ಡಾ. ರಾಜ್ ಇಲ್ಲಿ ತಪ್ಪಿದ್ದಾರೆಯೇ ?

Submitted by thesalimath on Sat, 03/07/2009 - 16:09

ಕವಿರತ್ನ ಕಾಳಿದಾಸ ಚಿತ್ರದ "ಮಾಣಿಕ್ಯ ವೀಣಾ ಉಪಲಾಲಯಂತಿ" ಹಾಡನ್ನು ಡಾ.ರಾಜ್ ಹಾಡಿದ್ದಾರೆ. ಸಂಪೂರ್ಣ ಸಂಸ್ಕೃತದಲ್ಲಿರುವ ಈ ಹಾಡನ್ನು ಅಷ್ಟು ಸ್ಪಷ್ಟವಾಗಿ, ಅಮೋಘವಾಗಿ ಹಾಡಿದ್ದಾರೆ.
ಮೊದಲನೆಯ ಚರಣದಲ್ಲಿ
"ಚತುರ್ಭುಜೆ ಚಂದ್ರಕಲಾವತಂಸೆ
ಕುಚೋನ್ನತೆ ಕುಂಕುಮ ..."

ಹೀಗೆ ಸಾಗುತ್ತದೆ ಹಾಡು. ಅದು ಚತುರ್ಭುಜೆ "ಚಂದ್ರಕಲಾವತಂಸೆ" ಯೋ ಅಥವಾ "ಚಂದ್ರಕಲಾವಸಂತೆ " ಯೋ ತಿಳಿಯಲಿಲ್ಲ. ಇಷ್ಟು ದಿನ ನಾನು "ಚಂದ್ರಕಲಾ ವಸಂತೆ" ಎಂದೇ ತಿಳಿದಿದ್ದೆ. ನಿನ್ನೆ ಕೇಳುವಾಗ ಈ ಪದ ನನ್ನ ಗಮನ ಸೆಳೆಯಿತು.
"ಚಂದ್ರಕಲಾವತಂಸೆ" ಎಂದರೆ ಏನು ಎಂದು ನನಗೆ ಗೊತ್ತಿಲ್ಲ. ಇದು ಸರಿಯಾದ ಪ್ರಯೋಗವೇ ಅಥವಾ ರಾಜಣ್ಣ ತಪ್ಪು ಹೇಳಿದರೆ ಗೊತ್ತಿಲ್ಲ. ತಪ್ಪು ಹೇಳಿದ್ದರೂ ಟಿ.ಜಿ. ಲಿಂಗಪ್ಪನವರಂತಹ ಸಂಗೀತ ನಿರ್ದೇಶಕರು ಸುಮ್ಮನಿರಲಾರರು. ಅಥವಾ "ಚಂದ್ರಕಲಾವತಂಸೆ" ಎಂದರೆ ಬೇರೆ ಅರ್ಥ ಇರಬೇಕು.

ಸಂಪದದಲ್ಲಿ ಅನೇಕ ವಿದ್ವಜ್ಜನರನ್ನು ಕಂಡಿದ್ದೇನೆ. ಯಾರಾದರೂ ದಯವಿಟ್ಟು ಉತ್ತರಿಸಿ.

ಬ್ಲಾಗ್ ವರ್ಗಗಳು

Comments