ಬುರುಡಾಲಜಿ - ಆನಂದವ ಹುಡುಕಿ ಹೊರಟು
ನಾವು ಅದೆಷ್ಟೋ ಬಾರಿ ಖುಷಿ, ಸಂತೋಷ, ಆನಂದ, ನೆಮ್ಮದಿ ಇತ್ಯಾದಿ ಇತ್ಯಾದಿ ಪದಗಳಿಂದ ಕರಿಯಿಸಿಕೊಳ್ಳೋ ಅದನ್ನು ಅಥವಾ ಇವೆಲ್ಲದರ ಮಿಶ್ರಣದಂತೆ ಕಾಣಿಸಿಕೊಳ್ಳುವ ಆನಂದವನ್ನು ಕಂಡುಕೊಳ್ಳಲು ಸಫಲರಾಗುವುದೇ ಇಲ್ಲ ಎಂದೆನ್ನಿಸುತ್ತದೆ. ಅದೆಷ್ಟೋ ಬಾರಿ. ಅದೆಷ್ಟು ಹುಡುಕಿದರೂ ಅದೆಂದೂ ಸಿಗದ ಮಯಾಮ್ರುಗದಂತೆ ಮತ್ತಷ್ಟು ದೂರ ಓಡುತ್ತಲೇ ಇದೆಯೋ ಎಂದೆನ್ನಿಸುತ್ತದೆ. ಎಂದಾದರು ಇದೇಕೆ ಹೀಗೆಂದು ಯೋಚಿಸಿದ್ದೀರ? ಹಾಗೆ ಯೋಚಿಸಿದ್ದೆ ಆದರೆ ನೀವು ಸರಿಯಾದ ದಾರಿಯಲ್ಲಿ ಅದನ್ನು ಹುಡುಕಲು ಮೊದಲ ಹೆಜ್ಜೆಯನ್ನು ಆಗಲೇ ತೆಗೆದುಕೊಂಡಿದ್ದೀರ ಎಂದೆನ್ನಬಹುದು. ಏಕೆಂದರೆ ನಿಮಲ್ಲಿ ಇದು ಕನಿಷ್ಠ ಈ ಪ್ರಶ್ನೆಯನ್ನಾದರೂ ಎತ್ತಿದೆ “ ಏಕೆ ಇದು ನನ್ನಿಂದ ದೂರ ಓಡುತ್ತಿದೆ? “
ನನ್ನ ಪ್ರಕಾರ ಈ ಪ್ರಶ್ನೆಗೆ ಅತ್ಯಂತ ಸುಲಭವಾದ ಉತ್ತರವೆಂದರೆ ಅದು ನಿಮ್ಮಿಂದ ದೂರ ಓಡುತ್ತಿಲ್ಲ ನೀವು ಅದರಿಂದ ದೂರ ಓಡುತ್ತಿದ್ದಿರಿ ಎಂದೆನ್ನಬಹುದು. ಏಕೆಂದರೆ ಇದೊಂದು ಹೊರಗಿನ ಸಮಾಜದಲ್ಲಿ (ಎಕ್ಸ್ಟರ್ನಲ್ ವರ್ಲ್ಡ್) ಇತರೆ ಯಶಸ್ಸುಗಳನ್ನು ಕ್ಲೈಮ್ ಮಾಡಿದಂತೆ ಮಾಡುವ ವಸ್ತುವಲ್ಲ. ಅಡುಗೆ ಮಾಡುವಾಗ ಕಡಿಮೆ ಬಿದ್ದ ಇರುಳ್ಳಿಯನ್ನು ತರಲು ಉಟ್ಟ ಚಡ್ಡಿಯನ್ನೂ ಬದಲಿಸದೆ ರಪರಪನೆ ಮಾಲಿಗೆ ಓಡಿ ಇರುಳ್ಳಿಯ ಪೌಚ್ ಅನ್ನು ಹಿಡಿದು ಕಾಶ್ ಕೌಂಟರ್ ಅಲ್ಲಿ ಕಾರ್ಡ್ ಉಜ್ಜಿ ಕೊಂಡು ತಂದ ಕ್ವಿಕ್ ಫಿಕ್ಸ್ ಅಲ್ಲ. ಇದೊಂದು ದುಡ್ಡು ಕೊಟ್ಟು ಕೊಂಡ ರೇಶನ್ ಅಲ್ಲ, ಇನ್ನೊಬ್ಬರನ್ನು ಸೋಲಿಸಿ ಪಡೆದುಕೊಂಡ ಗೆಲುವಲ್ಲ, ಮುಗಿದ ತಕ್ಷಣ ಆಯಿತೆಂದು ಟಿಕ್ ಮಾಡಿ ಮುಗಿಸಿದ ಕ್ಯಾಲೆಂಡರ್ ಟಾಸ್ಕ್ ಅಲ್ಲ ಅಥವ ಬೇಕೆಂದಾಗ ಯೂಸ್ ಮಾಡಿ, ಹೊಸ ಟಾರಿಫ್ ಬಂದಾಕ್ಷಣ ಕಿತ್ತೊಗೆದ ಓಲ್ಡ್ ಸಿಮ್ ಕಾರ್ಡ್ ಅಲ್ಲ. ಇದೊಂದು ‘ಸ್ಟೇಟ್ ಆಫ್ ಮೈಂಡ್’. ನಿಮ್ಮ ಕಂಟ್ರೋಲ್ನಲ್ಲಿರದ ತಾನಾಗಿಯೇ ಉಧ್ಭವಿಸಿ ತಾನಾಗಿಯೇ ಮಾಯವಾಗುವ ಒಂದು ಭಾವ. ಅನುಭವಕ್ಕೆ ಬರುವ ಭಾವವನ್ನು ನನ್ನ ಅಕ್ಷರಗಳಲ್ಲಾಗಲಿ ನಿಮ್ಮ ವರ್ಣನೆಗಳಲ್ಲಾಗಲಿ ಹಿಡಿದಿಡುವುದು ಅಧಮ್ಯ ಅಪರಾಧವಾಗುತ್ತದೆ. ಇಲ್ಲಿ, ಮೇಲೆ ‘ನೀವು ಇದರಿಂದ ದೂರ ಓದುತಿದ್ದೀರಿ’ ಎಂಬುದನ್ನು ನೀವಿದನ್ನು ಸರಿಯಾದ ಜಾಗದಲ್ಲಿ ಹುಡುಕದೇ, ಇನ್ನೆಲ್ಲೋ ಹುಡುಕುತಿದ್ದಿರಿ ಎಂದು ಅರ್ಥಹಿಸಬಹುದು. ಅಂದರೆ ಇದನ್ನು ನೀವುಗಳು ಹೊರಗಿನ ಸಮಾಜದಲ್ಲಿ ಹುಡುಕುವ ಬದಲಾಗಿ ನಿಮ್ಮ ಆಂತರ್ಯದಲ್ಲಿ ಕಂಡುಕೊಂಡದ್ದೆ ಆದರೆ ನೀವಿದನ್ನು ಎಲ್ಲಿಯೂ ಹುಡುಕುವ ಅವಶ್ಯಕತೆಯೇ ಇಲ್ಲ ಎಂಬುದು ನನ್ನ ಅಭಿಪ್ರಾಯ. ಎಂದಿನಂತೆ ನಾನು ತಪ್ಪಿದ್ದರೂ ಇರಬಹುದು ನಿಮ್ಮ ವಿಚಾರಗಳನ್ನು ಸೇರಿಸಿ ಆನಂದವನ್ನು ಹಂಚುವ ಈ ಪ್ರಕ್ರಿಯಲ್ಲಿ ಎಲ್ಲರೂ ಭಾಗಿಯಾಗೋಣ.
ನಿವನ್ನಬಹುದು, ಯೋ, ಸುಮ್ನೆ ವಗಟ್ ನಂಗ್ ಬುರ್ಡೆ ವಡಿಬೇಡಯ್ಯೋ ಅದೇನ್ ಹೇಳಬೇಕೋ ಕರೆಕ್ಟ್ ಆಗಿ ಪಾಯಿಂಟ್ ಗೆ ಸರಿಯಾಗಿ ಹೇಳು ಅಂತ. ದಯವಿಟ್ಟು ಕ್ಷಮಿಸಿ ಇಲ್ಲಿ ನನ್ನ ಅಕ್ಷರಗಳ ಮೂಲಕ ನಿಮಲ್ಲಿ ವಿಚಾರದ ಚರ್ಚೆಯನ್ನು ಹುಟ್ಟು ಹಾಕುವುದು ನನ್ನ ಧೇಯ. ಹಾಗಾಗಿ ಸ್ವಲ್ಪ ನನಗನ್ನಿಸಿದ್ದನ್ನು ನಾನು ನನ್ನ ರೀತಿಯಲ್ಲಿ ಮಂಡಿಸುತ್ತಿದ್ದೇನೆ. ನಿಮಗೆ ಅನ್ನಿಸಿದ್ದನು ನೀವು ಸೇರಿಸಿ, ವಿಚಾರ ಬೆಳಿಯಲಿ. ಸೊ ಕಮಿಂಗ್ ಟು ದಿ ಪಾಯಿಂಟ್, ಈ ಸ್ಟೇಟ್ ಆಫ್ ಮೈಂಡ್ ಅಥವಾ ಆನಂದದ ಈ ಭಾವವನ್ನು ಹೇಗೆ ಆಂತರ್ಯದಲ್ಲಿ ಸ್ಥಾಪಿಸುವುದು? ನಾನು ಅಷ್ಟೊಂದು ಜ್ಞಾನಿ ಅಲ್ಲ ಕ್ಷಮಿಸಿ, ಆದರೆ ನನ್ನ ಪ್ರಕಾರ ಇದಕ್ಕೆ ಒಂದೇ ಸಿದ್ದ ಸೂತ್ರ ಮಾರ್ಗ ಅಂತಿಲ್ಲ ಎನ್ನಿಸುತ್ತಿದೆ. ಆದರೆ, ನಮ್ಮನ್ನು ನಾವು ಹೆಚ್ಚು ಹೆಚ್ಚು ವರ್ತಮಾನದಲ್ಲಿರಿಸಿಕೊಳಲ್ಲು ಪ್ರಯತ್ನಿಸಿದರೆ ಭೂತದ ವ್ಯಥೆಗಳಾಗಲಿ ಭವಿಷ್ಯದ ಆತಂಕಗಳಾಗಲಿ ನಮ್ಮನ್ನು ಅಷ್ಟಾಗಿ ಬಾಧಿಸುವುದಿಲ್ಲ. ನನ್ನ ಪ್ರಕಾರ ಹೆಚ್ಚು ಹೆಚ್ಚು ನಾವು ವರ್ತಮಾನವನ್ನು ಅನುಭವಿಸಿದಂತೆ ಹಚ್ಚು ಹೆಚ್ಚು ಈ ಸ್ಟೇಟ್ ಆಫ್ ಮೈಂಡ್ ಅನ್ನು ಅಕ್ಸೆಸ್ಸ್ ಮಾಡಬಹುದು ಎನ್ನಿಸುತ್ತದೆ. ನಮಗಿಷ್ಟವಾಗುವ ಕೆಲವು ಕ್ರಿಯೆಗಳು ಎಷ್ಟೋ ಸಾರಿ ಸಂಪೂರ್ಣವಾಗಿ ಗಡಿಯಾರವನ್ನೇ ಮರೆಯಿಸಿಬಿಡುತ್ತವೆ. ಎಲ್ಲರಿಗೂ ಸಮಯವನ್ನು ಮರೆಯಿಸಿಬಿಡುವ ಇಂತಹ ಕೆಲವು ಚಟುವಟಿಕೆಗಳು ಖಂಡಿತ ಇದ್ದೆ ಇರುತ್ತವೆ. ಸಂಗೀತ ಕೆಳುವುದಿರಬಹುದು, ಅಡುಗೆ ಮಾಡುವುದಿರಬಹುದು, ಆಟ ಆಡುವುದಿರಬಹುದು, ಓದುವುದಿರಬಹುದು, ಸಿನಿಮಾ ನೋಡುವುದಿರಬಹುದು, ಧ್ಯಾನಿಸುವುದಿರಬಹುದು ಇತ್ಯಾದಿ ಇತ್ಯಾದಿ. ಕೆಲವರಿಗೆ ಈ ರೀತಿಯ ಇಷ್ಟವಾದ ಚಟುವಟಿಕೆಗಳೇ ತಮ್ಮ ವ್ರುತ್ತಿಗಳಾಗಿ ಕೂಡ ಇರುತ್ತವೆ. ಈ ಚಟುವಟಿಕೆಗಳು ಹೆಚ್ಚಾಗಿ ನಮ್ಮನ್ನು ವರ್ತಮಾನದಲ್ಲಿ ಇರಿಸಿ ಕೊಳ್ಳುತ್ತವೆ ಎಂದೆನಿಸುತ್ತದೆ. ಇನ್ನೂ ಅನ್ಫಾರ್ಚುನೆಟ್ಲಿ ನನಗಿಷ್ಟವಾದ ಕೆಲಸ ನನ್ನ ವ್ರುತ್ತಿಯಲ್ಲ ಏನು ಮಾಡುವುದಯ್ಯ?... ಎಂದರೆ ಬಸವಣ್ಣ ಹೇಳಿದಂತೆ ನಿಮ್ಮ ಕೆಲಸವನ್ನೇ ಪ್ರೀತಿಸಿ. ಆಗ ವೃತ್ತಿಯು ನಿಮ್ಮ ಪ್ರಿತಿಯದು ನಂತರದ ಸಮಯವೂ ಪ್ರಿತಿಯದು. ಕಂಪ್ಲೀಟ್ ವರ್ತಮಾನ !!.
ವೃತ್ತಿಯನ್ನೇ ಪ್ರೀತಿಸಲಿ ಅಥವಾ ಪ್ರೀತಿಯ ಕೆಲಸವೇ ವ್ರುತ್ತಿಯಾಗಲಿ ಒಟ್ಟಿನಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ಮಾಡುತ್ತಿರುವ ಕೆಲಸದಲ್ಲಿ ತೊಡಗಿಸಿಕೊಂಡಷ್ಟು ನಾವು ಅದನ್ನು ಹಚ್ಚು ಹೆಚ್ಚು ಪ್ರೀತಿಸಲು ಶುರು ಮಾಡುತ್ತೇವೆಂದು ನನ್ನ ಅನಿಸಿಕೆ. ನೀವು ಮಾಡುವುದನ್ನು ಹೆಚ್ಚು ಹೆಚ್ಚು ಪ್ರಿತಿಸ್ದಷ್ಟು ಹೆಚ್ಚು ಹೆಚ್ಚು ವರ್ತಮಾನವನ್ನು ಅಕ್ಸೆಸ್ ಮಾಡಿದಂತೆ. ನೀವು ಹೆಚ್ಚು ಹೆಚ್ಚು ವರ್ತಮಾನವನ್ನು ಅಕ್ಸೆಸ್ ಮಾಡಿದಷ್ಟು ಬಾದೆಗಳು ಕಡಿಮೆ. ನಾಳೆಗಳು ಬಾಧೆಯಾಗಿರದೆ ಆತಂಕವಾಗಿರದೆ ಆನಂದದಿಂದ ಕೂಡಿರುತ್ತವೆ ಎಂದು ಅಟ್ಲೀಸ್ಟ್ ಎಕ್ಸ್ಪೆಕ್ಟ್ ಮಾಡಬಹುದು. ಟ್ರೈ ಮಾಡಿ ನೋಡಿ !!
ನೆನ್ನೆಯ ಬಾಧೆಯಲಿ
ನಿರ್ಮಲ ಜೀವವ ಬೇಯಿಸದಿರು
ನಾಳೆಯ ಚಿಂತೆಯಲಿ
ಕೋಮಲ ಮನವ ಕುದಿಸದಿರು
ಇಂದಿನ ಈ ಕ್ಷಣವ ಸವಿದು
ಸವಿಯಲಿ ಸವೆದು ಒಂದಾಗು
ಇದುವೇ ಸಂಸಾರ ಸಾರ
- ಬುರುಡೆದಾಸ
ಚಿತ್ರಗಳು -
[Past, present, and furure -Louis, paris - www.threadless.com
Έργο του Martin Whatson, στο Μαϊάμι των ΗΠΑ Πηγή: www.lifo.gr
https://www.storyblocks.com/stock-image/artistic-painting-of-christmas-g...
Comments
ಉ: ಬುರುಡಾಲಜಿ - ಆನಂದವ ಹುಡುಕಿ ಹೊರಟು
ಇಷ್ಟವಾಯಿತು.