಾಗಿ 
ಬೆಳಕು ಮಬ್ಬಾಗಿ 
ಸುಕ್ಕು ಪಕ್ಕಾಗಿ 
ಬೆನ್ನು ತಾ ಬಾಗಿ 
 
ಆದರೂ,
 
ಆಳ ಕಂದರದ
ತಾಳವು ಸಿಕ್ಕಿಲ್ಲ 

Comments

Submitted by sarojini.angadi Mon, 03/12/2018 - 21:15

ಎಡಿಟ್:
ಬೇಕೆಂಬ ಆಸೆ
ಬೆಂಬತ್ತಿ ಬೆನ್ನೇರಿ
ಹಗಲು ಕೆಲಸದಲಿ
ನಿದ್ದೆ ಕನಸಿನಲಿ
ಶ್ವಾಸ ನಿಶ್ವಾಸದಲಿ
ರಕ್ತದಲಿ ಒಂದಾಗಿ
ಬೆರೆತ ಫಲವಾಗಿ
ಕಪ್ಪು ಬಿಳುಪಾಗಿ
ಬೆಳಕು ಮಬ್ಬಾಗಿ
ಸುಕ್ಕು ಪಕ್ಕಾಗಿ
ಬೆನ್ನು ತಾ ಬಾಗಿ

ಆದರೂ,

ಆಳ ಕಂದರದ
ತಳವು ಸಿಕ್ಕಿಲ್ಲ