ಕಡ್ಲೆಬೀಜ ಹೋಳಿಗೆ - ವಿಶೇಷ ಒಬ್ಬಟ್ಟು
1 ಲೋಟ ಕಡ್ಲೆಬೀಜ - (1 ಲೋಟ = 250 ಗ್ರಾಂ )
ಎಳ್ಳು 1/4 ಕಪ್
ಏಲಕ್ಕಿ - 6-7
ಬೆಲ್ಲ - 3/4[ಮುಕ್ಕಾಲು] ಕಪ್
ಮೈದಾ ಹಿಟ್ಟು - 300 ಗ್ರಾಂ
1.ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ,ಮೈದಾ ಹಿಟ್ಟಿಗೆ ಹಾಕಿ ,ಚಿಟಿಕಿ ಉಪ್ಪು ಸೇರಿಸಿ ,ನೀರು ಹಾಕಿ ಹದವಾಗಿ ಕಲಸಿ[ಚಪಾತಿ ಹಿಟ್ಟಿನ ಹದ] . ಕನಿಷ್ಟ ಅರ್ಧ ಗಂಟೆ ನೆನೆದರ ಒಳ್ಳೆಯದು.
2.ಕಡ್ಲೆಬೀಜವನ್ನು ಬಾಣಲಿಯಲ್ಲಿ ಹಾಕಿ ಉರಿದುಕೊಳ್ಳಿ,ಸ್ವಲ್ಪ ಕೆಂಪಾಗುವಷ್ಟು , ನಂತರ ಬೇರೆ ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ. ಎಳ್ಳನ್ನು ಬಾಣಲಿಗೆ ಹಾಕಿ , ಸ್ವಲ್ಪ ಸಿಡಿಯಲು ಶುರುವಾದಾಗ ,ಅದೇ ಪಾತ್ರೆಗೆ ಅಥವಾ ಬೇರೆ ಪಾತ್ರೆಗೆ ತಣ್ಣಗಾಗಲು ಹಾಕಿ. ಬಿಸಿ ಇದ್ದಾಗಲೇ ಪುಡಿ ಮಾಡಿಕೊಂಡರೆ ಪುಡಿ ಮೆತ್ತಗಾಗಿ ಅಂಟುತ್ತದೆ , ಹಾಗಾಗಿ ಕನಿಷ್ಟ 15 ನಿಮಿಷ ಬಿಡಿ ಅಷ್ಟರಲ್ಲಿ ತಣ್ಣಗಾಗಿರುತ್ತವೆ. ನಂತರ ಬಿಡಿಸಿಟ್ಟ ಏಲಕ್ಕಿ ,ಮುಕ್ಕಾಲು ಕಪ್ ಬೆಲ್ಲ [ಪುಡಿ ಮಾಡಿಕೊಳ್ಳಿ ಚಿತ್ರದಲ್ಲಿ ತೋರಿಸಿದಂತೆ] ,ಸಿಹಿ ಜಾಸ್ತಿ ಬೇಕೆನ್ನಿಸಿದರೆ ೧ ಕಪ್ ಗೆ 1/2 ಇಂಚ್ ಕಡಿಮೆ ಯಷ್ಟು ಬೆಲ್ಲ , ಉರಿದಿಟ್ಟ ಕಡ್ಲೆಬೀಜ ಮತ್ತು ಎಳ್ಳನ್ನು ಒಂದು ಜಾರ್ ಗೆ ಹಾಕೊಂಡು , ಪುಡಿ ಮಾಡಿಕೊಳ್ಳಿ .
ಸೂಚನೆ : ಪುಡಿ ಮಾಡುವಾಗ ಒಂದೇ ಬಾರಿಗೆ ಮಿಕ್ಸಿ ಆನ್ ಮಾಡಿ ಮಾಡಬಾರದು , ೫ ಸೆಕೆಂಡ್ಸ್ ಮಾಡಿ ಮತ್ತೆ ಚಮಚದಲ್ಲಿ ಕೈಯಾಡಿಸಿ ಮತ್ತೆ ಪುಡಿ ಮಾಡಿ , ಹೀಗಾಗಿ ಎಲ್ಲ ಹದವಾಗಿ ಆಗುತ್ತೆ , ಒಂದೇ ಕಡೆ ಮೆತ್ತಗಾಗಲ್ಲ . ಪುಡಿ ತುಂಬಾ ನುಣುಪಾಗಬಾರದು , ಸ್ವಲ್ಪ ತರಿಯಾಗಿ ಅಂದ್ರೆ ಸಣ್ಣ ರವೆಯಷ್ಟು .
3.ನಂತರ ಈ ಪುಡಿಗೆ ಸ್ವಲ್ಪವೇ ನೀರು ಹಾಕಿ ಕಲಸಿ ಉಂಡೆ ಮಾಡಿಕೊಳ್ಳಿ [ ಬೆಲ್ಲ ಇರುವುದರಿಂದ ನೀರು ಹೆಚ್ಚು ಅವಶ್ಯಕತೆ ಇರುವುದಿಲ್ಲ ಸ್ವಲ್ಪ ಸ್ವಲ್ಪ ಹಾಕಿ ಹದವಾಗಿ ಕಲಸಿ].
4.ಕಲಸಿಟ್ಟ ಮೈದಾ ಇಂದ ಉಂಡೆ ಮಾಡಿಕೊಂಡು ಸ್ವಲ್ಪ ಲಟ್ಟಿಸಿ ನಂತರ ಊರ್ಣದ ಉಂಡೆ ಇಟ್ಟು ಮುದಿಡಿ ಉಂಡೆ ಮಾಡಿ ,ಮತ್ತೆ ಲಟ್ಟಿಸಿ.
5.ಕಾವಲಿ ಮೇಲೆ ಹಾಕಿ ಸಣ್ಣ ಉರಿಯಲಿ ಬೇಯಿಸಿ. ಬೇಯಿಸುವಾಗ ಎಣ್ಣೆ ಹಾಕಬಾರದು.
ರುಚಿಯಾದ ಈ ಹೋಳಿಗೆಯನ್ನು ತಿಂಗಳುವರೆಗೂ ಇಡಬಹುದು. ತಿನ್ನುವಾಗ ತುಪ್ಪದ ಜೊತೆ ಇನ್ನು ರುಚಿಯಾಗಿರುತ್ತೆ
--ಬೋ .ಕು .ವಿ
Comments
ಉ: ಕಡ್ಲೆಬೀಜ ಹೋಳಿಗೆ - ವಿಶೇಷ ಹೊಬ್ಬಟ್ಟು
ಯಾರಾದರೂ ಮಾಡಿಕೊಟ್ಟರೆ, ಸಕ್ಕರೆ ಕಾಯಿಲೆ ಮರೆತು ತಿಂದುಬಿಡಬಹುದು!
In reply to ಉ: ಕಡ್ಲೆಬೀಜ ಹೋಳಿಗೆ - ವಿಶೇಷ ಹೊಬ್ಬಟ್ಟು by kavinagaraj
ಉ: ಕಡ್ಲೆಬೀಜ ಹೋಳಿಗೆ - ವಿಶೇಷ ಹೊಬ್ಬಟ್ಟು
ಧನ್ಯವಾದಗಳು ಪ್ರತಿಕ್ರಿಯೆಗೆ.
ತುಂಬ ಸುಲಭ ಮತ್ತು ಬೇಗ ಮಾಡಬಹುದು.1 ಗಂಟೆಯಲ್ಲಿ ಮೇಲೆ ಹೇಳಿರುವ ಅಳತೆಯಲ್ಲಿ 18-20 ಹೋಳಿಗೆ ಮಾಡಬಹುದು.
ಉ: ಕಡ್ಲೆಬೀಜ ಹೋಳಿಗೆ - ವಿಶೇಷ ಹೊಬ್ಬಟ್ಟು
ಉತ್ತಮವಾದ step by step ಸೂಚನೆಗಳು. [ಒಂದು ವಿನಂತಿ: ದಯವಿಟ್ಟು ಕಾಗುಣಿತದ ಕಡೆಯೂ ಗಮನಹರಿಸಿದರೆ ಇನ್ನೂ ಸೊಗಸಾಗಿರುತ್ತದೆ. (ಹೊಬ್ಬಟ್ಟು - ಒಬ್ಬಟ್ಟು, ಉರಿದು - ಹುರಿದು, ಊರ್ಣ - ಹೂರಣ)]
In reply to ಉ: ಕಡ್ಲೆಬೀಜ ಹೋಳಿಗೆ - ವಿಶೇಷ ಹೊಬ್ಬಟ್ಟು by smurthygr
ಉ: ಕಡ್ಲೆಬೀಜ ಹೋಳಿಗೆ - ವಿಶೇಷ ಹೊಬ್ಬಟ್ಟು
ಧನ್ಯವಾದಗಳು. ಗೂಗಲ್ ಕೆಲವೊಂದು ಪದಗಳನ್ನ ಕೊಡೋದರಿಂದ ಕೆಲವೊಮ್ಮೆ ಕಸಿವಿಸಿ.