ಕುಸುರೆಳ್ಳು ಮತ್ತು ಕುತೂಹಲ

ಕುಸುರೆಳ್ಳು ಮತ್ತು ಕುತೂಹಲ

ಸಂಕ್ರಮಣ ಹಬ್ಬಕ್ಕೆ ಉತ್ತರ ಕನಾ೯ಟಕ ಮತ್ತು ಮಹಾರಾಷ್ಟ್ರದಲ್ಲಿ ಕುಸುರೆಳ್ಳು ವಿನಿಮಯದ ಪದ್ಧತಿ ಇದ್ದು, ಆ ಬಗ್ಗೆ ನಿಮಗೆ ಗೊತ್ತಿರಬಹುದು. ಈ ಕುಸುರೆಳ್ಳು ಮಾಡುವ ವಿಧಾನ ಬಹಳಷ್ಟು ತಾಳ್ಮೆ ಬೇಡುವಂಥದು. ಸಕ್ಕರೆ ಪಾಕ ಮಾಡಿಟ್ಟುಕೊಂಡು , ಇದ್ದಲ ಒಲೆಯ ಮೇಲೆ ಒಂದು ಬುಟ್ಟಿಯಲ್ಲಿ ಎಳ್ಳು ಹಾಕಿ ನಿಧಾನವಾಗಿ ಒಂದೊಂದೇ ಚಮಚ ಸಕ್ಕರೆ ಪಾಕ ಹಾಕುತ್ತ ಕೈ ಆಡಿಸುತ್ತಿರಬೇಕು.

ಇದನ್ನು ನಮ್ಮ ಅವ್ವ ರಾತ್ರಿ ಮಲಗುವ ಮೊದಲು , ಎಲ್ಲ ಕೆಲಸ ಮುಗಿದ ಮೇಲೆ ಮಾಡುತ್ತ ಕೂಡುತ್ತಿದ್ದಳು.
ಹೀಗೆ ಒಂದು ಸಂದಭ೯ದಲ್ಲಿ ಈ ಕತೆಯನ್ನು ಹೇಳಿದ್ದಳು

ಒಬ್ಬಳು ಒಂಟಿ ಮುದುಕಿ ಇದ್ದಳು . ಅವಳು ಹಂಜಿ ತೆಗೆಯುತ್ತಿದ್ದಳು . ದಿನಾ ರಾತ್ರಿ ಎಲ್ಲ ಕೆಲಸ ಮುಗಿಸಿ ಊಟ ಆದ ಮೇಲೆ ಹಾಲು ಕಾಯಿಸುತ್ತಿದ್ದಳು. ಅಕ್ಕಪಕ್ಕದ ಜನರಿಗೆ ಅವಳು ಮಲಗುವ ಮೊದಲು ಅವಳ ಈ ಮಾತು ಕೇಳಿಸುತ್ತಿತ್ತು - "ಹಂಜಿನೂ ಆಯಿತು , ಹಾಲೂ ಕಾಯಿತು; ನೀನೂ ಬಂದ್ಯಾ , ಮಲಗೋಣ ಬಾ "
ಅವರಿಗೆ ಅನಿಸುತ್ತಿತ್ತು ಏನಿದು ಈ ವಯಸ್ಸಿನಲ್ಲಿ ಈ ಮಾತು ಹೇಳುತ್ತಿದ್ದಾಳೆ ಅಂತ ! ಯಾರಿಗೆ ಈ ಮಾತು ಅಂತ!

ಕೊನೆಗೆ ಒಬ್ಬ ಕೇಳಿಯೇ ಬಿಟ್ಟ - ಅವಳು ಹೇಳಿದಳು - ನಾನು ನಿದ್ದೆಯ ಬಗ್ಗೆ ಈ ಮಾತು ಹೇಳಿದ್ದು ಅಂತ!

Rating
No votes yet

Comments