ಶೂನ್ಯ ಮಹಾಶೂನ್ಯ

ಶೂನ್ಯ ಮಹಾಶೂನ್ಯ

ಕವನ

ನನಗೆ ಎಲ್ಲ ಮರೆತಿದೆ 
ಏನೆಂದು ಯೋಚಿಸಲಿ?
ಯಾರಿಗಾಗಿ ಯೋಚಿಸಲಿ?
ಯಾತಕೆ ಯೋಚಿಸಲಿ? ಹೇಗೆ ಯೋಚಿಸಲಿ?
ಎಲ್ಲವೂ ಮಾನ್ಯ! ಎಲ್ಲವೂ ಶೂನ್ಯ!
 
ನನಗೆ ಎಲ್ಲ ಮರೆತಿದೆ
ಯಾಕೆ ದುಡಿಯಬೇಕು?
ಯಾಕೆ ದಣಿಯಬೇಕು?
ಯಾಕೆ ಗಳಿಸಬೇಕು?
ಬರುವಾಗ ಏನನ್ನಾದರೂ ತಂದಿರುವೆನೇ?
ಏನನ್ನೂ ಹಿಂದೆ ಒಯ್ಯುವುದಿಲ್ಲ! ಎಲ್ಲವೂ ಶೂನ್ಯ!
 
ನನಗೆ ಎಲ್ಲ ಮೆರೆತಿಲ್ಲ
ನಾ ಬರುವಾಗ ಅಹಂಕಾರಿ
ಬಂದ ಮೇಲೂ ಕೂಡಾ!
ನಾನು ಏನನ್ನು ತರಲಿಲ್ಲ
ನಾನು ಏನನ್ನೂ ಕೊಡಲಿಲ್ಲ
'ನಾ'ನಿದ್ದರೇನೆ ಮೆರೆದಾಟ, ಪೈಪೋಟಿ, ಹೊಡೆದಾಟ,
ನಾನು ನೀನು ಎಂಬುದೆಲ್ಲ ಶೂನ್ಯ! ಮಹಾ ಶೂನ್ಯ!

 
 

Comments

Submitted by kavinagaraj Mon, 05/14/2018 - 13:33

ಆತ್ಮಾವಲೋಕನ ಮತ್ತು ಸತ್ಯಾನ್ವೇಷಣೆ ಸದಾ ನಡೆಯುತ್ತಿರಬೇಕು.