ಕವಿರಾಜಮಾರ್ಗ ಕಂಡಂತೆ ಕನ್ನಡನಾಡು, ನುಡಿ ಮತ್ತು ಕನ್ನಡಿಗರು

ಕವಿರಾಜಮಾರ್ಗ ಕಂಡಂತೆ ಕನ್ನಡನಾಡು, ನುಡಿ ಮತ್ತು ಕನ್ನಡಿಗರು

ಕಾವೇರಿಯಿಂದಮಾ ಗೋ-
ದಾವರಿವರೆಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು-
ಧಾವಳಯ ವಿಲೀನ ವಿಷದ ವಿಷಯವಿಶೇಷಂ||೧||
 
ಕಾವೇರಿಯಿಂದ ಆ (ದೂರದ) ಗೋದಾವರಿವರೆಗಿರುವ ವಿಶೇಷವಾಗಿ ಗುಱುತಿಸಿರುವ ಆ ಕನ್ನಡನಾಡು ಈ ಭೂಖಂಡದಲ್ಲೇ ವಿಶೇಷವಾದ ನಾಡು.
 
ಅದಱೊಳಗಂ ಕಿಸುವೊೞಲಾ
ವಿದಿತ ಮಹಾಕೊಪಣನಗರದಾ ಪುಲಿಗೆಱೆಯಾ
ಸದಭಿಸ್ತುತಮಪ್ಪೊಂಕು-
ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್||೨||
 
ಅದಱಲ್ಲೂ ಕಿಸುವೊೞಲ್=ಪಟ್ಟದಕಲ್ಲು ಆ (ದೂರದ) ವಿದಿತ=ಎಲ್ಲಾ ಜನರಿಗೂ ಗೊತ್ತಿರುವ ಮಹಾ=ದೊಡ್ಡ ಕೊಪಣ ನಗರದ=ಕೊಪ್ಪಳ ನಗರದ, ಪುಲಿಗೆಱೆಯ=ಲಕ್ಷ್ಮೇಶ್ವರದ ಹಾಗೂ ಆ (ದೂರದ) ಸದಭಿಸ್ತುತಮಪ್ಪ=ಸುಪ್ರಸಿದ್ಧವಾದ ಒಂಕುಂದದ=ಈಗಿನ ಒಕ್ಕುಂದದ ನಡುವಣ ನಾಡೆ, ನಾಡೆ=ವಿಶೇಷವಾಗಿ ಕನ್ನಡದ ತಿರುಳ್. ಅಂದರೆ ಈ ಕಾವೇರಿಯಿಂದ ಗೋದಾವರಿವರೆಗೆ ವ್ಯಾಪಿಸಿರುವ ಕನ್ನಡ ನಾಡಿನಲ್ಲಿ ಕಿಸುವೊೞಲ್ ಅಂದರೆ ಈಗಿನ ಬಾಗಲಕೋಟೆಯ ಪಟ್ಟದಕಲ್ಲು, ಕೊಪ್ಪಳ ಜಿಲ್ಲೆಯ ಕೊಪ್ಪಳ ನಗರ, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಬೆಳಗಾವಿಯ ಒಕ್ಕುಂದಗಳ ನಡುವಿನ (ಅಂದರೆ ಈ ನಾಲ್ಕು ಪಟ್ಟಣಗಳ ವಿಸ್ತೀರ್ಣದೊಳಗೆ ಬರುವ) ನಾಡೆ, ನಾಡೆ=ವಿಶೇಷವಾಗಿ ಕನ್ನಡನಾಡಿನ ತಿರುಳ್ಗನ್ನಡದ ಪ್ರದೇಶ.
 
ಪದನಱಿದು ನುಡಿಯಲುಂ ನುಡಿ-
ದುದನಱಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುಱಿತೋ-
ದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್||೩||
 
ಹದವನ್ನು (ಒಳಾರ್ಥವನ್ನು) ತಿಳಿದು ಮಾತಾಡಲೂ ಹೇಳಿದ್ದನ್ನು ತಿಳಿದು ಆರಯಲು=ವಿಮರ್ಶೆ ಮಾಡಲು ಬಲ್ಲರು ನಾಡವರು=ಈ ನಾಡಿನ ಜನರು. ನಿಜವಾಗಿಯು ಚದುರರ್=ಚತುರರು ಕುಱಿತೋದದೆಯುಂ= ಒಂದು ವಿಷಯದ ಬಗ್ಗೆ ಓದದೆಯೂ (ಅಂದರೆ ವಿಶೇಷ ಅಧ್ಯಯನ ಮಾಡದೆ) ಕಾವ್ಯವನ್ನು ಕಟ್ಟುವ ನಿಪುಣರು.
 
ಕುಱಿತವರಲ್ಲದೆ ಮತ್ತಂ
ಪೆಱರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್
ಕಿಱುವಕ್ಕಳುಮಾ ಮೂಗರು-
ಮಱಿಪಲ್ಕಱಿವರ್ ವಿವೇಕಮಂ ಮಾತುಗಳಂ||೪||
 
ಕುಱಿತವರಲ್ಲದೆ=ವಿಶೇಷಜ್ಞಾನವುಳ್ಳವರಲ್ಲದೆ ಮತ್ತುಳಿದ ಜನರೂ ತಮ್ಮ ತಮ್ಮ ಮಾತುಗಳಲ್ಲಿ ಜಾಣರು. ಚಿಕ್ಕಮಕ್ಕಳು (ಅದೇಕೆ) ಆ ಮೂಗರೂ ಕೂಡ ತಿಳಿಸಿ ಹೇಳಲು ಮಾತುಗಳನ್ನು ವಿವೇಕವನ್ನೂ‌ (ಯುಕ್ತಾಯುಕ್ತತೆಯನ್ನು) ತಿಳಿಯುವರು.
 
ಜಾಣರ್ಕಳಲ್ಲದವರುಂ
ಪೂಣಿಗರಱಿಯದೆಯುಮಱಿವವೋಲವಗುಣದಾ
ತಾಣಮನಿನಿಸೆಡೆವೆತ್ತೊಡೆ
ಮಾಣದೆ ಪಿಡಿದದನೆ ಕೃತಿಗಳಂ ಕೆಡೆನುಡಿವರ್||೫|
 
ಜಾಣರಲ್ಲದವರೂ ಸ್ಪರ್ಧೆಯಲ್ಲಿ ಅಚಾತುರ್ಯದಿಂದ ಗೊತ್ತಾಗುವ ಹಾಗೆ ಏನಾದರೂ ಕಾವ್ಯದಲ್ಲಿ ದೋಷವನ್ನು ಒಂದಿಷ್ಟಾದರೂ ತೋಱಿಸಿದರೆ ಅದನ್ನು ಬಿಡದೆ ಹೀಗಳೆಯುವರು.
 
ಸುಭಟರ್ಕಳ್ ಕವಿಗಳ್ ಸು-
ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್
ಅಭಿಮಾನಿಗಳತ್ಯುಗ್ರರ್
ಗಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್|| ೬||
 
ಈ ನಾಡವರು (ನಾಡಿನ ಜನರು) ಒಳ್ಳೆಯ ಸೈನಿಕರು, ಕವಿಗಳು, ಒಳ್ಳೆಯ ಅರಸರು, ಸುಂದರರು, ಸುಸಂಸ್ಕೃತ ನಡೆಯುಳ್ಳವರು, ಗುಣವಂತರು, ಅಭಿಮಾನಿಗಳು (ಕೋಪ ಬಂದಾಗ) ಅತ್ಯುಗ್ರರು, ಗಂಭೀರ ಚಿತ್ತರು ವಿವೇಕಿಗಳು
 
p { margin-bottom: 0.25cm; direction: ltr; color: rgb(0, 0, 0); line-height: 120%; }p.western { font-family: "Liberation Serif", "Times New Roman", serif; font-size: 12pt; }p.cjk { font-family: "Noto Sans CJK SC Regular"; font-size: 12pt; }p.ctl { font-family: "Lohit Devanagari"; font-size: 12pt; }

Comments

Submitted by kannadakanda Tue, 03/20/2018 - 17:45

ಱ ಮತ್ತು ೞವನ್ನು ಸರಿಯಾಗಿ ಬೞಸಿದ ಲೇಖನ

ಕಾವೇರಿಯಿಂದಮಾ ಗೋ-
ದಾವರಿವರೆಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು-
ಧಾವಳಯ ವಿಲೀನ ವಿಷದ ವಿಷಯವಿಶೇಷಂ||೧||
 
ಕಾವೇರಿಯಿಂದ ಆ (ದೂರದ) ಗೋದಾವರಿವರೆಗಿರುವ ವಿಶೇಷವಾಗಿ ಗುಱುತಿಸಿರುವ ಆ ಕನ್ನಡನಾಡು ಈ ಭೂಖಂಡದಲ್ಲೇ ವಿಶೇಷವಾದ ನಾಡು.
 
ಅದಱೊಳಗಂ ಕಿಸುವೊೞಲಾ
ವಿದಿತ ಮಹಾಕೊಪಣನಗರದಾ ಪುಲಿಗೆಱೆಯಾ
ಸದಭಿಸ್ತುತಮಪ್ಪೊಂಕು-
ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್||೨||
 
ಅದಱಲ್ಲೂ ಕಿಸುವೊೞಲ್=ಪಟ್ಟದಕಲ್ಲು ಆ (ದೂರದ) ವಿದಿತ=ಎಲ್ಲಾ ಜನರಿಗೂ ಗೊತ್ತಿರುವ ಮಹಾ=ದೊಡ್ಡ ಕೊಪಣ ನಗರದ=ಕೊಪ್ಪಳ ನಗರದ, ಪುಲಿಗೆಱೆಯ=ಲಕ್ಷ್ಮೇಶ್ವರದ ಹಾಗೂ ಆ (ದೂರದ) ಸದಭಿಸ್ತುತಮಪ್ಪ=ಸುಪ್ರಸಿದ್ಧವಾದ ಒಂಕುಂದದ=ಈಗಿನ ಒಕ್ಕುಂದದ ನಡುವಣ ನಾಡೆ, ನಾಡೆ=ವಿಶೇಷವಾಗಿ ಕನ್ನಡದ ತಿರುಳ್. ಅಂದರೆ ಈ ಕಾವೇರಿಯಿಂದ ಗೋದಾವರಿವರೆಗೆ ವ್ಯಾಪಿಸಿರುವ ಕನ್ನಡ ನಾಡಿನಲ್ಲಿ ಕಿಸುವೊೞಲ್ ಅಂದರೆ ಈಗಿನ ಬಾಗಲಕೋಟೆಯ ಪಟ್ಟದಕಲ್ಲು, ಕೊಪ್ಪಳ ಜಿಲ್ಲೆಯ ಕೊಪ್ಪಳ ನಗರ, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಬೆಳಗಾವಿಯ ಒಕ್ಕುಂದಗಳ ನಡುವಿನ (ಅಂದರೆ ಈ ನಾಲ್ಕು ಪಟ್ಟಣಗಳ ವಿಸ್ತೀರ್ಣದೊಳಗೆ ಬರುವ) ನಾಡೆ, ನಾಡೆ=ವಿಶೇಷವಾಗಿ ಕನ್ನಡನಾಡಿನ ತಿರುಳ್ಗನ್ನಡದ ಪ್ರದೇಶ.
 
ಪದನಱಿದು ನುಡಿಯಲುಂ ನುಡಿ-
ದುದನಱಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುಱಿತೋ-
ದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್||೩||
 
ಹದವನ್ನು (ಒಳಾರ್ಥವನ್ನು) ತಿಳಿದು ಮಾತಾಡಲೂ ಹೇೞಿದ್ದನ್ನು ತಿಳಿದು ಆರಯಲು=ವಿಮರ್ಶೆ ಮಾಡಲು ಬಲ್ಲರು ನಾಡವರು=ಈ ನಾಡಿನ ಜನರು. ನಿಜವಾಗಿಯು ಚದುರರ್=ಚತುರರು ಕುಱಿತೋದದೆಯುಂ= ಒಂದು ವಿಷಯದ ಬಗ್ಗೆ ಓದದೆಯೂ (ಅಂದರೆ ವಿಶೇಷ ಅಧ್ಯಯನ ಮಾಡದೆ) ಕಾವ್ಯವನ್ನು ಕಟ್ಟುವ ನಿಪುಣರು.
 
ಕುಱಿತವರಲ್ಲದೆ ಮತ್ತಂ
ಪೆಱರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್
ಕಿಱುವಕ್ಕಳುಮಾ ಮೂಗರು-
ಮಱಿಪಲ್ಕಱಿವರ್ ವಿವೇಕಮಂ ಮಾತುಗಳಂ||೪||
 
ಕುಱಿತವರಲ್ಲದೆ=ವಿಶೇಷಜ್ಞಾನವುಳ್ಳವರಲ್ಲದೆ ಮತ್ತುದ ಜನರೂ ತಮ್ಮ ತಮ್ಮ ಮಾತುಗಳಲ್ಲಿ ಜಾಣರು. ಚಿಕ್ಕಮಕ್ಕಳು (ಅದೇಕೆ) ಆ ಮೂಗರೂ ಕೂಡ ತಿಳಿಸಿ ಹೇೞಲು ಮಾತುಗಳನ್ನು ವಿವೇಕವನ್ನೂ‌ (ಯುಕ್ತಾಯುಕ್ತತೆಯನ್ನು) ತಿಳಿಯುವರು.