ಮುದಿ ಹುಬ್ಬು ಮತ್ತು ಕರಿ ಶಾಯಿ

Submitted by Vijeth M on Thu, 05/31/2018 - 22:09
ಬರಹ

ಎಲ್ಲವೂ ಮುರಿದು ಹೋಗುತ್ತದೆ , ಮುಗಿದು ಹೋಗುತ್ತದೆ..
ಕಿಲುಬುಗಟ್ಟುತ್ತದೆ , ಕಿರುಗುಟ್ಟುತ್ತದೆ
ನನ್ನ ಕವಿತೆ, ನಿನ್ನ ಕಿವಿ ,
ಬಿಗಿವ ಮೌನ , ಸತ್ತ ಮಾತು,
ಹೇರಲಾರದೆ ಹೆತ್ತ ಹೊತ್ತು... !!

ನಿನ್ನ ಮುದಿ ಹುಬ್ಬಿಗೆ ಕಾಡಿಗೆಯ ತೀಡುವಾಗ,
ಕರಿ ಶಾಯಿಯ ನನ್ನ ಕೆಟ್ಟ ಕವಿತೆಯ ನೆನೆಯದಿರು..
ಮರಳೀತು ಯೌವ್ವನ ಜೋಕೆ !!
ಸುಕ್ಕಾದ ಹಾಳೆಯಲ್ಲಿ,
ಹಸಿಯಾದ ಮರಳಲ್ಲಿ, ಚಿಗುರು ಗಡ್ಡದಲ್ಲಿ ,
ಬೆರಳು, ಕೊರಳು ಹೆರಳುಗಳಲ್ಲಿ .
ರೋಡು ದಾಟುವಾಗ ನಿನ್ನ ನೆರಳನು
ತಾಗಿದ ನನ್ನ ನೆರಳಲ್ಲಿ ..

ಏನಾದರೂ ನೀ ಪ್ರೀತಿಸಬಹುದಿತ್ತು ನನ್ನ
ಒಂದರೆಘಳಿಗೆಯಾದ್ರೂ
ಪ್ರೀತಿಸಿದ್ದರೆ ನಾನು ಕವಿತೆ ಬರೆಯುತ್ತಿರಲಿಲ್ಲ
ನಿನ್ನ ಹುಬ್ಬೂ ಹಣ್ಣಾಗುತ್ತಿರಲಿಲ್ಲ

ಧನ್ಯವಾದಗಳೊಂದಿಗೆ

ಇತಿ
ವಿಜೇತ್

Comments