ಕನಸು ನಿನ್ನಂದ ಅತ್ಯದ್ಭುತ

ಕನಸು ನಿನ್ನಂದ ಅತ್ಯದ್ಭುತ

ಕವನ

ರೂಪವಿಲ್ಲದ ನಿನ್ನಂದ ಅತ್ಯದ್ಭತ
 
ನಿನ್ನದೆ ಒಂದು ವಿಸ್ಮಯ ಲೋಕ
ಅದರಲಿ ಬಣ್ಣಗಳ ಅನಾವರಣ,
ಸೂತಕದ ವಾತಾವರಣ
ಒಮ್ಮೆ ಪುರಸ್ಕಾರದ ಸನ್ಮಾನ,
ಮತ್ತೊಮ್ಮೆ ತಿರಸ್ಕಾರದ ಅವಮಾನ.
 
ವಾವ್ ಎಂಥ ವೈಭವೀಕರಣ ನಿನ್ನದು
ನಿನ್ನ ಲೋಕದಲ್ಲೊಮ್ಮೆ ರಾಜನಾಗಿದ್ದೆ ನಾನು
ಎಚ್ಚರವಾಗಿ ವಾಸ್ತವಕ್ಕಿಳಿದಾಗ
ಸಗಣಿ ಬಾಚುವ ಮನೆಯಾಳು ನಾನು.
 
ಹೀಗೆ ಬಂದು ಹಾಗೆ ಹೋಗುವ 
ನಿನ್ನನು ಹೇಗೆ ತಾನೆ ಕೂಡಿಡಲಿ
ನೀ ಬಂದು ಹೋದ ಹೆಜ್ಜೆಗಳ ಗುರುತನು
ನೆನಪಿಡಲು ಸಾದ್ಯವಿಲ್ಲ ಎಲ್ಲರಿಗೂ,
 
ನನ್ನ ಮನಸಿನಲ್ಲಿ ನೀನಿಳಿದಿದ್ದೇಯಾದರೆ
ಬಿಡದೆ ಕಾಡುವ ಬೆಡಂಭೂತ ನೀನು,
ನಿದಿರೆ ಮಾಡಲು ಬಿಡದೆ ನೀ ಕಾಡಿದ್ದೇಯಾದರೆ
ಆಗ ನೀನಾಗುವೆ ನಿಜ಻ವಾದ ನೀನು.
 
ಕೇವಲ ಬಣ್ಣಮಯವಷ್ಟೇ ಅಲ್ಲ ನೀನು
ಹೆಸರೇ ಇಲ್ಲದ ದೃಶ್ಯಾವಳಿಗಳ ಸರೋವರ
ಕಲಾತ್ಮಕ ನೀನು, ಭಾವನಾತ್ಮಕ ನೀನು, ಆದರೆ
ಜೀವನ ವಾಸ್ತವಿಕ ನಿನ್ನದೆಲ್ಲ ಕೇವಲ ಕಾಲ್ಪನಿಕ.
 
 
 
 

Comments

Submitted by kavinagaraj Mon, 05/07/2018 - 13:32

ಕನಸು ನನಸಾಗಬಹುದು. ನನಸು ಕನಸಾಗಬಾರದು. ನನಸಿನಲ್ಲಿ ಆಗದುದನ್ನು ಕನಸು ಈಡೇರಿಸಿ ಸಮಾಧಾನಿಸುವುದೂ ಇದೆ. ನೀವು ಹೇಳಿದಂತೆ ಹೆದರಿಸುವುದೂ ಇದೆ. ಕನಸಿಗೂ ನನಸಿಗೂ ನಂಟಂತೂ ಇದ್ದೇ ಇರುತ್ತದೆ. ಚೆನ್ನಾಗಿ ಬರೆದಿದ್ದೀರಿ.