ಓ ಮನಸ್ಸೆ.....
ಕವನ
ನೀ ನನ್ನೊಳಗೊ? ನಾ ನಿನ್ನೊಳಗೊ?
ನೀ-ನಾ ಮಾಯೆಯೊಳಗೊ?
ಮನಸ್ಸೆ ನೀನೆಷ್ಟು ಚಂಚಲ!
ಕ್ಷಣಮಾತ್ರ ನಾ ಬಿಟ್ಟರೆ ಛಲ!
ಒದ್ದಾಡುವೆ ನೀರಿನಿಂದ ಹೊರಬಂದ
ಮೀನಿನಂತೆ ವಿಲ ವಿಲ!!!
ನಿನ್ನೊಳ ನಾ ಹೊಕ್ಕರೆ
ಆಸೆ ತೋರಿಸಿ ಬೇರೆಡೆ ತೂರಿಕೊಳ್ಳುವವ
ಗೊಂದಲ-ಗೋಜಲುಗಳ ಸುರಿಮಳೆ
ತಲೆಬುಡ ಇರದ ಪ್ರಶ್ನೊತ್ತರಗಳು
ಬುದ್ದಿಯು ದಿಕ್ಕೆಟ್ಟು ಹೋಗಿದೆ ನಿನ್ನ ಮಾಯೆಯೊಳಗೆ!!!
ನಶಿಸಿ ಹೋದ ಭೂತವ ನೆನೆದು
ಬಾರದೆ ಇರೊ ಭವಿಷ್ಯವ ಕಾದು
ವತರ್ ಮಾನದಿ ನಲಿವಂತೆ ಮಾಡುವ
ಹುಚ್ಚು ಮನಸ್ಸು!!!
ಬೀಸುವ ಗಾಳಿ ಹಿಡಿಯಲಾಗದಿರಬಹುದು
ತಾರೆಯ ಎಣಿಸಲಾಗದಿರಬಹುದು
ನಲಿವ ಮನವ ಹಿಡಿದಿರಿಸಲು
ಎಲ್ಲವು ನಮ್ಮಲ್ಲಿಯೆ ಇದೆ ಅಸ್ತ್ರ- ಶಸ್ತ್ರಗಳು!!!
ಹುಚ್ಚು ಮನಸ್ಸು ಬಂಧಿಸುತ್ತಿದೆಯೇನೋ ನಮ್ಮನ್ನೆ
ಬಂಧಿಯಾಗಬಾರದು, ಬದಲಾಗಿ
ಬಂಧಿಸಬೇಕು ಆ ಹುಚ್ಚುಕೋಡಿ ಮನಸ್ಸನ್ನೆ!!!!
Comments
ಉ: ಓ ಮನಸ್ಸೆ.....
chennagide !